ಪತ್ರಕರ್ತರು ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು : ಗಣೇಶ್ ಕಾಸರಗೋಡು

Sunday, July 3rd, 2016
Ganesh Kasaragod

ಕಾಸರಗೋಡು : ವಸ್ತುನಿಷ್ಠ ವರದಿಯನ್ನು ನೀಡುತ್ತಾ ಪತ್ರಿಕಾರಂಗಕ್ಕೆ ಶೋಭೆ ತರುವ ಜೊತೆಗೆ ವ್ಯಕ್ತಿತ್ವವನ್ನು ಯುವ ಪತ್ರಕರ್ತರು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಿನಿಮಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು. ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ ಕನ್ನಡ ಪತ್ರಿಕಾ ದಿನಾಚರಣೆಯನ್ನು ದೀಪ ಬೆಳಗಿಸಿ ಅವರು ಮಾತನಾಡುತ್ತಿದ್ದರು. ಗಡಿನಾಡಿನಲ್ಲಿ […]

ದೆಹಲಿಯಲ್ಲಿ ಡೀಸೆಲ್ ಕಾರು ಬ್ಯಾನ್

Friday, December 11th, 2015
diesel car

ನವದೆಹಲಿ: ದೆಹಲಿಯಲ್ಲಿ ಹೆಚ್ಚಾದ ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಇನ್ಮುಂದೆ ಹೊಸ ಡೀಸೆಲ್ ಕಾರುಗಳ ನೋಂದಣಿ ಬೇಡ. ಅಲ್ಲದೇ 10 ವರ್ಷಗಳ ಹಳೆಯ ಡೀಸೆಲ್ ಕಾರುಗಳನ್ನು ನಿಷೇಧಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಪೀಠ ಶುಕ್ರವಾರ ಆದೇಶ ಹೊರಡಿಸುವ ಮೂಲಕ ಸೂಚನೆ ನೀಡಿದೆ. ಸರ್ಕಾರ ಕೂಡ ತಮ್ಮ ಇಲಾಖೆಗಳಿಗಾಗಿ ಡೀಸೆಲ್ ವಾಹನಗಳನ್ನು ಖರೀದಿಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನ ನೀಡಿದೆ. ಹೊಸ ಡೀಸೆಲ್ ವಾಹನಗಳನ್ನು ಖರೀದಿಸಬಾರದು. ಹೊಸ ಡೀಸೆಲ್ ಕಾರುಗಳ ನೋಂದಣಿಯೂ […]