ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ 12 ರಂದು ಮಹಾರಥೋತ್ಸವ

Thursday, April 7th, 2022
Polali-Temple

ಮಂಗಳೂರು  : ಬಂಟ್ವಾಳ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಬುಧವಾರ ಹಿರಿಯ ಚಿತ್ರನಟ ಜಗ್ಗೇಶ್ ದಂಪತಿ ಬುಧವಾರ ಭೇಟಿ ನೀಡಿದರು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಒಂದು ತಿಂಗಳ ವಾರ್ಷಿಕ ಜಾತ್ರಾ ನಡೆಯುತ್ತಿದ್ದು, ಪೊಳಲಿಯ ಪ್ರಸಿದ್ಧ ಮೊದಲ ಚೆಂಡು ಏಪ್ರಿಲ್ 7 ರಂದು ನಡೆಯಲಿದೆ. ಏಪ್ರಿಲ್ 11 ರಂದು ಕೊನೆಯ ಚೆಂಡು, 12 ರಂದು ಮಹಾರಥೋತ್ಸವ ನಡೆಯಲಿದೆ. 13 ರಂದು ಆರಾಡ, ಉಳ್ಳಾಕ್ಲು, ಮೃಗಂತಾಯ ದೈವಗಳ ನೇಮೋತ್ಸವ, 14 ರಂದು ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಲಿದೆ.

ಲಾಕ್ ಡೌನ್ ಇದ್ದರೂ ಕಲಬುರಗಿ ಸಿದ್ದಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ

Thursday, April 16th, 2020
siddalingeshwara

ಕಲಬುರಗಿ :  ಹೆಮ್ಮಾರಿ ಕೊರೊನಾ ತಡೆಗಟ್ಟಲು ಭಾರತ್ ಲಾಕ್ ಡೌನ್ ಜಾರಿಯಲ್ಲಿದ್ದಾಗಲೂ ಕಲಬುರಗಿಯ ಚಿತ್ತಾಪುರ ತಾಲ್ಲೂಕಿನ ರಾವೂರ್ ಗ್ರಾಮಸ್ಥರು ಸಿದ್ದಲಿಂಗೇಶ್ವರ ದೇವರ  ಜಾತ್ರಾ ಮಹೋತ್ಸವವನ್ನು ನೂರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಏಪ್ರಿಲ್ ನಡೆಸಿರುವುದು ಜಿಲ್ಲಾಡಳಿತ ಮತ್ತು ಪೊಲೀಸರ ನಿರ್ಲಕ್ಷ್ಯವನ್ನು ಎತ್ತಿತೋರಿಸಿದೆ. ಕಲಬುರಗಿ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾದ ಜಿಲ್ಲೆ 144 ‌ನಿಷೇದಾಜ್ಞೆ ಜಾರಿಯಲ್ಲಿದೆ. ಅಲ್ಲದೇ ಯಾವುದೇ ರೀತಿಯ ಜಾತ್ರೆ, ಉರೂಸ್, ಸಭೆ, ಸಮಾರಂಭಗಳನ್ನು ನಡೆಸದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ. ಆದ್ರೂ ರಾವೂರ್ ಗ್ರಾಮಸ್ಥರು ಮಾತ್ರ ನಿಷೇಧಾಜ್ಞೆ ನಡುವೆಯೂ ಗ್ರಾಮದ ಸಿದ್ದಲಿಂಗೇಶ್ವರ […]

ಮಂಗಳಾದೇವಿಯಲ್ಲಿ ಮಾರ್ಚ್ 12ರಿಂದ ಜಾತ್ರಾ ಮಹೋತ್ಸವ

Tuesday, March 10th, 2020
mangaladevi

ಮಂಗಳೂರು : ಇತಿಹಾಸ ಪ್ರಸಿದ್ಧ ಮಹತೋಭಾರ ಮಂಗಳಾದೇವಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾ. 12, 2020 ಗುರುವಾರದಿಂದ ಮಾ. 17, 2020ನೇ ಮಂಗಳವಾರದವರೆಗೆ ಜಾತ್ರಾ ಮಹೋತ್ಸವ ಜರಗಲಿರುವುದು. ಮಾ.16 ಸೋಮವಾರ ಮಧ್ಯಾಹ್ನ ಗಂಟೆ 12 ಕ್ಕೆ ರಥಾರೋಹಣ ನಂತರ ಅನ್ನದಾನ ಸೇವೆ ರಾತ್ರಿ 7 ರಿಂದ ರಥೋತ್ಸವ, ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಭೂತಬಲಿ, ಕವಾಟ ಬಂಧನ, ಶಯನ ಮೊದಲಾದ ಧಾರ್ಮಿಕ ವಿಧಿಗಳು ನಡೆಯಲಿದೆ. ಮಾ.17ರಂದು ತುಲಾಭಾರ ಸಂಜೆ 7ಕ್ಕೆ ಬಳಿ […]

ಪುತ್ತೂರು ಮಹಾಲಿಂಗೇಶ್ವರ ದೇವರ ವೈಭವದ ಬ್ರಹ್ಮರಥೋತ್ಸವ ಮತ್ತು ಚಿತ್ತಾಕರ್ಷಕ ಸಿಡಿಮದ್ದು ಪ್ರದರ್ಶನ

Thursday, April 19th, 2012
Putturu Mahalingeshwara Temple

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ ಪರ್ಯಂತ ನಡೆಯುತ್ತಿದ್ದ ಜಾತ್ರಾ ಮಹೋತ್ಸವ ಮಂಗಳವಾರ ರಾತ್ರಿ ವೈಭವದ ಬ್ರಹ್ಮರಥೋತ್ಸವ ಮತ್ತು `ಪುತ್ತೂರು ಬೆಡಿ` (ಸಿಡಿಮದ್ದು ಪ್ರದರ್ಶನ)ಯೊಂದಿಗೆ ಸಮಾಪನಗೊಂಡಿತು. ರಾತ್ರಿ 9.30 ವೇಳೆಗೆ ಮಹಾಲಿಂಗೇಶ್ವರ ದೇವರ ರಥಾರೋಹಣ ಆರಂಭವಾಯಿತು, ದೇವರು ರಥಾರೂಢರಾದ ಬಳಿಕ ದೇವಾಲಯದ ಎದುರಿನ ಬೆಡಿ ಗದ್ದೆಯಲ್ಲಿ ಸುಮಾರು ಒಂದು ಗಂಟೆ ಕಾಲ ಬೆಡಿ ಪ್ರದರ್ಶನ ನಡೆಯಿತು. ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ವಿವಿಧ ರೀತಿಯ ಚಿತ್ತಾಕರ್ಷಕ ಸಿಡಿಮದ್ದು ಪ್ರದರ್ಶನ ಭಕ್ತ ಸಮೂಹದ ಕಣ್ಮನ […]