ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅವ್ಯವಹಾರ ; ತನಿಖೆಯು ಪಾರದರ್ಶಕವಾಗಿಸಲು ಆಗ್ರಹ

Saturday, March 20th, 2021
Dharmika Maha Sangha

ಉಡುಪಿ  : ಸರಕಾರವು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅವ್ಯವಹಾರಗಳ ಬಗ್ಗೆ ಕೂಡಲೇ ತನಿಖೆ ಮಾಡಲು ನೀಡಿದ ಆದೇಶಕ್ಕೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಅಭಿನಂದನೆಗಳನ್ನು ವ್ಯಕ್ತಪಡಿಸುತ್ತದೆ. ಆದರೆ ಕೇವಲ ಒಂದು ದಿನದ ತನಿಖೆಯಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಅವ್ಯವಹಾರಗಳ ಪೂರ್ಣ ತನಿಖೆ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಮಾನ್ಯ ಸಚಿವರು ಕೂಡಲೇ ಸಕಾರಾತ್ಮಕ ಕೃತಿ ಮಾಡಿದ್ದು ನಿಜವಾಗಿ ಸ್ತುತ್ಯಾರ್ಹವಾಗಿದ್ದು, ಈ ಬಗ್ಗೆ ಮಾನ್ಯ ಧಾರ್ಮಿಕ ದತ್ತಿ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರಿಗೂ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ […]

ಭಾರತದ ತೇಜೋಮಯ ಇತಿಹಾಸವನ್ನು ನೆನೆಯುವ ದಿನವೇ ಸ್ವಾತಂತ್ರ್ಯ ದಿನಾಚರಣೆ

Tuesday, August 14th, 2018
shivaji

  ಮಂಗಳೂರು: 15 ಆಗಸ್ಟ್ 1947 ರಂದು ಭಾರತವು ಸ್ವತಂತ್ರವಾಯಿತು. ನಮ್ಮ ಸ್ವಾತಂತ್ರ್ಯ ಸೈನಿಕರು ಆಂಗ್ಲರ 150 ವರ್ಷಗಳ ದಾಸ್ಯತ್ವದಿಂದ ನಮ್ಮ ದೇಶವನ್ನು ಬಿಡಿಸಿದರು. ಆ ನೆನಪಿಗಾಗಿ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಭಾರತವು ಸ್ವತಂತ್ರವಾಗುವ ಮೊದಲು ಮೊಗಲರು, ಪೋರ್ಚುಗೀಸರು, ಆದಿಲಶಾಹ, ಕುತುಬಶಾಹ ಮತ್ತು ಆಂಗ್ಲರಂತಹ ಅನೇಕರು ಭಾರತವನ್ನು ಆಳಿದರು. ಇವರೆಲ್ಲರೂ ಭಾರತದಲ್ಲಿದ್ದ ಸ್ವಾರ್ಥಿ ಮತ್ತು ಭ್ರಷ್ಟ ಜನರನ್ನು ತಮ್ಮ ಪಕ್ಷದಲ್ಲಿ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸೈನಿಕರ ಮೇಲೆ ದೌರ್ಜನ್ಯ ನಡೆಸಿ ರಾಜ್ಯವಾಳಿದರು. ವ್ಯಾಪಾರ ಮಾಡುವ ನಿಮಿತ್ತ ಆಂಗ್ಲರು ಭಾರತಕ್ಕೆ ಬಂದರು. […]

ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಪತ್ರಿಕಾ ಪರಿಷತ್

Friday, November 10th, 2017
pathrika parishath

ಮಂಗಳೂರು: ಯಾವುದೇ ಎಡಪಂಥೀಯ ವ್ಯಕ್ತಿಯ ಹತ್ಯೆಯಾದಾಗ ಬಲಪಂಥೀಯ ಸಂಘಟನೆಗಳ ಮೇಲೆ ಆರೋಪ ಮಾಡಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಭೂಮಿಕೆಯನ್ನು ಸ್ಪಷ್ಟಪಡಿಸಲು ಇದೇ ಭಾನುವಾರ ಸಾಯಂಕಾಲ 4.30 ಗಂಟೆಗೆ ಮಂಗಳೂರಿನ ವಿ ಟಿ ರೋಡ್ ನಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಾರ್ವಜನಿಕ ಜನಸಂವಾದ ಸಭೆ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ ಇವರು ಶುಕ್ರವಾರ ಇಲ್ಲಿ ನಡೆದ ಪತ್ರಿಕಾ ಪರಿಷತ್ ನಲ್ಲಿ ಮಾಹಿತಿ ನೀಡಿದರು. ಶ್ರೀ ಗುರುಪ್ರಸಾದ ಗೌಡ […]