ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ 9 ವರ್ಷ ಪ್ರಾಯದ ಹುಲಿ ಸಾವು

Tuesday, January 4th, 2022
Tiger oliver

ಮಂಗಳೂರು: ಆರೋಗ್ಯವಂತ ಹಾಗೂ ಸದೃಢವಾಗಿದ್ದ 9 ವರ್ಷ ಪ್ರಾಯದ ಹುಲಿಯೊಂದು ಮಂಗಳವಾರ ಮುಂಜಾನೆ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಮೃತಪಟ್ಟಿದೆ. ಮುಂಜಾನೆವರೆಗೂ ಚುರುಕಾಗಿಯೇ ಇದ್ದು ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಮಾಡಿದ ಪ್ರಯತ್ನ ಫಲಪ್ರದವಾಗಲಿಲ್ಲ.   ಈ ಹುಲಿಯ ಹೆಸರು ಒಲಿವರ್‌. ಇದು ವಿಕ್ರಂ ಹಾಗೂ ಶಾಂಭವಿ ಹುಲಿ ಜೋಡಿಗೆ ಜನಿಸಿದ್ದ ಎರಡು ಮರಿಗಳಲ್ಲೊಂದು. ಇದರ ಪ್ರಾಯ 9 ವರ್ಷ ಆಗಿತ್ತು. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ […]

ವಿವಿ ಕಾಲೇಜು: ಹಿಂದಿಯಲ್ಲಿ ರ‍್ಯಾಂಕ್ ಪಡೆದವರಿಗೆ ನಗದು ಬಹುಮಾನ

Thursday, December 23rd, 2021
Hindi Rank

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಹಿಂದಿ ವಿಭಾಗ ಮತ್ತು ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಾದೇಶಿಕ ಕಚೇರಿಯ ಸಹಯೋಗದಲ್ಲಿ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಾದೇಶಿಕ ಕಚೇರಿ ಉಪಮುಖ್ಯಸ್ಥ ಆರ್. ಗೋಪಾಲ ಕೃಷ್ಣ, ಕರಾವಳಿ ಜನರಿಗೆ ವಿಜಯಾ ಬ್ಯಾಂಕ್ ಜೊತೆಯಿದ್ದ ಬಾಂಧವ್ಯ, ವಿಲೀನದ ಬಳಿಕ ಬ್ಯಾಂಕ್ ಆಫ್ ಬರೋಡಾದ ಮೂಲಕ ಮುಂದುವರಿದಿದೆ, […]

ಪ್ರೊ.ಅಮೃತ ಸೋಮೇಶ್ವರ ಅವರಿಗೆ 2020ರ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ

Wednesday, October 7th, 2020
Amrutha Somehwara

ಮಂಗಳೂರು  : ಹಿರಿಯ ಸಾಹಿತಿ, ಜನಪದ ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕ ಪ್ರೊ.ಅಮೃತ ಸೋಮೇಶ್ವರ ಅವರಿಗೆ 2020ರ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಘೋಷಿಸಲಾಗಿದೆ. ಪುತ್ತೂರು ಸಹಾಯಕ ಆಯುಕ್ತ ಯತೀಶ್‌ ಉಳ್ಳಾಲ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.  ಅ.10ರಂದು ಇಲ್ಲಿನ ಬಾಲವನದಲ್ಲಿ ನಡೆಯಲಿರುವ ಡಾ. ಕಾರಂತರ ಜನ್ಮ ದಿನಾಚರಣೆ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.  ಅಪರಾಹ್ನ 2.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕೊರೊನಾ ನಿಯಮಾವಳಿ ಹಿನ್ನೆಲೆಯಲ್ಲಿ ಈ ಬಾರಿ ಜನ್ಮದಿನಾಚರಣೆ ಸರಳವಾಗಿ ನಡೆಯಲಿದೆ. ಪ್ರೊ.ಅಮೃತ ಸೋಮೇಶ್ವರ ಖ್ಯಾತ […]

ಜೂನ್ 10 ರಿಂದ ಸಾರ್ವಜನಿಕ ವೀಕ್ಷಣೆಗೆ ತೆರೆಯಲಿರುವ ಪಿಲಿಕುಳ ನಿಸರ್ಗಧಾಮ

Monday, June 8th, 2020
Pilikula

ಮಂಗಳೂರು  :  ಲಾಕ್ ಡೌನ್ ಕಾರಣದಿಂದ ಕಳೆದ ಮೂರು ತಿಂಗಳಿಂದ ಮುಚ್ಚಲಾಗಿದ್ದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಎಲ್ಲಾ ಆಕರ್ಷಣೆಗಳನ್ನು ಜೂನ್ 10, 2020 ರಿಂದ ತೆರೆಯಲಾಗುವುದು ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಜೆ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ. ಸರ್ಕಾರದ ಆದೇಶ ಅನುಸರಿಸಿ ಕೋವಿಡ್ 2019 ರ ನಿಯಂತ್ರಣ ಮಾರ್ಗಸೂಚಿಯ ಎಲ್ಲಾ ಸೂಚನೆಗಳನ್ನು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗಸೂಚಿ/ ಎಸ್‌ಒಪಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತುಗೊಳಪಟ್ಟುಜೂನ್ , 10, 2020 ಬುಧವಾರದಿಂದ ಪೂರ್ವಾಹ್ನ 9.30 ರಿಂದ ಸಂಜೆ 05.00 […]

3ಡಿ ತಾರಾಲಯ; ಪ್ರದರ್ಶನವೆಲ್ಲ ಹೌಸ್‌ಫುಲ್‌!

Monday, March 26th, 2018
taralaya

ಪಿಲಿಕುಳ: ಇಲ್ಲಿನ ಡಾ. ಶಿವರಾಮ ಕಾರಂತ ಬಯೋಲಾಜಿಕಲ್‌ ಪಾರ್ಕ್‌ನಲ್ಲಿ ಮಾ. 1ರಿಂದ ಆರಂಭವಾಗಿರುವ ವಿಶ್ವದ 21ನೇ ಅತ್ಯಾಧುನಿಕ ಹೈಬ್ರಿಡ್‌ ತ್ರಿಡಿ ‘ಸ್ವಾಮಿ ವಿವೇಕಾನಂದ ತಾರಾಲಯ’ದ ಪ್ರದರ್ಶನಕ್ಕೆ 25 ದಿನದ ಅಂತರದಲ್ಲಿ ಸುಮಾರು 11,000 ಜನರು ಆಗಮಿಸಿ ನಭೋಮಂಡಲದ ವಿಸ್ಮಯ ವೀಕ್ಷಿಸಿದ್ದಾರೆ. ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ದೂರದೂರಿನಿಂದ ಪಿಲಿಕುಳಕ್ಕೆ ಆಗಮಿಸಿ ತಾರಾಲಯದಲ್ಲಿ ನಭದ ವಿಸ್ಮಯ ನೋಡಲು ಹಾತೊರೆಯುವ ಹಿನ್ನೆಲೆಯಲ್ಲಿ ಟಿಕೆಟ್‌ ಬೇಗನೆ ಖಾಲಿಯಾಗುತ್ತಿದೆ. ಈಗ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ದೊರೆಯಲಿದೆ. ಆಗ ಭಾರೀ […]

ವಸಾಹತುಶಾಹಿ ಆಡಳಿತ ಕಾಲದ ವಿಶ್ವವಿದ್ಯಾನಿಲಯ ಕಾಲೇಜಿನ 149 ವರ್ಷಗಳ ಸಾರ್ಥಕ ಸೇವೆ

Thursday, October 12th, 2017
university collage

ಮಂಗಳೂರು: ವಸಾಹತುಶಾಹಿ ಆಡಳಿತ ಕಾಲದಲ್ಲಿ (1860ರಲ್ಲಿ) ಮಂಗಳೂರಿನ ನಾಗರಿಕರ ದೂರದೃಷ್ಟಿ, ಸಮಾಜಮುಖಿ ಚಿಂತನೆಯ ಫಲವಾಗಿ ಅಸ್ತಿತ್ವಕ್ಕೆ ಬಂದ ಅಂದಿನ ಸರಕಾರಿ ಕಾಲೇಜು ಈ ಸೆಪ್ಟೆಂಬರ್‌ಗೆ 149 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿದೆ. ವಿಶ್ವವಿದ್ಯಾನಿಲಯ ಕಾಲೇಜಿಗೆ 150ರ ಸಂಭ್ರಮ. ಡಾ. ಶಿವರಾಮ ಕಾರಂತ, ಡಾ. ಎಂ.ವೀರಪ್ಪ ಮೊಯ್ಲಿ, ಡಾ. ಮನಮೋಹನ್ ಅತ್ತಾವರ, ಮಂಜೇಶ್ವರ ಗೋವಿಂದ ಪೈ, ಎ.ಬಿ.ಶೆಟ್ಟಿ, ಯು.ಪಿ.ಮಲ್ಯ, ವೈಕುಂಠ ಬಾಳಿಗ, ಕಮಲಾದೇವಿ ಚಟ್ಟೋಪಾಧ್ಯಾಯ, ಬಿ.ರಮಾನಾಥ ರೈ, ವಿಜಯಕುಮಾರ್ ಶೆಟ್ಟಿ, ಪಿ.ಎಂ.ಸಯೀದ್, ವಿನಯಕುಮಾರ್ ಸೊರಕೆ, ಡಿ.ಕೆ.ಚೌಟ… ಹೀಗೆ ಪಟ್ಟಿ ಬೆಳೆಯುತ್ತಲೇ […]

ನನ್ನ ವಿರುದ್ಧ ಬೆದರಿಕೆ ಹಾಕುವುದರಲ್ಲಿ ಅರ್ಥವಿಲ್ಲ :ನಟ ಪ್ರಕಾಶ್ ರಾಜ್

Wednesday, October 11th, 2017
prakash raj

ಉಡುಪಿ:  ಅಭಿಪ್ರಾಯಗಳನ್ನು ಯಾರಾದರೂ ಖಂಡಿಸಬೇಕೆಂದಿದ್ದರೆ ಡಾ.ಶಿವರಾಮ ಕಾರಂತ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್ ರಂಥಹ ಬರಹಗಾರರ ಬರಹಗಳ ಬಗ್ಗೆ ಹೇಳಲಿ, ನಾನು ಕೇವಲ ಅವರ ಪ್ರತಿಫಲನವಷ್ಟೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿದ್ದಕ್ಕೆ ನನ್ನ ವಿರುದ್ಧ ಬೆದರಿಕೆ ಹಾಕುವುದರಲ್ಲಿ ಅರ್ಥವಿಲ್ಲ. ಅವರ ಪುಸ್ತಕಗಳನ್ನು ಸಾಕಷ್ಟು ಓದಿ ಬೆಳೆದ ನಾನು ಅವರ ಬರಹಗಳಿಂದ ಪ್ರಭಾವಿತನಾಗಿದ್ದೇನೆ. ನನಗೆ ಕಂಡಿದ್ದನ್ನು ನಾನು ಹೇಳದಿದ್ದರೆ ಅವರನ್ನು ಮೋಸಗೊಳಿಸಿದಂತೆ ಆಗುತ್ತದೆ ಎಂದು ಖ್ಯಾತ ನಟ ಪ್ರಕಾಶ್ ರಾಜ್ ಹೇಳಿದ್ದಾರೆ. ಅವರು ನಿನ್ನೆ ಶಿವರಾಮ ಕಾರಂತರ ಹುಟ್ಟೂರಾದ […]