ಶಾಲಾ ವಾಹನ ಚಾಲಕರ ಸಂಘದ ಸಭೆ : ಸಂಚಾರಿ ನಿಯಮ ಪಾಲಿಸಲು ಸಲಹೆ

Friday, January 10th, 2020
drivers

ಮಡಿಕೇರಿ : ವಾಹನ ಚಾಲಕರು ಅಗತ್ಯ ದಾಖಲೆಗಳೊಂದಿಗೆ ಸಂಚಾರಿ ನಿಯಮವನ್ನು ಪಾಲಿಸಬೇಕೆಂದು ನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಬೆಳ್ಳಿಯಪ್ಪ ಅವರು ಸಲಹೆ ನೀಡಿದ್ದಾರೆ. ನಗರದಲ್ಲಿ ನಡೆದ ಮಡಿಕೇರಿ ಶಾಲಾ ವಾಹನ ಚಾಲಕರ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚಾಲಕರು ಅನಾರೋಗ್ಯಕರ ವೇಗದ ಪೈಪೋಟಿಗೆ ಆದ್ಯತೆ ನೀಡದೆ ಸುರಕ್ಷತೆ ಬಗ್ಗೆ ಗಮನ ಹರಿಸಬೇಕೆಂದರು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತಿವೇಗ, ದಾಖಲೆ ರಹಿತ ಚಾಲನೆ ಸೇರಿದಂತೆ ಸಂಚಾರಿ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು […]

ಡಿ.15 ರೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಮಡಿಕೇರಿ ನಗರ ಬಂದ್ : ಹರೀಶ್ ಜಿ.ಆಚಾರ್ಯ ಎಚ್ಚರಿಕೆ

Friday, December 6th, 2019
Harish

ಮಡಿಕೇರಿ : ನಗರದ ರಸ್ತೆಗಳ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವೀರನಾಡು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಡಿ.15 ರೊಳಗೆ ರಸ್ತೆ ದುರಸ್ತಿ ಕಾರ್ಯ ಆರಂಭಿಸದಿದ್ದಲ್ಲಿ ಮಡಿಕೇರಿ ನಗರ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಳೆಗಾಲ ಕಳೆದು ಬಿಸಿಲಿನ ವಾತಾವರಣ ಮೂಡಿದ್ದರೂ ರಸ್ತೆ ದುರಸ್ತಿಯ ಬಗ್ಗೆ ನಗರಸಭೆ ಕಾಳಜಿ ತೋರುತ್ತಿಲ್ಲ. ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದರೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ […]

ಕಂದಾಯ ಅಧಿಕಾರಿಗಳ ಕರ್ತವ್ಯ ಲೋಪ : ವೀರನಾಡು ರಕ್ಷಣಾ ವೇದಿಕೆ ಆರೋಪ

Wednesday, October 30th, 2019
Rakshana-vedike

ಮಡಿಕೇರಿ : ಜಿಲ್ಲೆಯ ಕಂದಾಯ ಇಲಾಖೆ ಸಿಬ್ಬಂದಿಗಳು ಕರ್ತವ್ಯದ ವೇಳೆಯಲ್ಲಿ ಕಚೇರಿಯಲ್ಲಿ ಹಾಜರಿರದೆ ಇರುವುದರಿಂದ ಸಾರ್ವಜನಿಕರ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಗುತ್ತಿಲ್ಲವೆಂದು ಆರೋಪಿಸಿರುವ ವೀರನಾಡು ರಕ್ಷಣಾ ವೇದಿಕೆ, ಎಲ್ಲಾ ಸರಕಾರಿ ಕಚೇರಿಗಳ ಪಂಚಿಂಗ್ ಯಂತ್ರವನ್ನು ದುರಸ್ತಿ ಪಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು, ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಆರ್‌ಐ ಹಾಗೂ ಬಹುತೇಕ ಸಿಬ್ಬಂದಿಗಳು ಕರ್ತವ್ಯದ ವೇಳೆಯಲ್ಲಿ ಕಚೇರಿಯಲ್ಲಿ ಹಾಜರಿರುವುದಿಲ್ಲ. ಅರ್ಜಿದಾರರು ಯಾವಾಗ ಕಚೇರಿಗೆ ಹೋದರು ಸಿಬ್ಬಂದಿಗಳು ಸಭೆಗಳಿಗೆ […]