ಷರತ್ತಿಗೊಳಪಟ್ಟು ನಾಳೆಯಿಂದ ಕಾಸರಗೋಡು ಬಸ್ ಸಂಚಾರ ಆರಂಭ

Sunday, July 18th, 2021
KV Rajendra

ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್-19 ಆನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದ್ದು, ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಹೆಚ್ಚಿನ ಜಾಗರೂಕತೆಯನ್ನು ಅನುಸರಿಸುವ ಅನಿವಾರ್ಯವಿದ್ದು, ಮುಂಬರುವ ದಿನಗಳಲ್ಲಿ ಸಂಭಾವ್ಯ 3 ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ರಾಜ್ಯ ಸರ್ಕಾರವು ಕೇರಳ ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ವಿದ್ಯಾಭ್ಯಾಸ, ಕಚೇರಿ ಕಲಸ, ವ್ಯಾಪಾರ ವ್ಯವಹಾರ ಸೇರಿದಂತೆ ಇತರ ಕಾರಣಗಳಿಗೆ ಸಂಖ್ಯೆಯಲ್ಲಿ ದಿನನಿತ್ಯ ವಿದ್ಯಾರ್ಥಿಗಳು, […]

ಸೀಲ್ ಡೌನ್ ಇದ್ದರೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು

Wednesday, June 16th, 2021
Subrahmanya

ಸುಬ್ರಹ್ಮಣ್ಯ : ಸೋಮವಾರದಿಂದ  ಸುಬ್ರಹ್ಮಣ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದ್ದರೂ ಹೊರ ಜಿಲ್ಲೆಗಳಿಂದ ಕುಕ್ಕೆಗೆ ಯಾತ್ರಿಕರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ  ಆಗಮಿಸುತ್ತಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಆನ್ ಲಾಕ್ ಇರುವುದರಿಂದ ಮತ್ತು ಮಂಗಳವಾರ ಆಶ್ಲೇಷ ನಕ್ಷತ್ರ ಇದ್ದುದರಿಂದ ಹೆಚ್ಚಿನ ಭಕ್ತರು ಆಗಮಿಸಿದ್ದರು. ಸೋಮವಾರದಿಂದ ಸುಬ್ರಹ್ಮಣ್ಯ   ಪಂಚಾಯತಿ ವ್ಯಾಪ್ತಿಯ ಪ್ರವೇಶ ರಸ್ತೆಗಳನ್ನು ಬಂದ್ ಮಾಡಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಕುಲ್ಕುಂದ ಭಾಗದಿಂದ ಕುಕ್ಕೆ ಕಡೆಗೆ ಯಾತ್ರಿಕರ ವಾಹನಗಳು ಆಗಮಿಸುತ್ತಿದೆ. ಅಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ನಲ್ಲಿ ಪೊಲೀಸರು […]

ಉಡುಪಿ ಜಿಲ್ಲೆ ಸೋಮವಾರ ಅನ್‌ಲಾಕ್, ಮಾರ್ಗಸೂಚಿಗಳ ವಿವರ ಇಲ್ಲಿದೆ ನೋಡಿ

Saturday, June 12th, 2021
Udupi DC

ಉಡುಪಿ  :  ರಾಜ್ಯದ ಆನ್ ಲಾಕ್ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆಯೂ ಒಂದಾಗಿದೆ.  ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹತೋಟಿಗೆ ಬಂದಿದ್ದು ಜೂನ್ 14ರಿಂದ ಅನ್‌ಲಾಕ್ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಚಟುವಟಿಕೆಗಳು ಮಾತ್ರ ನಡೆಯಲು ಅನುಮತಿ ನೀಡಿ, ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ವಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದ್ದಾರೆ. ಶನಿವಾರ ಜಿಲ್ಲೆಯ ತಹಶೀಲ್ದಾರ್ ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ […]