ಕೆಎಸ್ಸಾರ್ಟಿಸಿ ನೌಕರರ ಮುಷ್ಕರ : ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್

Wednesday, April 7th, 2021
Ksrtc Bus

ಮಂಗಳೂರು :  ಕೆಎಸ್ಸಾರ್ಟಿಸಿ ನೌಕರರು ಇಂದಿನಿಂದ ಆರಂಭಿಸಿರುವ ಮುಷ್ಕರಕ್ಕೆ ದ.ಕ. ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ನೌಕರರು ಕರ್ತವ್ಯಕ್ಕೆ ಹಾಜರಾಗದ ಕಾರಣ ಬಸ್ ಗಳು ಡಿಪೋದಲ್ಲೇ ಉಳಿದುಕೊಂಡಿವೆ. ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ನೌಕರರು ರಾಜ್ಯ ವ್ಯಾಪಿ ಮುಷ್ಕರ ಆರಂಭಿಸಿದ್ದಾರೆ. ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದ 470ಕ್ಕೂ ಅಧಿಕ ಬಸ್ ಗಳು ಬುಧವಾರ ನಿಲ್ದಾಣದಲ್ಲಿಯೇ ತಂಗಿವೆ. ಈ ನಡುವೆ ಸರಕಾರಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಪ್ರಯಾಣ ಬೆಳೆಸುತ್ತಿರುವುದು ಕಂಡುಬರುತ್ತಿದೆ. ಬಸ್ […]

ಮಂಗಳೂರು : ಸ್ಕೂಟರ್ ಅಡ್ಡಗಟ್ಟಿ ಸರಕಾರಿ ಬಸ್ ಚಾಲಕನಿಗೆ ತಲವಾರಿನಿಂದ ತಿವಿದು ಕೊಲೆ ಯತ್ನ

Friday, March 5th, 2021
Shohif

ಮಂಗಳೂರು : ಸ್ಕೂಟರ್ ಅಡ್ಡವಿಟ್ಟು ಸರಕಾರಿ ಬಸ್ ಚಾಲಕನಿಗೆ ಪಡೀಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ಶುಕ್ರವಾರ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅಡ್ಯಾರ್ ಕಣ್ಣೂರಿನ ಕುಂಡಾಲದ  ಆರೋಪಿ ಸೊಹೀಫ್ (19) ತಂದೆ ಅಬ್ದುಲ್ ಶರೀಪ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಕೃತ್ಯಕ್ಕೆ ಬಳದಸಿದ್ದ ಸ್ಕೂಟರನ್ನು ವಶಪಡಿಸಲಾಗಿದೆ. ಪುತ್ತೂರು ಡಿಪೋ ಕೆಎಸ್ಸಾರ್ಟಿಸಿ ಬಸ್ ಚಾಲಕನಾಗಿದ್ದ ರಾಜು ಗಜಕೋಶ ಅವರನ್ನು ತಡೆದ ಆರೋಪಿಯು ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಮಂಗಳೂರು ಕಡೆಗೆ ಬಸ್ […]

ಮಂಗಳೂರು – ಮಂತ್ರಾಲಯ ಸ್ಲೀಪರ್ ಕ್ಲಾಸ್ ಬಸ್ ಸೇವೆಗೆ ಶಾಸಕ ಡಿ.ವೇದವ್ಯಾಸ ಕಾಮತ್‌ ಚಾಲನೆ

Thursday, January 14th, 2021
Mantralaya Bus

ಮಂಗಳೂರು: ಮಂಗಳೂರಿನಿಂದ ವಿವಿಧ ಮಾರ್ಗಗಳಿಗೆ ನೂತನವಾಗಿ ಬಸ್‌ ಕಾರ್ಯಾಚರಣೆ ಆರಂಭಗೊಂಡಿದ್ದು, ಮಂಗಳೂರಿನಿಂದ ರಾತ್ರಿ 8.50ಕ್ಕೆ ಹೊರಟು ಹಾಸನ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 9 ಗಂಟೆಗೆ ದೇರಳಕಟ್ಟೆ, ಕಾಸರಗೋಡು, ಕೋಜಿಕೋಡ್‌ ಮಾರ್ಗವಾಗಿ ಎರ್ನಾಕುಲಂಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 8.01ಕ್ಕೆ ಕುಂದಾಪುರ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರು ಬಸ್‌ ನಿಲ್ದಾಣದಿಂದ ರಾತ್ರಿ 8.01ಕ್ಕೆ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಮಾರ್ಗವಾಗಿ ರಾಯಚೂರಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರಿನಿಂದ […]

ಉಡುಪಿ : ನರ್ಮ್ ಬಸ್ಸು ತಂಗುದಾಣ ಶೀಘ್ರದಲ್ಲೇ ಆರಂಭ

Saturday, September 14th, 2019
Udupi

ಉಡುಪಿ : ಉಡುಪಿ ಸಿಟಿ ಬಸ್‌ ತಂಗುದಾಣದ ಸಮೀಪ ನರ್ಮ್ ಬಸ್ಸು ತಂಗುದಾಣ ಶೀಘ್ರದಲ್ಲೇ ಆರಂಭವಾಗಲಿದೆ. ಅಕ್ಟೋಬರ್‌ 2017ರಲ್ಲಿ ಇದರ ಕಾಮಗಾರಿ ಆರಂಭವಾಗಿದ್ದು, ಇದೀಗ ಉದ್ಘಾಟನೆಗೆ ಸಜ್ಜುಗೊಂಡಿದೆ. 4 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಕಟ್ಟಡವು ಸುಮಾರು 41 ಸೆಂಟ್ಸ್‌ ಜಾಗದಲ್ಲಿದ್ದು 3 ಅಂತಸ್ತುಗಳನ್ನು ಒಳಗೊಂಡಿದೆ. ಕೆಳಅಂತಸ್ತಿನಲ್ಲಿ 6,814 ಚದರಡಿ ವಿಸ್ತೀರ್ಣ ಹೊಂದಿದೆ. ಮೇಲಿನ ಅಂತಸ್ತು 5,807 ಚದರಡಿ ವಿಸ್ತೀರ್ಣ ಹೊಂದಿದೆ. ಮೊದಲ ಅಂತಸ್ತು 5,637 ಚದರಡಿ ವಿಸ್ತೀರ್ಣ ಹೊಂದಿದೆ. ಕಟ್ಟಡದ ಒಟ್ಟು ವಿಸ್ತೀರ್ಣವು 18,258 […]

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಬಜಪೆ ವಿಮಾನ ನಿಲ್ದಾಣಕ್ಕೆ ವೋಲ್ವೊ ಬಸ್‌ಗಳ ಓಡಾಟಕ್ಕೆ ಅನುಮತಿ

Friday, July 29th, 2011
KSRTC-volvo

ಮಂಗಳೂರು : ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಬಜಪೆ ವಿಮಾನ ನಿಲ್ದಾಣಕ್ಕೆ ವೋಲ್ವೊ ಹವಾನಿಯತ್ರಿತ ಬಸ್‌ಗಳ ಓಡಾಟಕ್ಕೆ ಬುಧವಾರ ದ.ಕ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೆಂಟ್ರಲ್ ರೈಲು ನಿಲ್ದಾಣದವರೆಗೆ ಕಾವೂರು, ಬಜ್ಪೆ, ಕೆಎಸ್ಸಾರ್ಟಿಸಿ, ಲಾಲ್ ಬಾಗ್, ಜ್ಯೋತಿ, ಸೆಂಟ್ರಲ್ ರೈಲು ನಿಲ್ದಾಣ, ಕೆ.ಎಸ್.ರಾವ್ ರೋಡ್, ಪಿವಿಎಸ್ ಸರ್ಕಲ್, ಬಂಟ್ಸ್ ಹಾಸ್ಟೆಲ್ ಸರ್ಕಲ್, ಜ್ಯೋತಿ, ಸೈಂಟ್ ಆಗ್ನೆಸ್, ಮಲ್ಲಿಕಟ್ಟೆ, ನಂತೂರು, ಕೆಪಿಟಿ, ಕಾವೂರು, ಬೊಂದೇಲ್ ಮಾರ್ಗವಾಗಿ ಕೆಎಸ್ಸಾರ್ಟಿಸಿ ಅಥವಾ ಯಾವುದೇ ಖಾಸಗಿ ಹವಾನಿಯಂತ್ರಿತ ಎರಡು […]