ಅಕ್ಟೋಬರ್ ಅಂತ್ಯದೊಳಗೆ ಮಂಗಳೂರಿನಿಂದ ಗೋವಾಕ್ಕೆ ಹೊಸ ವಂದೇ ಭಾರತ್ ಎಕ್ಷ್ ಪ್ರೆಸ್ : ರೈಲ್ವೆ ಸಚಿವರ ಭರವಸೆ

Friday, September 22nd, 2023
Railway-Minister

ಮಂಗಳೂರು : ಮಂಗಳೂರಿನಿಂದ ಗೋವಾಗೆ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ನೀಡುವಂತೆ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ರವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ರವರಿಗೆ ಮಾನ್ಯ ರೈಲ್ವೆ ಸಚಿವರು ಭರವಸೆಯನ್ನು ನೀಡಿದ್ದಾರೆ. ಅಕ್ಟೋಬರ್ ಅಂತ್ಯದೊಳಗೆ ಮಂಗಳೂರಿನಿಂದ ಗೋವಾಗೆ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆ ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ. ಬೆಂಗಳೂರು ಕಣ್ಣೂರು ರೈಲನ್ನು ಕೊಚ್ಚಿನ್ ವರೆಗೆ […]

ನಟಿ ಪೂನಂ ಪಾಂಡೆ ಮೇಲೆ ಪತಿಯಿಂದ ಗಂಭೀರ ಹಲ್ಲೆ, ಆಸ್ಪತ್ರೆಗೆ ದಾಖಲು

Tuesday, November 9th, 2021
poonam-Pande

ಮುಂಬಯಿ  : ನಟಿ ಪೂನಂ ಪಾಂಡೆ ಮೇಲೆ ಪತಿ ಸ್ಯಾಮ್ ಬಾಂಬೆ ಹಲ್ಲೆ ಮಾಡಿದ್ದಾರೆಂದು ಪೂನಂ ನೀಡಿದ ದೂರಿನ ಆಧಾರದ ಮೇಲೆ ಸ್ಯಾಮ್‌ರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೆ ಒಳಗಾದ ನಟಿ ಪೂನಂ ಪಾಂಡೆ ಈಗ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಟಿ ಪೂನಂ ಪಾಂಡೆ ಅವರು, ಸೋಮವಾರ (ನ.8) ರಾತ್ರಿ ಪತಿ ಸ್ಯಾಮ್‌ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಪೂನಂ ಮೇಲೆ ಗಂಭೀರವಾಗಿ ಹಲ್ಲೆ ಮಾಡಲಾಗಿದ್ದು, ಅವರ ಕಣ್ಣು, ತಲೆ, ಮುಖದ […]

ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿ ದೈವೈಕ್ಯ

Monday, July 19th, 2021
Vidyadiraja-Swamiji

ಉಡುಪಿ  : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಮಹಾಸ್ವಾಮಿಗಳು ದೈವೈಕ್ಯರಾಗಿದ್ದಾರೆ. ಗೋವಾದಲ್ಲಿರಯವ ಶ್ರೀ ಮಠದಲ್ಲಿ ಅವರು ಹರಿಪಾದ ಸೇರಿದ ಬಗ್ಗೆ ಮಠದ ಮೂಲಗಳು ತಿಳಿಸಿವೆ. ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಗೋಕರ್ಣ ಪರ್ತಗಾಳಿ ಮಠದ ಶ್ರೀವಿದ್ಯಾಧಿರಾಜತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಸೋಮವಾರ ಹರಿಪಾದ ಸೇರಿದರು. ಸೋಮವಾರ ಮಧ್ಯಾಹ್ನ ಅವರು ಇಹಲೋಕ ತ್ಯಜಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಸೇನಾಪುರ ಆಚಾರ್ಯ ಮನೆತನದವರಾದ ಅವರು ಗಂಗೊಳ್ಳಿಯ ಶ್ರೀ ವೇಂಕಟರಮಣ […]

ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಪ್ರಸ್ತಾಪಗಳು ಸರಕಾರದ ಮುಂದಿಲ್ಲ: ಶಾಸಕ ಕಾಮತ್ ಸ್ಪಷ್ಟನೆ

Wednesday, September 16th, 2020
Income tax Road

ಮಂಗಳೂರು: ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತಗೊಳಿಸುವ ಅಥವಾ ಗೋವಾದ ಕಚೇರಿ ಜತೆಯಲ್ಲಿ ವಿಲೀನಗೊಳಿಸುವ ಯಾವುದೇ ಪ್ರಸ್ತಾಪಗಳು ಸರಕಾರದ ಮುಂದಿಲ್ಲ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನ ಆದಾಯ ತೆರಿಗೆ ಕಚೇರಿಯಲ್ಲಿ ಆದಾಯ ತೆರಿಗೆ ಪ್ರಧಾನ ಆಯುಕ್ತರ ಹುದ್ದೆ ಇದೆ. ಅದೇ ರೀತಿ ಗೋವಾದಲ್ಲೂ ಪ್ರಧಾನ ಆಯುಕ್ತರ ಹುದ್ದೆ ಇದೆ. ಈ ಎರಡು ಕಚೇರಿಯ ಹುದ್ದೆಯನ್ನು ಸೇರಿಸಿ ಒಂದೇ ಪ್ರಧಾನ ಆಯುಕ್ತರನ್ನು ನಿಯೋಜನೆ ಮಾಡಬೇಕು ಎಂಬ ಪ್ರಸ್ತಾಪ ಇದೆ. […]

ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್​​ ಸಂಚಾರ

Saturday, September 5th, 2020
ambari

ಹುಬ್ಬಳ್ಳಿ : ಹುಬ್ಬಳ್ಳಿಯಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಗಳ ಸಂಚಾರವನ್ನು ಶನಿವಾರದಿಂದ ಮತ್ತೆ ಆರಂಭಿಸಲಾಗುತ್ತಿದೆ. ಈ ಬಸ್ಗಳು ಗೋಕುಲ್ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ರಾಮನಗೌಡರ ತಿಳಿಸಿದ್ದಾರೆ. ಲಾಕ್ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿದಿನ ಪಣಜಿಗೆ 1 ರಾಜಹಂಸ ಮತ್ತು 8 ವೇಗಧೂತ ಸೇರಿ 9, ವಾಸ್ಕೋಗೆ 1 ಮತ್ತು ಮಡಗಾಂವಗೆ 1 ಒಟ್ಟು 11 ಬಸ್ಗಳು ಗೋವಾ ರಾಜ್ಯಕ್ಕೆ ಸಂಚರಿಸುತ್ತಿದ್ದವು. ಮೊದಲ ಹಂತದಲ್ಲಿ ಪಣಜಿಗೆ ನಾಲ್ಕು (1 ರಾಜಹಂಸ, 3 […]

2 ಸಾವಿರ ಕೊಟ್ಟು ಕೋವೀಡ್‌ ಪರೀಕ್ಷೆ ಮಾಡಿಸಿಕೊಂಡರೆ ಮಾತ್ರ ಗೋವಾಕ್ಕೆ ಎಂಟ್ರಿ

Sunday, May 31st, 2020
polem-checkpost

ಪಣಜಿ : ಕರ್ನಾಟಕದಿಂದ ಗೋವಾಕ್ಕೆ ಹೋಗಬೇಕೆನ್ನುವವರು ಈ ಸುದ್ದಿಯನ್ನು ಓದಲೇಬೇಕು. ಏಕೆಂದರೆ ಗೋವಾ ರಾಜ್ಯಕ್ಕೆ ಹೊರಟವರಿಗೆ ಅವರ ಕೋವಿಡ್‌ ಪರೀಕ್ಷೆ ಕಡ್ಡಾಯವಾಗಿದೆ. ಇದರಿಂದಲೇ ಗೋವಾ ಸರಕಾರ ರಾಜ್ಯಕ್ಕೆ ಆಗಮಿಸಿರುವ ಕರ್ನಾಟಕದವರಿಂದ ಪ್ರತಿಯೊಬ್ಬರಿಗೆ 2 ಸಾವಿರ ದಂತೆ ಕೋವಿಡ್‌ ಪರೀಕ್ಷೆಗಾಗಿ ಒಟ್ಟು 18,24,000 ರೂ. ಪ್ರತಿಯೊಬ್ಬರಿಂದ ಶುಲ್ಕ ವಸೂಲಿ ಮಾಡಿದೆ. ಕಾರವಾರದಿಂದ ಪೋಳೆಮ್ ಚೆಕ್‌ ಪೋಸ್ಟ್‌ ಮೂಲಕ ಗೋವಾಕ್ಕೆ ತೆರಳುವವರಿಗೆ ಈ ಪರೀಕ್ಷೆ ಮಾಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಗೋವಾ ರಾಜ್ಯದ ಕಾಣಕೋಣ ತಹಶೀಲ್ದಾರ್‌ ವಿನೋದ ದಲಾಲ್‌, ಕಳೆದ […]

ಗೋವಾ ಇತಿಹಾಸ ಪಠ್ಯಪುಸ್ತಕದ ವಿವಾದ : ಬಗೆಹರಿಯದಿದ್ದರೆ ಪ್ರತಿಭಟನೆ

Thursday, February 20th, 2020
Goa

ಪಣಜಿ : ಇಂದು ಒಂದೆಡೆ ಹಿಂದವೀ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸುತ್ತಿರುವಾಗಲೇ ಗೋವಾ ರಾಜ್ಯದ ಉಚ್ಚ ಮಾಧ್ಯಮಿಕ ಪಠ್ಯಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಛತ್ರಪತಿ ಸಂಭಾಜಿ ಮಹಾರಾಜರ ಅವಮಾನವನ್ನು ಮಾಡುವ ಲೇಖನ ಇರುವುದು ಬಹಿರಂಗವಾಗಿದೆ, ಇದು ಅತ್ಯಂತ ಖೇದಕರವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಇದನ್ನು ತೀವ್ರ ಶಬ್ಧಗಳಲ್ಲಿ ಖಂಡಿಸುತ್ತದೆ. ನಮ್ಮ ರಾಜರ ಬಗೆಗಿನ ಈ ರೀತಿಯ ಸುಳ್ಳು ಇತಿಹಾಸವನ್ನು ಯಾವುದೇ ಹಿಂದೂ ಸಹಿಸುವುದಿಲ್ಲ. ಈ ಇತಿಹಾಸದ ಪುಸ್ತಕವನ್ನು ಸರಕಾರ ಕೂಡಲೇ ಹಿಂಪಡೆಯಬೇಕು […]

ಮೀನುಗಳಿಗೆ ತಡೆ: ಗೋವಾದ ಮೀನುಗಾರಿಕಾ ಸಚಿವರ ಜೊತೆ ಶೀಘ್ರ ಮಾತುಕತೆ: ಯು.ಟಿ. ಖಾದರ್​

Saturday, November 17th, 2018
circuit-house

ಮಂಗಳೂರು: ಗೋವಾದಲ್ಲಿ ಕರ್ನಾಟಕದ ಮೀನುಗಳಿಗೆ ತಡೆಯೊಡ್ಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾದ ಮೀನುಗಾರಿಕಾ ಸಚಿವರ ಜೊತೆ ಕರ್ನಾಟಕದ ಮೀನುಗಾರಿಕಾ ಸಚಿವರು ಶೀಘ್ರ ಮಾತನಾಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ಕರಾವಳಿ ಕರ್ನಾಟಕದ ಪ್ರಮುಖ ಉದ್ಯಮ. ಇಲ್ಲಿಯ ಮೀನುಗಳು ಅಲ್ಲಿಗೆ ಹೋಗಬಾರದೆಂದು ತಡೆಯುವುದು ಸರಿಯಲ್ಲ. ಭಾರತ ದೇಶದಲ್ಲಿ ಸೀಮಿತ ಪ್ರದೇಶಕ್ಕೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ನಾನು, ಕಾರವಾರ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕಾ ಸಚಿವರು ಭೇಟಿಯಾಗಿ […]

ಖಾಸಗಿ ಕಾಲೇಜು ವಿದ್ಯಾರ್ಥಿ ನೇಣಿಗೆ ಶರಣು

Wednesday, September 26th, 2018
suspended

ಮಂಗಳೂರು: ಇಲ್ಲಿನ ಕೊಡಿಯಾಲ್ ಬೈಲ್ನಲ್ಲಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗೋವಾದ ನೆವಿಲೆ ಫೆರ್ನಾಂಡೀಸ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ವಿದ್ಯಾರ್ಥಿಯು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾರ್ಥಿ ಆತ್ಮಹತ್ಯೆಗೆ‌ ಕಾರಣ ತಿಳಿದುಬಂದಿಲ್ಲ.

ಗೋವಾದಲ್ಲಿ ಕಪ್ಪೆಗೆ ಭಾರೀ ಬೇಡಿಕೆ, ಕರಾವಳಿಯಲ್ಲಿ ಅಕ್ರಮ ಬೇಟೆ ಆರಂಭ..!

Wednesday, June 13th, 2018
goa-frog

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ಜಂಪಿಂಗ್ ಚಿಕನ್ ಗಾಗಿ ಬೇಟೆ ಆರಂಭವಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಗಿಡಗಂಟಿಗಳಲ್ಲಿ, ಕೆರೆ, ತೊರೆ, ನಾಲೆ, ಕಾಲುವೆ, ಸೇರಿದಂತೆ ಕಾಡಿನಂಚಿನಲ್ಲಿ ಒಟರಗುಟ್ಟುವ ಈ ಜಂಪಿಂಗ್ ಚಿಕನ್ ಗೆ ಗೋವಾದ ರೆಸ್ಟೋರೆಂಟ್ ಗಳಲ್ಲಿ ಭಾರೀ ಬೇಡಿಕೆ ಇದೆ. ಜಂಪಿಂಗ್ ಚಿಕನ್ ಅಂದ ಕೂಡಲೇ ಇದಾವ ಚಿಕನ್ ಎಂದು ಗೊಂದಲ ಬೇಡ . ಇಲ್ಲಿ ಜಂಪಿಂಗ್ ಚಿಕನ್ ಅಂದರ್ ಬೃಹತ್ ಗಾತ್ರದ ಕಪ್ಪೆಗಳು.ಕರಾವಳಿಯಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆ ನೆರೆಯ ರಾಜ್ಯ ಗೋವಾದ ರೆಸ್ಟೋರೆಂಟ್ ಗಳಲ್ಲಿ ಕಪ್ಪೆ ಖಾದ್ಯಗಳಿಗೆ […]