ಕಡಲ್ಕೊರೆತಕ್ಕೆ ಉಳ್ಳಾಲ ಉಚ್ಚಿಲದಲ್ಲಿ ಕೊಚ್ಚಿ ಹೋದ ಸಂಪರ್ಕ ರಸ್ತೆ : ಯು.ಟಿ. ಖಾದರ್ ಭೇಟಿ

Monday, August 10th, 2020
utk

ಉಳ್ಳಾಲ: ತೀವ್ರ ಕಡಲ್ಕೊರೆತದ ಪರಿಣಾಮ  ಉಚ್ಚಿಲ ಭಾಗದಲ್ಲಿ ಸಂಪರ್ಕ ರಸ್ತೆ ಕೊಚ್ಚಿ ಹೋಗಿದೆ. ಇದಕ್ಕೆ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣವೆಂದು ಮಾಜಿ ಸಚಿವ ಹಾಗೂ ಶಾಸಕ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಳ್ಳಾಲದ ಸೋಮೇಶ್ವರ, ಉಚ್ಚಿಲ, ಬಟ್ಟಂಪಾಡಿ ಹಾಗೂ ಇನ್ನಿತರ ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಯು.ಟಿ.ಖಾದರ್ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಪ್ರತಿ ವರ್ಷ ಕಡಲು ಕೊರೆತದಿಂದ ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ಪ್ರಾಣಿ, ಪಕ್ಷಿಗಳ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದೆವು. ಎರಡು ತಿಂಗಳಿಂದ ಸಮಸ್ಯೆಗಳ […]

ಬೈಕಂಪಾಡಿಯ ಮೀನಕಳಿಯ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ

Saturday, August 8th, 2020
R Ashok

ಮಂಗಳೂರು: ಚಿತ್ರಾಪುರ ಮತ್ತು ಬೈಕಂಪಾಡಿಯ ಮೀನಕಳಿಯ ಪ್ರದೇಶದ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಲ್ಕೊರೆತದಿಂದ  ಅಪಾಯದಂಚಿನಲ್ಲಿರುವ  ಮೀನಕಳಿಯದ ಮೀನು ಹರಾಜು ಕಟ್ಟಡ, ಚಿತ್ರಾಪುರದಲ್ಲಿನ ರಂಗ ಮಂದಿರ ಹಾಗೂ ಶಾಲಾ ಮೈದಾನವನ್ನು ಸಚಿವ ಆರ್.ಅಶೋಕ್ ಭೇಟಿ ಸ್ವತಃ ನೀಡಿ ಸಮಸ್ಯೆಯನ್ನು ತಿಳಿದುಕೊಂಡರು. ಈ ಸಂದರ್ಭ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಚಿತ್ರಾಪುರ ಮತ್ತು ಬೈಕಂಪಾಡಿ ಪ್ರದೇಶದಲ್ಲಿ ಸಮುದ್ರದ ಕೊರೆತದಿಂದ ಆಗುತ್ತಿರುವ ನಷ್ಠದ ಕುರಿತು ಮಾಹಿತಿ ನೀಡಿ, ಶಾಶ್ವತ ಕಾಮಗಾರಿಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವಿವರಿಸಿದರು.ಈಗಾಗಲೇ ಚಿತ್ರಾಪುರ ಬಳಿ […]

ಉಳ್ಳಾಲ : ಕಡಲಬ್ಬರಕ್ಕೆ ಹಲವು ಮನೆಗಳು ಅಪಾಯದಂಚಿನಲ್ಲಿ

Friday, November 1st, 2019
Ullal

ಉಳ್ಳಾಲ : ಅರಬಿ ಸಮುದ್ರದಲ್ಲಿ ಉದ್ಭವಿಸಿರುವ ‘ಮಹಾ’ ಚಂಡಮಾರುತದ ಪರಿಣಾಮ ಉಳ್ಳಾಲದಲ್ಲೂ ಕಾಣಿಸಿಕೊಳ್ಳಲಾರಂಭಿಸಿದ್ದು, ಕಡಲಬ್ಬರಕ್ಕೆ ಹಲವು ಮನೆಗಳು ಅಪಾಯದಂಚಿಗೆ ಸಿಲುಕಿವೆ. ಸೋಮೇಶ್ವರ, ಪೆರಿಬೈಲ್, ಬೆಟ್ಟಂಬಾಡಿ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಕಡಲ್ಕೊರೆತ ಮತ್ತಷ್ಟು ತೀವ್ರಗೊಂಡಿದೆ. ಬೆಟ್ಟಂಪಾಡಿಯಲ್ಲಿ ರೊಹರ ಅಬ್ದುಲ ಎಂಬವರ ಮನೆ ಅಪಾಯದಂಚಿನಲ್ಲಿದೆ. ಅವರ ಮನೆಯ ಸ್ನಾನದ ಕೊಠಡಿ ಈಗಾಗಲೇ ಸಮುದ್ರಪಾಲಾಗಿದೆ. ಸೋಮೇಶ್ವರ ದೇವಸ್ಥಾನ ಸಮೀಪದ ಮೋಹನ್ ಎಂಬವರ ಮನೆಯ ಸ್ನಾನದ ಕೊಠಡಿ ಸೇರಿದಂತೆ ಒಂದು ಪಾರ್ಶ್ವದ ಗೋಡೆ ಗುರುವಾರ ತಡರಾತ್ರಿ ಸಮುದ್ರಪಾಲಾಗಿದೆ. ಮೋಹನ್ ಅವರು ಬಾಡಿಗೆಗೆ ನೀಡಿದ್ದ […]

ಕಡಲ್ಕೊರೆತ ತಡೆಗೆ ತುರ್ತು ಕ್ರಮ ಕೈಗೊಳ್ಳಿ- ಯು ಟಿ ಖಾದರ್

Monday, June 3rd, 2019
UT Khader

ಮಂಗಳೂರು : ಮಳೆಗಾಲದಲ್ಲಿ ಉಳ್ಳಾಲದ ಮುಕ್ಕಚೇರಿ ಮತ್ತು ಕೈಕೋ ಪ್ರದೇಶಗಳಲ್ಲಿ ಸಮುದ್ರ ಕೊರೆತ ತೀವ್ರವಾಗಿ ಕಾಡಲಿದ್ದು, ಈ ಪ್ರದೇಶ ವ್ಯಾಪ್ತಿಯಲ್ಲಿ ಕೊರೆತ ತಡೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಬಂದರು ಇಲಾಖೆ ಅಧಿಕಾರಿಗಳಿಗೆ ರಾಜ್ಯ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು ಟಿ ಖಾದರ್  ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಗಳ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಉಳ್ಳಾಲದ ಮುಕ್ಕಚೇರಿ ಮತ್ತು ಕೈಕೋ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕಡಲ್ಕೊರೆತ ಸಂಭವಿಸಲಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಹೇಳಿದರು. ಇದೇ […]

ಕಡಲ್ಕೊರೆತ ಪ್ರದೇಶಗಳ ನಿವಾಸಿಗಳಿಗೆ ಪುನರ್ವಸತಿ: ಸಚಿವ ಖಾದರ್ ಸೂಚನೆ

Thursday, July 6th, 2017
Khader

ಮಂಗಳೂರು : ಉಳ್ಳಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀವರ್ಷ ಕಡಲ್ಕೊರೆತ ಸಮಸ್ಯೆಯಿಂದ ಸಂತ್ರಸ್ತರಾಗುವ ಜನತೆಗೆ ಇದರಿಂದ ಮುಕ್ತಿ ನೀಡಲು ಪರ್ಯಾಯ ನಿವೇಶನ ನೀಡಿ ಪುನರ್ವಸತಿ ಕಲ್ಪಿಸಲು ಆಹಾರ ಸಚಿವ ಯು.ಟಿ. ಖಾದರ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಡಲ್ಕೊರೆತ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪ್ರತೀವರ್ಷ ಕಡಲ್ಕೊರೆತದಿಂದ ತೀರ ಪ್ರದೇಶದ ನಿವಾಸಿಗಳು ಅತಂತ್ರರಾಗಿ ಭಯದಿಂದ ಬದುಕು ಸಾಗಿಸಬೇಕಾಗಿದೆ. ಸಂತ್ರಸ್ತ ಕುಟುಂಬಗಳ ಭವಿಷ್ಯದಲ್ಲಿ ನೆಮ್ಮದಿಯಿಂದ ಬದುಕು ಸಾಗಿಸಲು ಇಲ್ಲಿನ ಸಮುದ್ರ ತೀರ ಪ್ರದೇಶದಲ್ಲಿ […]

ಕಡಲ್ಕೊರೆತದಿಂದ ಅಪಾಯದ ಅಂಚಿನಲ್ಲಿರುವ ಮನೆಗಳು

Thursday, July 7th, 2016
sea erosion

ಉಳ್ಳಾಲ: ಉಳ್ಳಾಲ ಹಾಗೂ ಉಚ್ಚಿಲದಲ್ಲಿ ಕಡಲ್ಕೊರೆತ ಮುಂದುವರಿದಿದ್ದು, ಉಚ್ಚಿಲದಲ್ಲಿ ಮೂರು ಮನೆ ಸಹಿತ ಒಟ್ಟು 16 ಮನೆಗಳಿಗೆ ಹಾನಿಯಾಗಿದ್ದು, 49 ಮನೆಗಳು ಅಪಾಯದ ಅಂಚಿ ನಲ್ಲಿದ್ದರೆ, ಉಳ್ಳಾಲದ ಕಿಲೇರಿಯಾ ನಗರ ದಲ್ಲಿ 6 ಮನೆಗಳು, ಮುಕ್ಕಚ್ಚೇರಿ 4 ಮನೆಗಳು, ಮೊಗವೀರಪಟ್ಣದಲ್ಲಿ 3 ಮನೆಗಳಿಗೆ ಹಾನಿಯಾಗಿದೆ. ಒಟ್ಟು ಮೂರು ಮನೆಗಳನ್ನು ಸ್ಥಳಾಂತರಿಸ ಲಾಗಿದ್ದು, ಮುಸ್ಲಿಂ ಸಮುದಾಯವೇ ಹೆಚ್ಚಿರುವ ಪ್ರದೇಶದಲ್ಲಿ ಬುಧವಾರ ಸಂಭ್ರಮದಲ್ಲಿರಬೇಕಾದವರು ಕಡಲ್ಕೊ ರೆತದಿಂದಾಗಿ ಹಬ್ಬದ ಆಚರಣೆ ಕಳೆಗುಂದಿತ್ತು. ತಾತ್ಕಾಲಿಕ ತಡೆಗೋಡೆಯಾಗಿ ಕಲ್ಲು ಗಳನ್ನು ಹಾಕಿದ್ದರೂ ಕೆಲವೊಂದು ಕಡೆ […]

ಕೈಕೊ ಮತ್ತು ಸುಭಾಷ್ನಗರದಲ್ಲಿ ಕಡಲ್ಕೊರೆತ ತಡೆಗೆ ಸೋಮವಾರ ಕೆಲಸ ಆರಂಭಿಸಿ: ಯು ಟಿ ಖಾದರ್

Saturday, June 15th, 2013
Ut khader

ಮಂಗಳೂರು : ಕಡಲ್ಕೊರೆತದಿಂದ ತೀವ್ರವಾಗಿ ಹಾನಿಗೊಂಡಿರುವ ಕೈಕೋ ಸುಭಾಷ್ ನಗರದಲ್ಲಿ ಸೋಮವಾರದಿಂದಲೇ ತಾತ್ಕಾಲಿಕ ಕಾಮಗಾರಿ ಆರಂಭಿಸುವಂತೆ ಆರೋಗ್ಯ ಸಚಿವ ಶ್ರೀ ಯು ಟಿ ಖಾದರ್ ಅವರು ಬಂದರು ಅಧಿಕಾರಿಗಳಿಗೆ ಆದೇಶ ನೀಡಿದರು. ಈ ಸಂಬಂಧ ಇಂದು ಸರ್ಕ್ಯುಟ್  ಹೌಸ್ ನಲ್ಲಿ ನಡೆಸಿದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸುಭಾಷ್ ನಗರ ಹಾಗೂ ಹಿಲರಿ ನಗರದ ತೀವ್ರ ಕೊರತೆವಿರುವ ಪ್ರದೇಶಗಳಲ್ಲಿ ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟವಾಗದಂತೆ ತಾತ್ಕಾಲಿಕ ತಡೆ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕೆಂದು ಸೂಚಿಸಿದ ಅವರು, ನಿಯಮಗಳನ್ನು ಜನರಿಗೋಸ್ಕರ ಸಡಿಲಗೊಳಿಸಿ […]