ಮಂಗಳೂರು ಅದಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಯೋಗಗಳಿಂದ ಸ್ಥಳೀಯರು ಹೊರಕ್ಕೆ

Monday, October 11th, 2021
Adani Airport

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ವಹಿಸಿದ ಬಳಿಕ ವಿಮಾನ ನಿಲ್ದಾಣದ ಗುತ್ತಿಗೆ ಕಂಪೆನಿಗಳ ಅಡಿ ದುಡಿಯುತ್ತಿದ್ದ ಸ್ಥಳೀಯ ಕಾರ್ಮಿಕರನ್ನು ಹಲವು ನೆಪಗಳನ್ನು ಮುಂದಿಟ್ಟು ಕೈ ಬಿಡಲಾಗುತ್ತಿದೆ. ಹೊರ ರಾಜ್ಯದ ಗುತ್ತಿಗೆ ಕಾರ್ಮಿಕರ ಸೇರ್ಪಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ಅಗ್ನಿಶಾಮಕ ದಳಕ್ಕೆ ಅದಾನಿ ಕಂಪೆನಿ ನೇರ ನೇಮಕಾತಿ ಮಾಡಬೇಕಿದ್ದು, 80 ಸಿಬ್ಬಂದಿಗಳ ನೇಮಕಾತಿಯ ಅಗತ್ಯ ಇದ್ದರೂ ಸದ್ಯ 20 ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿ ಆಘಾತಕಾರಿ ಸಂಗತಿಯೆಂದರೆ SSLC […]

ಗುತ್ತಿಗೆ ಕಾರ್ಮಿಕರಿಗೆ ಮೋದಿಗೆ ವೋಟ್​ ಹಾಕ್ತೀರಾ, ಸಮಸ್ಯೆಗೆ ನಮ್ಮನ್ನ ಕೇಳ್ತೀರಾ ಎಂದ ಕುಮಾರಸ್ವಾಮಿ

Wednesday, June 26th, 2019
Kumara Swamy

ರಾಯಚೂರು : ಕರೆಗುಡ್ಡ ಗ್ರಾಮಕ್ಕೆ ತೆರಳುವಾಗ ವೈಟಿಪಿಎಸ್ ಮತ್ತು ತುಂಗಭದ್ರಾ ಹಂಗಾಮಿ ಗುತ್ತಿಗೆ ಕಾರ್ಮಿಕರು ಸಿಎಂ ಕುಮಾರಸ್ವಾಮಿ ಬಸ್ಗೆ ಮುತ್ತಿಗೆ ಹಾಕಿದರು. ಈ ವೇಳೆ, ಸಿಎಂ ಪ್ರತಿಭಟನಾ ನಿರತರ ಮೇಲೆ ಗರಂ ಆದರು. ಪ್ರತಿಭಟನಾಕಾರರ ಹೋರಾಟ ಹತ್ತಿಕ್ಕಲು ಪೊಲೀಸರು ಮುಂದಾದರು. ಈ ವೇಳೆ, ಪ್ರತಿಭಟಾನಾಕಾರರು ಹಾಗೂ ಪೊಲೀಸರ ಮಧ್ಯೆ ನೂಕು ನುಗ್ಗಲು ಉಂಟಾಗಿ ಸುಮಾರು 20 ನಿಮಿಷಗಳ ಕಾಲ ಬಸ್ ಅಲ್ಲಿಯೇ ನಿಂತಿತ್ತು. ಈ ವೇಳೆ ಮೋದಿಗೆ ವೋಟ್ ಹಾಕ್ತೀರಾ. ಇಲ್ಲಿ ಬಂದು ನಮ್ಮನ್ನ ಕೇಳ್ತೀರಾ ಎಂದು […]

ತಲೆಮೇಲೆ ಪೈಪ್​ ಬಿದ್ದು ಎಂಆರ್‌ಪಿಎಲ್‌ ಗುತ್ತಿಗೆ ಕಾರ್ಮಿಕ ಸಾವು

Monday, May 6th, 2019
mrpl vakil kumar

ಮಂಗಳೂರು : ನಗರದ ಎಂಆರ್‌ಪಿಎಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿಗೆ ಕಾರ್ಮಿಕ ಒಬ್ಬನ ಮೇಲೆ ಪೈಪ್‌ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಉತ್ತರಪ್ರದೇಶದ ಕುಶಿನಗರ ಮೂಲದ ಹಾಗೂ ಪ್ರಸ್ತುತ ಜೋಕಟ್ಟೆ ನಿವಾಸಿಯಾದ ವಕೀಲ್‌ಕುಮಾರ್ (37) ಮೃತ ಕಾರ್ಮಿಕ. ಕುತ್ತೆತ್ತೂರು ಎಂಆರ್‌ಪಿಎಲ್‌ನಲ್ಲಿ ‘ಆಕಾಶ್ ಇಂಜಿನಿಯರಿಂಗ್’ ಎಂಬ ಗುತ್ತಿಗೆ ಕಂಪನಿಯಲ್ಲಿ ಶೆಡೌನ್ ಕೆಲಸಕ್ಕೆ ನಿರ್ವಹಿಸುತ್ತಿದ್ದ ವಕೀಲ್ ಕುಮಾರ್ ಶನಿವಾರ 12:30ಕ್ಕೆ ಪಿಪಿಪಿಎಫ್‌ಸಿಸಿ ಯೂನಿಟ್‌ನಲ್ಲಿ ಕೆಲಸ ನಿರ್ವಹಿಸುವ ವೇಳೆ ಪೈಪ್‌ವೊಂದು ತುಂಡಾಗಿ ಅವರ ತಲೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅವರನ್ನು […]

ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆ

Tuesday, January 10th, 2017
bsnl protest

ಬಂಟ್ವಾಳ: ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸವಲತ್ತು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬಿಎಸ್ಸೆನ್ನೆಲ್ ನಾನ್ ಪರ್ಮನೆಂಟ್ ವರ್ಕಸ್ ಫೆಡರೇಶನ್ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾರ್ಮಿಕರು ಜನವರಿ 12ರಿಂದ ಮಂಗಳೂರು ಕೇಂದ್ರ ಕಾರ್ಮಿಕ ಆಯುಕ್ತರ ಕಚೇರಿ ಮುಂಭಾಗ ಅನಿರ್ದಿಷ್ಠಾವಧಿವರೆಗೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸೋಮವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಫೆಡರೇಶನ್‌ನ ಅಧ್ಯಕ್ಷ ಮುಹಮ್ಮದ್ […]