Blog Archive

ಗಣೇಶನನ್ನು ಪೂಜಿಸುವುದರಿಂದ ಸಮಾಜದ ಐಕ್ಯತೆ ಸಾಧ್ಯ: ಡಾ|ಎ.ವಿ.ಶೆಟ್ಟಿ

Tuesday, September 6th, 2016
Ganeshothsava

ಮಂಗಳೂರು: ವೇದ ಕಾಲದಿಂದಲೇ ಶ್ರೀ ಗಣೇಶನ ಆರಾಧನೆ ನಡೆಯುತ್ತಿದ್ದು, ಸಾರ್ವಜನಿಕವಾಗಿ ಶ್ರೀ ಗಣೇಶನನ್ನು ಪೂಜಿಸುವುದರಿಂದ ಸಮಾಜದ ಐಕ್ಯತೆ ಸಾಧ್ಯ ಎಂದು ಎಂದು ಮಂಗಳೂರಿನ ಹಿರಿಯ ಹೃದ್ರೋಗ ತಜ್ಞ ಡಾ|ಎ.ವಿ.ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರನಗರದಲ್ಲಿ 3 ದಿನಗಳ ಕಾಲ ನಡೆಯುವ 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ನಡೆದ ತೆನೆಹಬ್ಬದಲ್ಲಿ ಸಾಂಕೇತಿಕವಾಗಿ ತೆನೆ ವಿತರಿಸಿ ಅವರು ಮಾತನಾಡಿದರು. ಸನಾತನವಾದ ಹಿಂದೂ ಧರ್ಮ […]

ತುಳಸಿ ಪೂಜೆಯ ಸನಾತನ ಮಹತ್ವ

Saturday, November 24th, 2012
Tulasi Pooja

ಮಂಗಳೂರು :ದೀಪಾವಳಿ ಹಬ್ಬದ ಬಲಿ ಪಾಡ್ಯಮಿಯ ನಂತರ ಬರುವ ಇನ್ನೊಂದು ಹಬ್ಬ ಎಂದರೆ ಉತ್ಥಾನ ದ್ವಾದಶೀ. ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿ ತಿಥಿಯಂದು ಈ ಪವಿತ್ರ ದಿನವನ್ನು ಹಬ್ಬವನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿವ್ರತವೆಂದೂ […]