ದ.ಕ. ಜಿಲ್ಲಾ ಪತ್ರಕರ್ತರ ಸಂಘದ ವಿಶೇಷ ಸಂಚಿಕೆ ಬಿಡುಗಡೆ

Tuesday, January 4th, 2022
Sadhane Book

ಕಲಬುರಗಿ : ಕಲಬುರಗಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಲಿ.)ಹಾಗೂ ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕಲಬುರಗಿ ಇದರ ಸಹಯೋಗದಲ್ಲಿ ನಡೆದ 36ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 3ವರ್ಷಗಳ ಯಶೋಗಾಥೆಯ ಸಾಧನೆ ಸಂಭ್ರಮ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಕಲಬುರಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ ಕೇಂದ್ರ ಸಚಿವ ಭಗವಂತ ಖೂಬಾ,ಸಂಸದ ಉಮೇಶ್ ಜಾಧವ್,ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಕರ್ನಾಟಕ […]

ಉದ್ಯೋಗ ಸೃಷ್ಟಿಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ: ಬಸವರಾಜ ಬೊಮ್ಮಾಯಿ

Friday, September 17th, 2021
CM Kalburgi

ಕಲಬುರಗಿ : ಮುಂದಿನ ಎರಡು ತಿಂಗಳ ಒಳಗೆ ಕಲ್ಯಾಣ ಕರ್ನಾಟಕ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಮಾತನಾಡಿಸ ಅವರು, ಕಲಬುರಗಿಯಲ್ಲಿ ಉದ್ಯೋಗ ಸೃಷ್ಟಿ ಬಹಳ ಮುಖ್ಯ. ಸಣ್ಣ, ಮದ್ಯಮ ಮತ್ತು ಭಾರಿ ಉದ್ಯಮಗಳ ಸೃಷ್ಟಿಗೆ ವಿಪುಲ ಅವಕಾಶಗಳಿವೆ ಎಂದರು. ಮುರುಗೇಶ್ ನಿರಾಣಿಯವರ ನೇತೃತ್ವದಲ್ಲಿ ಕರ್ನಾಟಕದ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹೂಡಿಕೆದಾರರ ಸಭೆ ನಡೆಸಿ ಚರ್ಚಿಸಿ, […]

ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯ, ಇಲ್ಲಿದೆ ನೋಡಿ ಫಲಿತಾಂಶ

Tuesday, September 7th, 2021
Belagavi

ಬೆಂಗಳೂರು :  ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕಲಬುರಗಿ ಮಹಾನಗರ ಪಾಲಿಕೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅತಂತ್ರವಾಗಿವೆ. ಬೆಳಗಾವಿ ಮಹಾನಗರ ಪಾಲಿಕೆ ಫಲಿತಾಂಶ (58 ವಾರ್ಡ್ ಗಳು) ಬಿಜೆಪಿ- 35, ಕಾಂಗ್ರೆಸ್-10, ಜೆಡಿಎಸ್-00, ಎಂಇಎಸ್-01, ಪಕ್ಷೇತರರು-12 ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ (55 ವಾರ್ಡ್ ಗಳು) ಬಿಜೆಪಿ-23, ಕಾಂಗ್ರೆಸ್-27, ಜೆಡಿಎಸ್-04, ಪಕ್ಷೇತರರು-01 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ […]

ಕೋವಿಡ್ ನಿಯಂತ್ರಣಕ್ಕೆ ಎಂಟು ಜಿಲ್ಲೆಗಳಲ್ಲಿ `ವೀಕೆಂಡ್ ಕರ್ಫ್ಯೂ’ವನ್ನು ಜಾರಿ

Friday, August 6th, 2021
Basavaraja Bommai

ಬೆಂಗಳೂರು : ಕರ್ನಾಟಕ ರಾಜ್ಯದ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಮೈಸೂರು, ಚಾಮರಾಜನಗರ, ಕೊಡಗು, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ `ವೀಕೆಂಡ್ ಕರ್ಫ್ಯೂ’ವನ್ನು ಜಾರಿಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎಂಟು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ 9ಗಂಟೆಯಿಂದಲೇ ಸೋಮವಾರ ಬೆಳಗ್ಗೆ 5ಗಂಟೆಯ ವರೆಗೆ ವಾರಂತ್ಯದ ಕರ್ಪ್ಯೂ ಜಾರಿಯಲ್ಲಿರಲಿದೆ. ಮಾರ್ಗಸೂಚಿ ಪಾಲಿಸಿ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಇತರೆ ಧಾರ್ಮಿಕ ಸ್ಥಳಗಳಲ್ಲಿ ಪೂಜೆ, […]

ಕಲಬುರಗಿ ಲೋಕೋಪಯೋಗಿ ಭವನ ಲೋಕಾರ್ಪಣೆ

Sunday, July 11th, 2021
Kalburgi PWD

ಕಲಬುರಗಿ :  ಲೊಕೋಪಯೋಗಿ ಇಲಾಖೆಯ ವಿವಿಧ ಹಂತದ ಕಚೇರಿಗಳು ಒಂದೇ ಸೂರಿನಡಿ ಇರಬೇಕೆಂಬ ಪರಿಕಲ್ಪನೆಯಿಂದ 47.10 ಕೋಟಿ ರೂ. ವೆಚ್ಚದಲ್ಲಿ ಆಕರ್ಷಕ ವಾಸ್ತುಶಿಲ್ಪಿಯೊಂದಿಗೆ ಕಲಬುರಗಿ ನಗರದಲ್ಲಿ ನಿರ್ಮಾಣಗೊಂಡಿರುವ “ಲೋಕೋಪಯೋಗಿ ಭವನ” ಸೇರಿದಂತೆ ಕಲಬುರಗಿ ಜಿಲ್ಲೆಯ 181.85 ಕೋಟಿ ರೂ. ಬೃಹತ್ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಚಾಲನೆ ನೀಡಿದರು. ನೂತನ ಲೋಕೋಪಯೋಗಿ ಭವನದಲ್ಲಿ ಅಯೋಜಿಸಲಾದ ಭವ್ಯ ಕಾರ್ಯಕ್ರಮದಲ್ಲಿ ಲೊಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಅರೋಗ್ಯ ಇಲಾಖೆಯ ಒಟ್ಟು 16 ಕಾಮಗಾರಿಗಳಿಗೆ ಅಡಿಗಲ್ಲು, ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಯನ್ನು […]

ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಸಿವಿಲ್ ಎಂಜಿನಿಯರ್, ಮನನೊಂದ ಪತ್ನಿ ಆತ್ಮಹತ್ಯೆ

Thursday, June 10th, 2021
rachitha

ಕಲಬುರಗಿ : ಎರಡೂವರೆ ವರ್ಷದ ಹಿಂದೆ  ಮದುವೆಯಾಗಿದ್ದ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು 21 ವರ್ಷದ ರಚಿತಾ ಎಂದು ಗುರುತಿಸಲಾಗಿದೆ. ರಚಿತಾ ಅವರಿಗೆ  ಕಳೆದ ಎರಡೂವರೆ ವರ್ಷದ ಹಿಂದೆ ವೀರಣ್ಣ ಎಂಬವರ ಜೊತೆ ಮದುವೆಯಾಗಿತ್ತು. ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದ ವೀರಣ್ಣ, ಮದುವೆಯಾದ ಬಳಿಕ ಹಣಕ್ಕಾಗಿ ಪತ್ನಿಯನ್ನು ಪೀಡಿಸಿ ತೊಂದರೆ ಕೊಡ್ತಿದ್ದ ಎಂದು ಹೇಳಲಾಗಿದೆ. ಮಂಗಳವಾರ  ತವರು ಮನೆಯಿಂದ ಹಣ ತೆಗೆದುಕೊಂಡು ಬರುವಂತೆ ಗಲಾಟೆ […]

ಕಾಂಗ್ರೆಸ್ ಬಿಜೆಪಿ ಮೈತ್ರಿ ಮಾಡಿಕೊಂಡು ಕಲಬುರಗಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಹೀಗೆ !

Tuesday, July 14th, 2020
Rukmini-Bhimashankar

ಕಲಬುರಗಿ: ಕಾಂಗ್ರೆಸ್ ಬಿಜೆಪಿಗರ ಕಚ್ಚಾಟ ಪ್ರತಿದಿನ ಇದ್ದದೇ ಬಿಡಿ, ಆದರೆ ಇದೆಲ್ಲವನ್ನು ಮರೆತು ಇಬ್ಬರು ನಾಯಕರು ಪ್ರೀತಿಗೆ ಶಕ್ತಿ ರಾಜಕೀಯಕ್ಕಿಂತಲೂ ಹೆಚ್ಚಿನ ಶಕ್ತಿ ಇದೆ ಎಂದು ತೋರಿಸಿಕೊಟ್ಟಿದ್ದಾರೆ. ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ತಮ್ಮ ರಾಜಕೀಯವನ್ನು ಮೀರಿ ಇಬ್ಬರೂ ಕೂಡಾ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ಇಂದು ನಡೆದ ಸರಳ ವಿವಾಹದಲ್ಲಿ ದಂಪತಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಮತ್ತು ತಾಲೂಕು ಪಂಚಾಯತ್ ಉಪಾಧ್ಯಕ್ಷ ಭೀಮಾಶಂಕರ್ ಹೊನ್ನಿಕೇರಿ […]

ಲಾಕ್ ಡೌನ್ ಇದ್ದರೂ ಕಲಬುರಗಿ ಸಿದ್ದಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ

Thursday, April 16th, 2020
siddalingeshwara

ಕಲಬುರಗಿ :  ಹೆಮ್ಮಾರಿ ಕೊರೊನಾ ತಡೆಗಟ್ಟಲು ಭಾರತ್ ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ಕಲಬುರಗಿಯ ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮಸ್ಥರು ಸಿದ್ದಲಿಂಗೇಶ್ವರ ದೇವರ  ಜಾತ್ರಾ ಮಹೋತ್ಸವವನ್ನು ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಏಪ್ರಿಲ್ ನಡೆಸಿರುವುದು ಜಿಲ್ಲಾಡಳಿತ ಮತ್ತು ಪೊಲೀಸರ ನಿರ್ಲಕ್ಷ್ಯವನ್ನು ಎತ್ತಿತೋರಿಸಿದೆ. ಕಲಬುರಗಿ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾದ ಜಿಲ್ಲೆ 144 ‌ನಿಷೇದಾಜ್ಞೆ ಜಾರಿಯಲ್ಲಿದೆ. ಅಲ್ಲದೇ ಯಾವುದೇ ರೀತಿಯ ಜಾತ್ರೆ, ಉರೂಸ್, ಸಭೆ, ಸಮಾರಂಭಗಳನ್ನು ನಡೆಸದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಆದ್ರೂ ರಾವೂರ್ ಗ್ರಾಮಸ್ಥರು ಮಾತ್ರ ನಿಷೇಧಾಜ್ಞೆ ನಡುವೆಯೂ ಗ್ರಾಮದ ಸಿದ್ದಲಿಂಗೇಶ್ವರ […]

ಕೊರೊನಾ ವೈರಸ್‍ : ಕಲಬುರಗಿ ನಗರದಲ್ಲಿ ಅಂಗಡಿ, ವ್ಯಾಪಾರ ಬಂದ್; ಹೈ ಅಲರ್ಟ್ ಘೋಷಣೆ

Saturday, March 14th, 2020
kalaburagi

ಕಲಬುರಗಿ : ಕೊರೊನಾ ವೈರಸ್‍ಗೆ ಕಲಬುರಗಿ ವ್ಯಕ್ತಿ ಬಲಿಯಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ನಗರದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡುವಂತೆ ಆದೇಶಿಸಿದೆ. ತಕ್ಷಣದಿಂದಲೇ ನಗರದ ಎಲ್ಲಾ ಅಂಗಡಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವಂತೆ ಆದೇಶ ನೀಡಲಾಗಿದೆ. ಅಗತ್ಯ ವಸ್ತಗಳನ್ನು ಹೊರತುಪಡಿಸಿ ಉಳಿದೆಲ್ಲ ವಹಿವಾಟುಗಳನ್ನು ಬಂದ್ ಮಾಡುವಂತೆ ಡಿಸಿ ಆದೇಶಿಸಿದ್ದಾರೆ. ಕೇವಲ ಆಸ್ಪತ್ರೆ, ಮೆಡಿಕಲ್ ಶಾಪ್ ಹಾಲು, ತರಕಾರಿ ಹಾಗೂ ಕಿರಾಣಿ ಅಂಗಡಿಗಳು ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ಪಾಲಿಕೆಯ ಅಧಿಕಾರಿಗಳಿಂದ ನಗರದಲ್ಲಿರುವ ಅಂಗಡಿಗಳನ್ನು […]

ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮೊದಲ ಬಲಿಯಾಗಿದ್ದು ಆಘಾತಕಾರಿ : ಸಿಎಂ ಯಡಿಯೂರಪ್ಪ ವಿಷಾದ

Friday, March 13th, 2020
bsy

ಬೆಂಗಳೂರು : ಕೊರೋನಾ ಸೋಂಕಿನಿಂದ ಗುರುವಾರ ಕಲಬುರ್ಗಿಯಲ್ಲಿ 76 ವರ್ಷದ ವೃದ್ಧ ಮೃತಪಟ್ಟಿರುವುದು ದುರಾದೃಷ್ಟಕರ ಬೆಳವಣಿಗೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಷಾಧ ವ್ಯಕ್ತಪಡಿಸಿದ್ದಾರೆ. ಇಡೀ ವಿಶ್ವಕ್ಕೆ ಇಂದು ಬೆದರಿಕೆ ಒಡ್ಡಿರುವ ಕೊರೋನಾ ಭಾರತದಕ್ಕೂ ತನ್ನ ಕಬಂದಬಾಹುವನ್ನು ವಿಸ್ತರಿಸಿದೆ. ದೇಶದಲ್ಲಿ ಈವರೆಗೆ 75 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ರಾಜ್ಯದಲ್ಲೂ 6 ಜನರಿಗೆ ಈ ಸೋಂಕು ತಗುಲಿದೆ. ಈ ಪೈಕಿ ಗುರುವಾರ ಕಲಬುರ್ಗಿಯ ವ್ಯಕ್ತಿ ನಿನ್ನೆ ಮೃತರಾಗಿದ್ದರು. ಈ ಕುರಿತು ಇಂದು ವಿಧಾನಮಂಡಲ ಕಲಾಪದಲ್ಲಿ ಚರ್ಚೆಯ ಸಂದರ್ಭದಲ್ಲಿ ಮಾತನಾಡಿರುವ […]