ಕೋಡಿಕಲ್ ಮತ್ತು ಕೂಳೂರಿನಲ್ಲಿ ನಾಗಬನಗಳನ್ನು ಧ್ವಂಸಗೈದ ಎಂಟು ಮಂದಿ ಬಂಧನ

Saturday, November 27th, 2021
Nagabana Accuced

ಮಂಗಳೂರು : ನಗರದ ಕೋಡಿಕಲ್ ಮತ್ತು ಕೂಳೂರಿನಲ್ಲಿ ನಾಗಬನಗಳನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾವೂರಿನ ಸಫ್ವಾನ್, ಸುಹೈಬ್, ಪ್ರವೀಣ್ ಅನಿಲ್ ಮೊಂತೇರೊ, ನಿಖಿಲೇಶ್, ಜಯಕುಮಾರ್, ಪ್ರತೀಕ್, ಮಂಜುನಾಥ್ ಮತ್ತು ನೌಶಾದ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅವರ ಪತ್ತೆಗೂ ಕಾರ್ಯಾಚರಣೆ ಮುಂದುವರಿದಿದೆ ಎಂದು  ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು. ಈ ಪ್ರಕರಣದ […]

ನಾಗ ದೇವರ ಕಲ್ಲನ್ನು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ

Friday, November 19th, 2021
vishwas kumar das

ಮಂಗಳೂರು  : ಮಂಗಳೂರಿನ ಕೋಡಿಕಲ್ ನಲ್ಲಿ ನಾಗ ಬನದ ನಾಗ ದೇವರ ಕಲ್ಲನ್ನು ದುಷ್ಕರ್ಮಿಗಳು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಸ್ಥಾನ ಮತ್ತು ದೇವಸ್ಥಾನ ಕಾಣಿಕೆ ಡಬ್ಬಿಗಳಿಗೆ ಕಾಂಡೊಮ್ ಹಾಕುವುದು ಮತ್ತು ಇನ್ನಿತರ ದುಷ್ಕೃತ್ಯಗಳನ್ನು ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದೆ. ನಗರ ಪೊಲೀಸ್ ಉಪ ಆಯುಕ್ತ ರವರಿಗೆ ಕೆಪಿಸಿಸಿ ಸಂಯೋಜಕ ಇಂಟಕ್ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ […]

ಕೋಡಿಕಲ್ ನಾಗಬ್ರಹ್ಮ ದೇವಸ್ಥಾನದ ನಾಗನ ಕಲ್ಲನ್ನು ಹೊರಗೆ ಎಸೆದು ದುಷ್ಕೃತ್ಯ

Saturday, November 13th, 2021
Kodikal-Naga

ಮಂಗಳೂರು : ನಗರದ ಕೋಡಿಕಲ್ ನ ನಾಗಬ್ರಹ್ಮ ದೇವಸ್ಥಾನದ ನಾಗನ ಕಲ್ಲನ್ನು ದುಷ್ಕರ್ಮಿಗಳು ಹೊರಗಡೆ ಎಸೆದು ಧ್ವಂಸ ಮಾಡಿದ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಶನಿವಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ಕಾರ್ಯಕರ್ತರು ಹಾಗು ಸ್ಥಳೀಯರು ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ. ಸುದ್ದಿ ತಿಳಿದ ಶಾಸಕ ಡಾ.ಭರತ್ ಶೆಟ್ಟಿ ವೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  ವಿಶೇಷ ತಂಡ ರಚಿಸಿ ಪ್ರಕರಣ ಭೇದಿಸುವಂತೆ ಶಾಸಕರು ಪೊಲೀಸ್ ಅಧಿಕಾರಿಗಳಿಗೆ […]

ಕೋಡಿಕಲ್: ರೌಡಿ ನಿಗ್ರಹ ದಳದ ಪೊಲೀಸರಿಂದ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯ ಬಂಧನ

Tuesday, October 31st, 2017
ganja

ಮಂಗಳೂರು:ಮಂಗಳೂರು ರೌಡಿ ನಿಗ್ರಹ ದಳದ ಪೊಲೀಸರು ನಗರದ ವಿವಿಧೆಡೆ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತನನ್ನು ಗುರುಪುರ ನಿವಾಸಿ ಮೊಹಮ್ಮದ್ ಶಕೀರ್ (23)ಎಂದು ಗುರುತಿಸಲಾಗಿದೆ. ನಗರದ ಕೋಡಿಕಲ್ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರೌಡಿ ನಿಗ್ರಹ ದಳದ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಕೋಡಿಕಲ್ ನ 10 ನೇ ಕ್ರಾಸ್ ಬಳಿ ಆರೋಪಿ ಮೊಹಮ್ಮದ್ ಶಕೀರ್ ನನ್ನು ಬಂಧಿಸಲಾಗಿದೆ. ಬಂಧಿತನಿಂದ 1.8 ಕೆಜಿ ಗಾಂಜಾ, 2 ಮೊಬೈಲ್, ಒಂದು […]