ಗುರುಪುರದಲ್ಲಿ ಗುಡ್ಡ ಕುಸಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ

Sunday, July 5th, 2020
gurupura death

ಮಂಗಳೂರು : ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಗುಡ್ಡ ಕುಸಿದು ಮಕ್ಕಳಿಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ಧನ ಘೋಷಿಸಿದ್ದಾರೆ. ತಲಾ 5 ಲಕ್ಷ ರೂಪಾಯಿ ಪರಿಹಾರ ಧನ ಘೋಷಣೆ ಮಾಡಿದ್ದು, ಪರಿಹಾರ ಧನ ನೀಡುವಂತೆ ದ.ಕ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಗುಡ್ಡ ಪ್ರದೇಶದಲ್ಲಿದ್ದ 19 ಮನೆಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಬೇರೆ ಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಗುರುಪುರ ಬಳಿ ಗುಡ್ಡ ಕುಸಿದು ನಾಲ್ಕು ಮನೆಗಳು ನೆಲಸಮ, ಮಣ್ಣಿನಡಿ ಸಿಲುಕಿರುವ ಇಬ್ಬರು ಮಕ್ಕಳು

Sunday, July 5th, 2020
gurupura landslid

ಮಂಗಳೂರು: ನಿರಂತರವಾಗಿ ಸುರಿದ ಮಳೆಯ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ ಬಂಗ್ಲಗುಡ್ಡೆ ಬಳಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಘಟನೆ ರವಿವಾರ ನಡೆದಿದೆ. ನಾಲ್ಕು ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇಬ್ಬರು ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಇನ್ನೂ ಎಂಟು ಮನೆಗಳು ಅಪಾಯದಲ್ಲಿದೆ. ಗುಡ್ಡ ಇನ್ನೂ ಕುಸಿಯುತ್ತಿದೆ ಎನ್ನಲಾಗಿದೆ. ತೆಂಗಿನ ಮರ ಸೇರಿದಂತೆ ಕೆಲವು ಮರಗಳು ಮಣ್ಣಿನ ಜೊತೆಗೆ ಕುಸಿದು ಬಿದ್ದಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿದ್ದು, ಸಿಲುಕಿರುವವರ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ. […]

ಮಂಗಳೂರು : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

Friday, October 18th, 2019
Pairoz

ಮಂಗಳೂರು : ಮಂಗಳೂರು ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿ ಇರುವ ಪೆಟ್ರೋಲ್ ಪಂಪ್ ಎದುರು ಸಾರ್ವಜನಿಕ ಸ್ಥಳದಲ್ಲಿ ಗುರುವಾರದಂದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗುರುಪುರ ಕೈಕಂಬದ ನಿವಾಸಿ ಮಹಮ್ಮದ್ ಪೈರೋಜ್ (23) ಎಂದು ಗುರುತಿಸಲಾಗಿದ್ದು, ಇತನಿಂದ ಸುಮಾರು 127 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನನ್ನು ವಶಕ್ಕೆ ಪಡೆಯಲಾಗಿದೆ.    

ಜ.19 ಮತ್ತು 20ರಂದು ಗುರುಪುರದಲ್ಲಿ ಗುತ್ತುದ ವರ್ಸೊದ ಪರ್ಬೋ

Tuesday, January 8th, 2019
Guttu-Parba

ಮಂಗಳೂರು : ತುಳುನಾಡಿನ ಮಣ್ಣಿನ ಸೊಗಡನ್ನು ಪಾರಂಪರಿಕವಾಗಿ ಬಣ್ಣಿಸುವ ವಿಶಿಷ್ಟ ಉತ್ಸವ ಗುತ್ತುದ ವರ್ಸೊದ ಪರ್ಬೋ ಗುರುಪುರದಲ್ಲಿ ಜ.19 ಮತ್ತು 20ರಂದು ನಡೆಯಲಿದೆ. ತುಳುನಾಡಿನ ಗುತ್ತು ಪರಂಪರೆಯ ವಿಶೇಷತೆಯನ್ನು ತಿಳಿಸುವ ಗುತ್ತುದ ವಾರ್ಷಿಕ ಹಬ್ಬದ ಅಂಗವಾಗಿ ಈ ಬಾರಿ  ‘ಗುತ್ತು ನಿಮಗೆಷ್ಟು ಗೊತ್ತು ?’ ಎಂಬ ವಿಶೇಷ ಚಿಂತನ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ  ಬಗ್ಗೆ ಸುದ್ದಿಗೋಷ್ಠಿ ಮಾತನಾಡಿದ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾ ಪ್ರಸಾದ್ ಶೆಟ್ಟಿ ಮಾಹಿತಿ ನೀಡಿ ಉತ್ಸವದಲ್ಲಿ ಗುತ್ತು, ಬೀಡು, ಬಾರಿಕೆ, ಬಾವ, ಪರಡಿ ಮನೆತನಗಳ ಆಡಳಿತಾತ್ಮಕ ವ್ಯವಸ್ಥೆ […]

ಗುರುಪುರ ಸೇತುವೆ ಬಂದ್, ಪಿಡಬ್ಲ್ಯೂಡಿ ಅಧಿಕಾರಿಗಳಿಂದ ಪರಿಶೀಲನೆ

Thursday, June 28th, 2018
mangaluru

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳ ಗಡಿಭಾಗ ಮುಲ್ಲರಪಟ್ನ ಎಂಬಲ್ಲಿ ಈಗಾಗಲೇ ಸೇತುವೆ ಕುಸಿದು ಬಿದ್ದಿದ್ದು, ಮತ್ತೊಂದು ಸೇತುವೆ ಇದೇ ಪರಿಸ್ಥಿತಿಯಲ್ಲಿದೆ. ಸಂಪೂರ್ಣ ಶಿಥಿಲಗೊಂಡಿರುವ ಈ ಸೇತುವೆ ಯಾವಾಗ ಕುಸಿದು ಬೀಳಲಿದೆ ಎಂಬ ಆತಂಕದಲ್ಲಿ ಸಾರ್ವಜನಿಕರು, ವಾಹನ ಸವಾರರು ದಿನದೂಡುತ್ತಿದ್ದಾರೆ. ಇದರ ಬೆನ್ನಲ್ಲೆ ನಿನ್ನೆ ಗುರುಪುರ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಗುರುಪುರ ಸೇತುವೆ ತುರ್ತು ನಿರ್ವಹಣೆ ಕಾಮಗಾರಿ ಪ್ರಯುಕ್ತ ಇಂದು ಬೆಳಿಗ್ಗೆ […]

ಕುಡುಪು ಕ್ಷೇತ್ರಕ್ಕೆ ಮೂಡಬಿದ್ರೆ, ಗುರುಪುರ, ವಾಮಂಜೂರಿನಿಂದ ಬೃಹತ್ ಹೊರೆಕಾಣಿಕೆ

Friday, February 23rd, 2018
horekanike

ಮಂಗಳೂರು: ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಮೂಡುಬಿದಿರೆ, ಕೈಕಂಬ, ಗುರುಪುರ, ವಾಮಂಜೂರು ಹಾಗೂ ಸುತ್ತಮುತ್ತಲ ಪ್ರದೇಶದ ದೇವಸ್ಥಾನಗಳ ಮೂಲಕ ಗುರುವಾರ ದೇವಳಕ್ಕೆ ಹಸಿರುವಾಣಿ ಹೊರೆಕಾಣಿಕೆಯ ಹೊಳೆಯಂತೆಯೇ ಹರಿದು ಬಂತು. ಮೂಡುಬಿದಿರಿ, ಗಂಜಿಮಠ, ಮಿಜಾರು, ಕೈಕಂಬ , ಮಣಿಪಾಲ್, ಬಜ್ಪೆ, ಕಿನ್ನಿಕಂಬಳ, ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಸಂಗ್ರಹವಾದ ಹೊರೆಕಾಣಿಕೆ ವಾಹನಗಳು ವಾಮಂಜೂರಿಗೆ ಸಾಗಿ, ಅಲ್ಲಿಂದ ಮುಂದಕ್ಕೆ ಭವ್ಯ ಮೆರವಣಿಗೆಯಿಂದ ಕುಡುಪಿನತ್ತ ಸಾಗಿದವು. ವಾಮಂಜೂರಿನ ಶ್ರೀ ರಾಮ […]

ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಇಂದು ಸಮುದ್ರ ಪೂಜೆ ಆಚರಣೆ

Tuesday, August 20th, 2013
Karwar to get captive port soon

ಮಂಗಳೂರು :  ಇಂದು ಶ್ರೀ ಶ್ರೀ ಶ್ರೀ ಪೂಜಾ ಸಂಧ್ಯಾನಾಥ ಜಿ. ಯವರ ನೇತೃತ್ವದಲ್ಲಿ ಊರಿನ ಜನರೆಲ್ಲರೂ ಸೇರಿ ದೇವರ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಕಾರ್ಯಕ್ರಮವು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಆಶ್ರಯದಲ್ಲಿ ನಡೆಯಿತು . ದೇವರ ವಿಧಿವಿಧಾನಗಳ ಬಳಿಕ ತಣ್ಣೀರು ಬಾವಿ ಸಮುದ್ರ ಕಿನಾರೆಯಲ್ಲಿ ಸಾಮೂಹಿಕವಾಗಿ ಸಮುದ್ರ ಪೂಜೆಯನ್ನು ಸ್ವಾಮಿಜಿಗಳ ನೇತೃತ್ವದಲ್ಲಿ ನಡೆಸಿದರು. ನಂತರ ಸಮುದ್ರಕ್ಕೆ ತೆಂಗಿನಕಾಯಿ, ಹೂವು ಸಮರ್ಪಸಿದರು. ಊರಿನ ಬಾಂಧವರೆಲ್ಲರೂ ಹಾಲೆರೆದು ಸಮುದ್ರ ದೇವತೆಯನ್ನು ನೆನೆದು ಪೂಜಿಸಿದರು. ಅಧ್ಯಕ್ಷರಾಗಿ ಶಾಸಕ […]

ಮಂಗಳೂರು ವಿಶೇಷ ಆರ್ಥಿಕ ವಲಯದ ಸಿಬ್ಬಂದಿ ಭಾರಿ ಯಂತ್ರಕ್ಕೆ ಸಿಕ್ಕಿ ಸಾವು

Friday, July 8th, 2011
JONSON/ಜಾನ್ಸನ್‌

ಮಂಗಳೂರು: ಇಂದು ಮುಂಜಾನೆ ಮಂಗಳೂರು ವಿಶೇಷ ಆರ್ಥಿಕ ವಲಯದ ಕಳವಾರು ಪ್ರದೇಶದಲ್ಲಿ ಕ್ರೇನ್‌ನಿಂದ ಸಾಗಿಸುತ್ತಿದ್ದ ಯಂತ್ರವೊಂದು ತುಂಡಾಗಿ ಬಿದ್ದ ಪರಿಣಾಮ ಗುರುಪುರದ ಜಾನ್ಸನ್ ಸಂತೋಷ ರೊಝಾರಿಯೊ (21)ಮೃತ ಪಟ್ಟಿದ್ದಾರೆ.ಈ ದುರ್ಘಟನೆ ಮುಂಜಾನೆ 9:45ರ ಸುಮಾರಿಗೆ ಸಂಭವಿಸಿದೆ.ಜಾನ್ಸನ್ ಎಂಆರ್‌ಪಿಎಲ್‌ನ ತೃತೀಯ ಹಂತದ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಕ್ರೇನ್‌ನಿಂದ ಭಾರೀ ಯಂತ್ರೋಪಕರಣ ಆಕಸ್ಮಿಕವಾಗಿ ತುಂಡಾಗಿ ಬಿದ್ದ ಪರಿಣಾಮ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ಜಾನ್ಸನ್‌ರ ಎದೆ ಹಾಗೂ ತಲೆ ಮೇಲೆ ಬಿದ್ದು ಅವರು ಮಾರಣಾಂತಿಕವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ […]