ಕೊರೊನಾ ನಿಯಮ ನಿರ್ಲಕ್ಷ್ಯ ; ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿಯ ವಿರುದ್ದ ದೂರು ದಾಖಲು

Tuesday, April 20th, 2021
Ullal Police

ಉಳ್ಳಾಲ:   ಸರ್ಕಾರದ ಆದೇಶ ಉಲ್ಲಂಘಿಸಿ ದೇವಸ್ಥಾನದ ಜಾತ್ರೋತ್ಸವ ನಡೆಸಿದೆ ಎಂಬ ಆರೋಪದ ಮೇರೆಗೆ ಉಳ್ಳಾಲದ ಸೋಮೇಶ್ವರ ದೇವಸ್ಥಾನ ಆಡಳಿತ ಸಮಿತಿಯ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮೇಶ್ವರ ದೇವಸ್ಥಾನದಲ್ಲಿ ಈಗ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯುತ್ತಿದ್ದು, ಸರ್ಕಾರದ ಆದೇಶ ಪಾಲಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ನಿನ್ನೆ ದೇವಸ್ಥಾನಕ್ಕೆ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾವಿರಾರು ಜನರು ಭಾಗಿಯಾಗಿದ್ದರು ಎನ್ನಲಾಗಿದೆ. ಆದರೆ ಈ ಕುರಿತು […]

ಮಂಗಳೂರಲ್ಲಿ ಕೋಕೆನ್ ಮಾರಾಟ ಜಾಲದ ಪ್ರಮುಖ ಆರೋಪಿಯ ಸೆರೆ

Thursday, November 1st, 2018
arrested

ಮಂಗಳೂರು: ಸಾರ್ವಜನಿಕರಿಗೆ ಮಾದಕ ವಸ್ತುವಾದ ಕೋಕೆನ್ ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಗೋವಾದಿಂದ ಪೂರೈಕೆ ‌ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಜತ್ತೂರಿನ ಅಜ್ಮಲ್ ಪುಲಿಕ್ಕಲ್ ಮೊಹಮ್ಮದ್(44) ಬಂಧಿತ ಆರೋಪಿ. ಈ ಹಿಂದೆ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಮರೋಳಿ ಬಳಿಯಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಕೋಕೆನ್ನ್ನು ಹೊಂದಿದ್ದ 5 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ 70,000 ರೂ. ಮೌಲ್ಯದ ಕೋಕೆನ್, ಮೂರು ಕಾರು, ನಗದು ಮತ್ತು […]

ತೊಕ್ಕೊಟ್ಟಿನಲ್ಲಿ ರಸ್ತೆ ಅಪಘಾತ: ಕುಂಪಲದ ಯುವಕ ಮೃತ್ಯು

Friday, April 27th, 2018
accident

ಮಂಗಳೂರು: ಬೈಕಿಗೆ ಮರಳು ಸಾಗಾಟದ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಕುಂಪಲ ಆಶ್ರಯ ಕಾಲನಿ ನಿವಾಸಿ ವಿನೀತ್ ರಾಜ್(25) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟುವಿನಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹೆಚ್ಚಿನ ಘನ ವಾಹನಗಳು ಇಲ್ಲಿನ ಬಸ್ ನಿಲ್ದಾಣದ ರಸ್ತೆಯಲ್ಲೇ ಸಂಚರಿಸುತ್ತಿವೆ. ಇದು ಅಪಾಯಕಾರಿಯಾಗಿ ಮಾರ್ಪಟ್ಟಿದೆ. ಇಂದು ನಡೆದ ಈ ಅಪಘಾತಕ್ಕೂ ಟಿಪ್ಪರ್ ಬಸ್ ನಿಲ್ದಾಣದ ರಸ್ತೆಯಲ್ಲಿ ಸಂಚರಿಸಿದ್ದೇ ಕಾರಣ ಎಂದು […]

ಬಾರ್‌‌ನೊಳಗೆ ನುಗ್ಗಿ ದುಷ್ಕರ್ಮಿಗಳ ದಾಂಧಲೆ… ಸಿಸಿಟಿವಿಯಲ್ಲಿ ದೃಶ್ಯ ಸೆರೆ

Thursday, April 12th, 2018
cc-camera

ಮಂಗಳೂರು: ಕಿಡಿಗೇಡಿಗಳ ತಂಡವೊಂದು ಬಾರ್‌‌ನೊಳಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಗರ ಹೊರವಲಯದ ತಲಪಾಡಿ ಎಂಬಲ್ಲಿ ನಡೆದಿದೆ. ನಿನ್ನೆ ರಾತ್ರಿ ಇಲ್ಲಿನ ಅತಿಥಿ ಬಾರ್‌‌ಗೆ ನುಗ್ಗಿದ ಹತ್ತಾರು ಮಂದಿಯಿದ್ದ ದುಷ್ಕರ್ಮಿಗಳ ತಂಡ ಬಾರ್‌‌ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ. ಸದ್ಯ ಈ ದಾಂಧಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳೀಯ ಯುವಕರ ತಂಡವೇ ಕ್ಷುಲ್ಲಕ ಕಾರಣಕ್ಕೆ ಈ ದಾಂಧಲೆ ನಡೆಸಿದೆ ಎನ್ನಲಾಗಿದ್ದು, ಈ ಹಿಂದೆಯೂ ಸಣ್ಣಪುಟ್ಟ ಕಾರಣಕ್ಕೆ ಗಲಾಟೆ ನಡೆಸಿದ್ದರು ಎಂದು ದೂರಲಾಗಿದೆ. ಹೀಗಾಗಿ ಮತ್ತೆ ಬಾರ್‌‌ಗೆ […]

ಮಂಗಳೂರಲ್ಲಿ ಗಾಂಜಾ ಮಾರಾಟಗಾರನ ಬಂಧನ

Thursday, March 8th, 2018
mangaluru

ಮಂಗಳೂರು: ಗಾಂಜಾ ಮಾರಾಟದ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ಮಾಡಿದ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಕೊಣಾಜೆ ಪೊಲೀಸ್ ಠಾಣಾ ಸರಹದ್ದಿನ ತೌಡುಗೋಳಿ ಕ್ರಾಸ್ ಬಳಿ ಯುವಕನೋರ್ವ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಸಿಬ್ಬಂದಿ ಮತ್ತು ಕೊಣಾಜೆ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಟ್ವಾಳ ತೌಡುಗೋಳಿಯ ಹಫೀಜ್ ಯಾನೆ‌ ಅಭಿ ಯಾನೆ ಮೊಯ್ದಿನಬ್ಬ (32) ವಶಕ್ಕೆ ಪಡೆದುಕೊಂಡ ಆರೋಪಿ. ಆತನಿಂದ […]

ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾಕ್ಕೆ ಬೆಂಕಿ

Tuesday, January 2nd, 2018
autoricshaw

ಮಂಗಳೂರು: ಕುಂಪಲದ ಕೃಷ್ಣನಗರದ ಬಳಿ ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾವೊಂದಕ್ಕೆ ದುಷ್ಕರ್ಮಿಗಳು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದ್ದು, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷ್ಣನಗರ ನಿವಾಸಿ ಸ್ಟಾನಿ ಡಿ’ಸೋಜಾ ಅವರು ಶನಿವಾರ ಸಂಜೆ ಮನೆ ಅಂಗಳದಲ್ಲಿ ರಿಕ್ಷಾವನ್ನು ತಂದು ನಿಲ್ಲಿಸಿದ್ದರು. ಮಧ್ಯರಾತ್ರಿ ರಿಕ್ಷಾ ಉರಿಯುತ್ತಿದ್ದುದನ್ನು ಕಂಡ ಮನೆಮಂದಿ ಬೊಬ್ಬಿಟ್ಟಾಗ ಸ್ಥಳೀಯರು ಸೇರಿ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ರಿಕ್ಷಾ ಸಂಪೂರ್ಣ ಸುಟ್ಟುಹೋಗಿದೆ. ಬೆಡ್‌ ಶೀಟನ್ನು ಪೆಟ್ರೋಲ್‌ನಲ್ಲಿ ಮುಳುಗಿಸಿ ಅದಕ್ಕೆ […]

ಕೋಟೆಪುರದಲ್ಲಿ ತಂಡದಿಂದ ದಾಂಧಲೆ: ಮನೆ, ಕ್ಲಬ್, ಲಾರಿ, ಬೈಕ್ ಗೆ ಹಾನಿ

Thursday, December 14th, 2017
ullal

ಮಂಗಳೂರು: ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಪುರ ಬಳಿ 20-25 ದುಷ್ಕರ್ಮಿಗಳಿದ್ದ ತಂಡವೊಂದು ಮೀನಿನ ಲಾರಿ, ಬೈಕ್‌ನ್ನು ಪುಡಿಗೈದಿದ್ದಲ್ಲದೆ, ಕ್ಲಬ್ ಕಟ್ಟಡದ ಕಿಟಕಿ ಗಾಜುಗಳನ್ನು ಪುಡಿಗೈದು ಮನೆಯ ಹಂಚಿಗೆ ಕಲ್ಲೆಸೆದು ದಾಂಧಲೆ ನಡೆಸಿರುವ ಘಟನೆ ರವಿವಾರ ತಡರಾತ್ರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಳ್ಳಾಲದ ಕೋಟೆಪುರ ಎಂಬಲ್ಲಿಯ ಸುಲ್ತಾನ್ ಸ್ಪೋಡ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಕಟ್ಟಡದ ಗಾಜುಗಳನ್ನು ತಂಡ ಪುಡಿಗೈದಿರುವುದಲ್ಲದೆ, ಸ್ಥಳದಲ್ಲೇ ನಿಲ್ಲಿಸಿದ್ದ ಮೀನಿನ ಲಾರಿಯ ಗಾಜು ಪುಡಿಗೈದು, ಬೈಕನ್ನು ಸಂಪೂರ್ಣ ಹಾನಿಗೈದು, ಫಾರುಕ್ ಎಂಬವರಿಗೆ ಸೇರಿದ […]

ತನ್ವೀರ್ ಸೇಠ್ ಪ್ರಕರಣದ ಬಗ್ಗೆ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ: ಖಾದರ್

Saturday, November 12th, 2016
Khadar

ಮಂಗಳೂರು: ತನ್ವೀರ್ ಸೇಠ್ ಪ್ರಕರಣದ ಬಗ್ಗೆ ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ತನ್ವೀರ್ ಸೇಠ್‌ರಿಂದ ಪಕ್ಷ ಹಾಗೂ ಮುಖ್ಯಮಂತ್ರಿಗಳು ವಿವರ ಕೇಳಿದ್ದಾರೆ ಎಂದರು. ದೇರಳಕಟ್ಟೆ ಸಮೀಪದ ಕುತ್ತಾರ್ನಲ್ಲಿ ನಿನ್ನೆ ರಾತ್ರಿ ನಡೆದ ರಾಜಮೋಹನ್ ಎಂಬವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೈಜ ಆರೋಪಿಗಳ ಬಂಧನವಾಗಬೇಕು. ಪೊಲೀಸ್ ಆಯುಕ್ತರೇ ಹೆಚ್ಚು ಮುತುವರ್ಜಿಯಿಂದ ಪ್ರಕರಣ ಬೇಧಿಸುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ […]