ಪೇಜಾವರ ಶ್ರೀಗಳ ವಿವಾದದ ಬಳಿಕ, ಅಭಿಮಾನಿಗಳಿಗೆ ಪತ್ರ ಬರೆದ ಹಂಸಲೇಖ

Wednesday, November 24th, 2021
Hamsalekha

ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ತಿರುಗಿದ ಬೆನ್ನಲ್ಲೇ  ವಿಚಾರಣೆಗೆ ಹಾಜರಾಗುವಂತೆ ಸಂಗೀತ ನಿರ್ದೇಶಕ ಹಂಸಲೇಖಾ ಅವರಿಗೆ ಪೊಲೀಸರು  ನೋಟೀಸ್ ನೀಡಿದ್ದರು. ಆದರೆ ಅನಾರೋಗ್ಯ ಹಿನ್ನೆಲೆಯಲ್ಲಿ ಹಂಸಲೇಖಾ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ಬೆನ್ನಲ್ಲೇ ಅಭಿಮಾನಿಗಳಿಗೆ ಪತ್ರ ಬರೆದಿರುವ ಹಂಸಲೇಖಾ, ಕನ್ನಡಿಗರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ನಾನು ಆರೋಗ್ಯದಿಂದ ಇದ್ದೇನೆ. ನಾನು ಅನಾರೋಗ್ಯಕ್ಕೀಡಾಗಿದ್ದೇನೆ ಎಂದು ಹಲವು ಕರೆಗಳು ಬರುತ್ತಿವೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತು, ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು…. […]

ಅನಾರೋಗ್ಯ ಪೀಡಿತರಿಗೆ ನೆರವಾಗಲು ಗಣೇಶೋತ್ಸವದಲ್ಲಿ ವೇಷ ಹಾಕಿದ ಯುವಕ

Sunday, September 12th, 2021
Dhanu Poojary

ಮಂಗಳೂರು: ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿದ ಯುವಕನೊಬ್ಬ ಅದರಿಂದ ಸಂಗ್ರವಾದ ಹಣವನ್ನು ಅನಾರೋಗ್ಯದಿಂದ ಬಳಲುತ್ತಿರುವ ಮೂವರಿಗೆ ನೀಡಲು ಮುಂದಾಗಿದ್ದಾರೆ. ನಗರದ ಹೊರವಲಯದ ಸುರತ್ಕಲ್ ಸಮೀಪದ ಜನತಾ ಕಾಲೋನಿಯ ನಿವಾಸಿ ಧನಂಜಯ(ಧನು) ಪೂಜಾರಿಯವರು ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ರೂ 26,994 ವನ್ನು ಮೂವರು ಅನಾರೋಗ್ಯ ಪೀಡಿತರಿಗೆ ನೀಡಲಿದ್ದಾರೆ. ಕಲಾವಿದರಾಗಿರುವ ಧನಂಜಯ(ಧನು) ಪೂಜಾರಿಯ ಸುರತ್ಕಲ್ ಆಪತ್ಬಾಂಧವ ಸಮಾಜ ಸೇವಾ ಸಂಘದ ಸದಸ್ಯರಾಗಿದ್ದಾರೆ.

ದಿಢೀರನೇ ಆಸ್ಪತ್ರೆಗೆ ದಾಖಲಾದ ನಟಿ ಸಂಜನಾ ಗಲ್ರಾನಿ

Thursday, August 26th, 2021
Sanjana

ಬೆಂಗಳೂರು : ‘ಗಂಡ ಹೆಂಡತಿ’ ಖ್ಯಾತಿಯ ನಟಿ ಡ್ರಗ್ಸ್ ಸೇವಿಸಿದ್ದು ನಿಜ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಮೂಲಕ ಸಾಬೀತಾಗಿದೆ. ಸದ್ಯ ಬಂಧನ ಭೀತಿಯಲ್ಲಿರುವ ನಟಿ ಸಂಜನಾ ಅನಾರೋಗ್ಯ ಎಂಬ ಕಾರಣ ಹೇಳಿ ದಿಢೀರನೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವಂತ ನಟಿ ಸಂಜನಾ ಗಲ್ರಾಣಿ ತಾಯಿ ರೇಷ್ಮಾ ಗಲ್ರಾಣಿ, ನಮ್ಮ ಹಣೆ ಬರಹ ಸರಿಯಾಗಿಲ್ಲ. ಏನ್ ಮಾಡೋದಕ್ಕೆ ಆಗೋದಿಲ್ಲ. ಸಂಜನಾ ಗಲ್ರಾಣಿಗೆ ಹುಷಾರಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅವರಿಗೆ ಊಟ ತೆಗೆದುಕೊಂಡು ಬಂದಿದ್ದೇನೆ […]

ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ನಿಧನ, ಗಣ್ಯರ ಶೋಕ

Saturday, July 17th, 2021
G Made gowda

ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಶನಿವಾರ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜಿ.ಮಾದೇಗೌಡರು 94 ವರ್ಷ ವಯಸ್ಸಾಗಿತ್ತು,  ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದರು. ಮಾದೇಗೌಡರು ಕಾವೇರಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದರು. 1962ರಿಂದ ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಿರುಗಾವಲು ಕ್ಷೇತ್ರ ಮಳವಳ್ಳಿ ಕ್ಷೇತ್ರದೊಂದಿಗೆ ಸೇರಿಕೊಂಡ ನಂತರ ಮಂಡ್ಯಕ್ಕೆ ಬಂದರು. 1989, 1995ರಲ್ಲಿ 2 ಬಾರಿ ಲೋಕಸಭಾ ಸದಸ್ಯರಾಗಿದ್ದರು. 1980–83ರವರೆಗೆ […]

ಎರಡು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದ ಮಹಿಳೆ ಸಾವು

Sunday, June 27th, 2021
Akshatha

ಪುತ್ತೂರು: ಎರಡು ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ  ಅನಾರೋಗ್ಯದಿಂದ  ತಾಲೂಕಿನ ಕೃಷ್ಣ ನಗರದಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಿಬ್ಬಂದಿ ದಿಲೀಪ್ ಅವರ ಪತ್ನಿ ಅಕ್ಷತಾ ನಾಯ್ಕ(23)ಮೃತಪಟ್ಟವರು. ಹೆರಿಗೆ ಬಳಿಕ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಅಕ್ಷತಾ ಪುತ್ತೂರು ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಂಬಂಧಿಸಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು.

ಮಾಜಿ ಸಚಿವ ಸಿ.ಎಂ ಉದಾಸಿ ಸ್ಥಿತಿ ಚಿಂತಾಜನಕ

Friday, May 28th, 2021
CM Udasi

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಸಚಿವ ಸಿ.ಎಂ ಉದಾಸಿ ಸ್ಥಿತಿ ಗಂಭೀರವಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ನಾಲ್ಕು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಸಿಲುಕಿದ್ದ ಸಿ.ಎಂ ಉದಾಸಿ ಅವರನ್ನು ಹೊಸೂರು ರಸ್ತೆಯಲ್ಲಿನ ನಾರಾಯಣ ಹೆಲ್ತ್‌ ಸಿಟಿಯಲ್ಲಿರುವ ಕಿರಣ್ ಮಜುಂದಾರ್ ಷಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಯೋಸಹಜ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿರುವ ಸಿ.ಎಂ ಉದಾಸಿ ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಅವರು […]

ಇಂತಹ ಕೆಲವು ವಸ್ತುಗಳು ಮನೆಯಲ್ಲಿದ್ದರೆ ಬಡತನ ತಂದುಕೊಡುತ್ತದೆ ಎಚ್ಚರ

Saturday, April 10th, 2021
mirror

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಕೆಲವು ವಸ್ತುಗಳು ಮನೆಯಲ್ಲಿ ಇಡುವುದರಿಂದ ದಾರಿದ್ರ್ಯ, ಬಡತನ, ಅನಾರೋಗ್ಯ, ಹಣಕಾಸಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ವಸ್ತುಗಳನ್ನು ಆದಷ್ಟು ಮನೆಯಲ್ಲಿ ಇಡದೆ ಇರುವುದು ಸೂಕ್ತವಾಗಿದೆ. ಒಡೆದು ಹೋಗಿರುವ ಕನ್ನಡಿ, ಕಿಟಕಿಯ ಗಾಜಿನ ಬಾಗಿಲು, ಭಿನ್ನವಾಗಿರುವ ದೇವರ ವಿಗ್ರಹಗಳು ಅಥವಾ ಭಾವಚಿತ್ರ, ಮುರಿದು ಹೋಗಿರುವ ಮೇಜು ಕುರ್ಚಿಗಳು, ಕೆಟ್ಟು ಹೋಗಿರುವ ಎಲೆಕ್ಟ್ರಾನಿಕ್ ವಸ್ತುಗಳು, ಮನೆಯಲ್ಲಿನ ಕಪ್ಪು ಬಾಗಿಲುಗಳು ಇಂತಹ ವಸ್ತುಗಳೆಲ್ಲವೂ ಋಣಾತ್ಮಕ ಸ್ಥಿತಿಗಳನ್ನು ತಂದುಕೊಡುತ್ತದೆ. ಹಾಗಾಗಿ […]

ಬೆಂಬಿಡದೆ ಕಾಡುವ ಅನಾರೋಗ್ಯ ಸಮಸ್ಯೆಗೆ ಜೋತಿಷ್ಯ ಪರಿಹಾರ

Monday, April 13th, 2020
lime

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಆರೋಗ್ಯವೇ ಸಂಪತ್ತು ಎಂಬ ಮಾತು ಈ ದಿನಗಳಲ್ಲಿ ಎಲ್ಲರಿಗೂ ನಿಜ ಎಂದು ಅನಿಸುತ್ತದೆ. ಹಣ, ಆಸ್ತಿ, ಸುಖ, ವೈಭೋಗ ಎಲ್ಲಾ ಅನುಭವಿಸಲು ಆರೋಗ್ಯ ಬೇಕೇ ಬೇಕು. ಎಲ್ಲವೂ ಇದ್ದು ಆರೋಗ್ಯದಲ್ಲಿ ಭಾದೆ ಪಡುತ್ತಿರುವುದು ಮತ್ತು ದುಡಿದ ಹಣವನ್ನೆಲ್ಲಾ ಆಸ್ಪತ್ರೆಗೆ ನೀಡುತ್ತಿರುವುದು ಎರಡು ತರಹದ ಜನರನ್ನು ನೋಡಿದ್ದೇವೆ ಇಲ್ಲಿ ಸಮಸ್ಯೆ ಒಂದೇ ಆರೋಗ್ಯ ಸರಿಯಿಲ್ಲ ಎಂಬುದು. ಕೆಲವರಲ್ಲಿ ಒಂದು ತಪ್ಪಿದ್ದರೆ ಒಂದು ಸಮಸ್ಯೆ ಕಾಡುತ್ತದೆ. ಮಾನಸಿಕ ಆರೋಗ್ಯ […]

ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ

Tuesday, February 18th, 2020
kishori-ballal

ಬೆಂಗಳೂರು : ಕನ್ನಡ ಸಿನಿಮಾ‌ರಂಗದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಇಂದು ವಿಧಿವಶರಾಗಿದ್ದಾರೆ. ಸಾಕಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಿಶೋರಿ ಬಲ್ಲಾಳ್ ಚಿಕಿತ್ಸೆ ಫಲಕಾರಿಯಾಗದೇ ನಗರದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವಳೆಂತ ಹೆಂಡ್ತಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಿಶೋರಿ ಬಲ್ಲಾಳ್ 75 ಕ್ಕೂ ಅಧಿಕ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಕಹಿ, ಹನಿ ಹನಿ, ಸೂರ್ಯಕಾಂತಿ, ಅಕ್ಕತಂಗಿ, ನಮ್ಮಣ್ಣ, ಕೆಂಪೇಗೌಡ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್ ನಲ್ಲಿಯೂ ಅಭಿನಯ ಮಾಡಿದ್ದಾರೆ. ಶಾರೂಖ್ ಖಾನ್ […]

ಒತ್ತಡದ ಜೀವನದಿಂದ ಅನಾರೋಗ್ಯ : ಮಂಜುನಾಥ್ ಸಾಗರ್

Monday, January 13th, 2020
manjunath-sagar

ಮಂಗಳೂರು : “ಆಧುನಿಕ ಕಾಲದಲ್ಲಿ ನಿರಂತರ ಒತ್ತಡದಿಂದಾಗಿ ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಸಕ್ಕರೆ ಕಾಯಿಲೆ ತೀರಾ ಸಾಮಾನ್ಯವೆನ್ನುವಂತೆ ಎಲ್ಲರನ್ನೂ ಕಾಡುತ್ತಿದೆ. ನೇತ್ರ ತಪಾಸಣೆಯನ್ನು ಕ್ಲಪ್ತ ಸಮಯದಲ್ಲಿ ಮಾಡುವುದರಿಂದ ಮುಂದೊದಗ ಬಹುದಾದ ಅನಾಹುತಗಳನ್ನು ತಪ್ಪಿಸಬಹುದು. ಶಿಬಿರಾರ್ಥಿಗಳು ಈ ಶಿಬಿರದ ಪೂರ್ಣ ಪ್ರಯೋಜನ ಪಡೆದುಕೊಂಡಿರುವುದು ಸಂಘಟಕರಿಗೆ ಸಮಾಧಾನವನ್ನುಂಟು ಮಾಡಿದೆ ಹಾಗೂ ಈ ಸಂದರ್ಭದಲ್ಲಿ ನೇತ್ರ ಪರೀಕ್ಷೆಗೊಳಪಟ್ಟ 120 ಜನರಿಗೆ ಉಚಿತವಾಗಿ ಕನ್ನಡಕ ವಿತರಿಸಿರುವುದು ಶ್ಲಾಘನೀಯ ವಿಷಯ ಎಂದು ಇಂ. ಕೆ.ಪಿ. ಮಂಜುನಾಥ ಸಾಗರ್ ಅಭಿಪ್ರಾಯಪಟ್ಟರು. ಅವರು […]