ಮಂಗಳೂರು : ಅಡ್ಯಾರ್ ನಲ್ಲಿ ಎನ್‌ಆರ್‌ಸಿ, ಸಿಎಎ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ

Thursday, January 16th, 2020
adyar

ಮಂಗಳೂರು : ಎನ್‌ಆರ್‌ಸಿ, ಸಿಎಎ ವಿರುದ್ಧ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಮಂಗಳೂರು ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಬುಧವಾರದಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಯಿತು. ಮಂಗಳೂರು ಗೋಲಿಬಾರ್ ಪ್ರಕರಣದ ಬಳಿಕ ಮೊದಲ ಬಾರಿಗೆ ನಡೆದ ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹರ್ಷ ಮಂದರ್, ಕಣ್ಣನ್ ಗೋಪಿನಾಥನ್ ಅವರು ಎನ್‌ಆರ್‌ಸಿ, ಸಿಎಎಗೆ ತಮ್ಮ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ […]

ಜ.15 ರಂದು ಅಡ್ಯಾರಿನಲ್ಲಿ ಸಿಎಎ, ಎನ್.ಆರ್.ಸಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ

Tuesday, January 14th, 2020
TMCC

ಮಂಗಳೂರು : ಸಿಎಎ, ಎನ್.ಆರ್.ಸಿ ಕಾಯ್ದೆ ವಿರುದ್ಧ ದ.ಕ.,ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಜ. 15 ರಂದು ಅಡ್ಯಾರ್ ಶಹಾ ಮೈದಾನದಲ್ಲಿ ನಡೆಯುವ ಬೃಹತ್ ಪ್ರತಿಭಟನಾ ಸಮಾವೇಶವನ್ನು ಯಶಸ್ವಿ ಗೊಳಸಲು ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಕರೆ ನೀಡಿದೆ. ಎಸ್ ವೈ ಎಸ್ ನ‌ ಎಲ್ಲ ಘಟಕಗಳಿಂದ ವಿಶೇಷ ವಾಹನಗಳನ್ನು ವ್ಯವಸ್ಥೆ ಗೊಳಿಸಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡು ಸಮ್ಮೇಳನವನ್ನು ಐತಿಹಾಸಿಕ ಗೊಳಿಸಬೇಕು ಹಾಗೂ ಗರಿಷ್ಠ ಮಟ್ಟದಲ್ಲಿ ಇದನ್ನು ಪ್ರಚಾರ […]

ಮಂಗಳೂರಿನಲ್ಲಿ ಟ್ರಾನ್ಸ್‌ಪೋರ್ಟ್ ಉದ್ಯಮ ನಡೆಸುತ್ತಿದ್ದ ಉದ್ಯಮಿ ನಾಪತ್ತೆ

Saturday, November 16th, 2019
Arun

ಮಂಗಳೂರು : ಮಂಗಳೂರಿನಲ್ಲಿ ಟ್ರಾನ್ಸ್‌ಪೋರ್ಟ್ ಉದ್ಯಮ ನಡೆಸುತ್ತಿದ್ದ ಉದ್ಯಮಿ ನಾಪತ್ತೆಯಾದ ಘಟನೆ ನಡೆದಿದೆ. ಮಂಗಳೂರು ಹೊರವಲಯದ ಅಡ್ಯಾರ್ ನಿವಾಸಿ ಅರುಣ್ ರೋನಾಲ್ಡ್ ಡಿಸೋಜ(36) ನಾಪತ್ತೆಯಾದವರು. ಅರುಣ್ ಅವರು ಸ್ವಂತ ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿದ್ದರು. ನ.13ರಂದು ಮನೆಯಿಂದ ಕೆಲಸಕ್ಕೆ ಹೋದವರು ಮಧ್ಯಾಹ್ನ 2:30ಕ್ಕೆ ಮನೆಯವರು ಕರೆ ಮಾಡಿದಾಗ ತಾನು ಬ್ಯುಸಿಯಾಗಿರುವುದಾಗಿ ಹೇಳಿ ಫೋನ್ ಕರೆ ಕಟ್ ಮಾಡಿದ್ದರು. ಆನಂತರ ಸಂಜೆ 7:30ಕ್ಕೆ ಪುನಃ ಕರೆ ಮಾಡಿದಾಗ ಫೋನ್ ಸ್ವಿಚ್‌ಆಫ್ ಆಗಿದೆ ಎಂದು ತಿಳಿದುಬಂದಿದೆ. ಅರುಣ್ ಸಾಮಾನ್ಯವಾಗಿ ರಾತ್ರಿ 11 […]

ಮಂಗಳೂರು : ಟ್ಯಾಂಕರ್-ಬೈಕ್ ನಡುವೆ ಅಪಘಾತ; ಸವಾರ ಸ್ಥಳದಲ್ಲೇ ಮೃತ್ಯು

Tuesday, October 8th, 2019
accident

ಮಂಗಳೂರು : ಟ್ಯಾಂಕರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆಯು ಅಡ್ಯಾರ್ ಕಟ್ಟೆ ಸಮೀಪ ಅ. 08ರ ಮಂಗಳವಾರ ನಡೆದಿದೆ. ಮೃತ ಸವಾರನನ್ನು ಅಡ್ಯಾರ್ ನಿವಾಸಿ ಹಾತಿಮ್ (25) ಎಂದು ತಿಳಿದುಬಂದಿದೆ.ಅಡ್ಯಾರ್ ಕಣ್ಣೂರಿನಲ್ಲಿ ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಬೇಕಿದ್ದ ತರಕಾರಿ ಅಂಗಡಿಗೆ ಪೈಂಟ್ ತರಲೆಂದು ಫರಂಗಿಪೇಟೆ ಕಡೆ ಸವಾರ ಹಾತಿಮ್ ಹೊರಟಿದ್ದ. ಈ ವೇಳೆ ಬೈಕ್ ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ […]

ಅಕ್ರಮ ಮರಳುಗಾರಿಕೆ: 25 ಲೋಡು ಮರಳು, 17 ದೋಣಿ ವಶಕ್ಕೆ

Saturday, December 1st, 2018
manglore

ಮಂಗಳೂರು: ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಪ್ರದೇಶದ ಮೇಲೆ ಶುಕ್ರವಾರ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು 25 ಲೋಡು ಮರಳು ಮತ್ತು ಮರಳುಗಾರಿಕೆಗೆ ಬಳಸಿದ 17 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಅಡ್ಯಾರ್ ಗ್ರಾಮದ ಸಹ್ಯಾದ್ರಿ ಕಾಲೇಜಿನ ಹಿಂದುಗಡೆ ನೇತ್ರಾವತಿ ನದಿ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿತ್ತು. ಮರಳುಗಾರಿಕೆ ನಡೆಸುತ್ತಿದ್ದವರು ಅಲ್ಲಿಂದ ಪರಾರಿಯಾಗಿದ್ದು, ಸರಿಸುಮಾರು 18 ಲಕ್ಷ ರೂ. ಮೌಲ್ಯದ ಸೊತ್ತನ್ನು ಪೊಲೀಸರು ಶಪಡಿಸಿಕೊಂಡಿದ್ದಾರೆ. ದಾಸ್ತಾನು ಮಾಡಿದ […]

2 ವರ್ಷದೊಳಗೆ ಅಡ್ಯಾರ್​​ ಹರೇಕಳ ಕಿಂಡಿ ಅಣೆಕಟ್ಟು ಸೇತುವೆ ನಿರ್ಮಾಣ: ಪುಟ್ಟರಾಜು

Friday, September 14th, 2018
puttaraju

ಮಂಗಳೂರು: ತಾಲೂಕಿನ ಅಡ್ಯಾರ್ನಿಂದ ಹರೇಕಳಕ್ಕೆ ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ಸೇತುವೆಯನ್ನು ಎರಡು ವರ್ಷದೊಳಗೆ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜು ತಿಳಿಸಿದ್ದಾರೆ. ಹರೇಕಳ ಅಡ್ಯಾರ್ನಲ್ಲಿ ನಿರ್ಮಿಸಲುದ್ದೇಶಿಸಿದ ಕಿಂಡಿ ಅಣೆಕಟ್ಟು ಸೇತುವೆಯ ಸಂಬಂಧ ಹರೇಕಳ ಪಾವೂರು ಕಡವಿನ ಬಳಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾಗರರೊಂದಿಗೆ ಮಾತನಾಡಿದರು. ಈ ಸೇತುವೆ ನಿರ್ಮಾಣ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಸುಮಾರು 174 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಲಾಗಿದೆ. ಇನ್ನು, ಇದರಿಂದ ಜಮೀನು ಕಳೆದುಕೊಳ್ಳುವವರಿಗೆ ಸೂಕ್ತ […]

ಅಕ್ರಮ ಮರಳು ದಾಸ್ತಾನು: ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಶಕ್ಕೆ

Friday, September 14th, 2018
police

ಮಂಗಳೂರು: ತಾಲೂಕಿನ ವಳಚ್ಚಿಲ್, ಅಡ್ಯಾರ್ ಮತ್ತು ಅರ್ಕುಳಗಳ ಖಾಸಗಿ ಸ್ಥಳದಲ್ಲಿ ಸಾಮಾನ್ಯ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಅಕ್ರಮ ಮರಳು ದಾಸ್ತಾನು ಅಡ್ಡೆಯನ್ನು ಪತ್ತೆ ಮಾಡಿ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕರೆಸಿಕೊಂಡು 5 ಲಕ್ಷ ರೂ. ಮೌಲ್ಯದ ಸುಮಾರು 780 ಟನ್ ಮರಳನ್ನು ವಶಕ್ಕೆ ನೀಡಲಾಗಿದೆ. ಪತ್ತೆಯಾದ ಅಕ್ರಮ ಮರಳನ್ನು ಯಾರು ಯಾವ ಕಾರಣಕ್ಕಾಗಿ ಕಳವು ಮಾಡಿ ದಾಸ್ತಾನು […]

ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮಳೆ.. ಭಾರೀ ಮಳೆಗೆ ಅಡಿಕೆ ತೋಟಗಳು ಧ್ವಂಸ!

Tuesday, July 17th, 2018
karavali

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕಿನಾದ್ಯಂತ ಮಳೆ ಎಡೆಬಿಡದೆ ಸುರಿಯಲಾರಂಭಿಸಿದೆ. ಮಳೆಯ ಜೊತೆ ಜೊತೆಗೆ ಭಾರೀ ಗಾಳಿಯೂ ಬೀಸುತ್ತಿರುವ ಪರಿಣಾಮ ಹಲವು ಅಡಿಕೆ ತೋಟಗಳು ಧ್ವಂಸಗೊಂಡಿವೆ. ಭಾರೀ ಗಾಳಿ ಮಳೆಯಿಂದಾಗಿ ಸಾವಿರಾರು ಅಡಿಕೆ ಮರಗಳು ತುಂಡಾಗಿ‌ ಬಿದ್ದಿದ್ದು, ಅಡಿಕೆ ಕೃಷಿಕರಿಗೆ ಭಾರೀ ನಷ್ಟ ಉಂಟಾಗಿದೆ. ಅದಲ್ಲದೆ ಭಾರೀ ಗಾಳಿ ಬೀಸುತ್ತಿರುವ ಕಾರಣ ಬೆಳ್ಳಾರೆ ಮೊದಲಾದ ಕಡೆಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ‌ ಬಿದ್ದು ವಿದ್ಯುತ್ […]

ಚಾಲೆಂಜಿಂಗ್‌ ಸ್ಟಾರ್‌‌ ಜೊತೆ ಸೆಲ್ಫಿಗೆ ಮುಗಿಬಿದ್ದ ಮಂಗಳೂರಿಗರು

Monday, May 28th, 2018
darshan

ಮಂಗಳೂರು: ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿ‌ ಆಯೋಜಿಸಲಾಗಿದ್ದ ಯಕ್ಷ ದ್ರುವ ಪಟ್ಲ ಸಂಭ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅವರ ಜೊತೆ ಮಂಗಳೂರು ಜನರು ಸೆಲ್ಫಿಗೆ ಮುಗಿಬಿದ್ದರು ಕಾರ್ಯಕ್ರಮಕ್ಕೆ ನಿಗದಿತ ಅವಧಿಗಿಂತ ವಿಳಂಬವಾಗಿ ಬಂದ ದರ್ಶನ್ ಅವರ ಆಗಮನಕ್ಕಾಗಿ ಮೂರು ಗಂಟೆಗಳ‌ ಕಾಲ ಜನರು ವೇದಿಕೆ ಮುಂಭಾಗದಲ್ಲಿ ಕಾದು ನಿಂತಿದ್ದರು. ಬಳಿಕ ದರ್ಶನ್ ಕಾರಿನಿಂದ ಇಳಿಯುತ್ತಿದ್ದಂತೆ ಅವರಿಗಾಗಿ ಕಾಯುತ್ತಿದ್ದ ಜನರು ದರ್ಶನ್‌ ಸಭಾಂಗಣದ ಒಳಗೆ ಹೋಗುವ ದಾರಿಯುದ್ದಕ್ಕೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡರು.

ನಗರದಲ್ಲಿ ಜುಲೈ 7 ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

Monday, July 3rd, 2017
Rai

ಮಂಗಳೂರು : ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಜುಲೈ 7 ರಂದು ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆ ಮಾಡಬೇಕು ಎಂಬ ಉದ್ದೇಶದಿಂದ ಜು.7ರಂದು ಅಪರಾಹ್ನ 3 ಗಂಟೆಗೆ ಅಡ್ಯಾರ್ ನಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವರು ಎಂದವರು ಹೇಳಿದ್ದಾರೆ. ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, […]