ಕಾಪುವಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನು, ಮತ್ಸ್ಯಪ್ರಿಯರಿಗೆ ಫುಲ್ ಖುಷಿ

Saturday, August 29th, 2020
fish

ಕಾಪು : ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನುಗಳನ್ನು ದಡಕ್ಕೆ ಎಳೆಯಲು ಮೀನುಗಾರರು ಬಹಳಷ್ಟು ಶ್ರಮಪಡುತ್ತಿದ್ದರು . ಭಾರೀ ಪ್ರಮಾಣದ ಮೀನಿನಿಂದಾಗಿ ಕೈರಂಪಣಿಯ ಬಲೆ ಹರಿದು, ಮೀನು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ತೀರದಲ್ಲಿ ಮೀನುಗಳು ಮೇಲಕ್ಕೆ ಚಿಮ್ಮುತ್ತಿ ರುವ ದೃಶ್ಯಗಳು ಕಂಡುಬರುತ್ತಿದ್ದವು ಇದು ನಡೆದದ್ದು ಶುಕ್ರವಾರ ಕಟಪಾಡಿ ಮಟ್ಟು ಕಡಲ ತೀರದಲ್ಲಿ. ಕಳೆದ ಎರಡು ದಿನಗಳಿಂದ ಮಟ್ಟು ಕಡಲತೀರದಲ್ಲಿ ರಾಶಿರಾಶಿಯಾಗಿ ಮೀನುಗಳು ಕಂಡುಬರುತ್ತಿದ್ದು. ಕೈರಂಪಣಿ ಬಲೆಗೆ  ಸಿಕ್ಕಿಬಿದ್ದ ಭಾರೀ ಪ್ರಮಾಣದ ಮೀನುಗಳನ್ನು ತೀರಕ್ಕೆ ಎಳೆದು ತರಲು ಮೀನುಗಾರರು ಹರ ಸಾಹಸಪಟ್ಟರು. ಇಲ್ಲಿ ಹೆಜಮಾಡಿಯ ಮೀನುಗಾರರ ತಂಡ […]

ಉಡುಪಿಯಲ್ಲಿ ಸಿಡಿಲು, ಮಿಂಚು, ಗಾಳಿ ಸಹಿತ ಭಾರೀ ಮಳೆ

Tuesday, April 7th, 2020
udupi rain

ಉಡುಪಿ :  ಕಾಪು ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಸಿಡಿಲು, ಮಿಂಚು, ಗಾಳಿ ಸಹಿತ ಭಾರೀ ಮಳೆಯಾಗಿದೆ. ಕೆಲವಡೆ ಗಾಳಿ, ಸಿಡಿಲು ಸಹಿತ ಮಳೆಯಾಗಿದೆ. ಹಲವು ಕಡೆಗಳಲ್ಲಿ ಚರಂಡಿಯ ವ್ಯವಸ್ಥೆ ಸರಿಪಡಿಸದೆ ಇರುವುದರಿಂದ ರಸ್ತೆಯಲ್ಲೇ ನೀರು ಹರಿದು ಹೋಗುವಂತಾಯಿತು. ಪಡುಬಿದ್ರಿ ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಸಮರ್ಪಕ ಕಾಮಗಾರಿಯಿಂದ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಹರಿದುಹೋಗುತಿತ್ತು, ಪಡುಬಿದ್ರಿಯ ಕಲ್ಸಂಕದಲ್ಲಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಮಳೆ ನೀರು ಹೆದ್ದಾರಿಯಲ್ಲಿಯೇ ಹೋಗುವಂತಾಯಿತು. ಪಡುಬಿದ್ರಿಯ ಕಾರ್ಕಳ ಸಂಪರ್ಕಿಸುವ ಸರ್ಕಲ್ ಬಳಿ ಮಳೆ ನೀರು ನಿಂತಿತ್ತು. ಆದರೆ ಲಾಕ್‍ಡೌನ್‍ನಿಂದ ಹೆಚ್ಚಿನ ವಾಹನಗಳು […]

ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಕ್ರಿಕೆಟ್ ಆಡಿದ ವ್ಯಕ್ತಿಗೆ ದಂಡ

Thursday, April 2nd, 2020
Jagadeesha

ಉಡುಪಿ : ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ದಕ್ಕಾಗಿ ಕಾಪು ಮೂಲದ ವ್ಯಕ್ತಿಗೆ ಆತನ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಆತನೇ ಭರಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ. ಅವರು ಗುರುವಾರ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿದೇಶದಿಂದ ಬಂದು ಹೋಮ್ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿದ್ದು, ಮನೆಯಲ್ಲಿ ಇರಬೇಕಾದ ವ್ಯಕ್ತಿ ಎಲ್ಲರ ಜೊತೆಯಲ್ಲಿ ಸೇರಿ ಕ್ರಿಕೆಟ್ ಆಡಿದ್ದಲ್ಲದೆ ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ ಆದ್ದರಿಂದ ಅವನ ಸಂಪರ್ಕಕ್ಕೆ […]

ಕಾಪು : ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ದಲಿತರಿಗೆ ಶವ ಸಂಸ್ಕಾರಕ್ಕೆ ಅವಕಾಶ ಇಲ್ಲದಿರುವುದನ್ನು ವಿರೋಧಿಸಿ ಪ್ರತಿಭಟನೆ

Tuesday, January 28th, 2020
ucchila

ಕಾಪು : ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯಲ್ಲಿನ ಸಾರ್ವಜನಿಕ ಹಿಂದೂ ರುದ್ರಭೂಮಿಯ ವಿವಾದಕ್ಕೆ ಸಂಬಂಧಿಸಿ ದಲಿತರ ಶವ ಸಂಸ್ಕಾರಕ್ಕೆ ಅವಕಾಶ ಇಲ್ಲದಿರುವುದನ್ನು ವಿರೋಧಿಸಿ ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಇಂದು ದಲಿತರೊಬ್ಬರ ನಿಧನದ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿ ಎದುರು ಚಟ್ಟ ನಿರ್ಮಿಸಿ ಪ್ರತಿಭಟನೆಯನ್ನು ನಡೆಸಲಾಯಿತು. ಎರ್ಮಾಳ್ ಬಡ ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ದಲಿತರಿಗೆ ಶವ ಸಂಸ್ಕಾರ ನಡೆಸಲು ಶತಮಾನಗಳಿಂದ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ದಸಂಸ ಹಲವು ವರ್ಷಗಳಿಂದ ಹೋರಾಟಗಳನ್ನು ನಡೆಸಿ ಕೊಂಡು […]

ಡೀಸೆಲ್‌ ಸಾಲ ನೀಡದಕ್ಕೆ ಬಂಕ್‌ ಕ್ಯಾಶಿಯರ್‌ ಮೇಲೆ ಹಲ್ಲೆ

Wednesday, January 9th, 2019
Petrol-bunk

ಕಾಪು: ಸಾಲ ರೂಪದಲ್ಲಿ ಡೀಸೆಲ್‌ ಹಾಕಲೊಪ್ಪದ ಪೆಟ್ರೋಲ್‌ ಬಂಕ್‌ನ ಕ್ಯಾಶಿಯರ್‌ಗೆ ಮಿನಿ ಬಸ್‌ ಮಾಲಕ ಹಲ್ಲೆ ನಡೆದ ಘಟನೆ ಉದ್ಯಾವರ ದಲ್ಲಿ ಸೋಮವಾರ ನಡೆದಿದೆ. ಉದ್ಯಾವರ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ನ ಕ್ಯಾಶಿಯರ್‌ ಬಂಟಕಲ್ಲು ನಿವಾಸಿ ಸುರೇಶ್‌ ಬಿ. ಶೇರಿಗಾರ್‌ ಹಲ್ಲೆಗೊಳಗಾದ ವ್ಯಕ್ತಿ. ನಿಶಾಂತ್‌ ಕರ್ಕಡ ಹಲ್ಲೆಡ ನಡೆಸಿದ ಆರೋಪಿ. ಆರೋಪಿ ನಿಶಾಂತ್‌ ಕರ್ಕಡ ಜ. 7ರಂದು ಸುರೇಶ್‌ ಶೇರಿಗಾರ್‌ ಅವರಿಗೆ ಮೊಬೈಲ್‌ ಕರೆ ಮಾಡಿ ತನ್ನ ಮಿನಿ ಬಸ್‌ಗೆ 1,000 ರೂ. ಮೊತ್ತದ ಡೀಸೆಲ್‌ ಹಾಕುವಂತೆ […]

ಕಾಪು ವಿನ ಅಭಿವೃದ್ಧಿಯ ಹರಿಕಾರ ವಿನಯ್ ಕುಮಾರ್ ಸೊರಕೆ

Friday, May 11th, 2018
Vinayakumar Sorake

ಕಾಪು : ನೈಜ ಸಮಾಜ ಸೇವಕ ಎಂದೂ ಅಧಿಕಾರಕ್ಕಾಗಿ ಹಂಬಲಿಸುವುದಿಲ್ಲ. ಅಧಿಕಾರ ಬಂದಾಗ ಸಮರ್ಥವಾಗಿ ನಿರ್ವಹಿಸಬಲ್ಲ, ಜನಪರವಾಗಿ ಕೆಲಸ ಮಾಡಬಲ್ಲವೇ ನೀಜವಾದ ನಾಯಕ. ನಾವೀಗ ಮಾತನಾಡುತ್ತಿರುವ ವ್ಯಕ್ತಿ ನಿಮ್ಮೆಲ್ಲರ ಮೆಚ್ಚಿನ ವಿನಯ ಕುಮಾರ್ ಸೊರಕೆ. ಸೊರಕೆ ಬಗ್ಗೆ ನಿಮಗೆಲ್ಲರಿಗೂ ಗೊತ್ತೆ ಇದೆ. ಶಾಸಕನಾಗ ಬೇಕು, ಸಂಸದನಾಗ ಬೇಕು, ಸಚಿವನಾಗ ಬೇಕು ಎಂದು ಬಯಸಿದವರವಲ್ಲ ಸೊರಕೆ. ಚುನಾವಣೆ ಅವರನ್ನು ಹುಡುಕಿ ಕೊಂಡು ಬಂದಿತ್ತು. ಕಾಂಗ್ರೆಸ್ ಪಕ್ಷ ಅವರಿಗೆ ಮಹತ್ವದ ಹುದ್ದೆಯನ್ನು ನೀಡಿತ್ತು. ಕಾಪು ಕ್ಷೇತ್ರದ ಅಭಿವೃದ್ಧಿಯ ನೇತಾರ ವಿನಯ […]

ಕಾಪು ಕ್ಷೇತ್ರದ ಜನಪ್ರಿಯ ನಾಯಕ ಲಾಲಾಜಿ ಮೆಂಡನ್‌

Friday, May 11th, 2018
lalaji-mendon

ಕಾಪು: ತುಳುನಾಡಿನ ಜನತೆ ಸಜ್ಜನರು, ಆತ್ಮಾಭಿಮಾನಿಗಳು. ನಾವು ಸಮಾಜಕ್ಕೆ ನಮ್ಮಿಂದಾಗುವ ಕೊಡುಗೆಗಳನ್ನು ಸದಾ ನೀಡುತ್ತಿರುತ್ತಾರೆ ಎಂದು ನಂಬಿದವರು ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಮೆಂಡನ್‌. ಅತ್ಯಂತ ಸಜ್ಜನ, ಉತ್ತಮ ಸ್ವಭಾವದ ರಾಜಕಾರಣಿ ಎಂದೇ ಲಾಲಾಜಿ ಮೆಂಡನ್ ಅವರನ್ನು ಗುರುತಿಸಲಾಗುತ್ತದೆ. ಈ ಬಾರಿ ಮತ್ತೆ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರೇ ಆಗಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಉಡುಪಿ ಜಿಲ್ಲೆಯ ಪೈಕಿ ಜಿದ್ದಿನ ಕಣ. ಕಾಂಗ್ರೆಸ್ನಿಂದ ವಿನಯಕುಮಾರ್ ಸೊರಕೆ, ಬಿಜೆಪಿಯಿಂದ […]

ಇನ್ನೊಂದು ಅವಕಾಶ ಕೊಟ್ಟರೆ ಮತ್ತೆ ಕಾಪು ಕ್ಷೇತ್ರವನ್ನು ರಾಷ್ಟ್ರ ಮಟ್ಡದಲ್ಲಿ ಗುರುತಿಸುವಂತಹ ಕೆಲಸ ಮಾಡ್ತಿನಿ: ಶಾಸಕ ಸೊರಕೆ

Saturday, April 21st, 2018
sorake-congress

ಉಡುಪಿ: ಕ್ಷೇತ್ರದಲ್ಲಿ ಅಭಿವೃದ್ಧಿ ನಿಟ್ಟಿನಲ್ಲಿ ಸಾಧಿಸಿದ್ದು ಬಹಳ ಇದೆ. ಇನ್ನಷ್ಟು ಕೆಲಸಗಳು ಆಗಬೇಕಾದ ಅಗತ್ಯ ತೆ ಇದೆ. ಇನ್ನೊಂದು ಅವಕಾಶ ಕೊಟ್ಟರೆ ಮತ್ತೆ ಕಾಪು ಕ್ಷೇತ್ರ ವನ್ನು ರಾಷ್ಟ್ರ ಮಟ್ಡದಲ್ಲಿ ಗುರುತಿಸುವಂತಹ ಕೆಲಸ ಮಾಡ್ತಿನಿ ಅಂತಾ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ. ಹಿರಿಯಡ್ಕ ದೇವಾಡಿಗರ ಸಭಾಭವನದಲ್ಲಿ ನಡೆದ ಕಾಪು ಬ್ಲಾಕ್ ಉತ್ತರ ವಲಯ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ಮುಖಂಡೆ ಶ್ಯಾಮಲಾ ಸುಧಾಕರ್, ರಮೇಶ್ ಪ್ರಭು ಮತ್ತು ಪ್ರವೀಣ್ ಈ ಸಂದರ್ಭ […]

100 ಜನರಿಗೆ ಊಟ: ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಪ್ರಕರಣ

Monday, April 9th, 2018
kapu-congress

ಕಾಪು: ನೀತಿ ಸಂಹಿತೆ ಉಲ್ಲಂಘಿಸಿ 100 ಜನರಿಗೆ ಊಟ ಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ ಎಂಬುವವರ ಮೇಲೆ ಚುನಾವಣಾಧಿಕಾರಿಗಳು ರವಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. 2 ದಿನಗಳ ಹಿಂದೆ ಶಿರ್ವ ಠಾಣೆ ವ್ಯಾಪ್ತಿಯ ಬೆಳಪುವಿನಲ್ಲಿ ನಡೆದ ಕಾಂಗ್ರೆಸ್‌ನ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ. ಈ ಕಾರ್ಯಕ್ರಮದ ವೀಡಿಯೊ ಚಿತ್ರೀಕರಣ ಮಾಡಲಾಗಿದ್ದು, ಇಂದು ವೀಡಿಯೊ ತಪಾಸಣೆ ನಡೆಸುವಾಗ ಊಟ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ವೀಡಿಯೊ ಚಿತ್ರೀಕರಣದ […]

ಕಾಪು ಪುರಸಭೆಗೆ ಮಾಲಿನಿ ಅಧ್ಯಕ್ಷೆ

Monday, January 29th, 2018
kapu-purasabhe

ಪಡುಬಿದ್ರಿ: ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮಾಲಿನಿ ಆಯ್ಕೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 15 ತಿಂಗಳ ಅವಧಿಗೆ ಅಧ್ಯಕ್ಷೆಯಾಗಿದ್ದ ಸೌಮ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪುರಸಭೆ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ. ಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾಧಿಕಾರಿ, ಉಡುಪಿ ತಹಶೀಲ್ದಾರ್ ಪ್ರದೀಪ್ ಹುರ್ಡೆಕರ್ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು. ಶನಿವಾರ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ನಿಕಟಪೂರ್ವ ಅಧ್ಯಕ್ಷೆ ಸೌಮ್ಯ ಅವರಿಂದ ಸೂಚನೆ, ಸದಸ್ಯೆ […]