ಪುಣಚಾ ಪಾಲಾಸತ್ತಡ್ಕ ದಲ್ಲಿ ಟಿಪ್ಪರ್ ಲಾರಿ ಪಲ್ಟಿ ಹೊಡೆದು ಚಾಲಕ ದಾರುಣ ಸಾವು

Wednesday, November 4th, 2020
Tipper

ವಿಟ್ಲ: ಪುಣಚಾ ಗ್ರಾಮದ ಪಾಲಾಸತ್ತಡ್ಕ ಎಂಬಲ್ಲಿ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಪಲ್ಟಿ ಹೊಡೆದು ಚಾಲಕ ದಾರುಣವಾಗಿ ಸಾವನ್ನಪ್ಪಿ,  ಕ್ಲೀನರ್ ಗೆ  ಗಾಯಗಳಾಗಿದೆ. ಪುಣಚಾ-ಪುತ್ತೂರು ರಸ್ತೆಯ ಪಾಲಾಸತ್ತಡ್ಕ ದಲ್ಲಿ ಬ್ರೇಕ್ ವೈಫಲ್ಲಕ್ಕೀಡಾದ ಟಿಪ್ಪರ್ ಲಾರಿ ರಸ್ತೆ ಬದಿ ಡಿಕ್ಕಿಹೊಡೆದು ಪಲ್ಟಿಯಾಗಿದೆ. ಅಪಘಾತದ ಸಂದರ್ಭ ಚಾಲಕ ರಫೀಕ್ ಟಿಪ್ಪರ್ ಲಾರಿಯಡಿಯಲ್ಲಿ ಸಿಲುಕಿ ಗಂಟೆಗಳ ಕಾಲ ಒದ್ದಾಡುತ್ತಿದ್ದರೂ ಟಿಪ್ಪರ್ ಮೇಲಕ್ಕೆತ್ತಲು ಸಾಧ್ಯವಾಗಲಿಲ್ಲ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಿ ದರೂ ಅಷ್ಟರಲ್ಲಾಗಲೇ ಚಾಲಕ ರಫೀಕ್ ಪ್ರಾಣ ಬಿಟ್ಟಿದ್ದಾರೆ. ಕ್ಲೀನರ್ ಗೆ ಸಣ್ಣ […]

ಕೇರಳಕ್ಕೆ ಮರಳು ಅಕ್ರಮ ಸಾಗಾಟ: ಟಿಪ್ಪರ್, ಲಾರಿ ಮುಟ್ಟುಗೋಲು

Monday, October 22nd, 2018
Lorry

ಮಂಗಳೂರು: ಅಡ್ಯಾರ್ ಕಣ್ಣೂರಿಂದ ಕೇರಳಕ್ಕೆ ಸಾಗಿಸುತ್ತಿದ್ದ ಮರಳು ಟಿಪ್ಪರ್, ಲಾರಿಗಳನ್ನು ಸಂಚಾರಿ‌ ಪೊಲೀಸರು  ಸೋಮವಾರ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಮುಟ್ಟುಗೋಲು ಹಾಕಿದ್ದಾರೆ. ಸಬ್ ಇನ್ ಸ್ಪೆಕ್ಟರ್ ಕಬ್ಬಲ್ ರಾಜ್ ನೇತೃತ್ವದಲ್ಲಿ ಪೊಲೀಸರು ಸೋಮವಾರ ಬೆಳಗ್ಗಿನ ಜಾವ ದಾಳಿ  ನಡೆಸಿ 10 ಚಕ್ರದ ಬೃಹತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ತಲಪಾಡಿ ಬಳಿ ಮುಟ್ಟುಗೋಲು ಹಾಕಿಕೊಂಡರು. ತಲಪಾಡಿ ದೇವಿನಗರ ಮೂಲಕ ಕೇರಳಕ್ಜೆ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಮರಳನ್ನು ಅಕ್ರಮವಾಗಿ ಟಿಪ್ಪರ್ ನಲ್ಲೂ ಸಾಗಿಸಲಾಗುತ್ತಿತ್ತು. ಟಿಪ್ಪರನ್ನೂ ಪೊಲೀಸರು ವಶಕ್ಕೆ […]

ಕಲ್ಲಡ್ಕ ಬಳಿ ಭೀಕರ ಸರಣಿ ಅಪಘಾತ: ಕಾರಿನಲ್ಲಿದ್ದವರು ಪವಾಡಸದೃಶ ಪಾರು

Friday, March 2nd, 2018
accident

ಮಂಗಳೂರು: ಕಲ್ಲಡ್ಕ ಬಳಿ ಭೀಕರ ಸರಣಿ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ನಾಲ್ಕು ಮಂದಿ ಪ್ರಯಾಣಿಕರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಈ ಘಟನೆ ನಡೆದಿದೆ. ಬಸ್‌ ಹಾಗೂ ಕಾರಿಗೆ ಡಿಕ್ಕಿಯಾದ ಟಿಪ್ಪರ್ ಲಾರಿ ಕಾರಿನ ಮೇಲೇರಿದೆ. ಅದಾಗ್ಯೂ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪವಾಡ ಸದೃಶವೆಂಬಂತೆ ಪಾರಾಗಿದ್ದಾರೆ. 6 ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೀತಾಂಗೋಳಿಯಲ್ಲಿ ಬೈಕ್ ಗೆ ಟಿಪ್ಪರ್ ಲಾರಿ ಢಿಕ್ಕಿ: ಅಧ್ಯಾಪಕ ದಾರುಣ ಮೃತ್ಯು

Wednesday, September 7th, 2016
Ubeid

ಕುಂಬಳೆ: ಸೀತಾಂಗೋಳಿ ಬಳಿ ಮುಖಾರಿಕಂಡ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಶಾಲಾ ಅಧ್ಯಾಪಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಬೈಕ್‌ಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕುಂಟಾರು ಬಳಿಯ ಉಯಿತ್ತಡ್ಕ ನಿವಾಸಿಯೂ ಕಟ್ಟತ್ತಡ್ಕ ಮುಹಿಮ್ಮಾತ್ ಹೈಯರ್ ಸೆಕೆಂಡರಿ ಶಾಲೆಯ ಮಲೆಯಾಳ ಅಧ್ಯಾಪಕನಾದ ಉಬೈದ್ ಕೆ.(30) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಇವರು ಮನೆಯಿಂದ ಶಾಲೆಗೆ ಬೈಕ್‌ನಲ್ಲಿ ಆಗಮಿಸುತ್ತಿದ್ದಾಗ ಮುಖಾರಿಕಂಡದಲ್ಲಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತದಿಂದ ತಲೆಗೆ ಗಂಭೀರ […]