ತಮ್ಮಎಂದು ನಂಬಿದ್ದವನಿಂದ ಅಶ್ಲೀಲ ಮೆಸೇಜ್ : ಮಹಿಳೆಯಿಂದ ಚಪ್ಪಲಿ ಏಟು

Tuesday, March 16th, 2021
Tanda

ಕೊಪ್ಪಳ: ತಮ್ಮ ಎಂದು ಸಲುಗೆ ಕೊಟ್ಟಿದ್ದ ಮಹಿಳೆಗೆ ಯುವಕನೊಬ್ಬ ಅಶ್ಲೀಲ ಮೆಸೇಜ್  ಕಳುಹಿಸಿ ಚಪ್ಪಲಿ ಏಟು ತಿಂದ ಘಟನೆ ಕೊಪ್ಪಳದ  ಜಿಲ್ಲಾ ಆಸ್ಪತ್ರೆ ಮುಂಭಾಗ  ನಡೆದಿದೆ. ಚಪ್ಪಲಿ ಏಟು ತಿಂದ ಯವಕನನ್ನು ಕೊಪ್ಪಳ ತಾಲೂಕಿನ ನರೇಗಲ್ ನಿವಾಸಿ ವೀರಯ್ಯ ಎಂದು ಗುರುತಿಸಲಾಗಿದೆ. ವೀರಯ್ಯ ಅವನಿಗಿಂತ ದೊಡ್ಡವಳು, ಅದರಲ್ಲೂ ಮದುವೆಯಾಗಿರೋ ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ. ಪದೇ ಪದೇ ಮೊಬೈಲ್ ಗೆ ಅಶ್ಲೀಲ ಸಂದೇಶದ ಜೊತೆಗೆ ನಾನು ಅವಳನ್ನ ಲವ್ ಮಾಡ್ತೀನಿ ಎಂದೂ ಊರವರ ಮುಂದೆ ಹೇಳಿಕೊಂಡಿದ್ದನು. ಹೀಗಾಗಿ ರೊಚ್ಚಿಗೆದ್ದ ಮಹಿಳೆ ವೀರಯ್ಯನನ್ನು […]

ಪ್ರೀತಿಸಿ ಮದುವೆಯಾಗಿದ್ದ ಜೋಡಿಗೆ ರಾಡ್ ನಿಂದ ಹಲ್ಲೆ, ಪತ್ನಿ ಸಾವು, ಪತಿ ಗಂಭೀರ

Sunday, October 18th, 2020
Triveni Vinod

ಕೊಪ್ಪಳ: ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ ಅಪರಿಚಿತರು ದಾಳಿ ನಡೆಸಿ ಪತ್ನಿ ಸಾವನ್ನಪ್ಪಿದ್ದು, ಗಂಭೀರಾವಾಗಿ ಗಾಯಗೊಂಡಿರುವ ಪತಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಆರು ತಿಂಗಳ ಹಿಂದೆ  ಪ್ರೀತಿಸಿ ಮದುವೆಯಾಗಿದ್ದ ಜೋಡಿ ಮೇಲೆ  ಈ ರೀತಿ ಭಯಾನಕ ದಾಳಿ ನಡೆದಿದೆ. ಘಟನೆಯಲ್ಲಿ ತ್ರಿವೇಣಿ (35) ಸ್ಥಳದಲ್ಲಿ ಮೃತರಾಗಿದ್ದು, ಪತಿ ವಿನೋದ್ (30) ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಿವಾಸಿಯಾಗಿದ್ದ ದಂಪತಿ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಬ್ಯಾಂಕ್ ಉದ್ಯೋಗಿಗಳಾಗಿದ್ದು, ಕಾರಟಗಿಯಲ್ಲಿ ವಾಸವಾಗಿದ್ದರು. […]

ಕೆ.ಜಿ.ಹಳ್ಳಿ ಗಲಭೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಕೊಪ್ಪಳದಲ್ಲಿ ಪತ್ರ ಚಳುವಳಿ

Wednesday, August 12th, 2020
koppala

ಕೊಪ್ಪಳ: ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದಕ್ಕೆ  ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯ ಮೇಲೆ ಕಲ್ಲುಎಸೆದು ಹಿಂಸಾಚಾರ ಮಾಡಿದ್ದಲ್ಲದೆ ಅಲ್ಲಿದ್ದ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್ ಬುಧವಾರ ಪತ್ರ ಚಳುವಳಿ ನಡೆಸಿತು. ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ, ಸಮಾಜದ ಏಳಿಗೆಗಾಗಿ ಪತ್ರಕರ್ತರು ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಕರ್ತವ್ಯ ನಿರತ ಪತ್ರಕರ್ತರ ಮೇಲೆ ಎಲ್ಲೆಡೆ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಬೆಂಗಳೂರಿನಲ್ಲಿ ನಡೆದ ಹಲ್ಲೆಯೂ ತೀವ್ರ ನೋವಿನ ಸಂಗತಿ. ಪತ್ರಕರ್ತರ ಮೇಲೆ ಹಲ್ಲೆ ಮಾಡಿದ […]

ಕೊಪ್ಪಳ : ಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಬಲಿ

Wednesday, August 28th, 2019
koppala

ಕೊಪ್ಪಳ : ಕನಕಗಿರಿ ತಾಲೂಕಿನ ನವಲಿ ಎಂಬ ಗ್ರಾಮದಲ್ಲಿ ಮರಳಿನ ದಿಬ್ಬವೊಂದು ಮೂವರು ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಮೃತಪಟ್ಟಿರುವ ಮಕ್ಕಳನ್ನು ಐದು ವರ್ಷದ ಸೋನಂ, ಮೂರು ವರ್ಷದ ಸವಿತಾ ಹಾಗೂ ಎರಡು ವರ್ಷದ ಕವಿತಾ ಎಂದು ಗುರುತಿಸಲಾಗಿದೆ. ಇವರ ಜೊತೆಯಲ್ಲಿ ಆಟವಾಡಿಕೊಂಡಿದ್ದ ರೋಷನ್, ಕಿರಣ್ ಮತ್ತು ಬಾಬು ಎಂಬ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟವರನ್ನು ಮಹಾರಾಷ್ಟ್ರ ಕಡೆಯಿಂದ ಇಟ್ಟಿಗೆ ಫ್ಯಾಕ್ಟರಿ ಕೆಲಸಕ್ಕಾಗಿ ಇಲ್ಲಿಗೆ ಆಗಮಿಸಿದ್ದ ಕುಟುಂಬಕ್ಕೆ ಸೇರಿದ ಮಕ್ಕಳು ಎಂದು ಗುರುತಿಸಲಾಗಿದೆ. ಆಟವಾಡುತ್ತಾ ಮರಳಿನ ಗುಡ್ಡದೊಳಗೆ ಮಕ್ಕಳು […]

ಶ್ರೀರಾಮುಲುಗೆ “ಕೈ” ತಪ್ಪಿದ ಡಿಸಿಎಂ ಹುದ್ದೆ, ಕೊಪ್ಪಳದಲ್ಲಿ ಬೆಂಕಿ

Tuesday, August 27th, 2019
sriramulu

ಕೊಪ್ಪಳ : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದ ಬೆನ್ನಲ್ಲೇ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಹುದ್ದೆ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಶ್ರೀರಾಮುಲು ಅಭಿಮಾನಿಗಳು ಕೊಪ್ಪಳ, ಬಳ್ಳಾರಿಯಲ್ಲಿ ಬೆಂಕಿಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ಕೊಪ್ಪಳದ ಕನಕಗಿರಿಯಲ್ಲಿ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್, ಬಿಜೆಪಿ ವರಿಷ್ಠ ಅಮಿತ್ ಶಾ ಅವರ ಭಾವಚಿತ್ರಕ್ಕೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶ್ರೀರಾಮುಲು […]

ಎಂಟು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿದ ತಂದೆ

Thursday, May 30th, 2019
laxmana

ಮಂಗಳೂರು :  ತಂದೆಯೇ ಎಂಟು ತಿಂಗಳ ಹೆಣ್ಣು ಮಗುವನ್ನು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನ ಬೋಳಾರ ಸಮೀಪ ನೇತ್ರಾವತಿ ನದಿ ದಡದಲ್ಲಿ ಸೋಮವಾರ ಮೇ 27ರಂದು ಎಂಟು ತಿಂಗಳ ಹೆಣ್ಣು ಮಗುವಿನ ಮೃತದೇಹ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಂದೆ, ಕೊಪ್ಪಳ ಮೂಲದ ಲಕ್ಷ್ಮಣ ತೆಂಗಿನಹಾಳ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ ತೆಂಗಿನಹಾಳ ಮತ್ತು ರೂಪಾ ದಂಪತಿ ಬೋಳಾರದಲ್ಲಿರುವ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ತಾತ್ಕಾಲಿಕ ಶೆಡ್ ‌ನಲ್ಲಿ ಮಗುವಿನೊಂದಿಗೆ ವಾಸವಾಗಿದ್ದರು. […]

ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮನ..!

Tuesday, July 31st, 2018
dakshina-kannada

ಮಂಗಳೂರು: ಕಳೆದ ಕೆಲ ದಿನಗಳಿಂದ ಕರಾವಳಿಯಲ್ಲಿ ಮಳೆರಾಯ ಕೊಂಚ ಬಿಡುವು ಪಡೆದಿದ್ದಾನೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಈಗಾಗಲೇ ಭತ್ತದ ನಾಟಿ ಆರಂಭವಾಗಿದ್ದು, ಜಿಲ್ಲೆಯ ಹಲವೆಡೆ ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಪರಿಣಾಮ ಕೃಷಿಕರು ಕೈಚೆಲ್ಲಿ ಕೂತಿದ್ದಾರೆ. ಆದರೆ ಈ ನಡುವೆ ದೂರದ ಕೊಪ್ಪಳದ ಗಂಗಾವತಿಯಿಂದ ಕೃಷಿ ಕಾರ್ಮಿಕರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದೆ. 125 ಕೃಷಿ ಕಾರ್ಮಿಕರ ಈ ತಂಡ ಮಂಗಳೂರು ತಾಲೂಕಿನ ಬಜಪೆ ಪರಸರದಲ್ಲಿ ಬೀಡು ಬಿಟ್ಟಿದ್ದು, […]

ಒಪ್ಪಂದದಂತೆ ನಾವು ಐದು ವರ್ಷ ಸರ್ಕಾರ ಮಾಡೇ‌ ಮಾಡ್ತೀವಿ: ಡಾ.‌ ಜಿ. ಪರಮೇಶ್ವರ್

Wednesday, June 27th, 2018
d-g-parameshwar

ಕೊಪ್ಪಳ: ಒಪ್ಪಂದದಂತೆ ನಾವು ಐದು ವರ್ಷ ಸರ್ಕಾರ ಮಾಡೇ‌ ಮಾಡ್ತೀವಿ ಎಂದು ಉಪಮುಖ್ಯಮಂತ್ರಿ ಡಾ.‌ ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೆಎಸ್ಆರ್ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ನಾವು ಐದು ವರ್ಷ ಸರ್ಕಾರ ಮಾಡ್ತಿವಿ ಎಂದು ಒಪ್ಪಂದ ಮಾಡಿಕೊಂಡಿದ್ದೇವೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಹೈಕಮಾಂಡ್ ಸೂಚನೆಯಂತೆ ಸಮ್ಮಿಶ್ರ ಸರ್ಕಾರ 5 ವರ್ಷ ಕಂಪ್ಲೀಟ್ ಮಾಡುತ್ತದೆ. ಸರ್ಕಾರ ಬೀಳಿಸುವ ಕುರಿತು ಯಾರೇ ಮಾತನಾಡಿದರೂ ಸಹ ಅದು ಅಪ್ರಸ್ತುತ. ಒಪ್ಪಂದದಂತೆ ಐದು ವರ್ಷ […]

ಕೊಪ್ಪಳ ಜಿಲ್ಲೆಯಲ್ಲೂ ಅಬ್ಬರಿಸಿದ ಮಳೆರಾಯ… ಹಲವೆಡೆ ಅವಾಂತರ

Wednesday, May 30th, 2018
kopal-dst

ಕೊಪ್ಪಳ: ಜಿಲ್ಲೆಯಾದ್ಯಂತ ಮಳೆರಾಯ ನಿನ್ನೆ ರಾತ್ರಿ ಅಬ್ಬರಿಸಿದ್ದು, ವ್ಯಾಪಕ ಮಳೆಗೆ ಜಿಲ್ಲೆಯ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಸುಮಾರು ಗಂಟೆಗಳ ಕಾಲ ಸುರಿದ ಮಳೆಗೆ ತಗ್ಗುಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಜನಜೀವನ ಒಂದಿಷ್ಟು ಅಸ್ತವ್ಯಸ್ಥಗೊಂಡಿದೆ. ಇನ್ನು ಕೆಲವೆಡೆ ಹಳ್ಳಗಳಿಗೆ ನಿರ್ಮಿಸಲಾಗಿರುವ ತಾತ್ಕಾಲಿಕ ಸೇತುವೆಗಳು ಒಡೆದು ಹೋಗಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಕುಕನೂರು ತಾಲೂಕಿನ ಬಿನ್ನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಸುಮಾರು 18 ಕಿಮೀ ಹೆಚ್ಚು ದೂರ ಸುತ್ತಿಕೊಂಡು ಬೇರೆ ಬೇರೆ ಊರುಗಳಿಗೆ ತೆರಳಬೇಕಿದೆ. ಶಿರೂರು […]

ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಮನಸೋಇಚ್ಛೆ ಥಳಿಸಿದ ಪಿಎಸ್‌ಐ

Friday, January 5th, 2018
signal-jump

ಕೊಪ್ಪಳ: ಸಿಗ್ನಲ್ ಜಂಪ್ ಮಾಡಿದರು ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು ಠಾಣೆಗೆ ಕರೆತಂದು ಪಿಎಸ್‌ಐ ಒಬ್ಬರು ಮನಸೋಇಚ್ಛೆ ಥಳಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗವಿಮಠ ಜಾತ್ರೆಗೆಂದು ಕೊಪ್ಪಳಕ್ಕೆ ಆಗಮಿಸಿದ್ದ ಇಬ್ಬರು ಯುವಕರು ಆತುರದಲ್ಲಿ ಸಿಗ್ನಲ್ ಜಂಪ್ ಮಾಡಿದ್ದಾರೆ, ಅಲ್ಲೇ ಇದ್ದ ಪೊಲೀಸರು ಯುವಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅವರ ಮೇಲೆ ದೌರ್ಜನ್ಯ ನಡೆಸಿರುವ ಪ್ರಬೋಷೆನರಿ ಪಿಎಸ್‌ಐ ಒಬ್ಬರು ಯುವಕರನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಪಿಎಸ್‌ಐ ಅವರು ಯುವಕರನ್ನು ಹೊಡೆಯುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಈಗ […]