ಮಂಗಳೂರು ನಗರದಲ್ಲಿ ದೈತ್ಯ ಗಾತ್ರದ ಕಾಡುಕೋಣ ಪ್ರತ್ಯಕ್ಷ, ಜನರಿಗೆ ಆತಂಕ

Monday, December 4th, 2023
Wild-bore

ಮಂಗಳೂರು : ಕಾಡುಕೋಣವೊಂದು ಕದ್ರಿ ಪ್ರದೇಶದಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು, ಅದು ಸಂಚರಿಸುವ ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕದ್ರಿ, ಕೈಬಟ್ಟಲು, ಕರಾವಳಿ ಲೇನ್ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ದೈತ್ಯಗಾತ್ರದ ಕಾಡುಕೊಣ ರಾಜರೋಷವಾಗಿ ಹಗಲು, ರಾತ್ರಿ ಎನ್ನದೇ ಸುತ್ತಾಡುತ್ತಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಈ ಕಾಡು ಕೋಣವು ಕೆಲ ಮನೆಗಳ ಕಂಪೌಂಡ್ ಗಳನ್ನು ಹಾರಿ, ಕಬ್ಬಿಣದ ತಡೆ ಬೇಲಿಗಳಮ್ಮು ಮುರಿದು ಹಾಕಿದೆ ಎಂದು ತಿಳಿದು ಬಂದಿದೆ. ರಾತ್ರಿ ವೇಳೆಯೇ ಕಾಡು ಕೋಣಗಳು ಸಂಚಾರ ಮಾಡುತ್ತಿವೆ ಎಂದು […]

ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ, ಇಬ್ಬರು ಆರೋಪಿಗಳ ಸೆರೆ

Thursday, November 23rd, 2023
ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ, ಇಬ್ಬರು ಆರೋಪಿಗಳ ಸೆರೆ

ಬಂಟ್ವಾಳ: ಅಕ್ರಮವಾಗಿ ಮರಮಟ್ಟುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇಲೆ ದಾಳಿ ಮಾಡಿದ ಬಂಟ್ವಾಳ ಅರಣ್ಯ ಇಲಾಖೆಯವರು ಆರೋಪಿಗಳ ಸಮೇತ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ವಾಹನ ಮತ್ತು ಅಮಾನತು ಪಡಿಸಿದ ಸೊತ್ತಿನ ಸಮೇತ ಮೌಲ್ಯ ಒಟ್ಟು 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಾರ್ನ ಬೈಲು ಹಾಗೂ ಉಳ್ಳಾಲ ತಾಲೂಕು ಸಜಿಪ ಪಡು ಗ್ರಾಮದ ಕೋಟೆಕನಿ ಎಂಬಲ್ಲಿ ಅಕ್ರಮವಾಗಿ ವಿವಿಧ ಜಾತಿಯ ದಿಮ್ಮಿಗಳನ್ನು […]

ಕೃಷಿಕ ಕುಟುಂಬವನ್ನು ಎಬ್ಬಿಸಲು ಮುಂದಾಗ ಅರಣ್ಯ ಇಲಾಖೆ ಸಿಬ್ಬಂದಿ, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಲವು ಶಾಸಕರು

Monday, October 9th, 2023
ಕೃಷಿಕ ಕುಟುಂಬವನ್ನು ಎಬ್ಬಿಸಲು ಮುಂದಾಗ ಅರಣ್ಯ ಇಲಾಖೆ ಸಿಬ್ಬಂದಿ, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹಲವು ಶಾಸಕರು

ಬೆಳ್ತಂಗಡಿ : ತಾಲೂಕಿನ ಕಳೆಂಜ ಗ್ರಾಮದಲ್ಲಿ ದೇವಣ್ಣ ಗೌಡ ಅವರ ಮನೆ ಧ್ವಂಸಗೊಳಿಸಲು ಸಜ್ಜಾದ ಅರಣ್ಯ ಇಲಾಖೆ ಹಾಗೂ ರಾಜ್ಯದ ಬಡವರ ವಿರೋಧಿ ಸರ್ಕಾರದ ವಿರುದ್ಧ ದ.ಕ ಜಿಲ್ಲೆಯ ಶಾಸಕರು, ಕಾರ್ಯಕರ್ತರು ಸಹಿತ ಹಲವಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಎರಡನೇ ಬಾರಿ ಈ ಮನೆ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಕೃಷಿ ಚಟುವಟಿಕೆಯೊಂದಿಗೆ ಸದರಿ ಭೂಮಿಯಲ್ಲಿ ವಾಸಿಸುತ್ತಿರುವ ಕುಟುಂಬವನ್ನು ಮುನ್ಸೂಚನೆಯೂ ನೀಡದೆ ದಬ್ಬಾಳಿಕೆಯೊಂದಿಗೆ ಒಕ್ಕಲೆಬ್ಬಿಸಲು ಸಂಚು ರೂಪಿಸಿರುವ ಸರ್ಕಾರ ಹಾಗೂ […]

ಕೊಣಾಜೆ ನಡುಪದವಿನಲ್ಲಿ ಚಿರತೆ ಹಿಡಿಯಲು ಜೀವಂತ ಕೋಳಿಯನ್ನು ಕಟ್ಟಿ ಬೋನು ಇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು

Saturday, October 7th, 2023
konaje- leopard

ಕೊಣಾಜೆ: ನಡುಪದವು ಬಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ‌ ಸಿಬ್ಬಂದಿ ಜೀವಂತ ಕೋಳಿಯನ್ನು ಕಟ್ಟಿ ಬೋನು ಇರಿಸಿದ್ದಾರೆ. ಕೊಣಾಜೆ ನಡುಪದವಿನಲ್ಲಿ ಗುರುವಾರ ರಾತ್ರಿ 9.30 ವೇಳೆಗೆ ವಾಕಿಂಗ್ ಹೋಗುತಿದ್ದ ಉಪನ್ಯಾಸಕರೊಬ್ಬರು ಅಲ್ಲೇ ಸಮೀಪದ ಲಾಡ ಬಳಿ ಚಿರತೆಯನ್ನು ನೋಡಿ ಭಯಭೀತಗೊಂಡಿದ್ದರು. ಅಲ್ಲದೆ ಅದೇ ರಾತ್ರಿ ಪರಿಸರದ ಮಹಿಳೆ‌ ಸೇರಿದಂತೆ ಒಟ್ಟು ಐದು ಜನರು ಚಿರತೆಯನ್ನು ನೋಡಿ ಭಯಗೊಂಡಿರುವುದಾಗಿ ತಿಳಿಸಿದ್ದಾರೆ. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಹಲವರಿಗೆ ಒಂದೇ […]

ಈಶ್ವರಮಂಗಲ : ಪೋಟೋಗ್ರಾಫರ್‌ ಒಬ್ಬರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತು ಹಾಕಿದ ಮಾವ

Wednesday, November 24th, 2021
Jagadish Shetty

ಸುಳ್ಯ  : ಪೋಟೋಗ್ರಾಫರ್‌ ಒಬ್ಬರನ್ನು ಹತ್ಯೆಗೈದು ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಹೂತು ಹಾಕಿರುವ ಘಟನೆ, ನಾಪತ್ತೆಯಾದ ಐದು ದಿನಗಳ ಬಳಿಕ  ಸುಳ್ಯ ತಾಲೂಕಿನ ಈಶ್ವರಮಂಗಲದಲ್ಲಿ  ನ.24 ರಂದು ಬೆಳಕಿಗೆ ಬಂದಿದೆ. ಕೊಲೆಯಾದವರನ್ನು  ಮಂಗಳೂರು ಹೊರವಲಯ ಕೂಳೂರು ಸಮೀಪದ ಶಿವನಗರ ನಿವಾಸಿ ದಿ. ಶಂಭು ಶೆಟ್ಟಿಯವರ ಪುತ್ರ , ಪ್ರಸ್ತುತ ಮೈಸೂರಿನ ಸುಬ್ರಹ್ಮಣ್ಯ ನಗರ ನಿವಾಸಿ ಯಾಗಿರುವ  ಜಗದೀಶ್ ಶೆಟ್ಟಿ (58ವ) ಎಂದು ಗುರುತಿಸಲಾಗಿದೆ. ಜಗದೀಶ್ ಶೆಟ್ಟಿ ತನ್ನ ಕೃಷಿ ಜಮೀನು ನೋಡಲು ಮೈಸೂರಿನಿಂದ ಪುತ್ತೂರಿಗೆ ಆಗಮಿಸಿ  […]

ಕೋಳಿ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆ

Monday, November 8th, 2021
chita

ಸುಬ್ರಹ್ಮಣ್ಯ : ಕೋಳಿಯ ಬೇಟೆಯಲ್ಲಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆಯಲ್ಲಿ  ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ. ಚಿರತೆ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬುವರ ಮನೆಯ ಮುಂಭಾಗದ ಬಾವಿಗೆ ಬಿದ್ದಿತ್ತು. ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಈ ಕುರಿತು ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ ಸೂಕ್ತ ಭದ್ರತೆಯೊಂದಿಗೆ ನಿನ್ನೆ ಸಂಜೆ ವೇಳೆ ರಕ್ಷಣಾ ಕಾರ್ಯವನ್ನು ಆರಂಭಿಸಿದ್ದರು. ಬಾವಿಯ ಕಟ್ಟೆ ಸಮೀಪ ಬೋನ್ ಇಟ್ಟು […]

ನಾಯಿಯನ್ನು ಬೆನ್ನಟ್ಟಿ ಮನೆಯ ಕೋಣೆಯೊಳಗೆ ನುಗ್ಗಿದ ಚಿರತೆ

Sunday, March 21st, 2021
chita

ಬ್ರಹ್ಮಾವರ : ಚಿರತೆಯೊಂದು ರವಿವಾರ ನಸುಕಿನ ವೇಳೆ ಮನೆಯ ಕೋಣೆ ಯೊಳಗೆ ನುಗ್ಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮೂಲಕ ಚಿರತೆಯನ್ನು ರಕ್ಷಿಸಿದ್ದಾರೆ.   ನೈಲಾಡಿ ಸಮೀಪ ಬೇಟೆ ಅರಸಿ ನಾಡಿಗೆ ಬಂದ ಚಿರತೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದಾಗ, ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿ ಸೇರಿಕೊಂಡಿತು. ನಾಯಿಯನ್ನು ಅಟ್ಟಿಸಿಕೊಂಡು ಚಿರತೆಯು ಕೋಣೆಯೊಳಗೆ ಸೇರಿಕೊಂಡಿತು. ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆಯ ಬಾಗಿಲು ಹಾಕಿದರು. ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ […]

ರಸ್ತೆಬದಿ 5 ಮಂಗಗಳ ಕಳೇಬರಗಳು ಪತ್ತೆ, ಸ್ಥಳೀಯರಲ್ಲಿ ಆತಂಕ

Friday, March 12th, 2021
Monkey death

ಬೆಳ್ತಂಗಡಿ : ಕಾಯರ್ತೋಡಿ ಸಮೀಪವಿರುವ ಸೀಟ್ ರಕ್ಷಿತಾರಣ್ಯದಲ್ಲಿ ಇಂದು ಬೆಳಗ್ಗೆ ರಸ್ತೆಬದಿ 5 ಮಂಗಗಳ ಕಳೇಬರಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂಡಾಜೆ ಗ್ರಾಮದಲ್ಲಿ ನಡೆದ  ಘಟನೆಯ  ಕುರಿತು ಸ್ಥಳೀಯರು ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಇಲಾಖಾ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತೋಟಕ್ಕೆ ಬಂದು ವಾಪಸ್ ಹೋಗಲಾಗದೆ ಉಳಿದ ಆನೆಮರಿ

Friday, October 30th, 2020
elephant

ಬೆಳ್ತಂಗಡಿ :  ಕಾಡಾನೆಗಳ ಹಿಂಡೊಂದು ಕಡಿರುದ್ಯಾವರದಲ್ಲಿ ತೋಟಕ್ಕೆ ನುಗ್ಗಿದ್ದು ಅದರಲ್ಲಿದ್ದ ಆನೆಮರಿಯೊಂದು ವಾಪಸ್ ಹೋಗಲಾಗದೆ ತೋಟದಲ್ಲಿ ಉಳಿದ ಘಟನೆ ಗುರುವಾರ ರಾತ್ರಿ  ನಡೆದಿದೆ. ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡ ಎಂಬವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ತಿಂದು ಸಂಪೂರ್ಣ ನಾಶ ಮಾಡಿದೆ. ತೋಟದಿಂದ ಕಾಡಿಗೆ ಹೋಗುವ ಸಮಯದಲ್ಲಿ ಮರಿಯಾನೆಯೊಂದಕ್ಕೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಬಾಕಿಯಾಗಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳಗ್ಗೆ ತೋಟದ ಮಾಲಕರು ಹೋದಾಗ ವಿಷಯ ಗೊತ್ತಾಗಿದ್ದು, ಆನೆ ಮರಿ ತೋಟದಲ್ಲಿ ಇರುವುದನ್ನು ಗಮನಿಸಿದ ಅವರು ಅರಣ್ಯ […]

ಬೆಳ್ತಂಗಡಿ ತಾಲೂಕಿನಲ್ಲಿ ಗಬ್ಬದ ಹಸುವಿನ ಮೇಲೆ ಚಿರತೆ ದಾಳಿ

Sunday, October 18th, 2020
leapored

ಬೆಳ್ತಂಗಡಿ : ಚಿರತೆಯೊಂದು ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದಲ್ಲಿ ಗಬ್ಬದ ಹಸುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಮೂರು ದಿನಗಳ ಹಿಂದೆ  ಹೋರಿಯನ್ನು ಹಟ್ಟಿಯಿಂದ ಹೊತ್ತೊಯ್ದು ತಿಂದು ಹಾಕಿತ್ತು. ಇದೀಗ ಶನಿವಾರ ರಾತ್ರಿ ಮತ್ತೆ ಖಂಡಿಗ ನಿವಾಸಿ ಜಯರಾಮ್ ಶೆಟ್ಟಿಯರ ತೋಟದಲ್ಲಿ ಗಬ್ಬದ ಹಸುವಿಗೆ ಆಕ್ರಮಣ ಮಾಡಿ ಗಾಯಗೊಳಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ವೇಣೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಅಳವಡಿಸಿ ಶೀಘ್ರ ಚಿರತೆಯನ್ನು ಪತ್ತೆ ಮಾಡುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ. ಆದರೆ ಇಲ್ಲಿನ ಜನತೆ ಮಾತ್ರ […]