ತುಳು ರಂಗಭೂಮಿಯಲ್ಲಿ ಸದಭಿರುಚಿಯ ಬದಲಾವಣೆ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಆಶಯ

Thursday, September 28th, 2023
ತುಳು ರಂಗಭೂಮಿಯಲ್ಲಿ ಸದಭಿರುಚಿಯ ಬದಲಾವಣೆ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಆಶಯ

ಮಂಗಳೂರು : ತುಳು ನಾಟಕ ಹಾಗೂ ಸಿನಿಮಾ ರಂಗದಲ್ಲಿ ನಿರಂತರ ಕಾಮಿಡಿ ನೋಡಿ ಜನತೆಗೆ ಸಾಕಾಗಿ ಹೋಗಿದೆ. ಹಾಗಾಗಿ ಪ್ರೇಕ್ಷಕರು ಬದಲಾವಣೆ ಬಯಸಿದ್ದಾರೆ. ಗಂಭೀರ, ತಿಳಿ ಹಾಸ್ಯದ ತುಳು ನಾಟಕಗಳನ್ನು ಇಷ್ಟಪಡುತ್ತಾರೆ. ಪ್ರೇಕ್ಷಕರ ಮನೋಧರ್ಮ ಅರಿತು ತುಳು ನಾಟಕ, ಸಿನಿಮಾಗಳಲ್ಲಿ ಸದಭಿರುಚಿಯ ಬದಲಾವಣೆ ತರಬೇಕಾಗಿದೆ ಎಂದು ರಂಗಕರ್ಮಿ, ನಟ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು ತನ್ನ ರಂಗಭೂಮಿ ಹಾಗೂ […]

ಕನ್ನಡ, ತುಳು ಸಿನೆಮಾ ನಟ, ನಿರ್ದೇಶಕ ಶರತ್ ಚಂದ್ರ ಕದ್ರಿ ಇನ್ನಿಲ್ಲ

Monday, January 10th, 2022
sharathchandra Kadri

ಮಂಗಳೂರು : ಕನ್ನಡ, ತುಳು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ ಹಾಗೂ ನೂರಕ್ಕೂ ಹೆಚ್ಚು ನಾಟಕ ಗಳನ್ನು ರಚಿಸಿ ಅಭಿನಯಿಸಿದ ಹಿರಿಯ ನಟ ಹಾಗೂ ನಿರ್ದೇಶಕ ಶರತ್ ಚಂದ್ರ ಕದ್ರಿ ಅವರು ಭಾನುವಾರ ಬೆಳಿಗ್ಗೆ 4.30  ಕ್ಕೆ ತಮ್ಮ ಸ್ವ ಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆ.ಏನ್ ಟೈಲರ್ ನಾಟಕಗಳ ಮೂಲಕ ನಾಯಕ ನಟನಾಗಿ ರಂಗಭೂಮಿ ಪ್ರವೇಶಿಸಿದ ಶರತ್ ಚಂದ್ರ ಕದ್ರಿ ಕನ್ನಡದ ಕತ್ತೆಗಳು ಸಾರ್ ಕತ್ತೆಗಳು ಸಿನೆಮಾದ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ತುಳುವಿನ ಕಟಪಾಡಿ ಕಟ್ಟಪ್ಪಾ, ದೊಂಬರಾಟ ಮೊದಲಾದ ಚಿತ್ರಗಳಲ್ಲಿ […]

ಯುನಿವರ್ಸಿಟಿ ಸಂಧ್ಯಾ ಕಾಲೇಜಿನಲ್ಲಿ ತುಳು ಎಂಎ ಪ್ರವೇಶಾತಿ ಆರಂಭ

Wednesday, November 17th, 2021
MA in Tulu

ಮಂಗಳೂರು : ಒಂದು ಭಾಷೆ ಶೈಕ್ಷಣಿಕವಾಗಿ ಗಟ್ಟಿಯಾದಷ್ಟು ಎಲ್ಲ ಸ್ತರಗಳಲ್ಲಿ ಬಲವರ್ಧನೆಗೊಳ್ಳುತ್ತಾ ಹೋಗುತ್ತದೆ. ತುಳು ಭಾಷೆಯಾಗಿ ಬೆಳೆದಿದ್ದರೂ, ಶೈಕ್ಷಣಿಕ ಅವಕಾಶಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 2018-19ನೇ ಸಾಲಿನಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಆರಂಭಿಸಿತ್ತು. ಈ ಮೂಲಕ ತುಳು ಭಾಷೆಯ ಜನಪದ, ಸಾಹಿತ್ಯ, ಇತಿಹಾಸ, ಪರಂಪರೆಯ ಬಗ್ಗೆ ತಿಳಿಯಲು ಉನ್ನತ ಶಿಕ್ಷಣದಲ್ಲಿ ಅವಕಾಶ ಸೃಷ್ಟಿಸಲಾಗಿದೆ. ಹೈಸ್ಕೂಲ್ ಮತ್ತು ಪದವಿ ಹಂತದಲ್ಲಿ ಈಗಾಗ್ಲೇ ತುಳು ಕಲಿಕೆಗೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳು […]

ನಟಿ ವಿನ್ನಿ ಫರ್ನಾಂಡಿಸ್‌ ಗೆ ಹೃದಯಾಘಾತ

Thursday, July 29th, 2021
Vinni - Fernandes

ಮಂಗಳೂರು : ಕನ್ನಡ, ತುಳು, ಕೊಂಕಣಿ ಭಾಷೆಯ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ವಿನ್ನಿ ಫರ್ನಾಂಡಿಸ್‌ (63) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿನ್ನಿ ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದರು. ಹಾಸ್ಯ, ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದರು. ಪತಿ ವಿನ್ಸೆಂಟ್‌, ಮಕ್ಕಳಾದ ಪ್ರತಾಪ್‌, ಬಬಿತಾ ಅವರನ್ನು ಅಗಲಿದ್ದಾರೆ.    

ಆಡುಭಾಷೆಯನ್ನು ಮರೆತರೆ ನಮ್ಮ ಮೂಲವನ್ನು ಮರೆತಂತೆ: ಡಿ ವಿ ಸದಾನಂದ ಗೌಡ

Sunday, May 30th, 2021
DV Sadananda-gowda

ಮಂಗಳೂರು: ಜಾಗತೀಕರಣದ ಪ್ರಭಾವದಿಂದ ಇಂಗ್ಲಿಷ್‌ ಅನಿವಾರ್ಯ ಎಂಬಂತಾಗಿದೆ. ಇದರಿಂದ ತುಳು ಸೇರಿದಂತೆ ಹಲವು ಭಾಷೆಗಳು ನಲುಗುತ್ತಿವೆ. ಹೀಗಾಗಿ ತುಳುವರು ತಮ್ಮ ಭಾಷೆಯನ್ನು ಮರೆತು ಮೂಲವನ್ನೇ ಮರೆಯದಿರೋಣ, ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ತುಳು ಉಪನ್ಯಾಸ ಮಾಲಿಕೆಯ ವರ್ಷಾಚರಣೆಯ ಪ್ರಯುಕ್ತ ಶನಿವಾರ […]

“ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ತುಳು, ಕನ್ನಡ ಭಕ್ತಿಗೀತೆ ಬಿಡುಗಡೆ

Monday, January 18th, 2021
kanadabolpu

ಮಂಜೇಶ್ವರ : ಇತಿಹಾಸ ಪ್ರಸಿದ್ಧವಾದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಧನು ಪೂಜಾ ಸಮಾರೋಪದ ಮಕರ ಸಂಕ್ರಮಣದಂದು “ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ಎಂಬ ತುಳು, ಕನ್ನಡ ಭಕ್ತಿಗೀತೆ  ಬಿಡುಗಡೆಗೊಂಡಿತು. ತುಳುನಾಡ ತುಡರ್ ಕ್ರಿಯೇಷನ್ ಅರ್ಪಿಸಿದ ಎ.ಡಿ.ಕೊರಗಪ್ಪ ಹಾಗೂ ಕಾರ್ತಿಕ್ ಲಾಲ್ ಭಾಗ್ ಸಾಹಿತ್ಯ ರಚಿಸಿ  ಡಿ.ಪ್ರವೀಣ್ ಕುಮಾರ್  ನಿರ್ದೇಶಿಸಿದ ಈ ಗೀತೆಯನ್ನ  ಯೂಟ್ಯೂಬ್ ನ ಕೀಲಿಮಣೆಯನ್ನ ಅದುಮುವ ಮೂಲಕ ಕ್ಷೇತ್ರದ ತಂತ್ರಿವರೇಣ್ಯರಾದ ಬ್ರಹ್ಮ ಶ್ರೀ ಗಣೇಶ ತಂತ್ರಿ ಬಿಡುಗಡೆಗೊಳಿಸಿದರು. ಈ ವೇಳೆ ಕ್ಷೇತ್ರದ ಆಡಳಿತ ಸಮಿತಿಯ ಪಧಾಧಿಕಾರಿಗಳು, […]

ತುಳುವಿನಲ್ಲಿ ಟ್ವೀಟ್ ಮಾಡಿದ ಪೊಲೀಸ್ ಕಮಿಷನರ್ ಹರ್ಷ ಪಿಎಸ್

Sunday, June 28th, 2020
harsha PS

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಹರ್ಷ ಪಿ ಎಸ್ ಅವರು  ವಾರ್ತಾಮತ್ತು ಪ್ರಚಾರ ಇಲಾಖೆ ಆಯುಕ್ತರಾಗಿ  ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಇದುವರೆಗೆ ಸಹಕಾರ ನೀಡಿದ ಮಂಗಳೂರಿನ ಜನತೆಗೆ ತುಳುವಿನಲ್ಲಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ. “ಕುಡ್ಲದ ಮಾತ ಮೋಕೆದ ಬಂಧುಲೇ, 11 ತಿಂಗೊಳುರ್ದ್ ಕುಡ್ಲದ ಪೊಲೀಸ್ ಆಯುಕ್ತೆಯಾದ್ ಸೇವೆ ಮಂದಿನ ಎಂಕ್ ಇತ್ತೆ ವರ್ಗಾವಣೆ ಅವೋಂದುಂಡು. ಇಲಾಖೆದ ಸಂಪೂರ್ಣ ಸಹಕಾರದೊಟ್ಟಿಗೆ ಮಸ್ತ್ ಪ್ರಾಮಾಣಿಕ ಬೊಕ್ಕ ಜನಪರವಾದು ಎನ್ನ ಕರ್ತವ್ಯ ಮಲ್ತೊಂದು ಬೈದೆ. ಎಂಕ್ ಸಹಕಾರ ಬೆಂಬಲ […]

ಶೀಘ್ರದಲ್ಲಿ ತುಳುವನ್ನು ಅಧಿಕೃತ ಭಾಷೆಯಾಗಿ ಮನ್ನಣೆ ಮಾಡುವಲ್ಲಿ ಪ್ರಯತ್ನ : ವೇದವ್ಯಾಸ ಕಾಮತ್‌

Thursday, May 21st, 2020
tulu-academy

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕೇರಳ ತುಳು ಅಕಾಡೆಮಿಗಳಿಂದ ಅಧಿಕೃತವೆಂದು ಅಂಗೀಕೃತವಾದ ತುಳು ಲಿಪಿ ಪರಿಚಯದ ಪರಿಷ್ಕೃತ ಮುದ್ರಣದ ತುಳು ಲಿಪಿ ತಜ್ಞ ಶ್ರೀಯುತ ಡಾ. ರಾಧಕೃಷ್ಣ ಬೆಳ್ಳೂರು ಲಿಖಿತ ’ತುಳು ಲಿಪಿ’ ಪುಸ್ತಕವನ್ನು ಮೇ 19, ಶನಿವಾರದಂದು ಅಕಾಡೆಮಿ ಸಿರಿಚಾವಡಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್‌ರವರು ಬಿಡುಗಡೆಗೊಳಿಸಿದರು. ಪುಸ್ತಕ ಬಿಡುಗಡೆಗೊಳಿಸಿರುವ ಮಾನ್ಯ ಶಾಸಕರಾದ ಶ್ರೀ ಡಿ. ವೇದವ್ಯಾಸ ಕಾಮತ್‌ರವರು ’ತುಳು ಲಿಪಿ’ ಪುಸ್ತಕ ಬಿಡುಗಡೆಗೊಳಿಸಿಡಿಸಿರುವ ಬಗ್ಗೆ ಸಂತಸ ವ್ಯಕ್ತ […]

ತುಳು ಚಿತ್ರಕ್ಕೆ ಮಂಗಳೂರಿನಲ್ಲಿ ಇಲ್ಲ ಥಿಯೇಟರ್: ಉಮಿಲ್ ಚಿತ್ರ ತಂಡ ಬೇಸರ

Friday, December 7th, 2018
umil

ಮಂಗಳೂರು: ತುಳು ಚಿತ್ರರಂಗ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದೀಗ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಂಡು ‘ಉಮಿಲ್’ ಎಂಬ ಸಿನಿಮಾ‌ ನಿರ್ಮಾಣವಾಗಿ ಇಂದು ಬಿಡುಗಡೆಯಾಗಿದೆ. ಆದರೆ ಪರಭಾಷೆ ಚಿತ್ರಗಳ ಭರಾಟೆಯಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಮಾಡಿರುವ ಮೊದಲ ಚಿತ್ರಕ್ಕೆ ಮಂಗಳೂರಿನಲ್ಲಿ ಥಿಯೇಟರ್ ಇಲ್ಲದಂತಾಗಿದೆ. ಭವಾನಿ ಕ್ರಿಯೇಷನ್ ಬ್ಯಾನರ್ನಲ್ಲಿ ನಿರ್ಮಾಣವಾದ ಉಮಿಲ್ ಚಿತ್ರ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣ ಮಾಡಲಾದ ಚಿತ್ರ. ಕನ್ನಡದ ‘ಈಗ’ ಚಿತ್ರದಲ್ಲಿ ನೊಣದ ಪ್ರಮುಖ ಪಾತ್ರ ಇದ್ದರೆ, ತುಳುವಿನ ಉಮಿಲ್ ಚಿತ್ರದಲ್ಲಿ ಸೊಳ್ಳೆಯನ್ನು ಗ್ರಾಫಿಕ್ಸ್ […]

ತುಳು ಎಂದರೆ ಭಾಷೆಯಲ್ಲ ಅದು ದೇಶ: ಅಪ್ಪಣ್ಣ ಹೆಗ್ಡೆ

Monday, September 17th, 2018
appanna-hegde

ಕುಂದಾಪುರ: ತುಳುನಾಡಿನ ಸಂಸ್ಕøತಿ ಅದು ಸಮಗ್ರ ಜಗತ್ತಿಗೇ ಮಾದರಿಯಾಗಿದೆ. ಇಲ್ಲಿಯ ದೈವಾರಾಧನೆಯಾಗಲೀ, ಆಚಾರ-ವಿಚಾರವಾಗಲಿ ಇವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಿ ಕೂಡಿ ಬದುಕುವ ಸಂದೇಶವಿದೆ. ತುಳು ಎಂದರೆ ಭಾಷೆಯಲ್ಲ ಅದು ಒಂದು ದೇಶ. ಅದರಲ್ಲಿ ಸಂಸ್ಕøತಿ ಅಡಗಿದೆ ಆ ಸಂಸ್ಕøತಿಯನ್ನು ಗಟ್ಟಿಗೊಳಿಸುವುದು ತುಳುನಾಡೋಚ್ಚಯ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಅಪ್ಪಣ್ಣ ಹೆಗ್ಡೆ ಬಸ್ರೂರು ಅಭಿಪ್ರಾಯಪಟ್ಟರು. ಅವರು ಬಸ್ರೂರಿನ ನಿವೇದಿತಾ ಫ್ರೌಢಶಾಲೆಯಲ್ಲಿ ನಡೆದ ತುಳುನಾಡೋಚ್ಚಯದ ಸ್ವಾಗತ ಸಮಿತಿ ರೂಪೀಕರಣದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಳು ಎಂದರೆ ದ್ರಾವಿಡ ಸಂಸ್ಕøತಿ, ಕನ್ನಡ, […]