ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಪ್ರಥಮ ಹಿಂದು ದೇವಾಲಯ ನಿರ್ಮಾಣ

Wednesday, November 11th, 2020
Hindu Temple

ಅಬುಧಾಬಿ: ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ ಹಿಂದು ದೇವಾಲಯ ಅಂತಿಮ ರೂಪ ಪಡೆದಾಗ ಹೇಗಿರಲಿದೆ ಎಂದು ತಿಳಿಯುವಂತಾಗಲು ದೇವಳದ ಅಂತಿಮ ವಿನ್ಯಾಸದ ಚಿತ್ರಗಳನ್ನು ಆಡಳಿತ ಮಂಡಳಿ- ಬಿಎಪಿಎಸ್ ಹಿಂದು ಮಂದಿರ್ ಬಿಡುಗಡೆಗೊಳಿಸಿದೆ. ಈ ಕುರಿತಾದ ವೀಡಿಯೋವೊಂದು ದೇವಳ ನಿರ್ಮಾಣದ ಆರಂಭದಿಂದ ಹಿಡಿದು ಪ್ರಸಕ್ತ ನಿರ್ಮಾಣ ಹಂತದ ತನಕದ ಚಿತ್ರಣವನ್ನು ನೀಡುತ್ತದೆ. ಅಬುಧಾಬಿಯ ಅಬು ಮುರೇಖಾಹ್ ಪ್ರದೇಶದಲ್ಲಿ ತಲೆಯೆತ್ತುತ್ತಿರುವ ಈ ದೇವಸ್ಥಾನದ ಎದುರುಗಡೆ ದೊಡ್ಡ ಸಭಾಂಗಣವಿರಲಿದ್ದು ಜತೆಗೆ ಅಲ್ಲಿ ಗ್ರಂಥಾಲಯ,  ಧಾರ್ಮಿಕ ಸಭಾಂಗಣ  ಹಾಗೂ ಸಮುದಾಯ ಕೇಂದ್ರವೂ ಇರಲಿದೆ. […]

ಅಬುಧಾಬಿಯಲ್ಲಿ ಮೃತಪಟ್ಟ ಯುವಕನ ಮೃತದೇಹ ಎರಡು ವಾರಗಳ ಬಳಿಕ ಮಂಗಳೂರಿಗೆ ಆಗಮನ

Sunday, June 21st, 2020
yashavanth-poojary

ಮಂಗಳೂರು : ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದ  ಬಂಟ್ವಾಳದ  ಅಡ್ಡೂರಿನ ಯುವಕನೋರ್ವನ ಮೃತದೇಹವು ಎರಡು ವಾರಗಳ ಬಳಿಕ ಜೂನ್‌ 21ರಂದು ತವರೂರಿಗೆ ತಲುಪಿದೆ. ಮೃತಪಟ್ಟ ಯುವಕನನ್ನು ಅಡ್ಡೂರಿನ ದಿ.ನಾರಾಯಣ ಹಾಗೂ ಲಲಿತಾ ದಂಪತಿಯ ಪುತ್ರ ಯಶವಂತ ಪೂಜಾರಿ ಎನ್ನಲಾಗಿದೆ. ಯಶವಂತ ಅವರು ಅಪಘಾದಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬದವರಿಗೆ ಮಾಹಿತಿ ಬಂದಿತ್ತು. ಅವರ ಪಾಸ್‌‌‌ಪೋರ್ಟ್‌‌‌, ವೀಸಾದ ಅವಧಿ ಮುಗಿದಿದ್ದು ಮೃತ ದೇಹವನ್ನು ಕಳುಹಿಸಿ ಕೊಡುವುದು ಅಡಚಣೆಯಾಗಿತ್ತು. ನಂತರ ಅನಿವಾಸಿ ಕನ್ನಡಿಗ, ಉದ್ಯಮಿ ಅಡ್ಡೂರಿನ ಹಿದಾಯತ್‌‌‌‌‌ ಅವರ ಸಹಕಾರ ದಿಂದ ಮೃತ ದೇಹ ಕುಟುಂಬಿಕರಿಗೆ ತಲುಪಿದೆ ಎನ್ನಲಾಗಿದೆ. ಮೃತದೇಹವನ್ನು ಶನಿವಾರ ಪೂರ್ವಾಹ್ನ 11.30ಕ್ಕೆ […]

ಅಬುಧಾಬಿಯಿಂದ ಮಂಗಳೂರಿಗೆ ಕಚ್ಚಾತೈಲ ಪ್ರಥಮ‌ ಸರಕು ಹಡಗು: ಒಎನ್‍ಜಿಸಿ ಅಧ್ಯಕ್ಷ

Saturday, June 9th, 2018
first-crued

ಮಂಗಳೂರು: ಒಎನ್‌ಜಿಸಿಯ ಅಂಗ ಸಂಸ್ಥೆಯಾದ ಒಎನ್‍ಜಿಸಿ ವಿದೇಶ್‌ ಲಿಮಿಟೆಟ್‌ ಜೊತೆಗಿನ ಪಾಲುದಾರಿಕೆಯ ಕಚ್ಚಾ ತೈಲದ ಪ್ರಥಮ ಸರಕು ತುಂಬಿದ ಹಡುಗು ಅಬುಧಾಬಿಯ ಲೋವರ್‌ ಝುಕುಮಾ ಮೂಲಕ ನವ ಮಂಗಳೂರು ಬಂದರಿಗೆ ಬಂದು ತಲುಪಿದೆ ಎಂದು ಒಎನ್‍ಜಿಸಿಯ ಅಧ್ಯಕ್ಷ ಶಶಿಶಂಕರ್‌ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಸುಮಾರು 690 ಬಿಲಿಯನ್‌ ಬ್ಯಾರಲ್‌ ಕಚ್ಚಾ ತೈಲ ಜೂನ್‌ 2ರಂದು ಎಂ.ಟಿ.ವಾಪಾಃ ಹಡಗಿನ ಮೂಲಕ ಒಎನ್‍ಜಿಸಿ ವಿದೇಶ ಕಂಪೆನಿಯಿಂದ ಎಂಆರ್‌ಪಿಎಲ್‍ಗೆ ಸಾಗಿಸಲು ಮಂಗಳೂರು ತಲುಪಿದೆ. ಎಂಆರ್‌‌ಪಿಎಲ್‌ ಖರೀದಿಸಿದ ಕಚ್ಚಾ ತೈಲವನ್ನು […]