ಆಟಿ ಅಮಾವಾಸ್ಯೆ ದೇವಸ್ಥಾನಗಳಲ್ಲಿ ತೀರ್ಥಸ್ನಾನ ಇಲ್ಲ, ಕೊರೊನಾ ಸೋಂಕಿನ ಹಿನ್ನೆಲೆ ಪಾಲೆ ಕಷಾಯಕ್ಕೆ ಬೇಡಿಕೆ

Monday, July 20th, 2020
palekashaya

ಬಂಟ್ವಾಳ: ಆಟಿ ಅಮಾವಾಸ್ಯೆಯ ದಿನ ಪಾಲೆ (ಹಾಲೆ) ಮರದಲ್ಲಿ ವಿಶೇಷ ರೋಗ ನಿರೋಧಕ ಶಕ್ತಿ ಇದೆ ಎಂಬ ನಂಬಿಕೆ ತಲತಲಾಂತರ ದಿಂದ ಬಂದಿದೆ. ಸೂರ್ಯೋದಯದ ಮೊದಲು ಅಂದರೆ ನಸುಕಿನಲ್ಲೇ ಕಲ್ಲಿನಿಂದ ಜಜ್ಜಿ ತಂದು ಕಷಾಯ ಮಾಡಿ ಸೇವಿಸುವುದು ರೂಢಿ. ಆಷಾಢ ತಿಂಗಳಲ್ಲಿ ಭಾರಿ ಮಳೆ. ಕ್ರಿಮಿ- ಕೀಟಬಾಧೆಯಿಂದ ಆರೋಗ್ಯದ ರಕ್ಷಣೆ, ರೋಗ ನಿರೋಧಕತೆಗಾಗಿ ಪಾಲೆ (ಹಾಲೆ) ಮರದ ತೊಗಟೆಯ ಕಷಾಯ ಮಾಡಿ ಕುಡಿದರೆ ಒಳ್ಳೆಯದಂತೆ. ಔಷಧೀಯವಾಗಿ ಈ ಕಷಾಯಕ್ಕೆ ಬಹಳಷ್ಟು ಮಹತ್ವವಿರುವುದರಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಬೇಡಿಕೆ ವ್ಯಕ್ತವಾಯಿತು. ಈ ಬಾರಿ ಲಾಕ್ ಡೌನ್ […]

ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ

Tuesday, August 2nd, 2016
Aati-Amavasye

ಮಂಗಳೂರು: ಆಟಿ ತಿಂಗಳು ಎಂದಾಕ್ಷಣ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ ಎಂಬ ವಾಡಿಕೆ ಇದೆ. ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ ಇದೆ. ಆಟಿ ಕಷಾಯಕ್ಕೂ ಅಗ್ರ ಸ್ಥಾನ ದೊರೆತಿದೆ. ಕೃಷಿ ಅವಲಂಭಿತ ಪ್ರಾಚೀನ ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಯಾವುದೇ ಬೆಳೆಯ ಫಸಲು ಕೊಯ್ಲಿಗೆ ಬರುವುದಿಲ್ಲ. ಈ ತಿಂಗಳಿನಲ್ಲಿ ಬದಲಾಗುವ ಭೂ ವಾತಾವಾರಣ, ನಿರಂತರ ಸುರಿಯುವ ಮಳೆಯನ್ನು ಕಾಣಬಹುದು. ಈ ಕಾರಣದಿಂದಾಗಿ ಈ ಮಾಸದಲ್ಲಿ ಶರೀರದಲ್ಲಿ ಕಂಡು ಬರುವ ರೋಗಗಳು […]

ನರಹರಿ ಬೆಟ್ಟ ಮತ್ತು ಕಾರಿಂಜೇಶ್ವರ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ವಿಶೇಷ ತೀರ್ಥ ಸ್ನಾನ

Wednesday, August 7th, 2013
ati-1

ಬಂಟ್ವಾಳ: ಆಟಿ ಅಮಾವಾಸ್ಯೆಯ ಪ್ರಯುಕ್ತ  ಪುರಾಣ ಪ್ರಸಿದ್ದ ಕ್ಷೇತ್ರವಾದ ನರಹರಿ ಶ್ರೀ ಸದಾಶಿವ ದೇವಸ್ಥಾನ ಮತ್ತು ಕಾರಿಂಜ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ  ಮಂಗಳವಾರ ಭಕ್ತಾಧಿಗಳು ಬೆಳಗ್ಗಿನಿಂದಲೇ  ವಿಶೇಷ ತೀರ್ಥ ಸ್ನಾನದಲ್ಲಿ ಪಾಲ್ಗೊಂಡರು. ಮುಂಜಾನೆಯಿಂದಲೇ ನರಹರಿ ಸದಾಶಿವ ಕ್ಷೇತ್ರದಲ್ಲಿ ಅಪಾರ ಸಂಖ್ಯೆಯ ಭಕ್ತರು ಅಲ್ಲಿನ ಶಂಖ, ಚಕ್ರ, ಗದಾ, ಪದ್ಮ ಗಳೆಂಬ ತೀರ್ಥಕೆರೆಗಳಿಗೆ ಅಡಿಕೆ ಹಾಗೂ ವೀಳ್ಯದೆಲೆ ಅರ್ಪಿಸಿ ವಿಶೇಷ ತೀರ್ಥಸ್ನಾನ ಮಾಡಿದರು. ಉಬ್ಬಸ ನಿವಾರಣೆಗಾಗಿ ಹುರಿ ಹಗ್ಗವನ್ನು ದೇವರಿಗೆ ಅರ್ಪಿಸುವ ಸೇವೆ ಇಲ್ಲಿ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು […]

ನಾಡಿನೆಲ್ಲೆಡೆ ಶೃದ್ದಾ ಭಕ್ತಿಯ ‘ನಾಗರಪಂಚಮಿ’

Thursday, August 4th, 2011
Nagara Panchami/ನಾಗರಪಂಚಮಿ

ಮಂಗಳೂರು : ಇಂದು ದೇಶದಾದ್ಯಂತ ನಾಗರ ಪಂಚಮಿಯನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ‘ನಾಗರ ಪಂಚಮಿ’ ಕೃಷಿ ಮತ್ತು ಮಳೆಯಿಂದಾಗಿ ಸ್ಥಗಿತಗೊಂಡಿದ್ದ ನಮ್ಮ ಎಲ್ಲ ಶ್ರದ್ಧೆಯ, ಉತ್ಸಾಹದ ಆಚರಣೆಗಳೆಲ್ಲ ಮತ್ತೆ ಆರಂಭವಾಗುವ ಮೊದಲ ಹಬ್ಬ. ನಾಡಿಗೆ ದೊಡ್ಡ ಹಬ್ಬವೆಂದೇ ಪ್ರತೀತಿ. ಆಟಿ ತಿಂಗಳ ಅಮಾವಾಸ್ಯೆ ಯಂದು ಕಹಿ ಮದ್ದು ಸೇವಿಸಿ ನಮ್ಮ ಮೂಲದ ನಾಗನ ಸ್ಥಾನಕ್ಕೆ ಹೊರಡಲು ಸಿದ್ಧತೆಗಳಾಗುತ್ತವೆ. ಮುಂದೆ ಐದನೇ ದಿನ ‘ನಾಗರಪಂಚಮಿ’ ಅಥವಾ ‘ನಾಗ ಪಂಚಮಿ’. ನಾಗನಿಗೆ ಹಲವು ನಾಮಗಳಿವೆ, ಉಭಯ ಜೀವಿಗಳಲ್ಲಿ ಹೆಚ್ಚು ಶಕ್ತಿ […]

ನರಹರಿ ಬೆಟ್ಟದ ಸದಾಶಿವ ದೇವಸ್ಥಾನದಲ್ಲಿ ಅಸಂಖ್ಯಾತ ಭಕ್ತರಿಂದ ಆಟಿ ಅಮಾವಾಸ್ಯೆ ತೀರ್ಥಸ್ನಾನ

Sunday, July 31st, 2011
Narahari-Parvata/ನರಹರಿ ಬೆಟ್ಟ ತೀರ್ಥಸ್ನಾನ

ವಿಟ್ಲ: ಭೂ ಲೋಕದ ಕೈಲಾಸ ಎಂದೇ ಪ್ರಸಿದ್ದವಾಗಿರುವ ತಾಣ ನರಹರಿ ಪರ್ವತ ಸದಾಶಿವ ದೇವಸ್ಥಾನದಲ್ಲಿ ಶನಿವಾರ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಶ್ರದ್ದಾ ಭಕ್ತಿಯಿಂದ ಆಟಿ ಅಮಾವಾಸ್ಯೆ ತೀರ್ಥಸ್ನಾನ ಮಾಡಿದರು. ನರಹರಿ ಬೆಟ್ಟ ಸಮುದ್ರ ಮಟ್ಟದಿಂದ ಸಾವಿರ ಅಡಿಗೂ ಹೆಚ್ಹು ಎತ್ತರದಲ್ಲಿದ್ದು ಪ್ರಕೃತಿಯ ಸೌಂದರ್ಯದ ನಡುವೆ ಸದಾಶಿವ ದೇವರ ಸಾನಿಧ್ಯವಿದೆ. ತುಳು ಪರಂಪರೆಯ ಆಟಿ ಅಮಾವಾಸ್ಯೆ ತೀರ್ಥಸ್ನಾನದ ಪವಿತ್ರ ದಿನದಂದು ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ […]