ಪತ್ರಕರ್ತರು ಒಳ್ಳೆಯ ವಿಷಯಗಳನ್ನು ಮಾತ್ರ ಸಮಾಜಕ್ಕೆ ನೀಡಿ : ಡಾ. ವೀರೇಂದ್ರ ಹೆಗ್ಗಡೆ ಕರೆ

Saturday, March 7th, 2020
veerendra-heggade

ಮಂಗಳೂರು : ಇಂದು ಜನರು ಪತ್ರಿಕೆಗಳನ್ನು ಓದುವ ಜತೆಗೆ ವಿಷಯಗಳ ಸೂಕ್ಷ್ಮತೆಗಳನ್ನು ತಿಳಿದು ವಿಮರ್ಶಿಸುವ ಪ್ರಜ್ಞಾವಂತಿಕೆ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ವರದಿಗಳನ್ನು ಬರೆಯುವಾಗ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಮಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾಧ್ಯಮಗಳು ಇಂದು ಗೋವಿನಂತಾಗಬೇಕು. ಗೋವು ಏನೇ ತಿಂದರೂ ಅದನ್ನು […]

ಇಂದು ಡಾ| ವೀರೇಂದ್ರ ಹೆಗ್ಗಡೆಯವರು 71ನೇ ಜನ್ಮದಿನಾಚರಣೆ

Monday, November 25th, 2019
Dr-Veerendra-heggade

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ 21ನೇ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 71ನೇ ಜನ್ಮದಿನಾಚರಣೆ ನ.25ರಂದು ನಡೆಯಲಿದೆ. 52ನೇ ವರ್ಷದ ಲಕ್ಷದೀಪೋತ್ಸವದ ಸುಸಂದರ್ಭದಲ್ಲೇ ಡಾ| ವೀರೇಂದ್ರ ಹೆಗ್ಗಡೆಯವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಈ ಬಾರಿಯ ವಿಶೇಷ. ಹೆಗ್ಗಡೆ ಅವರ ಆಪ್ತರು, ಬಂಧುಗಳು, ಅಭಿಮಾನಿಗಳು ಮತ್ತು ಶ್ರೀಕ್ಷೇತ್ರದ ಭಕ್ತರು ಅವರಿಗೆ ಮಾಲಾರ್ಪಣೆ ಮಾಡಿ ಜನ್ಮದಿನದ ಶುಭಾಶಯ ಅರ್ಪಿಸುವರು. ಪ್ರತಿ ವರ್ಷವೂ ನ.25ರಂದು ಜನ್ಮದಿನಾಚರಣೆ ನಡೆಸಲಾಗುತ್ತದೆ. 1968ರ ಅ.24ರಂದು 21ನೇ ಧರ್ಮಾಧಿಕಾರಿಯಾಗಿ ನೆಲ್ಯಾಡಿ ಬೀಡಿನಲ್ಲಿ ಪಟ್ಟಾಭಿಷಕ್ತರಾಗಿದ್ದರು.

ಬಜಗೋಳಿ : ಕೇವಲ ಹಣದಿಂದ ಸುಖವನ್ನು ಕಾಣಲು ಅಸಾಧ್ಯ : ಡಾ| ವೀರೇಂದ್ರ ಹೆಗ್ಗಡೆ

Thursday, September 5th, 2019
bajagoli

ಬಜಗೋಳಿ : ಕೇವಲ ಹಣದಿಂದ ಸುಖವನ್ನು ಕಾಣಲು ಅಸಾಧ್ಯ. ದೇವರ ಮೇಲೆ ಅಚಲ ಭಕ್ತಿ ಹೊಂದಿದಲ್ಲಿ ಮಾನವನು ಸಹಿಷ್ಣುತೆಯಿಂದ ಬದುಕಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಹೇಳಿದರು. ಸೆ. 3ರ ಸಂಜೆ ಮಾಳ ಮಲ್ಲಾರ್‌ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಮಾಳ ಮಲ್ಲಾರು ದಿ| ಶಂಕರ್‌ ಜೋಶಿ ವೇದಿಕೆಯಲ್ಲಿ ಜರಗಿದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸ್ವರ್ಣ ಮಹೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ, ಶಾಲಾ ಕೊಠಡಿ ಉದ್ಘಾಟಿಸಿ […]

ವಿಶ್ವ ತುಳು ಸಮ್ಮೇಳನ-2018: ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಸಾಂಪ್ರದಾಯಿಕ ಆಹ್ವಾನ ಪತ್ರಿಕೆ ನೀಡಿಕೆ

Thursday, November 15th, 2018
veerendra-hegde

ಮಂಗಳೂರು: ಡಿಸೆಂಬರ್ 2009ರಲ್ಲಿ ಉಜಿರೆಯಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನ ತುಳುನಾಡ ಐತಿಹಾಸದಲ್ಲೇ ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹಾಸಮ್ಮೇಳನವಾಗಿ ಮೂಡಿತ್ತು. ಪ್ರತೀಯೋರ್ವ ತುಳುವರ ಹಿರಿಮೆಯ ಸಮ್ಮೇಳನವೂ ಆಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಇವುಗಳ ಸಾರಥ್ಯದಲ್ಲಿ ಮಂಗಳೂರು ಅಡ್ಯಾರ್‌ನಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನವೂ ಭಿನ್ನವಾಗಿಯೇ ಮೂಡಿತ್ತು. ಇದು ಸಾಗರೋತ್ತರ ದುಬಾಯಿನಲ್ಲಿ ಜರುಗುವ ಸಮ್ಮೇಳನ ಎಲ್ಲಕ್ಕೂ ಮೀರಿ ಮತ್ತೊಂದು ಮೈಲುಗಲ್ಲು ಆಗಿ ಮೂಡಲಿದೆ ಎನ್ನುವ ಆಶಯ ನನಗಿದೆ ಎಂದು ಶ್ರೀ ಕ್ಷೇತ್ರ […]

ದುಬೈಯಲ್ಲಿ ವಿಶ್ವ ತುಳು ಸಮ್ಮೇಳನ

Monday, July 23rd, 2018
veerendra-heggde

ಮಂಗಳೂರು : ಅರಬ್ ಸಂಸ್ಥಾನದಲ್ಲಿ ನವಂಬರ್ 23 ಮತ್ತು 24 ರಂದು ದುಬಾಯಿಯ ಅಲ್‌ನಾಸರ್ ಲೀಸರ್ ಲ್ಯಾಂಡ್‌ಐಸ್‌ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ತುಳು ಸಮ್ಮೇಳನ ಜರಗಲಿದ್ದು, ಸಮ್ಮೇಳನದ ಕುರಿತು ಸಂಘಟನೆಯ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ದುಬಾಯಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಕಾರ್ಯಕ್ರಮದ ರೂಪುರಶಗಳನ್ನು ವಿವರಿಸಿ ಸಮ್ಮೇಳನಕ್ಕೆ ಆಹ್ವಾನಿಸಿದರು. ಸಮ್ಮೇಳನ ತಯಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ವೀರೆಂದ್ರ ಹೆಗ್ಗಡೆ ಅವರು ಎರಡು ದಿನಗಳ ಕಾಲ ನಡೆಯುವ ವಿಶ್ವ ತುಳು ಸಮ್ಮೇಳನಕ್ಕೆ ಉಪಯುಕ್ತ […]

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಯೋಗ ಕಾರ್ಯಕ್ರಮ!

Thursday, June 21st, 2018
yoga-day

ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಯೋಗ ಕಾರ್ಯಕ್ರಮ ನಡೆಯಿತು. ಮಂಗಳಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ವಸತಿ ಸಚಿವ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್ ಭಾಗಿಯಾದರು. ಧರ್ಮಸ್ಥಳದಲ್ಲೂ ಯೋಗ ದಿನ ಪ್ರಯುಕ್ತ ಬೃಹತ್ ಕಾರ್ಯಕ್ರಮ ನಡೆಯಿತು. ಡಾ. ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.

ಶಿರಾಡಿ ಘಾಟಿ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿ ವೀಕ್ಷಿಸಿದ ಡಾ.ವೀರೇಂದ್ರ ಹೆಗ್ಗಡೆ

Tuesday, June 5th, 2018
veerendra-heggade-2

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಕಲೇಶಪುರದ ಕೆಂಪುಹೊಳೆಯಿಂದ ಶಿರಾಡಿ ಗ್ರಾಮದ ಅಡ್ಡಹೊಳೆ ತನಕ ನಡೆಯುತ್ತಿರುವ ಶಿರಾಡಿ ಘಾಟಿ ರಸ್ತೆ 2ನೇ ಹಂತದ ಕಾಂಕ್ರೀಟ್‌ ರಸ್ತೆ ಕಾಮಗಾರಿಯನ್ನು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವೀಕ್ಷಿಸಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವೀರೇಂದ್ರ ಹೆಗ್ಗಡೆಯವರು ಜೂ. 2ರಂದು ಪೂರ್ಣ 13 ಕಿ.ಮೀ. ದೂರದ ತನಕ ಕಾಮಗಾರಿ ವೀಕ್ಷಿಸಿದರು. ಕಾಂಕ್ರೀಟ್‌ ಕಾಮಗಾರಿಗಾಗಿ ಬಳಸುವ ಜರ್ಮನ್‌ ಯಂತ್ರ, ಕಾಮಗಾರಿ ಸಲುವಾಗಿ ಮಿಕ್ಸಿಂಗ್‌ ಯಂತ್ರ ಹಾಗೂ ಯುನಿಟ್‌ […]

ನಮ್ಮ ರಕ್ಷಣೆಗೆ ನಾಗಾರಾಧನೆ ಅತೀ ಮುಖ್ಯ : ಡಾ. ವೀರೇಂದ್ರ ಹೆಗ್ಗಡೆ

Sunday, February 25th, 2018
Kudupu-hegde

ಮಂಗಳೂರು: ಜ್ಞಾನ ದೇಶದ ಅಭಿವೃದ್ಧಿಯ ಸಂಪತ್ತು. ದರೋಡೆಕೋರರಿಗೆ, ಆಕ್ರಮಣಕಾರರಿಗೆ ಆಕ್ರಮಿಸಲಾಗದ ಸಂಪತ್ತು ಇದ್ದರೆ ಅದು ಜ್ಞಾನ ಮಾತ್ರ. ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಂಪತ್ತಿದೆ. ಆದರೆ ಕೇವಲ ಸಂಪತ್ತಿನಿಂದ ಬದುಕಲು ಆಗುವುದಿಲ್ಲ. ಬದುಕಿಗೆ ಪ್ರಕೃತಿಯ ಆರಾಧನೆ ಕೂಡಾ ಬೇಕಾಗಿದೆ. ಯಾಕೆಂದರೆ ಪ್ರಕೃತಿಗೆ ದೊಡ್ಡ ಶಕ್ತಿಯಿದೆ. ಜನರ ಜೀವನದ ಮೇಲೆ ಪರಿಣಾಮ ಪಕೃತಿಯಿಂದ ಬೀರುವುದು ಸಹಜ. ಇದನ್ನು ನಿಯಂತ್ರಿಸಲಿಕ್ಕಾಗಿ ಪ್ರಕೃತಿ ಆರಾಧನೆ ಮಾಡುತ್ತೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಕುಡುಪು ಶ್ರೀ ಅನಂತ ಪದ್ಮನಾಭ […]

ಕೋಮು ಸೌಹಾರ್ದ ಕಾಪಾಡಿ: ಡಾ. ವೀರೇಂದ್ರ ಹೆಗ್ಗಡೆ ಮನವಿ

Tuesday, January 9th, 2018
virendra-hegde

ಬೆಳ್ತಂಗಡಿ: ಕರಾವಳಿಯಲ್ಲಿ ಕೋಮು ಸೌಹಾರ್ದ, ಶಾಂತಿ ಕಾಪಾಡುವ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕರಾವಳಿಯಲ್ಲಿ ಕಳೆದ ಸ್ವಲ್ಪ ಸಮಯದಿಂದ ಅವಿರತವಾಗಿ ಅಶಾಂತಿಯ ವಾತಾವರಣ ಕಂಡುಬರುತ್ತಿದೆ. ಅನೇಕ ಸಾವು-ನೋವುಗಳು ಸಂಭವಿಸಿವೆ. ಎರಡೂ ಧರ್ಮಗಳ ವ್ಯಕ್ತಿಗಳು ಬಲಿಯಾಗುತ್ತಿದ್ದಾರೆ. ಘಟನಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಒಂದು ಧರ್ಮದ ವ್ಯಕ್ತಿಯ ಕೊಲೆಯಾದ ಬಳಿಕ ಪ್ರತೀಕಾರವೆಂಬಂತೆ ಇನ್ನೊಂದು ಧರ್ಮದ ವ್ಯಕ್ತಿಯ ಹತ್ಯೆ ನಡೆಯುವುದು ಕಂಡುಬರುತ್ತದೆ. ಕರಾವಳಿ ಭಾಗದ ಜನರು […]

ಧರ್ಮಸ್ಥಳದ ಮಹೋತ್ಸವದಲ್ಲಿ ಪಾನಮುಕ್ತತೆಯ ಸಂಭ್ರಮೋತ್ಸವ

Thursday, December 15th, 2016
Dharmasthala

ಬೆಳ್ತಂಗಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ನಡೆಸಲಾದ ಮದ್ದೂರು, ಬಾದಾಮಿ, ಶ್ರೀರಂಗಪಟ್ಟಣ, ಕುಂದಾಪುರ, ತುರುವೆಕೆರೆ, ಕಾರ್ಕಳದ 400 ಮಂದಿ ಪಾನಮುಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದರು. ನಿನ್ನೆ ಶ್ರೀಕ್ಷೇತ್ರಕ್ಕೆ ಆಗಮಿಸಿದ್ದ ಅವರು, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಧರ್ಮಸ್ಥಳದ ಮಹೋತ್ಸವದಲ್ಲಿ ಪಾನಮುಕ್ತತೆಯ ಸಂಭ್ರಮೋತ್ಸವ ಆಚರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಡಾ. ಹೆಗ್ಗಡೆ, ವ್ಯಸನ ಬಿಟ್ಟು ಪವಿತ್ರರಾಗಿ ಬಂದಿರುವ ನಿಮ್ಮನ್ನು ಸ್ವಾಮಿ ಹರಸಿದ್ದಾರೆ. ಕುಡಿತವೆಂಬ ಮಡಿ ಮೈಲಿಗೆಯಿಂದ ಹೊರಬಂದ ನಿಮ್ಮ ವ್ಯಕ್ತಿತ್ವ […]