ಇಂದು ದೆಹಲಿ ಹೈಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ

Monday, October 14th, 2019
DKShi

ನವ ದೆಹಲಿ : ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ದೆಹಲಿ ಹೈಕೋರ್ಟ್ ನಲ್ಲಿ ನಡೆಯಲಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಡಿ ಕೆ ಶಿವಕುಮಾರ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಸೋಮವಾರ ಬೆಳಿಗ್ಗೆ ದೆಹಲಿ ಉಚ್ಛ ನ್ಯಾಯಾಲಯದ ಎದುರು ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದ್ದು, ಮಾಜಿ ಸಚಿವರ ಪರ ಮೂರು ಹಿರಿಯ ವಕೀಲರು ವಾದ ಮಂಡಿಸುವ ಸಾಧ್ಯತೆ ಇದೆ […]

ಹಲ್ಲೆ ಹಾಗೂ ಅಪಹರಣ ಪ್ರಕರಣ: ದುನಿಯಾ ವಿಜಿಗೆ ಇಂದಾದರೂ ಸಿಗುತ್ತಾ ಜಾಮೀನು?

Saturday, September 29th, 2018
duniya-vijay

ಬೆಂಗಳೂರು: ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ಜೈಲು ಸೇರಿರುವ ದುನಿಯಾ ವಿಜಯ್ ಜಾಮೀನು‌ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸೆಷನ್ ಕೋರ್ಟ್ ಮುಂದೆ ಬರಲಿದ್ದು, ಇಂದಾದರೂ ವಿಜಯ್ಗೆ ಜಾಮೀನು ಸಿಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಪ್ರಕರಣ ಸಂಬಂಧ 5ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿದ ವಿಜಯ್ ಪರ ವಕೀಲರು ಸೆಷನ್ ಕೋರ್ಟ್ ಮೊರೆ ಹೋಗಿದ್ದರು. ಲ್ಯಾಬ್ ರಿಪೋರ್ಟ್ ಹಾಗೂ ಮಾರುತಿಗೌಡ ಹೆಲ್ತ್ ರಿಪೋರ್ಟ್ ಬರದ ಹಿನ್ನೆಲೆ ಹಾಗೂ ಜಾಮೀನು ಅರ್ಜಿಗೆ ಆಕ್ಷೇಪಣೆ […]

ನರೇಶ್ ಶೆಣೈ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಧಿಶರು

Wednesday, August 10th, 2016
Naresh Shenoy

ಮಂಗಳೂರು: ನಗರದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಆರ್‌‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನರೇಶ್ ಶೆಣೈ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಮಂಗಳವಾರ ನರೇಶ್ ಶೆಣೈ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಧಿಶರು ತಿರಸ್ಕರಿಸಿದ್ದಾರೆ. ಕೊಲೆ ನಡೆದ ಕೆಲ ತಿಂಗಳುಗಳಾದ ಬಳಿಕ ಪೊಲೀಸರಿಗೆ ಶರಣಾದ ನರೇಶ್, ತಲೆಮರೆಸಿಕೊಂಡಿದ್ದ ವೇಳೆ ಜಿಲ್ಲಾ ಮತ್ತು ಹೈಕೋರ್ಟ್‍ನಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಿದ್ದರೂ ದೊರೆತಿರಲಿಲ್ಲ. ಬಂಧಿತ 7 ಮಂದಿ ಪೈಕಿ […]

ಪತ್ರಕರ್ತ ನವೀನ್ ಸೂರಿಂಜೆ ಜಾಮೀನು ಅರ್ಜಿ ತಿರಸ್ಕೃತ

Thursday, December 27th, 2012
Naveen Soorinje

ಮಂಗಳೂರು : ಪತ್ರಕರ್ತ ನವೀನ ಸೂರಿಂಜೆ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ನಿನ್ನೆ ತಿರಸ್ಕಾರಗೊಂಡಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ದಾರಿಯೊಂದೆ ಇವರ ಪಾಲಿಗೆ ಉಳಿದಂತಾಗಿದೆ. ಪಡಿಲ್ ಮಾರ್ನಿಂಗ್  ಮಿಸ್ಟ್ ಹೋಂ ಸ್ಟೇ ಪ್ರಕರಣಕ್ಕೆ ಸಂಬಂಧಿಸಿದಂತೆ  ನವೀನ ಸೂರಿಂಜೆಯನ್ನು ನವೆಂಬರ್ 7 ರಂದು  ಕಂಕನಾಡಿ ಪೊಲೀಸರು ಬಂದಿಸಿದ್ದರು. ನಿನ್ನೆ ಹೋಂ ಸ್ಟೇ ದಾಳಿಗೆ ಸಂಬಂಧಿಸಿ ಪತ್ರಕರ್ತ ನವೀನ ಸೂರಿಂಜೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಅದರಂತೆ ನ್ಯಾಯಾಲಯ ಪೊಲೀಸರು ಸಲ್ಲಿಸಿದ್ದ ಘಟನೆಗೆ ಪೂರಕವಾದ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದು […]