Blog Archive

ಸಿಬಿಎಸ್ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅವಮಾನ ಹಿಂದೂ ಜನಜಾಗೃತಿ ಸಮಿತಿ ಖಂಡನೆ

Monday, August 5th, 2013
Hindu Jana Jagruthi

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಭಾನುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಸಿಬಿಎಸ್ ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅವಮಾನ ಮಾಡಿರುವುದನ್ನುದು ಖಂಡಿಸಿ ಪ್ರತಿಭಟನೆ ಸಭೆ ನಡೆಯಿತು. ಜನಜಾಗೃತಿ ಸಮಿತಿಯ ಸುಕನ್ಯ ಆಚಾರ್ಯ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸಿಬಿಎಸ್ ಸಿ ಪಠ್ಯದಲ್ಲಿ ಝಾನ್ಸಿ ರಾಣಿಗೆ ಅಪಮಾನ ವಾಗುವಂತೆ ಚಿತ್ರಿಸಲಾಗಿದೆ.  ಇದಕ್ಕೆ ಕಾರಣರಾದವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಲೆಕ್ಕಿಸದೆ ಹೋರಾಡಿದ ಮಹಿಳೆಯ ಅವಮಾನಿಸಿದ್ದು ಖಂಡನೀಯ ಎಂದು ಅವರು ಹೇಳಿದರು. ಉದ್ಯಮಿಜಿಲ್ಲಾ ಸಂಚಾಲಕ ಪ್ರಸನ್ನ ಕಾಮತ್, ಅನಂತ್ ಕಾಮರ್, ವಕೀಲ […]

ಧರ್ಮಜಾಗೃತಿ ಹಾಗೂ ಹಿಂದೂ ಧರ್ಮದ ಮೇಲಿನ ಆಕ್ರಮಣ ಕುರಿತು ಉಪನ್ಯಾಸ

Saturday, October 8th, 2011
Hindu Jagarana Vedike

ಮಂಗಳೂರು: ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಕಾಶ್ಮೀರದ ಸದ್ಯದ ಸ್ಥಿತಿ, ಹಿಂದೂ ಧರ್ಮದ ಮೇಲಿನ ಆಕ್ರಮಣಗಳು ಮತ್ತು ಪರಿಹಾರೋಪಾಯಗಳು’ ವಿಷಯದಲ್ಲಿ ನಗರದಲ್ಲಿ ಶುಕ್ರವಾರ ಉಪನ್ಯಾಸ ನಡೆಯಿತು. ಧರ್ಮಜಾಗೃತಿ, ಜಮ್ಮು ಕಾಶ್ಮೀರದ ಭಾರತೀಯರ ರಕ್ಷಣೆ ಹಾಗೂ ಅಲ್ಲಿ ನೆಲೆಸಿರುವ ದೇಶಪ್ರೇಮಿಗಳಿಗೆ ಭದ್ರತೆ ವಿಷಯದಲ್ಲಿ  ಅಶ್ವನಿ ಕುಮಾರ ಚುಂಗೋ ಉಪನ್ಯಾಸ ಹೇಳಿದರು. ಪಾಕಿಸ್ಥಾನದಿಂದ ಭಯೋತ್ಪಾದಕರು ಮತ್ತು ದಾಳಿಕೋರರು ನುಸುಳಿ ಬರುವುದು ನಿರಂತರ ನಡೆಯುತ್ತಿದೆ. ಈಗಾಗಲೇ ಭದ್ರತಾ ಪಡೆಯ ಅನೇಕ ಯೋಧರು ಈ ಸಂಚಿನ ದಾಳಿಯಿಂದ ಹತರಾಗಿದ್ದಾರೆ. ಜಮ್ಮುಕಾಶ್ಮೀರದಲ್ಲಿ ರಾಜಕೀಯ ಮತ್ತು […]

ಹಿಂದೂ ವಿರೋಧಿ ನ್ಯಾಯಾಲಯದ ಆದೇಶವನ್ನು ವಿರೋಧಿಸಿ ಪ್ರತಿಭಟನೆ.

Monday, October 18th, 2010
ಹಿಂದೂ ಜನಜಾಗೃತಿ ಸಮಿತಿ

ಮಂಗಳೂರು: ಹಿಂದೂ ಧಾರ್ಮಿಕ ಸ್ಥಳಗಳನ್ನು ಅನಧಿಕೃತವೆಂದು ತೆರವುಗೊಳಿಸುವುದು ಮತ್ತು ದೇವಸ್ಥಾನಗಳ ಸರಕಾರೀಕರಣವನ್ನು ಮಾಡಿ ಹಿಂದೂಗಳ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ವಿರೋಧಿಸಿ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿಯ ಎದುರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪ್ರತಿಭಟನೆ ನಡೆಯಿತು. ದೇವಸ್ಥಾನಗಳು, ದೈವಸ್ಥಾನಗಳು ಧರ್ಮದ ಬೆನ್ನೆಲುಬು, ಧರ್ಮ ಇದ್ದಲ್ಲಿ ದೇಶ ಇರಬಹುದು. ದೇಶ ಉತ್ತಮ ಸ್ಥಿತಿಯಲ್ಲಿರಬೇಕಾದರೆ ಧರ್ಮಾಚರಣೆಯನ್ನು ಗೌರವಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಲಕ್ಷ್ಮೀಶ ಕಬಲಡ್ಕ ಪ್ರತಿಭಟನಾ ಭಾಷಣದಲ್ಲಿ ಹೇಳಿದರು. ಸಾವಿರಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ದೈವ, […]

ಹಿಂದೂ ಜನಜಾಗೃತಿ ಸಮಿತಿಯಿಂದ ಧಾರ್ಮಿಕ ಶ್ರದ್ದಾಕೇಂದ್ರಗಳ ಉಳಿಸಿ ಅಭಿಯಾನ:

Saturday, August 21st, 2010
ಹಿಂದೂ ಜನಜಾಗೃತಿ ಸಮಿತಿಯಿಂದ ಧಾರ್ಮಿಕ ಶ್ರದ್ದಾಕೇಂದ್ರಗಳ ಉಳಿಸಿ ಅಭಿಯಾನ:

ಮಂಗಳೂರು : ಸವೋಚ್ಚ ನ್ಯಾಯಾಲಯವು 2009 ರಲ್ಲಿ ಜಾರಿಗೊಳಿಸಿರುವ ಆದೇಶದಂತೆ. ದ.ಕ. ಜಿಲ್ಲೆಯಲ್ಲಿರುವ 641 ಕ್ಕೂ ಹೆಚ್ಚು ಹಿಂದು ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಅನಧೀಕೃತ ಧಾರ್ಮಿಕ ಶ್ರದ್ದಾಕೇಂದ್ರಗಳನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ತೆರವುಗೊಳಿಸಲು ನೋಟೀಸು ಜಾರಿಮಾಡಿದೆ. ಆ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಂಗಳೂರು ಶಾಖೆ ನಗರದ ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು. ನೂರು ವರ್ಷಗಳಿಗೂ ಇತಿಹಾಸವಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅನಧಿಕೃತ ಎಂದು ಕಂದಾಯ ಇಲಾಖೆ ಹಾಗೂ ಸ್ಥಳೀಯ ಜಿಲ್ಲಾಡಳಿತ ನೋಟೀಸು ಜಾರಿ ಮಾಡಿರುವುದು […]