ಪದವಿ ತರಗತಿಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ತುಳು ಅಕಾಡೆಮಿ ಅಧ್ಯಕ್ಷರ ಮನವಿ

Tuesday, June 4th, 2019
AC-bhandary

ಮಂಗಳೂರು : ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಒಂದು ಐಚ್ಛಿಕ ಭಾಷೆಯಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. 2019-20 ನೇ ಸಾಲಿನಲ್ಲಿ ತುಳುವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಮಂಗಳೂರು ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ. ಪದವಿ ವಿದ್ಯಾರ್ಥಿಗಳು ತುಳು ಭಾಷೆ, ಸಂಸ್ಕೃತಿಯನ್ನು ಅಭ್ಯಾಸ ಮಾಡುವ ಘನ ಉದ್ದೇಶದಿಂದ ತುಳುಭಾಷೆಯನ್ನು ಒಂದು ಭಾಷಾ ವಿಷಯವಾಗಿ ಕಲಿಯಲು ಮಂಗಳೂರು ವಿಶ್ವವಿದ್ಯಾನಿಲಯ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನೀಯ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ತುಳು ಭಾಷೆಯನ್ನು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ವಿಶ್ವವಿದ್ಯಾನಿಲಯವು […]

ತುಳು ಭವನ ಕಾಮಗಾರಿ ಪೂರ್ಣಗೊಳಿಸಲು ಶೀಘ್ರವೇ ಕ್ರಮ: ಸಚಿವ ಯು.ಟಿ.ಖಾದರ್ ಭರವಸೆ

Wednesday, September 26th, 2018
U-T-Khader

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ ಹಾಗೂ ಯೋಜನೆಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ತಾನು ಮಾಡಿಸುವುದಾಗಿ ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಯು.ಟಿ.ಖಾದರ್ ಅವರು ಹೇಳಿದ್ದಾರೆ. ಅವರು ಇಂದು ಉರ್ವಾಸ್ಟೋರ್ ಬಳಿ ಇರುವ ತುಳು ಭವನಕ್ಕೆ ಭೇಟಿ ನೀಡಿ ತುಳು ಭವನದಲ್ಲಿ ಇದುವರೆಗೆ ನಡೆದಿರುವ ಕಾಮಗಾರಿಯನ್ನು ಪರಿಶೀಲನೆ ನಡೆಸಿ , ಬಾಕಿ ಉಳಿದಿರುವ ಕಾಮಗಾರಿಯ ಬಗ್ಗೆ […]

ತೌಳವ ಉಚ್ಚಯ ಕಾರ್ಯಕ್ರಮದ ವಿಜ್ಞಾಪನ ಪತ್ರ ಬಿಡುಗಡೆ

Tuesday, September 25th, 2018
tulu-vedike

ಮಂಗಳೂರು: ತುಳುನಾಡು ರಕ್ಷಣಾ ವೇದಿಕೆಯ ದಶ ಸಂಭ್ರಮದ ಅಂಗವಾಗಿ ಆಯೋಜಿಸಲಾಗುವ ತೌಳವ ಉಚ್ಚಯ ಕಾರ್ಯಕ್ರಮದ ವಿಜ್ಞಾಪನ ಪತ್ರವನ್ನು ಸೋಮವಾರ ತುಳುಭವನದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು. ಅವರು ತುಳು ಭಾಷೆ, ಸಂಸ್ಕೃತಿಯ ರಕ್ಷಣೆಗೆ ಪ್ರತಿಯೊಬ್ಬರೂ ಸನ್ನದ್ಧರಾಗಬೇಕು ಎಂದು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. ಇಂದಿನ ಬಹುತೇಕ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಾವಶ್ಯಕವಾಗಿ ಸಮಯ ವ್ಯರ್ಥ ಮಾಡುತ್ತಿರುವುದು ಆತಂಕಕಾರಿ ವಿಷಯ. ಆಧುನಿಕ ತಂತ್ರಜ್ಞಾನವನ್ನು ಅವಶ್ಯಕತೆ ಇದ್ದಷ್ಟೇ ಬಳಸಿ ನಾಡಿನ ಸಂಸ್ಕೃತಿಯ ಉಳಿವಿಗಾಗಿ ಸಮಯ ವಿನಿಯೋಗಿಸಬೇಕು ಎಂದರು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ […]

ತುಳು ಅಕಾಡೆಮಿಯಲ್ಲಿ ತುಳು ಭಾಷಾ ಕಲಿಕಾ ತರಗತಿ ಉದ್ಘಾಟನೆ

Saturday, September 15th, 2018
Tulu-study

ಮಂಗಳೂರು: ಭಾಷೆಯನ್ನು ಕಲಿಯುವುದರಿಂದ ನಾಡಿನ ಸಂಸ್ಕೃತಿಯ ಪರಿಚಯ ಆಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿರುವ ಖ್ಯಾತ ಸಾಹಿತಿ, ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಯ ಅಧಿಕಾರಿ ಕೇಶವ ಕುಡ್ಲ ಅವರು ಹೇಳಿದರು. ತುಳು ಸಾಹಿತ್ಯ ಆಶ್ರಯದಲ್ಲಿ ತುಳು ಭಾಷಾ ಕಲಿಕಾ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ತಾನು ಮೂಲತಃ ಹಾಸನ ಜಿಲ್ಲೆಯವರಾಗಿದ್ದು 25 ವರ್ಷಗಳ ಹಿಂದೆ ಉದ್ಯೋಗ ನಿಮಿತ್ತವಾಗಿ ಬಂದು ತುಳುಭಾಷೆ ಕಲಿತು ಇಂದು ತುಳುನಾಡಿನವನೇ ಆಗಿದ್ದೇನೆ ಎಂದು ಹೇಳಿದರು. ತುಳುವರು ಹೊರಜಿಲ್ಲೆ – […]

ದುಬೈಯಲ್ಲಿ ವಿಶ್ವ ತುಳು ಸಮ್ಮೇಳನ

Monday, July 23rd, 2018
veerendra-heggde

ಮಂಗಳೂರು : ಅರಬ್ ಸಂಸ್ಥಾನದಲ್ಲಿ ನವಂಬರ್ 23 ಮತ್ತು 24 ರಂದು ದುಬಾಯಿಯ ಅಲ್‌ನಾಸರ್ ಲೀಸರ್ ಲ್ಯಾಂಡ್‌ಐಸ್‌ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ತುಳು ಸಮ್ಮೇಳನ ಜರಗಲಿದ್ದು, ಸಮ್ಮೇಳನದ ಕುರಿತು ಸಂಘಟನೆಯ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ದುಬಾಯಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಕಾರ್ಯಕ್ರಮದ ರೂಪುರಶಗಳನ್ನು ವಿವರಿಸಿ ಸಮ್ಮೇಳನಕ್ಕೆ ಆಹ್ವಾನಿಸಿದರು. ಸಮ್ಮೇಳನ ತಯಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ವೀರೆಂದ್ರ ಹೆಗ್ಗಡೆ ಅವರು ಎರಡು ದಿನಗಳ ಕಾಲ ನಡೆಯುವ ವಿಶ್ವ ತುಳು ಸಮ್ಮೇಳನಕ್ಕೆ ಉಪಯುಕ್ತ […]

ಅಳಿಕೆ ರಾಮಯ್ಯ ರೈ ಯಕ್ಷಗಾನ ಕ್ಷೇತ್ರದ ಸವ್ಯಸಾಚಿ

Wednesday, January 17th, 2018
Tulu-sahitya

ಮಂಗಳೂರು: ಯಕ್ಷಗಾನ ಕ್ಷೇತ್ರದ ಸವ್ಯಸಾಚಿಯಾಗಿ ಮೆರೆದವರು ದಿ.ಅಳಿಕೆ ರಾಮಯ್ಯ ರೈ ಎಂದು ಪ್ರಾಧ್ಯಾಪಕ, ತುಳು ಸಾಹಿತ್ಯ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಭಾಸ್ಕರ್ ರೈ ಕುಕ್ಕುವಳ್ಳಿ ಹೇಳಿದರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಸಾಹಿತಿ ಕಲಾವಿದರ ಜನ್ಮ ಶತಮಾನೋತ್ಸವ ಕಾರ‍್ಯಕ್ರಮ ಸರಣಿಯ ಪ್ರಥಮ ಕಾರ‍್ಯಕ್ರಮವಾಗಿ ಅಕಾಡೆಮಿಯ ಸಿರಿಚಾವಡಿಯಲ್ಲಿ ಶುಕ್ರವಾರ ನಡೆದ ಯಕ್ಷಗಾನ ದಿಗ್ಗಜ ಅಳಿಕೆ ರಾಮಯ್ಯ ರೈ ಸಂಸ್ಮರಣೆ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ತನ್ನ ೧೧ನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ […]

ಕದ್ರಿಯಲ್ಲಿ ಕಲಾವಿದ ಮೋಹನ್ ಶೆಟ್ಟಿಗಾರ್ ಮಿಜಾರ್ ದಂಪತಿಗಳಿಗೆ ಸನ್ಮಾನ

Monday, December 11th, 2017
mohan-shettiger

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರ ಮೇಳದಲ್ಲಿರುವ ಹಿರಿಯ ಯಕ್ಷಗಾನ ಚೆಂಡೆಮದ್ದಳೆ ಕಲಾವಿದಳನ್ನು ಇತ್ತೀಚೆಗೆ ಕದ್ರಿ ದೇವಸ್ಥಾನ ಬಳಿ ನಡೆದ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಂಜಾರುಬೀಡು ಪ್ರದೀಪ್ ಆಳ್ವ ಕದ್ರಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್‌ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಡಾ. ಕೆ. ಕೃಷ್ಣಭಟ್ ತಿರುಪತಿ, ವೆಂಕಪ್ಪ ಕಾಜವ ಪಟ್ಟೋರಿ, ಮಧುಕರ ಮಲ್ಲಿ ಕಾವೂರು, ಪಟ್ಲ ಸತೀಶ್ ಶೆಟ್ಟಿ, ಪ್ರದೀಪ್ ಕಲ್ಕೂರ, […]

ತಾಲೂಕು ಹಾಗೂ ಜಿಲ್ಲಾ ಮಟ್ಟದ ತುಳು ಸಾಹಿತ್ಯ ಸಮ್ಮೇಳನ :ತುಳು ಸಾಹಿತ್ಯ ಅಕಾಡೆಮಿ

Saturday, October 7th, 2017
AC bandari

ಮಂಗಳೂರು :  ತಾಲೂಕು ಮಟ್ಟದ ಪ್ರಥಮ ತುಳು ಸಾಹಿತ್ಯ ಸಮ್ಮೇಳನವನ್ನು ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಬಂಟ್ವಾಳದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಲು ನಿರ್ಧರಿಸಾಗಿದೆ. ಅಕಾಡೆಮಿ ಅಧ್ಯಕ್ಷರಾದ ಎ. ಸಿ. ಭಂಡಾರಿಯವರ ಅಧ್ಯಕ್ಷತೆಯಲ್ಲಿ ಅಕಾಡೆಮಿ ವತಿಯಿಂದ ರಚಿಸಲಾದ ಉಪಸಮಿತಿಯ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು. ಸಮ್ಮೇಳನದ ಸ್ವರೂಪ ಮತ್ತು ರೂಪುರೇಷೆಗಳ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲು ನಿರ್ದರಿಸಲಾಗಿದೆ. ತಾಲೂಕಿನಲ್ಲಿರುವ ತುಳುಪರ ಸಂಘಟನೆಗಳು, ತುಳು […]

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ನೂತನ ಅಧ್ಯಕ್ಷರಾಗಿ ಎ.ಸಿ. ಭಂಡಾರಿ ಅಧಿಕಾರ ಸ್ವೀಕಾರ

Sunday, August 20th, 2017
AC Bhandary

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 9ನೆ ಅವಧಿಯ ಅಧ್ಯಕ್ಷ ಎ.ಸಿ. ಭಂಡಾರಿ ಮತ್ತು ಸದಸ್ಯರು  ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಪ್ರೊ. ಬಿ.ಎ.ವಿವೇಕ ರೈ, ತುಳು ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಸಲುವಾಗಿ ಮತ್ತು ಭಾಷೆಯ ಬೆಳವಣಿಗೆಗೆ ಸಾಫ್ಟ್‌ವೇರ್ ಬಳಕೆ ಮಾಡಬೇಕಾಗಿದೆ ಎಂದು ಹೇಳಿದರು. ಅಂತರ್ಜಾಲದಲ್ಲೂ ಕೂಡ ತುಳು ಭಾಷೆಗಾಗಿ ಕೆಲಸ ಕಾರ್ಯ ನಡೆಯುತ್ತಿದೆ. ತುಳು ವಿಕಿಪೀಡಿಯಾ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಅಕಾಡಮಿಯು ನಾಟಕ, ಸಿನೆಮಾ, ಸಾಂಸ್ಕೃತಿಕ, ಅನುವಾದ, […]