ಎಕ್ಸಲೆಂಟ್ ಮೂಡಬಿದಿರೆ: ಅಧ್ಯಕ್ಷರಿಗೆ ಶಿಕ್ಷಣ ರತ್ನ ಪ್ರಶಸ್ತಿ

Wednesday, May 12th, 2021
Yuvaraj Jain

ಮೂಡಬಿದಿರೆ: ಜಿನಗಾನ ಸುಧಾ ಬಳಗ ಮತ್ತು ಶ್ರುತಸ್ಕಂಧ (ಕನ್ನಡ ಕಾವ್ಯ) ಬಳಗ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರುತಗಾನ ವೈಭವ ಕೃತಿ ಲೋಕಾರ್ಪಣಾ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಶ್ರದ್ಧೆ, ಶಿಸ್ತು, ಸಹಬಾಳ್ವೆಯನ್ನು ಭೋಧಿಸುತ್ತಿರುವ ನಾಡಿನ ಖ್ಯಾತ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ಮೂಡಬಿದಿರೆಯ ಸಂಸ್ಥಾಪಕಾಧ್ಯಕ್ಷರಾದ ಯುವರಾಜ ಜೈನ್ ಇವರ ಸಾಧನೆಯನ್ನು ಗುರುತಿಸಿ ‘ಶಿಕ್ಷಣ ರತ್ನ’ ಎಂಬ ಅಭಿದಾನವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೂಡಬಿದಿರೆ ಮಹಾಕ್ಷೇತ್ರದ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಭಟ್ಟಾರಕ ಡಾ| ಚಾರುಕೀರ್ತಿ […]

ಪೆರ್ಲರ ‘ಅಮೃತ ಹಂಚುವ ಕೆಲಸ’ ಕೃತಿ ಬಿಡುಗಡೆ

Monday, September 21st, 2020
Perla

ಮಂಗಳೂರು :  ಸಾಹಿತಿ ಡಾ.ವಸಂತಕುಮಾರ್ ಪೆರ್ಲ ‘ಅಮೃತ ಹಂಚುವ ಕೆಲಸ’ ಚಿಂತನ ಮತ್ತು ಸಂಸ್ಕೃತಿ ಸಂಕಥನಗಳನ್ನೊಳಗೊಂಡ ಕೃತಿ ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಂಡಿತು. ಭೂಮಿಗೀತ ಸಾಹಿತ್ಯಿಕ-ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿ ಬಿಡುಗಡೆಗೊಳಿಸಿ, ಸಾಹಿತ್ಯಾಸಕ್ತರು ಕೃತಿಗಳನ್ನು ಖರೀದಿಸಿ ಓದಿದಾಗ, ಲೇಖಕನಿಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಕೃತಿ ಪರಿಚಯ ಮಾಡಿದ ಡಾ.ವಸಂತಕುಮಾರ್ ಪೆರ್ಲ, ಇಂದಿನ ತಲೆಮಾರಿನಲ್ಲಿ ಮರೆಯಾಗುತ್ತಿರುವ ಭಾಷೆ, ಆಚರಣೆ ಮತ್ತು ಜೀವನ ಕ್ರಮಗಳ ಕುರಿತಾದ ಹಲವು […]