ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ಆರಂಭಿಸಲು ರೈಲ್ವೇ ಸಚಿವರಿಗೆ ತು.ರ.ವೇ ಮನವಿ

Friday, February 19th, 2021
trv

ಮಂಗಳೂರು :  2020 ಮಾರ್ಚ್‍ನಲ್ಲಿ ಕೊರೋನಾ ನಿಮಿತ್ತ ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ರದ್ದು ಮಾಡಿದ್ದನ್ನು ಮತ್ತೆ ಆರಂಭಿಸಲು ತುಳುನಾಡ ರಕ್ಷಣಾ ವೇದಿಕೆ ರೈಲ್ವೆ ಸಚಿವರಿಗೆ ಮನವಿ ಮಾಡಿದೆ. ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ವಿದ್ಯಾರ್ಥಿಗಳು, ಜನಸಾಮಾನ್ಯರ ಆಶ್ರಯ ಕೇಂದ್ರವಾಗಿತ್ತು. ಪ್ರಸ್ತುತ ಕರ್ನಾಟಕಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡು ತರಗತಿ ಪುನರಾರಂಭಗೊಂಡಿದೆ. ಕಾಸರಗೋಡಿನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳ ದುಬಾರಿ ಖರ್ಚನ್ನು ಭರಿಸಲು ಅಸಾಧ್ಯವಾದ ಕಾರಣ ನೂರಾರು ಸಂಖ್ಯೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸವೇ ಮೊಟಕುಗೊಂಡ ಸ್ಥಿತಿಯಲ್ಲಿದೆ. ಅದೇ ರೀತಿ ಬಡ ಕಾರ್ಮಿಕರಿಗೆ […]

ದ್ವೆವ ದೇವಸ್ಥಾನ ಶ್ರದ್ದಾ ಕೇಂದ್ರಗಳಿಗೆ ಅಪಚಾರ ಎಸಗಿದ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ : ಯೋಗೀಶ್ ಶೆಟ್ಟಿ ಜಪ್ಪು

Friday, January 22nd, 2021
TRV

ಮಂಗಳೂರು  : ಇತ್ತೀಚೆಗೆ ಉಲ್ಲಾಳ, ಕೋಣಾಜೆ,ಬಾಬುಗುಡ್ಡೆ, ದೇವಸ್ಥಾನವೊಂದರ ಕಾಣಿಕೆ ಹುಂಡಿಯಲ್ಲಿ ಕಾಂಡಮ್ ಮತ್ತಿತರ ವಸ್ತುಗಳನ್ನು ಹಾಕಿ ವಿಕೃತಿ ಮೆರೆದಂತಹ ದುಷ್ಕರ್ಮಿ ಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಟ್ಡುನಿಟ್ಟಿನ ಕಾನೂನು ಕ್ರಮ ಕೈಗೊಳ್ಳ  ಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ಆಗ್ರಹಿಸಿದೆ. ತುಳುನಾಡಲ್ಲಿ ಬೇರೆ ಬೇರೆ ಜಾತಿ ಜನಾಂಗದ ಜನರು ಬಹಳ ಸೌಹಾರ್ದಯುತವಾಗಿ ಸಾವಿರಾರು ವರ್ಷಗಳಿಂದೀಚೆಗೆ ಬದುಕಿ ಬಾಳುತ್ತಿದ್ದು ಇಂತಹ‌ ಶಾಂತಿಯ ವಾತಾವರಣವನ್ನು ಕಲುಷಿತ ಗೊಳಿಸಿ ಗಲಭೆ ಸೃಷ್ಟಿಸಿ‌ ಆ ಮೂಲಕ ರಾಜಕೀಯ ಲಾಭ ಕೊಯ್ಯಲು ಹೂಡಿದ ಹುನ್ನಾರ ಇದಾಗಿರಬಹುದು […]

ತುಳುನಾಡ ರಕ್ಷಣಾ ವೇದಿಕೆಗೆ ಮಂಗಳೂರು ನಗರ ನೂತನ ಸಮಿತಿ ರಚನೆ

Monday, January 18th, 2021
TRV commitee

ಮಂಗಳೂರು  : ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ನಗರದ ನೂತನ ಸಮಿತಿ ಯ ಪದಾಧಿಕಾರಿಗಳ ಆಯ್ಕೆ ಯ ಚುನಾವಣಾ ಪ್ರಕ್ರಿಯೆ ದಿನಾಂಕ 17-01-2021 ರಂದು ಅದಿತ್ಯವಾರ ಬೆಳಗ್ಗೆ 10:30 ಗಂಟೆಗೆ ಸರಿಯಾಗಿ ಸ್ಟೇಟ್ಸ್ ಬ್ಯಾಂಕ್ ಬಳಿ ಇರುವ ತುಳುನಾಡ ರಕ್ಷಣಾ ವೇದಿಕೆ ಯ ಕೇಂದ್ರ ಕಚೇರಿಯಲ್ಲಿ ನಡೆಯಿತು. 2021-23 ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಶೀರೂರು, ಉಪಾಧ್ಯಕ್ಷರಾಗಿ ಜೋಸೆಫ್ ಲೋಬೋ ಉರ್ವ , ಮುನೀರ್ ಮುಕ್ಕಚೇರಿ, ಪ್ರ.ಕಾರ್ಯದರ್ಶಿಯಾಗಿ ಫಾರೂಕ್ ಗೋಲ್ಡ್ ನ್, ಜೊತೆ ಕಾರ್ಯದರ್ಶಿಯಾಗಿ […]

ತುಳುನಾಡ ರಕ್ಷಣಾ ವೇದಿಕೆಯ ಅಬ್ದುಲ್ ರಶೀದ್ ಸ್ಮರಣಾರ್ಥ ರಕ್ತದಾನ ಶಿಬಿರ

Tuesday, September 29th, 2020
trv Blood camp

ಮಂಗಳೂರು  : ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಕೋಶಾಧಿಕಾರಿಯಾಗಿ ಜಪ್ಪು ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ ಅಬ್ದುಲ್ ರಶೀದ್ ಅವರ ಸ್ಮರಣಾರ್ಥ ರಕ್ತದಾನ ಶಿಬಿರ ಜೆಪ್ಪು ರೈಲ್ವೇ ಗೇಟ್ ಬಳಿಯಿರುವ ಸಂಕಪ್ಪ ಮೆಮೋರಿಯಲ್ ಹಾಲ್ ನಲ್ಲಿ ನಡೆಯಿತು. ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಕಾರ್ಯಕ್ರವನ್ನು ಉದ್ಘಾಟಿಸಿದರು. ತುಳುನಾಡ ರಕ್ಷಣಾ […]

ಅಂಗನವಾಡಿ ಕಾರ್ಯಕರ್ತೆಯನ್ನು ನಂಬಿಸಿ 50 ಲಕ್ಷ ನಗದು ಮತ್ತು 22.75 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ ಪಕ್ಕದ ಮನೆ ಗ್ಯಾಂಗ್

Thursday, August 13th, 2020
benedict

ಮಂಗಳೂರು : ಅಂಗನವಾಡಿ ಟೀಚರನ್ನು ನಂಬಿಸಿ ಪಕ್ಕದ ಮನೆಯವರೇ ಹಂತ ಹಂತವಾಗಿ 50 ಲಕ್ಷ ನಗದು ಮತ್ತು 22.75 ಲಕ್ಷ ಮೌಲ್ಯ ದ ಚಿನ್ನಾಭರಣ ವನ್ನು ಲೂಟಿ ಮಾಡಿದ ಘಟನೆ ಮುತ್ತೂರು ಗ್ರಾಮದ ಕುಪ್ಪೆಪದವು ಎಂಬಲ್ಲಿ ನಡೆದಿದೆ. ಪಾಂಡೆಮಿಕ್’ ಕಿರು ಚಿತ್ರ ಆಗಸ್ಟ್ 15 ರಂದು ಮೆಗಾ ಮೀಡಿಯಾ ನ್ಯೂಸ್ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ -ಇಲ್ಲಿ ವೀಕ್ಷಿಸಿ ಬೆನಡಿಕ್ಟ ಲೋಬೊ, ಕುಪ್ಪೆಪದವು ಮುರ ಎಂಬಲ್ಲಿ ವಾಸವಾಗಿದ್ದರು ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಆಕೆಯ ಪಕ್ಕದ ಮನೆಯಲ್ಲಿ ಫರಿದಾ ಬೇಗಮ್, ಜೋಹರ, ಲತೀಫ್ […]

ತುಳುನಾಡ ರಕ್ಷಣಾ ವೇದಿಕೆಯಿಂದ ನಗರದ ಸುತ್ತಮುತ್ತ ನಿರಂತರ ಪಡಿತರ ಸಾಮಗ್ರಿ ಹಂಚಿಕೆ

Saturday, April 11th, 2020
trv-ration

ಮಂಗಳೂರು : ನಗರದ  ಸುತ್ತಮುತ್ತ ಇರುವ ಬಡವರು ಮತ್ತು ಕಟ್ಟಡ ಕಾಮಗಾರಿ ಕಾರ್ಮಿಕರಿಗೆ  ಲಾಕ್ ಡೌನ್ ಮದ್ಯೆಯೂ ನೂರಾರು ಕುಟುಂಬಗಳ ಹಸಿವು ನೀಗಿಸಲು ಪಡಿತರ ಸಾಮಗ್ರಿಗಳನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಶನಿವಾರ ವಿತರಣೆ ಮಾಡಿದರು. ನಾಳೆಯು  ನಗರದಲ್ಲಿ ಪಡಿತರ ಸಾಮಗ್ರಿಗಳ ಹಂಚಿಕೆ ಮುಂದುವರಿಯಲಿದ್ದು, ಲಾಕ್ ಡೌನ್ ಮುಗಿಯುವ ವರೆಗೂ ಯಾರಾದರೂ ಕಷ್ಟದಲ್ಲಿ ಸಿಲುಕಿದ್ದರೆ ತುಳುನಾಡ ರಕ್ಷಣಾ ವೇದಿಕೆಯ ಈ ನಂಬರಿಗೆ ಕರೆ ಮಾಡಿ  9919387676

ತುಳುನಾಡಿನ ಕೈಗಾರಿಕೆಗಳಲ್ಲಿ ತುಳುವರಿಗೆ 80% ಉದ್ಯೋಗ ಮೀಸಲಾತಿ ನೀಡುವಂತೆ ಯೋಗೀಶ್ ಶೆಟ್ಟಿ ಜೆಪ್ಪು ಒತ್ತಾಯ

Thursday, February 13th, 2020
yogish-shetty

ಮಂಗಳೂರು : ತುಳುನಾಡಿನಲ್ಲಿ ತುಳುವರಿಗೆ ಉದ್ಯೋಗ ಮೀಸಲಾತಿ ಹೋರಾಟ ಸಮಿತಿ ಪ್ರತಿಭಟನಾ ಸಭೆಯು ಗುರುವಾರ 13-2-2020 ಬೆಳಿಗ್ಗೆ 11:30ಕ್ಕೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಉದ್ಯೋಗ ಮೀಸಲಾತಿಗಾಗಿ ಪ್ರತಿಭಟನೆ ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಯೋಗಿಶ್ ಶೆಟ್ಟಿ ಜಪ್ಪುರವರು ಸಭೆಯನ್ನು ಉದ್ದೇಶೀಸಿ ವಿದ್ಯಾಭ್ಯಾಸ ಪ್ರತಿಯೊಬ್ಬರಿಗೂ ಜೀವನ ಸಾಗಿಸಲು ಅಗತ್ಯ. ಹಾಗೂ ಹೆತ್ತವರು ತಮ್ಮ ಬೆವರು ಸುರಿಸಿ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದಕ್ಕೆ ತಾಯಿ ನಾಡಿನಲ್ಲಿ ಉದ್ಯೋಗ ಮಾಡಿ ಅವರನ್ನು ಸಂತೋಷದಲ್ಲಿ ಇರಿಸುವುದು ಅತಿಮುಖ್ಯ. ಪ್ರಸ್ತುತ ತುಳುನಾಡದಲ್ಲಿ ವಾಸಿಸುವ ಯುವಕರಿಗೆ ಉದ್ಯೋಗ […]

ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ ಕಾರ್ಯಕ್ರಮ       

Wednesday, February 5th, 2020
blood

ಮಂಗಳೂರು : ವೆನ್ಲಾಕ್  ಜಿಲ್ಲಾ ಆಸ್ಪತ್ರೆ ಯಲ್ಲಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಬುಧವಾರ ರಕ್ತದಾನ ಸಪ್ತಾಹ ಉದ್ಘಾಟಿಸಿ ನಮ್ಮ ನಾಡಿನಲ್ಲಿ ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ನಮ್ಮ ಸಹೋದರ ಸಹೋದರಿಯರು ತುತ್ತಾಗುತ್ತಿದ್ದಾರೆ. ರಕ್ತ ಅವಶ್ಯಕತೆ ಹೆಚ್ಚಾಗಿದೆ. ಆದುದರಿಂದ ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಜಿಲ್ಲೆಗಳಲ್ಲಿರುವ ರಕ್ತ ಸಂಗ್ರಹ ಕೇಂದ್ರ ಗಳಲ್ಲಿ ತುಳುನಾಡ ರಕ್ಷಣಾ ವೇದಿಕೆ ರಕ್ತದಾನ ಅಭಿಯಾನ ಸಪ್ತಾಹ 05-02-2020 ರಿಂದ 11-02-2020 ಕಾರ್ಯಕ್ರಮದಲ್ಲಿ  ಹೆಚ್ಚಿನ […]

ಉಳ್ಳಾಲ : ರಸ್ತೆಗೆ ಕಾಂಕ್ರೀಟೀಕರಣಗೊಳಿಸಲು ತುಳುನಾಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Friday, November 1st, 2019
Rakshana-vedike

ಉಳ್ಳಾಲ : ಉಳ್ಳಾಲ ಬೈಲು ಮಾಕ್ಸ್ ಪೋರ್ಟ್ – ಮಹಾಗಣಪತಿ ದೇವಸ್ಥಾನ ಅಡ್ಡ ರಸ್ತೆ ದುರವ್ಯಸ್ಥೆಯ ಮತ್ತು ಕಾಂಕ್ರೀಟೀಕರಣಗೊಳಿಸಲು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ನೇತೃತ್ವದಲ್ಲಿ, ಸಾರ್ವಜನಿಕರ ಸಹಕಾರದಿಂದ ಪ್ರತಿಭಟನಾ ಸಭೆ ಶುಕ್ರವಾರ ನಡೆಯಿತು. ಹೊಂಡ ಗುಂಡಿಗಳಿದ್ದ ರಸ್ತೆಯಲ್ಲಿ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದರು. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮಾತನಾಡಿ ಉಳ್ಳಾಲ ಬೈಲು ಮಾಕ್ಸ್ ಪೋರ್ಟ್ ಅಡ್ಡ ರಸ್ತೆ ಮಹಾಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆಯು ಸುಮಾರು 3 […]

ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ನಗರ ಸಮಿತಿಗೆ ನೂತನ ಪದಾಧಿಕಾರಿಗಳು

Saturday, October 19th, 2019
TRV

ಮಂಗಳೂರು  :  ತುಳುನಾಡ ರಕ್ಷಣಾ ವೇದಿಕೆ ಯ ಕೇಂದ್ರೀಯ ಮಂಡಳಿ ಅದ್ಯಕ್ಷ ರಾದ ಯೋಗಿಶ್ ಶೆಟ್ಟಿ ಜಪ್ಪು ಇವರ ಅದ್ಯಕ್ಷ ತೆಯಲ್ಲಿ ಶನಿವಾರ ಸಂಜೆ ಮಂಗಳೂರು ನಗರ ಘಟಕದ ಸಭೆ ಜರಗಿತು. ಸಭೆ ಯಲ್ಲಿ ಸ್ಥಾಪಕ ಅದ್ಯಕ್ಷ ರಾದ ಯೋಗಿಶ್ ಶೆಟ್ಟಿ ಜಪ್ಪುರವರು ಮಾತಾಡಿ ತುಳುನಾಡ ರಕ್ಷಣಾ ವೇದಿಕೆಯ 10 ವರ್ಷ ತುಂಬಿರುವ ಸಂದರ್ಭದಲ್ಲಿ ಮಂಗಳೂರು ನಗರದ ಅಬಿವ್ಯದ್ದಿ ಮತ್ತು ಸಮಸ್ಯೆ ಗಳಿಗೆ ಪರಿಹಾರ ಕಂಡು ಕೊಳ್ಳಲು ಮಂಗಳೂರು ನಗರ ಘಟಕ ಬಲಿಷ್ಠ ಪಡಿಸುವ ಅಗತ್ಯ ವಿದೆ. ಇದನ್ನು […]