ಕಾಸರಗೋಡಿನ ಕನ್ನಡ ಹೋರಾಟಗಾರ ಎಸ್. ವಿ ಭಟ್ ನಿಧನ

Sunday, September 10th, 2023
SV-Bhat

ಕಾಸರಗೋಡು : ಕಾಸರಗೋಡಿನಲ್ಲಿ ಕನ್ನಡಕ್ಕೆ ಶಕ್ತಿ ಮೀರಿ ದುಡಿಯುತ್ತಿದ್ದವರು. ಕನ್ನಡ ಶಾಲೆಗಳ ಉಳಿವಿಗೆ ಬಹಳ ಹೋರಾಟ ಮಾಡಿ ಕನ್ನಡದ ಅಸ್ಮಿತೆಗೆ ಶಕ್ತಿ ತುಂಬಿದ ವ್ಯಕ್ತಿ . ಎಸ್. ವಿ ಭಟ್ (72) ಅವರು ಹೃದಯಾಘಾತದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಬೀರಂತಬೈಲ್ ನಿವಾಸಿಯಾಗಿದ್ದ ಭಟ್ ರವರು ಕುಂಬಳೆ, ಅಡೂರು, ಕಾಸರಗೋಡು ಸೇರಿದಂತೆ ಜಿಲ್ಲೆಯ ಹಲವೆಡೆ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ರಾಗಿ ಕನ್ನಡ ಹೋರಾಟಗಾರಾಗಿ, ಜಿಲ್ಲಾ […]

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರದೀಪ ಕುಮಾರ ಕಲ್ಕೂರ ರಿಗೆ ಸನ್ಮಾನ

Monday, September 20th, 2021
Kalkura

ಬೆಂಗಳೂರು  : ಕನ್ನಡ ಸಾಹಿತ್ಯ ಪರಿಷತ್ತಿನ ಚರಿತ್ರೆಯಲ್ಲೇ ಪ್ರಪ್ರಥಮವಾಗಿ ಸತತ 5 ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಸಮರ್ಥ ಸೇವೆ ಸಲ್ಲಿಸುವ ಮೂಲಕ ಸರ್ವತ್ರ ಶ್ಲಾಘನೆಗೆ ಪಾತ್ರರಾದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಅವರನ್ನು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬೆಂಗಳೂರಿನ ವಿದ್ಯಾಪೀಠದಲ್ಲಿ ತಮ್ಮ ಚಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು. ಕಲೆ, ಸಾಹಿತ್ಯ, ನಾಡು-ನುಡಿ, ರಾಷ್ಟ್ರಧರ್ಮವನ್ನು ಪಾಲಿಸುವ ಮೂಲಕ ಕನ್ನಡದ ಕಾಯಕದಲ್ಲಿ […]

ಉಡುಪಿ ಶ್ರೀಕೃಷ್ಣ ಮಠದ ಮುಖ್ಯದ್ವಾರದಲ್ಲಿ ಕನ್ನಡ ನಾವು ಫಲಕ ಪ್ರತ್ಯಕ್ಷ

Thursday, December 3rd, 2020
Krishna Matt

ಉಡುಪಿ :  ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಕ್ಷೇಪಣೆಯ ಬಳಿಕ ಉಡುಪಿ ಶ್ರೀಕೃಷ್ಣ ಮಠದ ಮುಖದ್ವಾರದ ಗುರುವಾರ ಮಠದ ಎದುರು ಕನ್ನಡ ನಾವು ಫಲಕವನ್ನು ಮತ್ತೆ ಆಳವಡಿಸಲಾಗಿದೆ. ಈ ಹಿಂದೆ ಮುಖದ್ವಾರದಲ್ಲಿದ್ದ ಶ್ರೀಕೃಷ್ಣ ಮಠ ಎಂಬುದಾಗಿ ಬರೆಯಲಾದ ಕನ್ನಡ ನಾಮ ಫಲಕವನ್ನು ತೆಗೆದು, ‘ಶ್ರೀಕೃಷ್ಣ ಮಠ ರಜತಪೀಠ ಪುರ’ ಎಂದು ತುಳು ಹಾಗೂ ಸಂಸ್ಕೃತ ಭಾಷೆಯ ನಾಮಫಲಕವನ್ನು ಮಾತ್ರ ಹಾಕಲಾಗಿತ್ತು. ಇದಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಸಾಕಷ್ಟು ಪರ […]

ಏಲಕ್ಕಿ ನಾಡು ಹಾವೇರಿಯಲ್ಲಿ ಸಾಹಿತ್ಯ ಜಾತ್ರೆ ಫೆ.26, 27 ಮತ್ತು 28, 2021

Wednesday, November 25th, 2020
Haveri

ಹಾವೇರಿ:  ಏಲಕ್ಕಿ ನಾಡು ಹಾವೇರಿಯಲ್ಲಿಎಂಬತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2021ರ ಫೆ.26, 27 ಮತ್ತು 28ರಂದು ಮೂರು ದಿನಗಳ ಕಾಲ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀಧಿರ್ಮಾನ ಕೈಗೊಳ್ಳಲಾಗಿದೆ. ಬಳಿಗಾರ್‌ ಆಡಳಿತಾವಧಿಯಲ್ಲಿ ನಡೆಯುತ್ತಿರುವ ಐದನೇ ಸಮ್ಮೇಳನ ಇದು.  ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ […]

ಡಾ.ಜಯಶ್ರೀ ಬಿ.ಕದ್ರಿಯವರ” ಬೆಳಕು ಬಳ್ಳಿ” ಪುಸ್ತಕ ಬಿಡುಗಡೆ

Sunday, September 6th, 2020
Belaku Balli

ಮಂಗಳೂರು: ಮಂಗಳೂರಿನ ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜಯಶ್ರೀ ಬಿ.ಕದ್ರಿಯವರ “ಬೆಳಕು ಬಳ್ಳಿ” ಎಂಬ ಪುಸ್ತಕವನ್ನ ಖ್ಯಾತ ಲೇಖಕಿ ಶ್ರೀಮತಿ ಭುವನೇಶ್ವರಿ ಹೆಗಡೆ ಇವರ ಉಪಸ್ಥಿತಿಯಲ್ಲಿ ನಗರದ ಪ್ರೇಸ್ ಕ್ಲಬ್‌ ನಲ್ಲಿ ಇಂದು ಪುಸ್ತಕವನ್ನ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಸ್ .ಪ್ರದೀಪ ಕುಮಾರ ಕಲ್ಕೂರ. ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಇದರ ಪ್ರಾಶುಂಪಾಲರಾದ ಪ್ರೋ. ರಾಜೆಶೇಖರ ಹೆಬ್ಬಾರ.ಹಾಗೂ ಪ್ರೋ.ನಾಗವಣಿ ಮಂಚಿ […]

ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಪಿ. ಜನಾರ್ದನ ಗೌಡ ನೇಮಕ

Thursday, December 19th, 2019
Janardhana-gowda

ಕಡಬ : ನಿವೃತ್ತ ಶಿಕ್ಷಕ, ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯಿಕ ಕ್ಷೇತ್ರದಲ್ಲಿ ಸಕ್ರಿಯರೂ ಆಗಿರುವ ಪಿ. ಜನಾರ್ದನಗೌಡ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಡಬ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶ್ರೀಯುತರು ಕಡಬ ತಾಲೂಕಿನ ವಿವಿಧ ಶಾಲೆಗಳಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಮುಖ್ಯೋಪಧ್ಯಾಯರಾಗಿ ಪದೋನ್ನತಿ ಹೊಂದಿ ನಿವೃತ್ತರಾದರು. ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದ ಜನಾರ್ದನ ಗೌಡರು ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವರು. ಈ ಹಿಂದೆಜರಗಿದ್ದ ಪುತ್ತೂರು ತಾಲೂಕು 5ನೇ ಕನ್ನಡ ಸಾಹಿತ್ಯ […]

ಕನ್ನಡ ಸಾಹಿತ್ಯ ಪರಿಷತ್- ಸಂಸ್ಮರಣಾ ದಿನಾಚರಣೆ

Sunday, May 5th, 2019
sahitya parishath

ಮಂಗಳೂರು  : ಕನ್ನಡ ಸಾಹಿತ್ಯ ಪರಿಷತ್ತು- ಸಂಸ್ಮರಣಾ ದಿನಾಚರಣೆಯನ್ನುಇತ್ತೀಚೆಗೆದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದಆಚರಿಸಲಾಯ್ತು. ನಗರದ ಬಿಎಡ್. ಕಾಲೇಜು ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಪ್ರಸಂಗಕರ್ತಅರ್ಥದಾರಿ ಪೊಳಲಿ ನಿತ್ಯಾನಂದಕಾರಂತ ಪಾಲ್ಗೊಂಡಿದ್ದರು, ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕುಘಟಕಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ,ಜನಾರ್ದನ ಹಂದೆ, ಶ್ರೀಮತಿ ಶಾರದಮ್ಮ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಅನನ್ಯ ಸಾಹಿತ್ಯದ ಮೂಲಕ ಪ್ರಸಿದ್ಧರಾದ ನೂರಾರು ಮಂದಿ […]

ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭ : ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು

Friday, September 6th, 2013
bantwal-rai

ಮಂಗಳೂರು : ಸಂಪೂರ್ಣ ಸಾಕ್ಷರ ಜಿಲ್ಲೆ; ಬುದ್ದಿವಂತರ ಜಿಲ್ಲೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಹೆಸರಾಗಿದ್ದು ಇದರಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರೂ ಆಗಿರುವ ಶ್ರೀ ಬಿ. ರಮಾನಾಥ ರೈ ಅವರು ಹೇಳಿದರು. ಅವರಿಂದು ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಹಾಗೂ ಗುರುವಂದನಾ ಸಮಾರಂಭವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪ ಸಭಾಂಗಣ, ಬಂಟ್ವಾಳದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿರಬೇಕು. ಆರೋಗ್ಯವಂತ […]