ನದಿಗಳ ಪಾವಿತ್ರ್ಯ ಕಾಪಾಡಲು ಮುಂದಾಗಿ: ಡಾ. ವಿರೇಂದ್ರ ಹೆಗ್ಗಡೆ

Tuesday, June 5th, 2018
veerendra-heggade

ಮಂಗಳೂರು: ಯುವ ಬ್ರಿಗೇಡ್ ಕಾರ್ಯಕರ್ತರು ದಕ್ಷಿಣಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ಸ್ವಚ್ಚತಾ ಕಾರ್ಯಕ್ರಮವನ್ನು ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನಡೆಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ಪಾಪ ಕಳೆಯುವ ನಂಜನಗೂಡಿನ ಕಪಿಲ ನದಿಯೇ ಕಲ್ಮಶ! ಭಾನುವಾರ ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆವರೆಗೆ ರಾಜ್ಯದೆಲ್ಲೆಡೆಯಿಂದ ಬಂದ 500ಕ್ಕೂ ಮಿಕ್ಕಿ ಕಾರ್ಯಕರ್ತರು ನದಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಸ್ವಚ್ಚ ನೇತ್ರಾವತಿ […]

ಉಡುಪಿ ಪೇಜಾವರ ಹಿರಿಯ ಶ್ರೀಗಳಿಗೆ ‘ಯತಿಕುಲ ಚಕ್ರವರ್ತಿ’ ಬಿರುದು

Thursday, January 18th, 2018
pejavara

ಉಡುಪಿ: ವಾದಿರಾಜ ಗುರುಗಳ ನಂತರ, ಐದು ಪರ್ಯಾಯವನ್ನು ಯಶಸ್ವಿಯಾಗಿ ಮುಗಿಸಿದ ಉಡುಪಿ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶತೀರ್ಥ ಶ್ರೀಗಳಿಗೆ ‘ ಯತಿಕುಲ ಚಕ್ರವರ್ತಿ’ ಬಿರುದು ಪ್ರಧಾನ ಮಾಡಿ ಗೌರವಿಸಲಾಗಿದೆ. ಪರ್ಯಾಯಕ್ಕೆ ಮುನ್ನಾದಿನವಾದ ಬುಧವಾರ (ಜ 17) ರಥಬೀದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರು ಪೇಜಾವರ ಶ್ರೀಗಳಿಗೆ ಬಿರುದನ್ನು ಪ್ರಧಾನ ಮಾಡಿದರು. 2ನೇ ಬಾರಿ ಸರ್ವಜ್ಞ ಪೀಠವನ್ನೇರಿದ ಪಲಿಮಾರು ಶ್ರೀಗಳು ಬಿರುದು ಸ್ವೀಕರಿಸಿ ಆಶೀರ್ವಚನ ನೀಡುತ್ತಾ ಪೇಜಾವರ ಶ್ರೀಗಳು, ಕೃಷ್ಣನನ್ನು ಐದು […]

ಧರ್ಮಸ್ಥಳ : 80ನೇ ಸರ್ವಧರ್ಮ ಸಮ್ಮೇಳನ

Wednesday, December 12th, 2012
Sarva Dharma Sammelan

ಧರ್ಮಸ್ಥಳ :ಧರ್ಮಸ್ಥಳದ ಲಕ್ಷದೀಪೋತ್ಸವ ಅಂಗವಾಗಿ ಮಂಗಳವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ 80ನೆ ಸರ್ವಧರ್ಮ ಸಮ್ಮೇಳನವು ನಡೆಯಿತು ನಿವೃತ್ತ ಲೋಕಾಯುಕ್ತ ನ್ಯಾ| ಎನ್‌. ಸಂತೋಷ್‌ ಹೆಗ್ಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಯಾವುದೇ ಧರ್ಮವು ಮತ್ತೊಂದು ಧರ್ಮವನ್ನು ವಿರೋಧಿಸು, ದ್ವೇಷಿಸು ಎಂದು ಹೇಳಿಲ್ಲ ಆದರೆ ಧರ್ಮದ ಮೂಲ ತಿರುಳನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ದೇಶ, ದೇಶಗಳು ಹಾಗೂ ಧರ್ಮ, ಧರ್ಮಗಳ ನಡುವೆ ತಿಕ್ಕಾಟ ನಡೆಯುತ್ತಿವೆ. ಕೆಲವರು ಧರ್ಮಗಳ ನಡುವೆ ಭಿನ್ನಮತ ಸೃಷ್ಟಿಸಿ ಲಾಭ ಪಡೆಯುಲು ಯತ್ನಿಸುತ್ತಾರೆ ಎಂದ ಅವರು, ಧರ್ಮದ ಸಾರವನ್ನು […]