ಮುರುಡೇಶ್ವರ ಶಿವನ ವಿಗ್ರಹ ದ ಶಿರವನ್ನು ಕತ್ತರಿಸಿದ ಫೋಟೊ ವೈರಲ್, ದೇವಸ್ಥಾನದ ಭದ್ರತೆ ಇನ್ನಷ್ಟು ಬಿಗಿ

Tuesday, November 23rd, 2021
Murudeshwara-Shiva-Statue

ಭಟ್ಕಳ  : ಅತ್ಯಂತ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ಪ್ರಸಿದ್ಧ ಯಾತ್ರಾತಾಣಗಳಲ್ಲಿ ಒಂದಾದ ಉತ್ತರ ಕನ್ನಡದ ಮುರುಡೇಶ್ವರ ದ ಬೃಹತ್ ಈಶ್ವರ ಪ್ರತಿಮೆ ಚಿತ್ರ  ಕುಖ್ಯಾತ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದು ಉಗ್ರ ಸಂಘಟನೆಯ ದಾಳಿ ಸಂಚು ಎಂದು ಹೇಳಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಶಿವನ ವಿಗ್ರಹ ದ ಶಿರವನ್ನು ಕತ್ತರಿಸಿದಂತೆ ಎಡಿಟ್ ಮಾಡಲಾದ ಫೋಟೊವನ್ನು ಉಗ್ರ ಸಂಘಟನೆ ‘ಐಸಿಸ್’(ISIS)ನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ […]

ನಾನು ಜಾಗೃತಿಗಾಗಿ ಆಡಿಯೋ ಸಂದೇಶ ಕಳುಹಿಸಿದ್ದೆ, ಆದರೆ ಐಸಿಸ್ ಬಗ್ಗೆ ಹೇಳಿಲ್ಲ : ಇಸ್ಮಾಯಿಲ್ ಶಾಫಿ

Thursday, October 5th, 2017
ismail shafi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟ ಐಸಿಸ್, ಕರಾವಳಿ ಜಿಲ್ಲೆಗಳಲ್ಲಿ ಐಸಿಸ್ ತರಬೇತಿ.. ಹೀಗೆ ತರಹೇವಾರಿ ತಲೆ ಬರಹಗಳು ಬುಧವಾರ ಸದ್ದು ಮಾಡಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆಡಿಯೋ ತುಣುಕೊಂದು ಇಂಥಹದ್ದೊಂದು ಸುದ್ದಿ ಹುಟ್ಟಲು ಕಾರಣವಾಗಿತ್ತು. ಆದರೆ, ಇದು ಸತ್ಯವಲ್ಲ ಎಂದು ಸ್ವತಃ ಆಡಿಯೋದಲ್ಲಿ ಮಾತನಾಡಿದ್ದ ಸಲಾಫಿ ಮುಖಂಡರಾದ ಇಸ್ಮಾಯಿಲ್ ಶಾಫಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ತೀವ್ರವಾದಿ ಇಸ್ಲಾಮಿಕ್ ಸಿದ್ಧಾಂತ ರಾಜ್ಯದ ಕರಾವಳಿಗೂ ಕಾಲಿಟ್ಟಿದೆ. ಈ ಬಗ್ಗೆ ಎಚ್ಚರಿಕೆಯ ಸಂದೇಶವೊಂದನ್ನು ಸಲಾಫಿ ಮುಖಂಡರಾದ ಇಸ್ಮಾಯಿಲ್ […]

ಐಸಿಸ್ ಸೇರಲು ತೆರಳಿದ್ದ ವ್ಯಕ್ತಿಯೊಬ್ಬನ ಬಂಧನ

Monday, December 26th, 2016
ISIS-terrorist

ಮಂಗಳೂರು: ಐಸಿಸ್ ಸೇರಲು ತೆರಳಿದ್ದ ವ್ಯಕ್ತಿಯೊಬ್ಬನನ್ನು ಇಮಿಗ್ರೇಶನ್ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ಬಂಧಿತನನ್ನು ಕೇರಳ ಮೂಲದ ತಲಶೇರಿಯ ಮುನಾಫ್ ರೆಹಮಾನ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಜೊತೆ ಮಂಗಳೂರಿನ ಪಾಂಡೇಶ್ವರದಲ್ಲಿ ನೆಲೆಸಿದ್ದ‌. ಈತನ ವಿರುದ್ಧ ಎನ್‌‌ಐಎ ಅಧಿಕಾರಿಗಳು ಲುಕೌಟ್ ನೋಟೀಸ್ ಜಾರಿ ಮಾಡಿದ್ದರು. ಇದೀಗ ಅಜ್ಞಾತ ಸ್ಥಳದಲ್ಲಿ ಈತನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸುತ್ತಿದ್ದಾರೆ ಎನ್ನಲಾಗಿದೆ.

ಗೋ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ಕಾನೂನು ತಂದರೆ ಒಳಿತು: ಪರಮೇಶ್ವರ್

Saturday, August 27th, 2016
Parameshwar

ಮಂಗಳೂರು: ಗೋ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ಕಾನೂನು ತಂದರೆ ಒಳಿತು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಮಂಗಳೂರು ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋ ರಕ್ಷಣೆಯ ಹೆಸರಿನಲ್ಲಿ ದೇಶದೆಲ್ಲೆಡೆ ಹಲ್ಲೆ, ಕೊಲೆ ನಡೆಯುತ್ತಿವೆ. ಪ್ರಧಾನಿ ಮೋದಿಯವರು ಗೋ ರಕ್ಷಕರ ಹೆಸರಿನಲ್ಲಿ ದಾಂಧಲೆ ನಡೆಸುವವರ ದಾಖಲೆ ಸಂಗ್ರಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ ಬಳಿಕವೂ ಕರಾವಳಿಯಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಕೊಲೆ […]

ಯಾಸ್ಮಿನ್ ನ್ಯಾಯಾಂಗ ಬಂಧನ ಅವಧಿ ಸೆ.6 ರ ತನಕ ವಿಸ್ತರಣೆ

Wednesday, August 10th, 2016
Yashmin

ಕಾಸರಗೋಡು: ಐಸಿಸ್ ಉಗ್ರಗಾಮಿ ಸಂಘಟನೆಯೊಂದಿಗೆ ನಂಟು ಹೊಂದಿದ ಶಂಕೆಯಿಂದ ಬಂಧಿತಳಾದ ಬಿಹಾರ ನಿವಾಸಿ ಯಾಸ್ಮಿನ್ ಮೊಹಮ್ಮದ್ ಸಾನೀದ್(28)ಳಿಗೆ ನ್ಯಾಯಾಂಗ ಬಂಧನ ಅವಧಿಯನ್ನು ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಸೆ.6 ರ ವರೆಗೆ ಮತ್ತೆ ವಿಸ್ತರಿಸಿದೆ. ದಿಲ್ಲಿಯಿಂದ ಬಂಧಿತಳಾಗಿ ನ್ಯಾಯಾಂಗ ಬಂಧನಕ್ಕೊಳಗಾದ ಯಾಸ್ಮಿನ್‌ಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸರು ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಮಾಡಿದ ಮನವಿಯಂತೆ ನ್ಯಾಯಾಲಯ ಮೂರು ದಿನಗಳ ತನಕ ಪೊಲೀಸ್ ಕಸ್ಟಡಿಗೆ ಬಿಟ್ಟು ಕೊಟ್ಟಿತ್ತು. ಕಸ್ಟಡಿ ಅವಧಿ ಪೂರ್ಣಗೊಂಡ ಬಳಿಕ ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಮತ್ತೆ ಹಾಜರುಪಡಿಸಿದಾಗ […]

ಸಿರಿಯಾದಲ್ಲಿರುವ ಐಸಿಸ್ ಉಗ್ರ ಸಂಘಟನೆಯ ಶಿಬಿರಕ್ಕೆ ಕೇರಳದಿಂದ ತೆರಳಿದ ಮಂಗಳೂರು ಮೂಲದವಳು

Thursday, July 28th, 2016
ISIS

ಮಂಗಳೂರು: ಸಿರಿಯಾದಲ್ಲಿರುವ ಐಸಿಸ್ ಉಗ್ರ ಸಂಘಟನೆಯ ಶಿಬಿರಕ್ಕೆ ಕೇರಳದಿಂದ ತೆರಳಿದವರ ಪೈಕಿ ಒಬ್ಬಾಕೆ ಮಂಗಳೂರು ಮೂಲದವಳು ಎಂಬುದು ದೃಢಪಟ್ಟಿದೆ. ಈಕೆ ಉಳ್ಳಾಲದ ಮಾಜಿ ಶಾಸಕ, ಕನ್ನಡದ ಕಟ್ಟಾಳು ಎಂದೇ ಹೆಸರಾದ ಬಿ.ಎಂ. ಇದಿನಬ್ಬರ ಮರಿಮಗಳು ಎನ್ನಲಾಗಿದೆ. ದಿ. ಇದಿನಬ್ಬರ ಪುತ್ರ ಬಿ.ಎಂ. ಬಾಷಾರ ಪುತ್ರಿಯ ಮಗಳೇ ನಾಪತ್ತೆಯಾದಾಕೆ. ಈಕೆಯ ಹೆಸರು ಅಜ್ಮಲ್(24). ತಾಯಿಯ ಅನಾರೋಗ್ಯದ ಕಾರಣದಿಂದ ಈಕೆಯೂ ತಾಯಿಯೊಂದಿಗೆ ಅಜ್ಜ ಇದಿನಬ್ಬರ ಮನೆಯಲ್ಲಿ ಇರುತ್ತಿದ್ದಳು. ಉಳ್ಳಾಲದಿಂದಲೇ ಮಂಗಳೂರಿನ ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಡಿಪ್ಲೋಮಾ ಕೋರ್ಸ್ ಮಾಡಿದ್ದಳು. 2015ರಲ್ಲಿ […]

ಅನಧಿಕೃತವಾಗಿ ಸಾಗಿಸಲಾಗುತಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 94 ಸಾವಿರ ರೂ. ನಗದು ಪತ್ತೆ

Saturday, February 6th, 2016
Cash and Silver

ಮಂಜೇಶ್ವರ: ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಸಾಗಿಸಲಾಗುತಿದ್ದ ಸುಮಾರು 15ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 94 ಸಾವಿರ ರೂ. ನಗದನ್ನು ಮಂಜೆಶ್ವರ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ತಮಿಳ್ನಾಡು ಚೆನ್ನೈ ನಿವಾಸಿ ಮಹಾಲಿಂಗ (50) ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಶನಿವಾರದಂದು ಬೆಳಿಗ್ಗೆ ಸುಮಾರು ಹನ್ನೊಂದು ಘಂಟೆಗೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವಾಮಂಜೂರು ಚೆಕ್ ಪೋಸ್ಟ್ ಅಬಕಾರಿ ಪೊಲೀಸರು ಆ ದಾರಿಯಾಗಿ ಬಂದ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸನ್ನು […]