ಲಂಚ ಸ್ವೀಕಾರ ಆರೋಪ ಸಾಬೀತು, ಮಂಗಳೂರು ವಿಶ್ವ ವಿಧ್ಯಾನಿಲಯದ ಪ್ರೊಪೆಸರ್ ಗೆ ಐದು ವರ್ಷ ಶಿಕ್ಷೆ

Friday, July 9th, 2021
Anitha Ravishankar

ಮಂಗಳೂರು  : ಲಂಚ ಸ್ವೀಕಾರ ಆರೋಪ ಸಾಭೀತು. ಕೊಣಾಜೆಯ ಮಂಗಳೂರು ವಿಶ್ವ ವಿಧ್ಯಾನಿಲಯದ ಸಮಾಜ ಶಾಸ್ತ್ರದ ಸಹಾಯಕ ಪ್ರೊಪೆಸರ್ ಡಾ. ಅನಿತಾ ರವಿಶಂಕರ್ ಗೆ ಐದು ವರ್ಷ ಶಿಕ್ಷೆ. ದಿನಾಂಕ 04-12-2012ರಂದು ಪ್ರಕರಣದ ಪಿರ್ಯಾದಿ ಪಿ.ಹೆಚ್.ಡಿ. ವಿದ್ಯಾರ್ಥಿನಿ ಪ್ರೇಮ ಡಿ’ಸೋಜ ಎಂಬವರಿಂದ ಅವರ ಪ್ರಭಂದ ಅಂಗೀಕಾರ ಆಗಬೇಕಾದರೆ ಮೈಸೂರಿನಿಂದ ಬರುವ ಬಾಹ್ಯ ಪರಿವೀಕ್ಷಕರ ಖರ್ಚಿನ ಬಾಬ್ತು ರೂ. 16,800/- ಲಂಚದ ಹಣಕ್ಕೆ ಬೇಡಿಕೆ ಇಟ್ಟು ಮುಂಗಡ ಹಣ ರೂ. 5,000/- ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ನಿರೀಕ್ಷಕರಾದ ಉಮೇಶ್ […]

ಕೊಣಾಜೆ : ಇಬ್ರಾಹಿಂ ಕೋಡಿಜಾಲ್ ಮಗನ ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ

Thursday, March 25th, 2021
Gold Theft

ಕೊಣಾಜೆ  : ಮಂಗಳೂರು ವಿವಿ ಕ್ಯಾಂಪಸ್ ಸಮೀಪದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಅಪಾರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಹಾಜಿ ಇಬ್ರಾಹಿಂ ಕೋಡಿಜಾಲ್ ಅವರ ಪುತ್ರ ಹಬೀಬ್ ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಹಬೀಬ್, ಅವರ ಕುಟುಂಬದ ನಾಲ್ಕು ಮಂದಿ ಮನೆಯೊಳಗೆ ಇದ್ದಾಗಲೇ ರಾತ್ರಿ ವೇಳೆಯಲ್ಲಿ ಕಳ್ಳತನ ನಡೆಸಿದ್ದಾರೆ. ಮನೆಯ ಮಹಡಿಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿರುವ ದುಷ್ಕರ್ಮಿಗಳು‌ ಕೋಣೆಯ ಕಪಾಟಿನಲ್ಲಿದ್ದ ಸುಮಾರು 100 […]

ಕೊಣಾಜೆ : ಭಜನಾ ಮಂದಿರದಲ್ಲಿ ಭಗವಾಧ್ವಜ ಹರಿದು ಹಾಕಿ ಕಳ್ಳತನಕ್ಕೆ ಯತ್ನ

Wednesday, January 20th, 2021
Bajana Mandhir

ಮಂಗಳೂರು  : ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲಾರ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ವಿಕೃತಿ ಮೆರೆದಿರುವ ದುಷ್ಕರ್ಮಿಗಳು ಭಗವಾಧ್ವಜ  ಹರಿದು ಹಾಕಿ  ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮಂಗಳವಾರ ಸಂಜೆ ಉಳ್ಳಾಲ ಜಂಕ್ಷನ್ನಿನಲ್ಲಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಮತ್ತು ಬಿಜೆಪಿ ಮುಖಂಡರ ಪತ್ರಿಕೆ ಜಾಹೀರಾತಿನಲ್ಲಿ ಅವಾಚ್ಯ ಪದಗಳನ್ನು ಬರೆದಿರುವ ಪತ್ರ ಇರುವುದು ಪತ್ತೆಯಾಗಿತ್ತು, ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಈ ಕೃತ್ಯ ನಡೆದಿದೆ. ಮಂದಿರದ ಬಾಗಿಲು ಒಡೆಯಲು ಯತ್ನಿಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ […]

ಕೋಟೆಕಾರಿನಿಂದ ಬಾಕ್ರಬೈಲುಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಲಾರಿ ವಶ

Wednesday, January 13th, 2021
cows

ಕೊಣಾಜೆ : ಕೋಟೆಕಾರಿನಿಂದ ಬಾಕ್ರಬೈಲುಗೆ ಜಾನುವಾರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರ ಸಂಜೆ  ಮುಡಿಪು ಸಮೀಪ‌ ನಡೆದಿದೆ. ಕೋಟೆಕಾರಿನಿಂದ ಬಾಕ್ರಬೈಲುಗೆ ಜಾನುವಾರನ್ನು ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಕೊಣಾಜೆ ಪೊಲೀಸರು ಆಗಮಿಸಿ ಲಾರಿ ವಶಪಡಿಸಿಕೊಂಡಿದ್ದಾರೆ‌. ಈ ಬಗ್ಗೆ ಕೊಣಾಜೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಛಾಯಾಗ್ರಾಹಕ ಧರಣೇಶ್ ಕೊಣಾಜೆ ನಿಧನ

Thursday, December 17th, 2020
dharanesh konaje

ಕೊಣಾಜೆ : ಕೊಣಾಜೆ ನಿವಾಸಿ ಛಾಯಾಗ್ರಾಹಕ ಪುತ್ರ ಧರಣೇಶ್ ಕೊಣಾಜೆ (39) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಛಾಯಾಗ್ರಾಹಕರಾಗಿದ್ದ ಧರಣೇಶ್ ಅವರು ದೇರಳಕಟ್ಟೆಯಲ್ಲಿ ಫೋಟೋಸ್ಪಾಟ್ ಎಂಬ  ಸ್ಟುಡಿಯೋ ಹೊಂದಿದ್ದರು. ಹೃದಯ ಸಂಬಂಧಿ ತೊಂದರೆಯ ಹಿನ್ನೆಲೆ ಕಾರಣ ಧರಣೇಶ್‌ ಅವರನ್ನು ಕೆಲವು ದಿನಗಳವರೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಗಂಜಿಮಠದಲ್ಲಿನ ಎಸ್‌ಟಿಡಿ ಬೂತ್‌‌ವೊಂದರಲ್ಲಿ ಕೆಲಸ ಮಾಡುತ್ತಿದ್ದ  ಧರಣೇಶ್ ಪಕ್ಕದಲ್ಲಿ ಸ್ಟುಡಿಯೋ ದಲ್ಲಿ ಛಾಯಾಗ್ರಹಣ ಕಲಿತರು. ಸಂಬಂಧಿಯೋರ್ವರು ಸಹಕಾರದಿಂದ   ದೇರಳಕಟ್ಟೆಯಲ್ಲಿ ಸ್ಟುಡಿಯೋವನ್ನು ತೆರೆದಿದ್ದರು.  ಧರಣೇಶ್‌  ಉತ್ತಮ  ಛಾಯಾಗ್ರಹಣ […]

ಉಳ್ಳಾಲ : ಮರಳು ಸಾಗಾಟ ಲಾರಿ – ಖಾಸಗಿ ಬಸ್ ಮುಖಾಮುಖಿ ಢಿಕ್ಕಿ

Thursday, September 19th, 2019
lorry

ಉಳ್ಳಾಲ : ಮರಳು ಸಾಗಾಟದ ಲಾರಿ ಖಾಸಗಿ ಬಸ್ ಗೆ ಢಿಕ್ಕಿ ಹೊಡೆದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಕಲ್ಕಟ್ಟ ಎಂಬಲ್ಲಿ ಗುರುವಾರ ಮುಂಜಾನೆ ಸಂಭವಿಸಿದೆ‌ . ಘಟನೆಯಲ್ಲಿ ಬಸ್ ನಲ್ಲಿದ್ದವರು ಸಣ್ಣ ಪುಟ್ಟ ಗಾಯಗೊಂಡಿದ್ದು, ಕೆಲಕಾಲ ರಸ್ತೆ ಸಂಚಾರ ಅಡ್ಡಿಯಾಗಿದೆ. ತೌಡುಗೋಳಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಗೆ ವಿರುದ್ದ ದಿಕ್ಕಿನಿಂದ ಹರೇಕಳ ಕಡೆಯಿಂದ ಕೇರಳ ಕಡೆಗೆ ಮರಳು ಸಾಗಾಟ ನಡೆಸುತ್ತಿದ್ದ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದೆ. ಬೆಳಗ್ಗಿನ ಸಮಯವಾದ್ದರಿಂದ ಬಸ್ಸಿನಲ್ಲಿ ಪ್ರಯಾಣಿಕರು ಹೆಚ್ಚಿದ್ದು, ವಿದ್ಯಾರ್ಥಿಗಳು […]

ಖಾಸಗಿ ಬಸ್ಸಿಗೆ ಕೆಎಸ್ ಆರ್ ಟಿ ಸಿ ಬಸ್ ಡಿಕ್ಕಿ..15ಕ್ಕೂ ಹೆಚ್ಚು ಮಂದಿ ಗಾಯ!

Saturday, August 11th, 2018
accident

ಮಂಗಳೂರು: ನಿಂತಿದ್ದ ಖಾಸಗಿ ಬಸ್ಸಿಗೆ ಹಿಂದಿನಿಂದ ಬಂದ ಕೆಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಸೋಮೇಶ್ವರ ಅಡ್ಕ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ. ಕೊಣಾಜೆಯಿಂದ ಮಾಡೂರು ಮಾರ್ಗವಾಗಿ ಮಂಗಳೂರಿನ ಕೊಟ್ಟಾರಕ್ಕೆ ಸಂಚರಿಸುವ ಬಸ್ಸು ಅಡ್ಕ ಬಳಿ ಜನರನ್ನು ಇಳಿಸಲು ನಿಂತಿದ್ದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಲಾರಿಯೊಂದನ್ನು ಓವರ್ ಟೇಕ್ ಮಾಡಿ ಬಂದ ಕಾಸರಗೋಡು ನಿಂದ ಮಂಗಳೂರಿಗೆ ಸಂಚರಿಸುವ ಸರಕಾರಿ ಬಸ್ಸು […]

ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..300 ಗ್ರಾಂ ಗಾಂಜಾ ವಶ!

Tuesday, July 24th, 2018
arrested

ಮಂಗಳೂರು: ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ನಾಟೇಕಲ್ ನಿವಾಸಿ ಮುಹಮ್ಮದ್ ಹನೀಫ್ ಅಲಿಯಾಸ್ ಚೊಟ್ಟೆ ಹನೀಫ್ (33) ಬಂಧಿತ ಆರೋಪಿ. ಬಂಧಿತನಿಂದ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಅಬ್ದುಲ್ ಅಜೀಝ್ ಎಂಬಾತನ ಸಹಚರನಾಗಿದ್ದು, ಈತನ ವಿರುದ್ಧ ಮಂಗಳೂರಿನ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕಾರ್ಯಾಚರಣೆಯಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕ ಅಶೋಕ್ ಪಿ., ಎಸ್ಐ ರವಿ ಪವಾರ್, ಸಿಬ್ಬಂದಿಗಳಾದ ಅಶೋಕ್ ಕುಮಾರ್, […]

ಈಜು ಕೊಳದ ನೀರಿನಲ್ಲಿ ಮುಳುಗಿ ಯುವಕ ಮೃತ್ಯು..!

Monday, July 23rd, 2018
swimming-fool

ಮಂಗಳೂರು: ಕೊಣಾಜೆ ಠಾಣೆ ವ್ಯಾಪ್ತಿಯ ಮೊಂಟೆಪದವು ಬಳಿಯ ಗುದ್ರು ಎಂಬಲ್ಲಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ. ಮೃತರನ್ನು ಉಳ್ಳಾಲ ಅಳೇಕಲದ ಖಲೀಲ್ (30) ಎಂದು ಗುರುತಿಸಲಾಗಿದೆ. ಇಂದು ಸಂಜೆ ಉಳ್ಳಾಲ ಅಳೇಕಲದ ಐದು ಮಂದಿ ಯುವಕರ ತಂಡ ಮೊಂಟೆಪದವಿನ ಗುದ್ರುವಿನಲ್ಲಿರುವ ಈಜು ಕೊಳದಲ್ಲಿ ಆಟವಾಡುತಿದ್ದ ಸಂದರ್ಭ ಖಲೀಲ್ ನೀರಿನಲ್ಲಿ ಮುಳುಗಿದ್ದು ತಕ್ಷಣಕ್ಕೆ ಯಾರ ಅರಿವಿಗೂ ಬಂದಿರಲಿಲ್ಲ ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿಯೇ ಖಲೀಲ್ ಅವರನ್ನು ಹುಡುಕುವ ಯತ್ನ ನಡೆದಿದ್ದು, ಸುಮಾರು ಅರ್ಧ ತಾಸಿನ […]

ಕೊಣಾಜೆಕಲ್ಲಿಗೆ ಎನ್‍ಸಿಸಿ ಚಾರಣ

Saturday, December 16th, 2017
Alwas-truck

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಆವರಣದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಭಾವೈಕ್ಯ ಶಿಬಿರಕ್ಕೆ ಪೂರಕವಾಗಿ ಮೂಡುಬಿದಿರೆ ಸಮೀಪದ ಕೊಣಾಜೆಕಲ್ಲಿಗೆ ಚಾರಣವನ್ನು ಹಮ್ಮಿಕೊಳ್ಳಲಾಯಿತು. ದೇಶದ ವಿವಿಧ ರಾಜ್ಯಗಳಿಂದ ಬಂದಂತಹ 600 ಮಂದಿ ಎನ್‍ಸಿಸಿ ಕೆಡೆಟ್‍ಗಳು ಎನ್‍ಸಿಸಿ ಶಿಬಿರ ಅಧಿಕಾರಿಗಳು, ವಿವಿಧ ವಿಭಾಗಗಳ ಪದಾಧಿಕಾರಿಗಳು ಹಾಗೂ ಯೋಧರ ಜೊತೆಗೂಡಿ ಔದಲ್ ಜಂಕ್ಷನ್‍ನಿಂದ ಕೊಣಾಜೆಕಲ್ಲು ಬೆಟ್ಟದವರೆಗೆ ಸುಮಾರು 5 ಮೀ ದೂರವನ್ನು ಕ್ರಮಿಸಿದರು.