ಕುಶಾಲನಗರ ನೂತನ ತಾಲ್ಲೂಕು ಅಸ್ತಿತ್ವಕ್ಕೆ ಆರ್ ಅಶೋಕ ಚಾಲನೆ

Wednesday, July 7th, 2021
Kushal Nagara

ಕುಶಾಲನಗರ  : ಕಂದಾಯ ಸಚಿವರಾದ ಆರ್ ಅಶೋಕ ಅವರು ನೂತನವಾಗಿ ರಚನೆಗೊಂಡಿರುವ ಕೊಡಗು ಜಿಲ್ಲೆಯ ಐದನೇ ತಾಲ್ಲೂಕು ಕುಶಾಲನಗರದ ಅಧಿಕೃತ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಆರ್. ಅಶೋಕ ಅವರು “ಕುಶಾಲನಗರ ತಾಲ್ಲೂಕು ಕೇಂದ್ರವಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು 20-30 ಬಾರಿ ಕಚೇರಿಗೆ ಬಂದು ವಿನಂತಿಸಿದ್ದಾರೆ. ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ಕುಶಾಲನಗರ ತಾಲ್ಲೂಕು ಕೇಂದ್ರವಾಗಿದೆ. ಇಲ್ಲಿನ ಶಾಸಕರ ಹೋರಾಟದ ಫಲವಾಗಿ ಕುಶಾಲನಗರ ತಾಲ್ಲೂಕು ಅಸ್ತಿತ್ವಕ್ಕೆ ಬಂದಿದೆ” ಎಂದು ಕಂದಾಯ ಸಚಿವರು ಹೇಳಿದರು. “ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ […]

ಕುಶಾಲನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎಸ್.ಡಿ.ಪಿ.ಐ ಪ್ರತಿಭಟನೆ

Thursday, February 27th, 2020
SDPI

ಮಡಿಕೇರಿ : ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದಾಳಿಯಲ್ಲಿ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿ ಕುಶಾಲನಗರ ಎಸ್.ಡಿ.ಪಿ.ಐ ಘಟಕದ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪಟ್ಟಣದ ಕಾರ್ಯಪ್ಪ ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಮಾತನಾಡಿದ ತಾಲ್ಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹನೀಫ್, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಎದುರಿಸಲಾಗುವುದು ಎಂದು ಮಾಜಿ ಶಾಸಕ ಮತ್ತು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಅವರ ಹೇಳಿಕೆಯ ಬೆನ್ನಲ್ಲೇ ಈ ಘರ್ಷಣೆ […]

ಕುಶಾಲನಗರ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆಯಿಂದ ಮಾಹಿತಿ ಸಂಗ್ರಹ

Wednesday, February 5th, 2020
kushalnagara

ಮಡಿಕೇರಿ : ಕುಶಾಲನಗರ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ಕಾವೇರಿ ನದಿಯಲ್ಲಿ ತುಂಬಿರುವ ಮಣ್ಣಿನ ಹೂಳಿನ ಪ್ರಮಾಣ ಮತ್ತು ಜಿಪಿಎಸ್ ಆಧಾರಿತ ನಿರ್ದಿಷ್ಟ ಸ್ಥಳದ ಮಾಹಿತಿ ಸಂಗ್ರಹ ಕಾರ್ಯ ನಡೆಸಿದರು. ಕುಶಾಲನಗರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಿಂದ ಕುಶಾಲನಗರ ಮಾರುಕಟ್ಟೆ ತನಕ ರ‍್ಯಾಫ್ಟರ್ ಮೂಲಕ ಕಾವೇರಿ ನದಿಯಲ್ಲಿ ಸಂಚರಿಸಿದ ವೇದಿಕೆ ಪ್ರಮುಖರು ನದಿಯ ಮಧ್ಯದಲ್ಲಿ ನಿರ್ಮಾಣಗೊಂಡಿರುವ ಮಣ್ಣಿನ ಬೃಹತ್ ನಡುಗಡ್ಡೆಗಳನ್ನು ಪತ್ತೆಹಚ್ಚುವುದರೊಂದಿಗೆ ಅಲ್ಲಲ್ಲಿ ನದಿಯ ಆಳವನ್ನು ಪರಿಶೀಲಿಸುತ್ತ ತೆರಳಿದ ವೇದಿಕೆ ಪ್ರಮುಖರಿಗೆ 10 ಕ್ಕೂ […]

ಗ್ರಾಮಪಂಚಾಯಿತಿ ಮಾಸಿಕ ಸಭೆಯ ನಡುವೆ ಅಧ್ಯಕ್ಷೆ ಸದಸ್ಯನ ನಡುವೆ ಮಾತಿನ ಚಕಮಕಿ

Wednesday, January 22nd, 2020
harish

ಕುಶಾಲನಗರ : ಗ್ರಾಮಪಂಚಾಯಿತಿ ಮಾಸಿಕ ಸಭೆಯ ನಡುವೆ ಅಧ್ಯಕ್ಷೆ ಮತ್ತು ಸದಸ್ಯನ ನಡುವೆ ಮಾತಿನ ಚಕಮಕಿ ನಡೆದು ಅಧ್ಯಕ್ಷೆ ಸದಸ್ಯನ ಶರ್ಟ್ ಅನ್ನು ಹರಿದು ಹಾಕಿದ ಘಟನೆ ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಈ ಹಿಂದಿನ ಸಭೆಯ ನಡಾವಳಿಗಳನ್ನು ಕಾರ್ಯರೂಪಕ್ಕೆ ತರದಿರುವ ಬಗ್ಗೆ ಸಭೆಯಲ್ಲಿ ಕೆಲವು ಸದಸ್ಯರು ಅಧ್ಯಕ್ಷರ ವಿರುದ್ಧ ಆರೋಪ ಮಾಡಿದ್ದಾರೆ. ಸಭೆಯನ್ನು ಸ್ಥಗಿತಗೊಳಿಸುವ ಸಂಬಂಧ ಚರ್ಚೆಗಳು ನಡೆಯುತ್ತಿರುವ ವೇಳೆ ಪಂಚಾಯಿತಿ ಅಧ್ಯಕ್ಷೆ ಭವ್ಯ ಮತ್ತು ಸದಸ್ಯ ಹರೀಶ್ ನಡುವೆ ಮಾತಿನ ಚಕಮಕಿ […]

ಕಾವೇರಿ ನದಿ ಹೂಳೆತ್ತಲು 130 ಕೋಟಿ ರೂ. : ಶಾಸಕ ಅಪ್ಪಚ್ಚುರಂಜನ್ ಭರವಸೆ

Tuesday, January 21st, 2020
ಕಾವೇರಿ ನದಿ ಹೂಳೆತ್ತಲು 130 ಕೋಟಿ ರೂ. : ಶಾಸಕ ಅಪ್ಪಚ್ಚುರಂಜನ್ ಭರವಸೆ

ಮಡಿಕೇರಿ : ಕಾವೇರಿ ನದಿ ಜಲಾನಯನ ಪ್ರದೇಶಗಳ ಹೂಳೆತ್ತಲು ಸರಕಾರದಿಂದ ಘೋಷಣೆಯಾಗಿರುವ ರೂ.130 ಕೋಟಿ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಭರವಸೆ ನೀಡಿದ್ದಾರೆ. ಕುಶಾಲನಗರದಲ್ಲಿ ನೂತನವಾಗಿ ಅಸ್ವಿತ್ವಕ್ಕೆ ಬಂದ ಕಾವೇರಿ ನದಿ ಪ್ರವಾಹ ಪೀಡಿತರ ರಕ್ಷಣಾ ವೇದಿಕೆ ಪ್ರತಿನಿಧಿಗಳು ಶಾಸಕರನ್ನು ಭೇಟಿ ಮಾಡಿ ಮುಂದಿನ ಸಾಲಿನಲ್ಲಿ ನೆರೆ ಮತ್ತೆ ಮರುಕಳಿಸದಂತೆ ಯೋಜನೆ ರೂಪಿಸಲು ಮನವಿ ಸಲ್ಲಿಸಿದ ಸಂದರ್ಭ ಅವರು ಪ್ರತಿಕ್ರಿಯಿಸಿದ್ದು, ಈಗಾಗಲೆ ಹಾರಂಗಿ-ಕಾವೇರಿ ನದಿಯ ಹೂಳೆತ್ತಲು ಸರಕಾರ […]

ಎಂಎಲ್ ಸಿ ವೀಣಾಅಚ್ಚಯ್ಯರನ್ನು ಪಕ್ಷಕ್ಕೆ ಆಹ್ವಾನಿಸಿದ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಸಮಾಧಾನ

Saturday, October 26th, 2019
madikeri

ಮಡಿಕೇರಿ : ಬಿಜೆಪಿಯಲ್ಲಿ ಕೆಲಸ ಮಾಡುವ ನಾಯಕರ ಕೊರತೆಯಿದ್ದು, ಅದಕ್ಕಾಗಿ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ವೀಕ್ಷಕ ವೆಂಕಪ್ಪ ಗೌಡ ಅವರು ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ನಗರದಲ್ಲಿ ನಡೆದ ಜಿ.ಪಂ.ಸಂಕೀರ್ಣ ಉದ್ಘಾಟನೆ ಸಮಾರಂಭದಲ್ಲಿ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರನ್ನು ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದಾರೆ. […]

ಕೊಡಗಿನಲ್ಲಿ ಭಾರಿ ಮಳೆ ಸಾಧ್ಯತೆ : ರೆಡ್ ಅಲರ್ಟ್ ಘೋಷಣೆ

Thursday, September 5th, 2019
kodagu

ಮಡಿಕೇರಿ : ಇಂದು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬುಧವಾರದಿಂದಲೇ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಅಧಿಕ ಮಳೆಯಾಗುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಶಾಲಾ ಕಾಲೇಜುಗಳಿಗೆ ಇಂದು ರಜೆಯನ್ನು ಘೋಷಿಸಿದ್ದಾರೆ. ಭಾನುವಾರ ಸಂಜೆಯಿಂದಲೂ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಕೊಡಗು ವಿಪತ್ತು ನಿರ್ವಹಣಾ ಆಡಳಿತ ನೀಡಿದ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಗುರುವಾರ 204.5 ಮಿಲಿ ಮೀಟರ್ ಮಳೆಯಾಗಲಿದೆ. ಜೊತೆಗೆ ಮಡಿಕೇರಿ ಹಾಗೂ ಕುಶಾಲನಗರದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ […]

ಕೊಡಗು : ಮಳೆಯ ಆರ್ಭಟಕ್ಕೆ 600ಕ್ಕೂ ಹೆಚ್ಚು ಮಂದಿ ರಕ್ಷಣೆಗೆ ಮೊರೆ

Friday, August 17th, 2018
Kodagu

ಮಡಿಕೇರಿ : ಕಾವೇರಿಯ ತವರು ಕೊಡಗು ಜಿಲ್ಲೆ ಮಳೆಯ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಅಲ್ಲಲ್ಲಿ ಗುಡ್ಡಗಳು ಕುಸಿಯುತ್ತಿದ್ದು ಶಿರಂಗಲಾ, ಮಾಂದಾಲ್ ಪಟ್ಟಿ, ಮುಕ್ಕೊಡ್ಲು,  ಹತ್ತಿಹೊಳೆ, ಕಲ್ಲೂರು, ಮುವತೊಕ್ಲು ಮೊದಲಾದ  ಗುಡ್ಡಪ್ರದೇಶದ ಜನರು  ಜಿಲ್ಲೆಯ ನಡುವೆ ಸಂಪರ್ಕ ಕಡಿತಗೊಂಡಿದ್ದು, ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆ ವಿಳಂಬವಾಗಿದ್ದು, ಜಿಲ್ಲೆಯ ವಿವಿಧೆಡೆ ಅಂದಾಜು 600ಕ್ಕೂ ಹೆಚ್ಚು ಮಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ. ಹಲವರು ಮಣ್ಣಿನ ಅಡಿ ಹಾಗೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಸಾವು– ನೋವು […]

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ, ನ್ಯಾಯಲಯಕ್ಕೆ ಹಾಜರು

Monday, July 23rd, 2018
arrested

ಮಂಗಳೂರು: ಕೊಲೆ, ದರೋಡೆ ಸೇರಿದಂತೆ ವಿವಿಧ 24 ಪ್ರಕರಣಗಳ ಆರೋಪ ಎದುರಿಸುತ್ತಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಂಗಳೂರಿನ ಹನೀಫ್ ಎಂಬಾತನೇ ಬಂಧಿತ ಆರೋಪಿ. ಈತ ತಲಪಾಡಿಯ ಕೆಸಿ ನಗರದ ನಿವಾಸಿಯಾಗಿದ್ದು ನ್ಯಾಯಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಲಾಗಿತ್ತು. ಆರೋಪಿಯನ್ನು ಉಳ್ಳಾಲ ದರ್ಗಾದ ಬಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಮಂಗಳೂರಿನ ಉಳ್ಳಾಲ, ಮಂಗಳೂರು ಉತ್ತರ ಪೊಲೀಸ್ ಠಾಣೆ ಮತ್ತು ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.

ಮಂಗಳೂರು ಐಜಿ ಕಚೇರಿಯ ಡಿವೈಎಸ್ಪಿ ಆತ್ಮಹತ್ಯೆ

Friday, July 8th, 2016
Ganapathi

ಮಂಗಳೂರು : ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈ ಎಸ್ ಪಿಯಾಗಿ ಕೆಲಸ ಮಾಡುತ್ತಿದ್ದ ಕೊಡಗು ಕುಶಾಲನಗರದ ಎಂ ಕೆ ಗಣಪತಿ ಗುರುವಾರ ಸಂಜೆ ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಹೇಳಲಾಗಿದೆ. ಗಣಪತಿ ಅವರನ್ನು ಇತ್ತೀಚೆಗೆ ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಮಾಧ್ಯಮಗಳಿಗೆ ಸಿಕ್ಕಿರುವ ವಿಡಿಯೋ ಒಂದರಲ್ಲಿ ಗಣಪತಿ ಹಿರಿಯ ಅಧಿಕಾರಿಗಳ ಮೇಲೆ ನೇರವಾಗಿ ಆರೋಪ ಮಾಡಿದ್ದು ದಾಖಲಾಗಿದೆ. ಸಬ್ ಇನ್ಸ್ ಪೆಕ್ಟರ್ […]