ಪ್ರಭು ಶ್ರೀರಾಮನ ಅವಹೇಳನ : ಸಂತ ಜೆರೋಸಾ ಶಾಲೆಯ ಶಿಕ್ಷಕಿ ಅಮಾನತು

Monday, February 12th, 2024
st gerosa school

ಮಂಗಳೂರು : ಅಯೋಧ್ಯಾ ಹಾಗೂ ಶ್ರೀರಾಮನ ಅವಹೇಳನ ಮಾಡಿದ ಆರೋಪದಲ್ಲಿ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ. ಫೆಬ್ರವರಿ 8ರಂದು ‘Work is worship’ ಎಂಬ ವಿಷಯ ಬಗ್ಗೆ ಪಾಠ ಮಾಡಿದ್ದ ಶಿಕ್ಷಕಿ ಸಿಸ್ಟರ್ ಪ್ರಭಾ ಅಯೋಧ್ಯೆ ರಾಮಮಂದಿರ ಹಾಗೂ ಪ್ರಭು ಶ್ರೀರಾಮನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು. ನಂತರ ಪೋಷಕರು ಮತ್ತು ಹಿಂದೂ ಕಾರ್ಯಕರ್ತರು ಶಿಕ್ಷಕಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. […]

ದೊಣ್ಣೆ, ಲಾಠಿ, ಪೈಪ್‌ನಿಂದ ವಕೀಲನ ಮೇಲೆ ಹಲ್ಲೆ, ಆರು ಪೊಲೀಸರ ಅಮಾನತು

Saturday, December 2nd, 2023
advocate-preetham

ಚಿಕ್ಕಮಗಳೂರು : ಯುವ ವಕೀಲನ ಮೇಲೆ ದೊಣ್ಣೆ, ಲಾಠಿ, ಪೈಪ್‌ನಿಂದ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದ್ದು, ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್ ಪೂಜಾರಿ ಸೇರಿ ಆರು ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಹಲ್ಲೆಗೊಳಗಾದವರನ್ನು ಪ್ರೀತಂ ಎಂದು ಗುರುತಿಸಲಾಗಿದ್ದು, ಇವರು ಗುರುವಾರ ರಾತ್ರಿ ಹೆಲ್ಮೆಟ್‌ ಇಲ್ಲದೆ ಮಾರ್ಕೇಟ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಠಾಣೆಯ ಎದುರು ಅಡ್ಡಗಟ್ಟಿದ ಪೊಲೀಸರು, ಅವರ ಬೈಕ್‌ನಿಂದ ಕೀ ಕಸಿದುಕೊಂಡಿದ್ದಾರೆ. ಹೆಲ್ಮೆಟ್ ಹಾಕದಿರುವುದಕ್ಕೆ ದಂಡ ಕಟ್ಟುತ್ತೇನೆ, ಕೀ ಕಸಿದುಕೊಳ್ಳಲು ನಿಮಗೆ […]

‘ಪವರ್‌ ಆಫ್‌ ಪಾಕಿಸ್ತಾನ್‌’ ಫೇಸ್‌ಬುಕ್‌ ಪೇಜ್‌ ಅನ್ನು ಲೈಕ್‌ ಮಾಡಿ ಶೇರ್‌ ಮಾಡಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

Monday, August 24th, 2020
sanaulla

ದಾವಣಗೆರೆ: ಈ ಹಿಂದೆ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಕೋಮಿನ ಹುಡುಗನ ಜೊತೆಗೆ ಓಡಾಡುತ್ತಿದ್ದಾಳೆ ಎಂದು ಆರೋಪಿಸಿ ಆ ಹುಡುಗನ ಮೇಲೆ ಸ್ನೇಹಿತರ ಜೊತೆ ಸೇರಿ ಅಮಾನತಾಗಿದ್ದ ಪೇದೆ, ಈಗ ‘ಪವರ್‌ ಆಫ್‌ ಪಾಕಿಸ್ತಾನ್‌’ ಎಂಬ ಸಂದೇಶವಿದ್ದ ಫೇಸ್‌ಬುಕ್‌ ಪೇಜ್‌ ಅನ್ನು ಲೈಕ್‌ ಮಾಡಿ, ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅದನ್ನು ಶೇರ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಸನಾವುಲ್ಲಾ ಅವರನ್ನು ಅಮಾನತುಗೊಳಿಸಲಾಗಿದೆ. 2008ನೇ ಸಾಲಿನಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಸನಾವುಲ್ಲಾ ಆಯ್ಕೆಯಾಗಿದ್ದರು. ಈ ಮೊದಲು ಬಸವನಗರ ಪೊಲೀಸ್‌ ಠಾಣೆಯ ವಾಹನ ಚಾಲಕರಾಗಿದ್ದರು. ಸನಾವುಲ್ಲಾ […]

ಸಿಎಂ ಅವರನ್ನು ಅವಮಾನಿಸಿದ ಪೊಲೀಸ್ ಸಿಬ್ಬಂದಿ ಅಮಾನತು

Friday, November 3rd, 2017
police suspend

ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯದ ಸಂದೇಶ ಪ್ರಕಟಿಸಿದ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯ ಕಾನ್ಸ್’ಟೇಬಲ್ ರಾಜ ಶಿವಪ್ಪ ಬೆಣ್ಣೆ ಅಮಾನತುಗೊಂಡ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಇವರು ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದರು. ಇದರ ವಿರುದ್ಧ ದೂರು ಕೂಡ ಸಲ್ಲಿಕೆಯಾಗಿತ್ತು. ಇದೀಗ ಅವರನ್ನು ಕೆಲಸದಿಂದ ವಜಾ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ […]

ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ, ಕದ್ರಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅಮಾನತು

Friday, July 31st, 2015
Advacate protest

ಮಂಗಳೂರು: ಪೊಲೀಸ್ ಆಯುಕ್ತ ಎಸ್.ಮುರುಗನ್ ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕದ್ರಿ ಇನ್ಸ್ ಪೆಕ್ಟರ್ ಟಿ.ಡಿ ನಾಗರಾಜ್ ಅವರನ್ನು ಇಂದು ಅಮಾನತು ಮಾಡಿರುವುದಾಗಿ ತಿಳಿದು ಬಂದಿದೆ. ಶುಕ್ರವಾರ ನ್ಯಾಯವಾದಿ ಉತ್ತಮ್ ರೈ ತಮ್ಮ ಕಕ್ಷಿದಾರನ ಜೊತೆಗೆ ಕೇಸ್ ಸಂಬಂಧಿಸಿ ಠಾಣೆಗೆ ಹೋದಾಗ ನಾಗರಾಜ್ ಅವರು ರೈ ಅವರೊಂದಿಗೆ ಅನೂಚಿತವಾಗಿ ನಡೆದುಕೊಂಡದ್ದಲ್ಲದೇ ಹಲ್ಲೆ ಮಾಡಿದ್ದಾಗಿ ದೂರಿದ್ದಾರೆ. ಅದಕ್ಕಾಗಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ನೇತೃತ್ವದಲ್ಲಿ ಕದ್ರಿ ಠಾಣೆ ಮುಂದೆ ನ್ಯಾಯವಾದಿಗಳು ಧರಣಿ ನಡೆಸಿ ಇನ್ಸ್ ಪೆಕ್ಟರ್ […]

ಕರ್ತವ್ಯ ಲೋಪ : ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್ ಅಮಾನತು

Friday, January 25th, 2013
Konaje SI shivaprakash

ಮಂಗಳೂರು: ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್ ವಿರುದ್ಧ ಕರ್ತವ್ಯ ಲೋಪವೆಸಗಿದ ಕಾರಣಕ್ಕೆ ಮಂಗಳೂರು ಕಮೀಷನರ್ ಮನೀಷ್ ಖರ್ಬೀಕರ್ ಅಮಾನತು ಆದೇಶ ಹೊರಡಿಸಿದ್ದಾರೆ. ಕೊಲೆ ಪ್ರಕರಣವವೊಂದನ್ನು ಅಪಘಾತ ಎಂದು ಕೇಸು ದಾಖಲಿಸಿಕೊಂಡಿದ್ದಕ್ಕಾಗಿ ಕೊಣಾಜೆ ಶಿವಪ್ರಕಾಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ದೇರಳಕಟ್ಟೆ ನಿವಾಸಿ ರಝಾಕ್ ಎಂಬವರ ಪತ್ನಿ ಸೌದಾ(35) ಎಂಬವರನ್ನು ಡಿ. 6 ರಂದು ಅಬ್ದುಲ್ ರೆಹಮಾನ್ ಎಂಬಾತ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದರು. ಕೊಣಾಜೆ […]

ಖೋಟಾ ರಶೀದಿ ನೀಡಿ ರೂ.28 ಸಾವಿರ ಹಣ ವಸೂಲಿ: ಮುಖ್ಯ ಶಿಕ್ಷಕ ಕೆ.ಜಿ.ಲಕ್ಷ್ಮಣ ಶೆಟ್ಟಿ ಅಮಾನತು

Friday, July 8th, 2011
head master suspended

ಮಂಗಳೂರು: ಬೆಳ್ತಂಗಡಿ ತಾಲೂಕು ಬಂಗಾಡಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಕೆ.ಜಿ.ಲಕ್ಷ್ಮಣ ಶೆಟ್ಟಿ ಮತ್ತು ಅದೇ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾದ ಶ್ರೀ ಬಿ.ರಾಜು ಇವರು ಶಾಲೆಯಲ್ಲಿ ಸರಕಾರ ನಿಗಧಿಪಡಿಸಿರುವ ಶುಲ್ಕಗಿಂತ ಹೆಚ್ಚುವರಿಯಾಗಿ ಶುಲ್ಕ ರೂ.28,071 ಗಳನ್ನು ಖೋಟಾ ರಶೀದಿ ನೀಡಿ ವಸೂಲಿ ಮಾಡಿದ ಕಾರಣ ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಬೆಳ್ತಂಗಡಿಗೆ ಭೇಟಿ ನೀಡಿದಾಗ, ಪತ್ರಕರ್ತರು ಮೌಖಿಕ ದೂರು ನೀಡಿದ ಮೇರೆಗೆ, ಜಿಲ್ಲಾಧಿಕಾರಿ   ಡಾ.ಎನ್.ಎಸ್.ಚೆನ್ನಪ್ಪ ಗೌಡ ಅವರು  ತನಿಖೆ ಕೈಗೊಳ್ಳುವಂತೆ, ಸಾರ್ವಜನಿಕ […]

ದಲಿತ ವಿರೋಧಿ ವಿನಯ್ ಗಾಂವ್ಕರ್ ರನ್ನು ಅಮಾನತುಗೊಳಿಸಲು ದಸಂಸ ಮನವಿ.

Monday, October 11th, 2010
ದಸಂಸದಿಂದ ಪ್ರತಿಭಟನೆ

ಮಂಗಳೂರು: ಬಿಲ್ಲವ ಕುಟುಂಬದ ಬಡ ಮಹಿಳೆಯೊಬ್ಬರು ಮೋಸ ಮಾಡಿದ ವ್ಯಕ್ತಿಯೊಬ್ಬನ ವಿರುದ್ಧ ದೂರು ಕೊಡಲು ಹೋದಾಗ ಬಂದರು ಠಾಣೆಯ ಇನ್ಸ್ ಪೆಕ್ಟರ್ ವಿನಯ್ ಗಾಂವ್ಕರ್ ಅಮಾನವೀಯವಾಗಿ ನಡೆಸಿಕೊಂಡದನ್ನು ವಿರೋದಿಸಿ ದಲಿತ ಸಂಘರ್ಷ ಸಮಿತಿಯಿಂದ ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ನಡೆಯಿತು. ಕಳೆದ ಸಪ್ಟೆಂಬರ್ ನಲ್ಲಿ ರಮೇಶ ಎಂಬುವವರು ನೀರುಮಾರ್ಗದ ಗಾಯತ್ರಿ ಎಂಬ ಮಹಿಳೆಗೆ ತನ್ನ ಪರಿಚಯ ಮಾಡಿಸಿಕೊಂಡು ಹಂಪನ್ ಕಟ್ಟದಲ್ಲಿರುವ ಭಾರತ್ ಫೈನಾನ್ಸ್ ನ ಮಾಲಕರ ಮೂಲಕ ಸೊಸೈಟಿಯಲ್ಲಿರುವ 181 ಗ್ರಾಂ ಚಿನ್ನವನ್ನು ತೆಗೆಸಿ, […]