ಚಿನ್ನ ತರಲು ಪೀಡಿಸುತ್ತಿದ್ದ ಗಂಡ, ನವ ವಿವಾಹಿತೆ ತಾಯಿ ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ

Monday, October 30th, 2023
ಚಿನ್ನ ತರಲು ಪೀಡಿಸುತ್ತಿದ್ದ ಗಂಡ, ನವ ವಿವಾಹಿತೆ ತಾಯಿ ಮನೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ

ಬಂಟ್ವಾಳ : ನವ ವಿವಾಹಿತೆ ಯೋರ್ವಳು ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಸಜೀಪ ಮೂಡ ಗ್ರಾಮದ ಸುಭಾಷ್ ನಗರದ ನಿವಾಸಿ ನೌಸೀನ್ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ನೌಸೀನ್ ಅವರು ಉಳ್ಳಾಲದ ಆಜ್ಮಾನ್ ಜೊತೆ ಮೂರು ತಿಂಗಳ ಹಿಂದೆ ಪ್ರೇಮ ವಿವಾಹ ವಾಗಿದ್ದರು. ಪ್ರೇಮವಿವಾಹ ಆದರೂ ಕೂಡ ವಿವಾಹ ಸಂದರ್ಭದಲ್ಲಿ 18 ಪವನ್ ಚಿನ್ನವನ್ನು ಉಡುಗೂರೆಯಾಗಿ ನೀಡಲಾಗಿತ್ತು. ಆದರೆ ಹುಡುಗಿ ಕಡೆಯವರು ನೀಡಿದ ವರದಕ್ಷಿಣೆ ಕಡಿಮೆಯಾಗಿದೆ, ಪ್ರೀತಿಸಿ ಮದುವೆಯಾದರಿಂದ ಒಳ್ಳೆ […]

ಸೂಟ್‌ಕೇಸ್‌ ಅಡಿಯಲ್ಲಿಟ್ಟು ಪೇಸ್ಟ್‌ ರೂಪದಲ್ಲಿ ಸಾಗಿಸುತ್ತಿದ್ದ 34 ಲಕ್ಷ ರೂ. ಮೌಲ್ಯದ ಚಿನ್ನ ವಶ

Thursday, July 15th, 2021
Gold

ಮಂಗಳೂರು: ಕಾಸರಗೋಡು ಜಿಲ್ಲೆಯ ಇಬ್ಬರು ಚಿನ್ನವನ್ನು ಸೂಟ್‌ಕೇಸ್‌ ಅಡಿಯಲ್ಲಿ ಅಡಗಿಸಿಕೊಂಡೊಯ್ಯುತ್ತಿದ್ದ  ವೇಳೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನದಲ್ಲಿ ಕಸ್ಟಂಸ್‌ ಸಿಬ್ಬಂದಿ ಬಂಧಿಸಿದ್ದಾರೆ. ಅವರಿಂದ 34,46,464 ರೂ. ಮೌಲ್ಯದ ಪೇಸ್ಟ್‌ ರೂಪದಲ್ಲಿ ಇದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಜಿಲ್ಲೆ ಉಪ್ಪಳ ನಿವಾಸಿ ಮೊಹಮ್ಮದ್‌ ಅನ್ಸಾರ್‌ ಕಯ್ಯಾರ್‌(34) ಹಾಗೂ ಕೋಝಿಕ್ಕೋಡ್‌ನ ಮೊಹಮ್ಮದ್‌ ಮೂಸಾ ಮಿಯಾಸ್‌(18) ಬಂಧಿತರು. ದುಬೈನಿಂದ ಗುರುವಾರ ಆಗಮಿಸಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಪ್ರಯಾಣಿಕರು ಚಿನ್ನವನ್ನು ಅಡಗಿಸಿ ತಂದಿದ್ದು ಕಸ್ಟಂಸ್‌ನವರು ತಪಾಸಣೆ ಮಾಡುವಾಗ ಒಟ್ಟು 703 ಗ್ರಾಮ್‌ ಚಿನ್ನದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಕಸ್ಟಂಸ್‌ […]

ಉತ್ತರ ಪ್ರದೇಶದ ಸೋನ್​ಭದ್ರ ಜಿಲ್ಲೆಯಲ್ಲಿ 3,000 ಟನ್ ಚಿನ್ನದ ನಿಕ್ಷೇಪ ಪತ್ತೆ

Saturday, February 22nd, 2020
chinna

ಲಕ್ನೋ : ಉತ್ತರ ಪ್ರದೇಶದ ಸೋನ್ಭದ್ರ ಜಿಲ್ಲೆಯಲ್ಲಿ ಇತ್ತೀಚೆಗೆ 3,000 ಟನ್ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು. ಆ ಚಿನ್ನದ ನಿಕ್ಷೇಪವನ್ನು ಹರಾಜು ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ತಜ್ಞರ ಪ್ರಕಾರ, ಈ ಚಿನ್ನದ ಗಣಿಯ ಮೊತ್ತ ಭಾರತದ ಈಗಿನ ಚಿನ್ನದ ನಿಕ್ಷೇಪಗಳ ಮೌಲ್ಯಕ್ಕಿಂತ 5 ಪಟ್ಟು ಹೆಚ್ಚು. ಉತ್ತರ ಪ್ರದೇಶದ ಸೋನ್ ಪಹಾಡಿ ಮತ್ತು ಹಾರ್ಡಿ ಗ್ರಾಮ ಪ್ರದೇಶದಲ್ಲಿ ಸುಮಾರು 3,000 ಟನ್ ಚಿನ್ನದ ನಿಕ್ಷೇಪವಿದೆ ಎಂದು ಭಾರತೀಯ ಭೂ ಸರ್ವೇಕ್ಷಣೆ ಇಲಾಖೆ ಮತ್ತು ಉತ್ತರ ಪ್ರದೇಶ […]

ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ವ್ಯಕ್ತಿಗಳ ಬಂಧನ : 58.95 ಲಕ್ಷ ರೂ. ಬೆಲೆಬಾಳುವ ಚಿನ್ನ ವಶ

Tuesday, February 18th, 2020
chinna

ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ್ದ ಇಬ್ಬರು ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಬಂಧಿತರಿಂದ ಸುಮಾರು 58.95 ಲಕ್ಷ ರೂ. ಬೆಲೆಬಾಳುವ ಚಿನ್ನವನ್ನು ವಶಕ್ಕೆ ಪಡದಿದ್ದಾರೆ. ಬಂಧಿತರನ್ನು ಕೇರಳದ ಮುಹಮ್ಮದ್ ಸ್ವಾಲಿಹ್ ಹಾಗೂ ಮೊಹಮ್ಮದ್ ನಿಷಾದ್ ಎಂದು ಗುರುತಿಸಲಾಗಿದೆ. ಮೊದಲ ಪ್ರಕರಣದಲ್ಲಿ ಆರೋಪಿ ಮುಹಮ್ಮದ್ ಸ್ವಾಲಿಹ್ ಸ್ಪೈಸ್‌ಜೆಟ್ ವಿಮಾನದ ಮೂಲಕ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದು, ಫೆಸ್ಟ್ ರೂಪದಲ್ಲಿ ಚಿನ್ನವನ್ನು ಕರಗಿಸಿ ಮಾತ್ರೆಗಳ ರೀತಿ ತಯಾರಿಸಿ ತನ್ನ […]

ಗಮ್‌ನೊಂದಿಗೆ ಬೆರೆಸಿ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಾಟ ಓರ್ವ ವಶಕ್ಕೆ

Wednesday, February 12th, 2020
gold--paste

ಮಂಗಳೂರು  :  ಗುದದ್ವಾರದ ಮೂಲಕ ಪೇಸ್ಟ್ ರೂಪದ ಚಿನ್ನವನ್ನುಅಕ್ರಮ ಸಾಗಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಒಬ್ಬನನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ಸೈಫುದ್ದೀನ್ ತೆಕ್ಕಿಲ್ ಪಝೆವಳಪ್ಪಿಲ್ ಕಾಸರಗೋಡು (23) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 25.57 ಲಕ್ಷ ರೂ. ವೌಲ್ಯದ 633 ಗ್ರಾಂ ಚಿನ್ನ ವಶಪಡಿಸಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಜಾನೆ 4:45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಚಲನವಲನದ ಕುರಿತು ಸಂಶಯಗೊಂಡ ಅಧಿಕಾರಿಗಳು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ ಚಿನ್ನ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆಜಿ ಅಕ್ರಮ ಚಿನ್ನ ವಶ

Thursday, January 9th, 2020
vimana-nildana

ಮಂಗಳೂರು : ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ವಿವಿಧ ಪ್ರಕರಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೂರು ಪ್ರಕರಣಗಳಲ್ಲಿ ಒಟ್ಟು 63 ಲಕ್ಷದ 73 ಸಾವಿರ ಮೌಲ್ಯದ 1 ಕೆ ಜಿ 575 ಗ್ರಾಂ ವಶಪಡಿಸಿಕೊಳ್ಳಲಾಗಿದೆ. ಜನವರಿ 6 ರಂದು ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಬಂದ ಪ್ರಯಾಣಿಕನಿಂದ 336.7 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಕ್ಸ್ ನಲ್ಲಿ ಅಡಗಿಸಿಟ್ಟು ತಂದಿದ್ದ. ಇದರ ಮೌಲ್ಯ 13.43 ಲಕ್ಷ ಎಂದು ಅಂದಾಜಿಸಲಾಗಿದೆ. ಜನವರಿ […]

ಕುಂದಾಪುರ : ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಮೂವರ ಬಂಧನ; 1.633 ಕೆಜಿ ಚಿನ್ನಾಭರಣ ವಶ

Wednesday, December 18th, 2019
kundapura

ಕುಂದಾಪುರ : ಎರಡು ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳಾದ ಕುಂದಾಪುರ ಹಾಗೂ ಭಟ್ಕಳ ಎಎಸ್ಪಿಗಳ ತಂಡ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಮಂಗಳವಾರ ಬಂಧಿಸಿ 61.47 ಲಕ್ಷ ರೂ. ಮೌಲ್ಯದ 1.633 ಕೆಜಿ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಎರ್ನಾಕುಲಂ ಕಡೆಯಿಂದ ಅಕ್ರಮವಾಗಿ ರೈಲಿನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಕುಂದಾಪುರ ಎಎಸ್ಪಿ ಹರಿರಾಮ್‌ ಶಂಕರ್‌ ಅವರು ಆರೋಪಿಗಳ ಬೇಟೆಗಾಗಿ ತಂಡ ರಚಿಸಿ ಕುಂದಾಪುರ, ಬೈಂದೂರು, ಭಟ್ಕಳ ರೈಲು ನಿಲ್ದಾಣ ಗಳಲ್ಲಿ ಕಾದು […]

3ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತಕ್ಕೆ 10 ಪದಕ

Wednesday, December 4th, 2019
Athletics

ಕಾಠ್ಮಂಡು : ಇಲ್ಲಿ ಸಾಗುತ್ತಿರುವ 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ ಆ್ಯತ್ಲೆಟಿಕ್‌ ಸ್ಪರ್ಧೆಯಲ್ಲಿ ಭಾರತೀಯ ಆ್ಯತ್ಲೀಟ್‌ಗಳು ಪ್ರಾಬಲ್ಯ ಸ್ಥಾಪಿಸಿದ್ದಾರೆ. ನಾಲ್ಕು ಚಿನ್ನ ಸಹಿತ 10 ಪದಕ ಗೆದ್ದು ಸಂಭ್ರಮಿಸಿದ್ದಾರೆ. ಅರ್ಚನಾ ಸುಶೀಂದ್ರನ್‌, ಎಂ. ಜಸ್ನಾ, ಸರ್ವೇಶ್‌ ಅನಿಲ್‌ ಕುಶಾರೆ ಮತ್ತು ಅಜಯ್‌ ಕುಮಾರ್‌ ಸರೋಜ್‌ ಆ್ಯತ್ಲೆಟಿಕ್ಸ್‌ ಸ್ಪರ್ಧೆಯ ಮೊದಲ ದಿನ ಚಿನ್ನ ಗೆದ್ದ ಸಾಧಕರಾಗಿದ್ದಾರೆ. ವನಿತೆಯರ 100 ಮೀ. ಓಟದಲ್ಲಿ ಅರ್ಚನಾ ಸುಶೀಂದ್ರನ್‌ 11.80 ಸೆ.ನಲ್ಲಿ ಗುರಿ ತಲುಪಿ ಗೇಮ್ಸ್‌ ನ ಅತೀವೇಗದ ಓಟಗಾರ್ತಿ ಎಂದೆನಿಸಿಕೊಂಡಿದ್ದಾರೆ. ಶ್ರೀಲಂಕಾದ […]

ಚಿನ್ನ ಮರಳಿಸಿ ಮಾನವೀಯತೆ ಮೆರೆದ ಯುವತಿ

Wednesday, June 26th, 2019
puttur girl

ಪುತ್ತೂರು :  ರೂ.60 ಸಾವಿರ ಮೌಲ್ಯದ ಚಿನ್ನವನ್ನು ವಾರಸುದಾರರಿಗೆ ಹಿಂದುರಿಗಿಸಿದ ಯುವತಿಯೊಬ್ಬರು ಮಾನವೀಯತೆ ಮೆರೆದಿದ್ದಾರೆ. ಜೂ. 23ರಂದು ಎಪಿಎಂಸಿ ರಸ್ತೆಯಲ್ಲಿರುವ ಬಜಾಜ್ ಶೋರೂಮ್ ಉದ್ಯೋಗಿ ಅಶೋಕ್ ಎಂಬವರ ಚಿನ್ನದ ಬ್ರಾಸ್‍ಲೆಟ್ ಪುತ್ತೂರು -ಪುಣಚ ರಸ್ತೆಯಲ್ಲಿ ಕಳೆದುಹೋಗಿತ್ತು. ಈ ಚಿನ್ನದ ಬ್ರಾಸ್‍ಲೆಟ್ ಮುರ ನಿವಾಸಿ ಧನ್ವಂತರಿ ಆಸ್ಪತ್ರೆಯ ಉದ್ಯೋಗಿ ಚಂದ್ರಿಕಾ ಎಂಬವರಿಗೆ ಸಿಕ್ಕಿತ್ತು. ಅವರು ಈ ಚಿನ್ನವನ್ನು ವಾರಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ. ಅವರ ಈ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಚಿನ್ನ ವಶ

Wednesday, November 9th, 2016
padubidri

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1096 ಗ್ರಾಂ. ತೂಕದ 33.56 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ. ದುಬೈನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತನ್ನ ಲಗೇಜ್‌ನಲ್ಲಿ ಬೆಳ್ಳಿ ಲೇಪಿತ ಸಾಮಗ್ರಿಗಳ ರೂಪದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದರು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕಸ್ಟಮ್ಸ್ ಆಯುಕ್ತ ಡಾ. ಎಂ. ಸುಬ್ರಹ್ಮಣ್ಯಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.