ಫೆ.11-15: ಉರ್ವ ಶ್ರೀ ಮಾರಿಯಮ್ಮ ನ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವ 

Tuesday, January 16th, 2024
Mariyamma-Temple

ಮಂಗಳೂರು: “ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಕೂಡಾ ಪ್ರಾಮುಖ್ಯತೆ ಪಡೆದಿರುತ್ತದೆ. ದ.ಕ. ಜಿಲ್ಲೆ ಮಾತ್ರವಲ್ಲದೇ ನಾಡಿನ ಸಮಸ್ತ ವರ್ಗದ ಭಕ್ತಾಭಿಮಾನಿಗಳು ಉರ್ವ ಶ್ರೀ ಮಾರಿಯಮ್ಮ ದೇವಿಯ ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಮತ್ತು ನಂಬಿಕೆಯನ್ನಿಟ್ಟು, ಶ್ರದ್ಧೆಯಿಂದ ಆರಾಧಿಸಿಕೊಂಡು ಬಂದಿದ್ದಾರೆ. ಇಂತಹ ದಿವ್ಯ ಮಾತೆಯ ಕ್ಷೇತ್ರದಲ್ಲಿ ಫೆ.11ರಿಂದ 15ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು ಈ ಸಂದರ್ಭದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಪ್ರಚಾರ ರಥದ ಸಂಚಾರ, ಹೊರೆಕಾಣಿಕೆ ಮೆರವಣಿಗೆ, ಬೃಹತ್ ನೂತನ ಸಭಾಂಗಣ ಉದ್ಘಾಟನೆ ನಡೆಯಲಿದೆ” […]

ರಾಯಿ: ಶ್ರೀ ಕೊರಗಜ್ಜ ಕ್ಷೇತ್ರ ಚಂಡಿಕಾಯಾಗ ಪೂರ್ಣಾಹುತಿ, ದೇವಿ ಆರಾಧನೆಯಿಂದ ಸಮೃದ್ಧಿ ಸಾಧ್ಯ: ಆನಂದ ಗುರೂಜಿ

Tuesday, December 15th, 2020
kaitrody

ಬಂಟ್ವಾಳ: ಜಗತ್ತಿಗೆ ಮಹಾಮಾರಿಯಾಗಿ ಕಾಡಿದ ಕೊರೋನದಂತಹ ಸಂಕಷ್ಟಗಳನ್ನು ದೂರಗೊಳಿಸಿ ಜನತೆಗೆ ಬದುಕಿನಲ್ಲಿ ಸಮೃದ್ಧಿ ಕಾಣಲು ದೇವಿ ಆರಾಧನೆಯಿಂದ ಸಾಧ್ಯವಿದೆ ಎಂದು ಝೀ ಕನ್ನಡ ಮಹರ್ಷಿ ವಾಣಿ ಖ್ಯಾತಿಯ ಆನಂದ ಗುರೂಜಿ ಹೇಳಿದ್ದಾರೆ. ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟ ಸ್ರ್ ಶ್ರೀ ಮಂತ್ರದೇವತೆ ಕೊರಗಜ್ಜ ಕ್ಷೇತ್ರದಲ್ಲಿ (ಡಿ.15 ರಂದು) ಮಂಗಳವಾರ ನಡೆದ ಚಂಡಿಕಾಯಾಗಕ್ಕೆ ಪೂರ್ಣಾಹುತಿ ನೆರವೇರಿಸಿದ ಬಳಿಕ ಅವರು ಆಶೀರ್ವಚನ ನೀಡಿದರು. ಕೊರಗಜ್ಜ ದೈವ ಭಕ್ತರ ಸಂಕಷ್ಟ ಕಳೆಯಲು ಭಕ್ತಿಗೆ ತ್ವರಿತವಾಗಿ ಒಲಿಯುತ್ತಾನೆ ಎಂದರು. ಕಟೀಲು ಕ್ಷೇತ್ರದ […]

ಡಿಸೆಂಬರ್ 15 ರಂದು ಕೈತ್ರೋಡಿ ಕ್ಷೇತ್ರದ ಚಂಡಿಕಾಯಾಗಕ್ಕೆ ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ

Wednesday, December 9th, 2020
Kaitrody

ಬಂಟ್ವಾಳ :  ಕೈತ್ರೋಡಿ ಕ್ವಾರ್ಟಸ್ ಶ್ರೀ ಮಂತ್ರ ದೇವತೆ ಕೊರಗಜ್ಜ ಕ್ಷೇತ್ರದಲ್ಲಿ ಡಿಸೆಂಬರ್ 15 ರಂದು ಬೆಳಗ್ಗೆ ಗಂಟೆ 7.30ರಿಂದ ವೇದಮೂರ್ತಿ ಸುಬ್ರಹ್ಮಣ್ಯ ಪರಾಡ್ಕರ್ ಗುಂಡ್ಯಡ್ಕ ಮತ್ತು ರಾಧಾಕೃಷ್ಣ ಭಟ್ ಪೆದಮಲೆ ಮಾರ್ಗದರ್ಶನದಲ್ಲಿ ಚಂಡಿಕಾಯಾಗ ಆರಂಭಗೊಳ್ಳಲಿದ್ದು ಅಂದು ಮಧ್ಯಾಹ್ನ ಝೀ ಕನ್ನಡ ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ ಮತ್ತು ಕಟೀಲು ಕ್ಷೇತ್ರದ ವೇದಮೂರ್ತಿ ಕಮಲಾದೇವಿ ಅಸ್ರಣ್ಣರ ಉಪಸ್ಥಿತಿಯಲ್ಲಿ ಪೂರ್ಣಾಹುತಿಗೊಳ್ಳಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ಲೋಕೇಶ್ ಹೇಳಿದ್ದಾರೆ. ಡಿಸೆಂಬರ್ 15 ರಿಂದ 19ರ ವರೆಗೆ ಚಂಡಿಕಾಯಾಗ ಸಹಿತ ಯಕ್ಷಗಾನ ಮತ್ತು ವಾರ್ಷಿಕ ನೇಮೋತ್ಸವ […]

ಕೊರೊನಾ ಮಹಾಮಾರಿಯನ್ನು ತೊಲಗಿಸಲು ಪ್ರತಿಯೊಬ್ಬರೂ ಕಟಿಬದ್ಧರಾಗಬೇಕು : ಶ್ರೀ ಮೋಹನದಾಸ ಸ್ವಾಮೀಜಿ

Saturday, August 1st, 2020
MohanadasaSwamiji

ಮಂಗಳೂರು : ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ ದಲ್ಲಿ 48 ದಿನಗಳ ವರಮಹಾಲಕ್ಷ್ಮಿ ಪೂಜೆ ಜುಲೈ 31ರಂದು ಚಂಡಿಕಾ ಯಾಗದ ಪೂರ್ಣಾಹುತಿ ಯೊಂದಿಗೆ ಸಮಾಪನ ಗೊಂಡಿತು. ಬೆಳಗ್ಗೆ ಗಣಪತಿ ಹೋಮ ನಾನಾ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಚಂಡಿಕಾ ಯಾಗ, ಕನಕಾಧಾರಾ ಯಾಗ ಪೂರ್ಣಹುತಿ ನಡೆಯಿತು. ಭಜನಾ ಸತ್ಸಂಗ ಕಾರ್ಯಕ್ರಮ ಪ್ರಸ್ತುತಗೊಂಡಿತು. ಸಂಜೆ ದುರ್ಗಾಪೂಜೆ, ಆಶ್ಲೇಷ ಬಲಿ ನಡೆದವು. ಕೊರೊನಾ ಸೋಂಕಿತರನ್ನು ನೋಡುವ ದೃಷ್ಟಿ ಬದಲಾಗಬೇಕಾಗಿದೆ. ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ಸಿಗುವಂತಾಗಲು ಮಾನವೀಯ ಮೌಲ್ಯಗಳ ಅಗತ್ಯತೆಯಿದೆ. ಈ ಮಹಾಮಾರಿಯನ್ನು ತೊಲಗಿಸಲು […]

ಉರ್ವ ಮಾರಿಗುಡಿಯಲ್ಲಿ ಸಂಪನ್ನಗೊಂಡ ಚಂಡಿಕಾಯಾಗ, ಮಾರ್ಚ್ 9-10 ವರ್ಷಾವಧಿ ಮಹೋತ್ಸವ

Thursday, March 5th, 2020
Urwa Mariyamma

ಮಂಗಳೂರು : ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಮಾರ್ಚ್05, ಗುರುವಾರ ಕೋಡಿಕಲ್ ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಂಡಿಕಾಯಾಗ ನಡೆಯಿತು. ಮೊಗವೀರ ಸಮಾಜದ ಬಂಧುಗಳು ಹಾಗೂ ಗ್ರಾಮದ ಭಕ್ತಾದಿಗಳು ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಪುನೀತರಾದರು. ಈ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಲ್ಯಾಂಡ್ ಲಿಂಕ್ಸ್ ಮಾಲಕರಾದ ಪ್ರದೀಪ್ ಪಾಲೇಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶ್ರೀ ಮಾರಿಯಮ್ಮ ದೇವರು ಸರ್ವ ಭಕ್ತಾದಿಗಳ ಬೇಡಿಕೆಗಳನ್ನು ಈಡೇರಿಸಿ, ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸಿದರು. ಕಾಂಚನ್ ಹುಂಡೈಮಾಲಕರಾದ ಪ್ರಸಾದ […]

ಒಮಾನ್ ಮುಸ್ಲಿಂ ರಾಜನ ಕ್ಷೇಮಕ್ಕಾಗಿ ಕೊಡ್ಯಡ್ಕದ ಹಿಂದೂ ದೇವಳದಲ್ಲಿ ಚಂಡಿಕಾಯಾಗ

Tuesday, July 15th, 2014
Sulthan Qboos

ಮಂಗಳೂರು : ಏಳು ಸಮುದ್ರದಾಚೆಯ ಅರಬ್ ದೇಶ ಒಮಾನ್ ಗೂ ಇಲ್ಲಿಯ ಮೂಡಬಿದಿರೆಗೂ ಅದೆಂತಹ ಸಂಬಂಧ ಎನ್ನಬಹುದು ಮೂಡಬಿದಿರೆಯ ಪ್ರಸಿದ್ಧ ದೇವಾಲಯವಾದ ಅನಿವಾಸಿ ಭಾರತೀಯರೊಬ್ಬರು ನಿರ್ಮಿಸಿ ಹೆಸರುವಾಸಿಯಾಗಿರುವ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಒಮಾನಿನ ರಾಜನ ಆರೋಗ್ಯಕ್ಕೆ ವಿಶೇಷ ಪೂಜೆ ಪುನಸ್ಕಾರ ಹಾಗೂ ಯಾಗವೊಂದು ನಡೆದಿದೆ. ಪ್ರಸ್ತುತ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಒಮಾನಿನ ರಾಜ ಸುಲ್ತಾನ್ ಕಾಬೂಸ್ ಬಿನ್ ಸಹೀದ್ ಅವರ ಕ್ಷೇಮಕ್ಕಾಗಿ ಮೂಡಬಿದ್ರೆಯ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ […]

ಕೊಂಡೆವೂರು ನಿತ್ಯಾನಂದ ಯೋಗಾಶ್ರಮದಲ್ಲಿ ಚಂಡಿಕಾಯಾಗ

Thursday, February 28th, 2013
Chandika yaga

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಕೊಂಡೆವೂರು, ಉಪ್ಪಳ ಇಲ್ಲಿ ಫೆಬ್ರವರಿ 27 ರಿಂದ ಮಾರ್ಚ್  6 ರ ವರೆಗೆ ಸಹಸ್ರ ಮಹಾಯಾಗವೂ ನಡೆದಿದೆ. ಫೆಬ್ರವರಿ 28 ರಂದು ಬೆಳಿಗ್ಗೆ 5 ರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ. ಉಷಕಾಲ ಪೂಜೆ, ನಾಂಧೀ ಸಮಾರಾಧನೆ, ದುರ್ಗಾ ಸಪ್ತಶತೀ ಪಾರಾಯಣ ಆರಂಭವಾಯಿತು. ಬೆಳಿಗ್ಗೆ ಅಥರ್ವ ಶೀರ್ಘ ಗಣಯಾಗವು ನವಾಕ್ಷರೀ ಜಪಹೋಮದೊಂದಿಗೆ ನಡೆಯಿತು. ದೇವಿ ಭಾಗವತ ಪ್ರವಚನ, ಸಾರ್ವಜನಿಕ ಅನ್ನಸಂತರ್ಪನಣೆಯು ನಡೆಯಿತು. ಸಂಜೆ ಐಲ […]