ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಾಲಾ ಕಾಲೇಜು ಸಮೀಪ ತಂಬಾಕು ಮಾರಾಟ – ಕಠಿಣ ಕ್ರಮ

Thursday, September 17th, 2020
tobaco

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಶಾಲಾ ಕಾಲೇಜು ಆವರಣಗಳಲ್ಲಿ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ, ಮಾರಾಟ ಮಾಡುವ ಪ್ರಕರಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ಮಹಾನಗರಪಾಲಿಕೆ ಉಪ ಆಯುಕ್ತ ಡಾ. ಸಂತೋಷ್ ಕುಮಾರ್ ಹೇಳಿದರು. ಅವರು ಮಂಗಳವಾರ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ಕೋಟ್ಪಾ-2003 ಕಾಯ್ದೆಯ ಅನುಷ್ಠಾನ ಮತ್ತು ತಂಬಾಕು ಮಾರಾಟಗಾರಿಗೆ ಪ್ರತ್ಯೇಕ ವ್ಯಾಪಾರ ಪರವಾನಗಿ ಅವಕಾಶ ಮತ್ತು ಪ್ರಯೋಜನಗಳು ಎಂಬ ವಿಷಯದ ಕುರಿತು ವರ್ಚುವಲ್ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು. ಈಗಾಗಲೇ ಪಾಲಿಕೆ ವ್ಯಾಪ್ತಿಯ ಪ್ರತೀ […]

ಸಿಗರೇಟ್, ಬೀಡಿ ಹಾಗೂ ಇತರ ತಂಬಾಕು ಮಾರಾಟಕ್ಕೂ ಲೈಸೆನ್ಸ್

Wednesday, September 26th, 2018
zp meeting

ಮಂಗಳೂರು : ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.  ಸಿಗರೇಟ್, ಬೀಡಿ ಹಾಗೂ ಇತರ ತಂಬಾಕು ಮಾರಾಟಕ್ಕೂ ಲೈಸೆನ್ಸ್ ಕಾನೂನು ತರುವುದಕ್ಕೆ ಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದು ರಾಜ್ಯ ವಸತಿ ಹಾಗು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕೆ ಡಿ ಪಿ ಸಭೆಯಲ್ಲಿ ಮಾತನಾಡಿದ ಅವರು  ಮದ್ಯ ಮಾರಾಟಕ್ಕೆ ಲೈಸೆನ್ಸ್ ಮಾದರಿಯಲ್ಲೇ  ಸಿಗರೇಟ್, ಬೀಡಿ ಹಾಗೂ ಇತರ […]