ಆದಾಯ ತೆರಿಗೆ ಪಾವತಿದಾರರು ಅರ್ಹತೆ ಇದ್ದರೆ ಬಿಪಿಯಲ್ ಕಾರ್ಡ್ ಹೊಂದಬಹುದು

Thursday, June 3rd, 2021
Ration card

ಮಂಗಳೂರು : ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ಆದಾಯ ತೆರಿಗೆ ಪಾವತಿದಾರರ ಮಾಹಿತಿಯನ್ನು ರಾಜ್ಯ ಸರ್ಕಾರದ ಆಹಾರ ಇಲಾಖೆಯು ಪಡೆದಿದ್ದು, ಆದಾಯ ತೆರಿಗೆ ಪಾವತಿದಾರರು ಎನ್ನುವ ಕಾರಣಕ್ಕೆ ರಾಜ್ಯಾದ್ಯಂತ ಹಲವಾರು ಕುಟುಂಬಗಳ ಅಂತ್ಯೋದಯ ಅನ್ನ (AAY) ಅಥವಾ ಆದ್ಯತಾ ಪಡಿತರ ಚೀಟಿಗಳು (BPL) ಎ.ಪಿ.ಎಲ್.ಗೆ ಪರಿವರ್ತನೆ ಹೊಂದಿದ್ದು, ಈ ಪೈಕಿ ಯಾವುದಾದದರೂ ತಾಂತ್ರಿಕ ಅಥವಾ ಇನ್ನಿತರ ಕಾರಣಗಳಿಗೆ ನೈಜ ಪ್ರಕರಣಗಳಲ್ಲಿ ಅರ್ಹ ಬಿಪಿಎಲ್ ಕುಟುಂಬಗಳ ಪಡಿತರ ಚೀಟಿ ಎ.ಪಿ.ಎಲ್‍ಗೆ ಪರಿವರ್ತನೆಯಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಮರು ಪರಿಶೀಲಿಸಲು ಅವಕಾಶ […]

ಶಾಸಕ ಯು.ಟಿ.ಖಾದರ್ ಸಹೋದರ ಯು.ಟಿ. ಇಫ್ತಿಕಾರ್ ಮನೆಗೆ ಐಟಿ ದಾಳಿ

Thursday, February 18th, 2021
UT Ifthikar

ಮಂಗಳೂರು : ಆಸ್ಪತ್ರೆ ಮತ್ತು ಅದರ ಮಾಲಕರ ಮನೆಗೆ ದಾಳಿ ನಡೆಸಿದ ಮರುದಿನವೇ  ಶಾಸಕ ಯು.ಟಿ.ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ನಗರದ ಲೈಟ್‌ಹೌಸ್‌ನ ಅಪಾರ್ಟ್‌ಮೆಂಟ್ನಲ್ಲಿ ಇರುವ ಇಫ್ತಿಕಾರ್ ಅಲಿ  ಫ್ಲ್ಯಾಟ್‌ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಬುಧವಾರದಿಂದ ಐಟಿ ಅಧಿಕಾರಿಗಳು ಮಂಗಳೂರಿನ‌ ಉದ್ಯಮಿಗಳಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ದಾಳಿ ಮುಂದುವರಿಸಿದ್ದು, ಅದರ […]

ನಿದ್ರಾವಸ್ಥೆಯಲ್ಲಿರುವ ಜನಪ್ರತಿನಿಧಿಗಳಿಂದಾಗಿ ಆದಾಯ ತೆರಿಗೆ ಕಚೇರಿ ಗೋವಾ ರಾಜ್ಯಕ್ಕೆ ಸ್ಥಳಾಂತರಗೊಂಡಿದೆ : ಖಾದರ್ :

Sunday, September 6th, 2020
UT Khader

ಮಂಗಳೂರು: ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ‌. ಜಿಲ್ಲೆಯಲ್ಲಿದ್ದ ಆದಾಯ ತೆರಿಗೆ ಇಲಾಖೆಯನ್ನು ಗೋವಾಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಮೂಲಕ ಅಭಿವೃದ್ಧಿ ಆಗುವ ಜಿಲ್ಲೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಬದಲು ಇನ್ನಷ್ಟು ಸಂಕಷ್ಟಕ್ಕೆ ದೂಡುವ ಸ್ಥಿತಿಯನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು,  ನಿದ್ರಾವಸ್ಥೆಯಲ್ಲಿರುವ ಜನಪ್ರತಿನಿಧಿಗಳಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆದಾಯ ತೆರಿಗೆ ಕಚೇರಿ  ಗೋವಾ ರಾಜ್ಯಕ್ಕೆ ಸ್ಥಳಾಂತರಗೊಂಡಿದೆ ಈ ಮೂಲಕ […]

ಉದ್ಯಮಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನ೦ಜು೦ಡಿಗೆ ಐಟಿ ಶಾಕ್

Thursday, January 4th, 2018
K-P-Nanjundi

ಬೆಂಗಳೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಹಾಗೂ ಚಿನ್ನದ ಉದ್ಯಮಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನ೦ಜು೦ಡಿ ಅವರ ಮನೆ, ಕಚೇರಿ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆಸಿದ್ದಾರೆ. ಗುರುವಾರ ಬೆಂಗಳೂರಿನಲ್ಲಿರುವ ಕೆ.ಪಿ.ನ೦ಜು೦ಡಿ ಅವರ ಚಿನ್ನದ ಅಂಗಡಿ, ಕಚೇರಿ, ಮನೆ ಮೇಲೆ ಬೆಂಗಳೂರು ಹಾಗೂ ಗೋವಾ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ನ೦ಜು೦ಡಿ ಅವರ ಅಂಗಡಿ ಅಧಿಕಾರಿ ಸೇರಿದಂತೆ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದ್ದು, ದಾಖಲೆಗಳ […]

ಡಿಜಿಟಲ್ ಪಾವತಿಗಾಗಿರುವ ಡಿಜಿಧನ್ ಮೇಳದ 32ನೇ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಚಾಲನೆ

Thursday, January 26th, 2017
Dijidhan-Mela

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಡಿಜಿಟಲ್ ಪಾವತಿಗಾಗಿರುವ ಡಿಜಿಧನ್ ಮೇಳದ 32ನೇ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಚಾಲನೆ ದೊರೆತಿದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮೇಳವನ್ನು ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು, ಭಾರತವನ್ನು ವಿಶ್ವದಲ್ಲೇ ಪರಿಣಾಮಕಾರಿ, ಪ್ರಾಮಾಣಿಕ ಹಾಗೂ ಉತ್ತರದಾಯಿ ದೇಶವನ್ನಾಗಿ ಮಾಡುವ ಸಲುವಾಗಿ ಡಿಜಿಟಲ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇಡೀ ದೇಶವನ್ನು ಬದಲಾವಣೆಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು. ದೊಡ್ಡ ನೋಟ ರದ್ಧತಿಯಿಂದ ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಮಾತ್ರ […]

ತೆಲಂಗಾಣ ಗದ್ದಲದ ನಡುವೆ ಚಿದು ಬಜೆಟ್ ಮಂಡನೆ

Monday, February 17th, 2014
P.-Chidambaram

ನವದೆಹಲಿ: ತೆಲಂಗಾಣ ಸಂಸದರ ಹಾಗೂ ಸಚಿವರ ಗದ್ದಲದ ನಡುವೆಯೇ ಕೇಂದ್ರ ವಿತ್ತ ಸಚಿವ ಪಿ.ಚಿದಂಬರಂ ಅವರು ಸೋಮವಾರ ಯುಪಿಎ ಸರ್ಕಾರದ ಕೊನೆಯ ಮಧ್ಯಂತರ ಬಜೆಟ್(ಲೇಖಾನುದಾನ) ಮಂಡಿಸಿದರು. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ತೆಲಂಗಾಣ ಪರ ಹಾಗೂ ವಿರೋಧದ ನಡುವೆಯೇ ಚಿದಂಬರಂ ಅವರು ನಾಲ್ಕು ತಿಂಗಳ ಅವಧಿಗಾಗಿ ಲೇಖಾನುದಾನ ಮಂಡಿದ್ದು, ವಿಶ್ವದ ಆರ್ಥಿಕ ಸ್ಥಿತಿ ಕುಸಿತ ಕಂಡಿದ್ದು, ಇದರ ಪರಿಣಾಮ ಭಾರತದ ಮೇಲೂ ಆಗಿದೆ ಎಂದಿದ್ದಾರೆ. ಆರ್ಥಿಕ ಪರಿಸ್ಥಿತಿ ಕುಸಿತದ ನಡುವೆಯೂ ಉಳಿತಾಯ ದರ ಶೇ.31.1ರಷ್ಟಿದೆ. […]