ಮಹಿಳೆಯೊಬ್ಬರ ಹೆರಿಗೆಗೆ 5,34,791ರೂ ವಸೂಲಿ, ಆಸ್ಪತ್ರೆಗೆ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

Friday, February 23rd, 2024
court-order

ಮಂಗಳೂರು : ಮಹಿಳೆಯೊಬ್ಬರ ಹೆರಿಗೆಗೆ ನರ್ಸಿಂಗ್ ಹೋಮ್ ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿ ರುವ ಆರೋಪ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆಸ್ಪತ್ರೆ ಆಡಳಿತ ಮಂಡಳಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ನೀಡಿರುವ ಘಟನೆ ವರದಿಯಾಗಿದೆ. ಗರ್ಭಿಣಿಯೊಬ್ಬರು ಹೆರಿಗೆಗಾಗಿ 2019ರ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿವಸ ಅವಳಿ ಮಕ್ಕಳಿಗೆ ಸಹಜ ಹೆರಿಗೆಯಲ್ಲಿ ಜನ್ಮ ನೀಡಿದ್ದರು. ಅವಳಿ ಮಕ್ಕಳ ತೂಕ ಕಡಿಮೆಯಾಗಿರುವುದರಿಂದ ಎನ್‌ಐಸಿಯುಗೆ ದಾಖಲಿಸುವಂತೆ ಹೆರಿಗೆ ವೈದ್ಯರಾದ ನಳಿನಿ ಪೈ […]

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿ ಮಾಡಿದ ಆರೋಪಿಗೆ 10 ವರ್ಷ ಜೈಲು

Friday, April 1st, 2022
Pregnant

ಮಂಗಳೂರು: ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭವತಿಯಾಗಿ ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪಿಗೆ 10 ವರ್ಷ ಜೈಲು ಮತ್ತು 30,000 ರೂ. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಸುರತ್ಕಲ್‌ ಸಮೀಪದ ಸಸಿಹಿತ್ಲು ನಿವಾಸಿ ವಾಮನ ಪೂಜಾರಿ (59) ಶಿಕ್ಷೆಗೊಳಗಾದ  ಆರೋಪಿ. 2016ರ ಸೆಪ್ಟಂಬರ್‌ ತಿಂಗಳಲ್ಲಿ  ಹಗಲು ಹೊತ್ತಿನಲ್ಲಿ 16 ವರ್ಷ ಪ್ರಾಯದ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ […]

ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್‌‌ ಎಸ್‌ಐಗೆ ಅವಾಜ್‌ ಹಾಕಿದ ಮಹಿಳೆ

Saturday, May 1st, 2021
woman

ಉಡುಪಿ : ಮಹಿಳೆಯೊಬ್ಬರು ಕಾರು ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕೆ ದಂಡ ಕಟ್ಟಲು ಸೂಚಿಸಿದ ಟ್ರಾಫಿಕ್‌‌ ಎಸ್‌ಐಗೆ ಅವಾಜ್‌ ಹಾಕಿರುವ ಘಟನೆ ಉಡುಪಿಯ ಕ್ಲಾಕ್‌ ಟವರ್‌ ಬಳಿ ನಡೆದಿದೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸುತ್ತಿದ್ದ ಮಹಿಳೆಯನ್ನು ತಡೆದ ಟ್ರಾಫಿಕ್‌ ಎಸ್‌ಐ, ಕಾರನ್ನು ಬದಿಗೆ ನಿಲ್ಲಿಸಿ ಮಾತನಾಡಲು ಸೂಚಿಸಿದ್ದಾರೆ. ಅಲ್ಲದೇ ಮಾಡಿದ ತಪ್ಪಿಗೆ ದಂಡ ಕಟ್ಟಲು ಹೇಳಿದ್ದು, ಈ ವೇಳೆ ಮಹಿಳೆ, “ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ” ಎಂದು ಹೇಳಿದ್ದಾಳೆ. ಕೊರೊನಾ ಎಮರ್ಜೆನ್ಸ್‌ ಲಾಕ್‌ಡೌನ್‌ ಸಂದರ್ಭ ಅನಗತ್ಯವಾಗಿ ತಿರುಗಾಡುತ್ತಾ, ರಸ್ತೆ ನಿಯಮವನ್ನು ಉಲ್ಲಂಘಿಸಿದರೆ ಸುಮ್ಮನಿರುವುದಿಲ್ಲ” […]

ಕೊರೋನಾ ಸೋಂಕು : ದಕ್ಷಿಣ ಕನ್ನಡ – 447, ಸಾವು 7 ಮಂದಿ, ಉಡುಪಿ – 207

Wednesday, October 7th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಬುಧವಾರ 447 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ, 7 ಮಂದಿ ಸಾವನ್ನಪ್ಪಿದ್ದಾರೆ.  ಉಡುಪಿ ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 207 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಮೃತರ ಸಂಖ್ಯೆ ಜಿಲ್ಲೆಯಲ್ಲಿ 588ಕ್ಕೆ ತಲುಪಿದೆ. ಈ ನಡುವೆ ಗುಣಮುಖರಾದವರ ಸಂಖ್ಯೆ ಉತ್ತಮವಾಗಿದ್ದು, ಬುಧವಾರ ಒಂದೇ ದಿನ 1,214 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಇಲ್ಲಿಯ ತನಕ ಗುಣಮುಖರಾದವರ ಸಂಖ್ಯೆ 20 ಸಾವಿರಕ್ಕೇರಿದೆ. ಆ ಮೂಲಕ ಜಿಲ್ಲೆಯಲ್ಲಿ ಇಲ್ಲಿಯ ತನಕ […]

ಮಾಸ್ಕ್ ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ 200 ರೂ ದಂಡ : ಜಿಲ್ಲಾಧಿಕಾರಿ

Thursday, September 24th, 2020
Rajendra KV

ಮಂಗಳೂರು: ಮಾಸ್ಕ್ ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ 200 ರೂ. ಮತ್ತು ಇನ್ನುಳಿದ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಹೊಟೇಲ್‌, ರೆಸ್ಟೋರೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಮಾಲ್‌ಗಳು, ಅಂಗಡಿಗಳಲ್ಲಿ ಕಾರ್ಯನಿರ್ವಹಿ ಸುವ ಎಲ್ಲ ಸಿಬಂದಿ ಹಾಗೂ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ. ಪ್ರತಿ […]

ರಸ್ತೆ ಬದಿಯಲ್ಲಿ ಕಸ ಎಸೆಯುವವರನ್ನು ಕಾದು ಕುಳಿತು 5 ಸಾವಿರ ದಂಡ ಹಾಕಿದ ಪುತ್ತೂರು ನಗರಸಭೆ ಅಧಿಕಾರಿಗಳು

Saturday, August 22nd, 2020
Puttur Garbage

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಮುಕ್ರಂಪಾಡಿಯಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಕಸಗಳನ್ನು ಎಸೆದು ಹೋಗುತ್ತಿದ್ದ ಉಸ್ಮಾನ್ ಮತ್ತು ಅಶ್ರಫ್ ಎಂಬುವರಿಗೆ ತಲಾ ರೂ. 5 ಸಾವಿರ ದಂಡ ವಿಧಿಸಿ ಪುತ್ತೂರು ನಗರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮನೆ ಮನೆ ತ್ಯಾಜ್ಯ ಸಂಗ್ರಹ ನಡೆಯುತ್ತಿದ್ದರೂ ಕೆಲವೊಂದು ಕಡೆ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸಗಳನ್ನು ಹಾಕಿ ಪರಿಸರ ಮಲೀನಗೊಳಿಸುತ್ತಿದ್ದರು. ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಕಸದ ರಾಶಿ ಇರುವ ಸ್ಥಳಗಳ ಬಳಿ ಕಸ ಹಾಕುವವರನ್ನು ಹಿಡಿಯಲು ಕಾದು ಕುಳಿತಿದ್ದರು. ಸಂಪ್ಯ ಕಡೆಯಿಂದ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಇಬ್ಬರು […]

ಮಂಗಳೂರು: ನಿಷೇದಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ – ರೂ. 9,500 ದಂಡ

Wednesday, October 16th, 2019
plastic-fine

ಮಂಗಳೂರು: ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದರೂ, ಹಲವಾರು ಉದ್ದಿಮೆದಾರರು, ವ್ಯಾಪಾರಸ್ಥರು, ನಿಷೇಧಿಸಿರುವ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುತ್ತಿರುವುದು ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ಚೀಲದಲ್ಲಿ ಸಾಮಾಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಮಹಾನಗರಪಾಲಿಕೆ ಅಧಿಕಾರಿಗಳು ಅಕ್ಟೋಬರ್ 16 ರಂದು ಸೆಂಟ್ರಲ್ ಮಾರುಕಟ್ಟೆ, ಗಣಪತಿ ಶಾಲೆ, ರಸ್ತೆ, ಭವಂತಿ ಸ್ಟ್ರೀಟ್ ಮುಂತಾದ ಸ್ಥಳಗಳಲ್ಲಿರುವ ಸುಮಾರು 20ಕ್ಕಿಂತ ಹೆಚ್ಚು ಉದ್ದಿಮೆಗಳಿಗೆ ದಾಳಿ ನಡೆಸಿ ಸುಮಾರು […]

ದಂಡಕ್ಕಿಂತ ವಾಹನ ಸವಾರರ ಮನ ಪರಿವರ್ತನೆ ಮುಖ್ಯ : ಡಾ. ವೀರೇಂದ್ರ ಹೆಗ್ಗಡೆ

Saturday, September 14th, 2019
Dr.Veerendra-Hegde

ಮಂಗಳೂರು : ನೂತನವಾಗಿ ಜಾರಿಯಾಗಿರುವ ದಂಡ ನಿಯಮದ ಜತೆಗೆ ವಾಹನ ಸವಾರರ ಮನ ಪರಿವರ್ತನೆ ಮುಖ್ಯ. ಎಲ್ಲವೂ ದಂಡದಿಂದಲೇ ಸಾಧ್ಯವಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅಪಘಾತಗಳು ಆಗುವ ಸಂಖ್ಯೆ, ಮರಣಗಳ ಸಂಖ್ಯೆಗಳನ್ನು ಕಂಡಾಗ ಸಂಕಟವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾಯ್ದೆಗಳ ಅಗತ್ಯತೆ ಇದೆ. ಬಹಳಷ್ಟು ಮಂದಿ ಅಪಘಾತಕ್ಕೆ ಬಲಿಯಾಗುತ್ತಲೇ ಇದ್ದಾರೆ. ಆದ್ದರಿಂದ ಶಿಸ್ತು ಪಾಲಿಸಲೇಬೇಕು. ಆದ್ದರಿಂದ ಸರ್ಕಾರ ಕನಿಷ್ಠ 30 ದಿನಗಳ ಕಾಲ ಸಮಯ ನೀಡಿ, ಜನರ ಮನ ಪರಿವರ್ತನೆ ಮಾಡಬೇಕು […]

ಮಂಗಳೂರು : ಅಂಗಡಿಗಳಲ್ಲಿದ್ದ ನಿಷೇಧಿತ ಪ್ಲಾಸ್ಟಿಕ್‌ ವಶ : 22,800 ರೂ. ದಂಡ ವಸೂಲಿ

Wednesday, September 4th, 2019
plastic

ಮಂಗಳೂರು : ಪರಿಸರ ರಕ್ಷಣೆ ನಿಟ್ಟಿನಲ್ಲಿ ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳು ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಮಂಗಳೂರು ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್‌ ಮಧು ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ತಂಡ ನಗರದ ವಿವಿಧ ಕಡೆಗಳಿಗೆ ದಾಳಿ ನಡೆಸಿ ಸುಮಾರು 113 ಕೆಜಿ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡಿದ್ದು, 22,800 ರೂ. ದಂಡ ವಸೂಲಿ ಮಾಡಿದ್ದಾರೆ. ಪಾಲಿಕೆ ಅರೋಗ್ಯ […]

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು : ಪ್ಲಾಸ್ಟಿಕ್ ಬಳಕೆದಾರರ ಮೇಲೆ ದಂಡ

Tuesday, September 3rd, 2019
banned-plastic

ಮಂಗಳೂರು : ಪ್ಲಾಸ್ಟಿಕ್ ನಿಷೇಧದ ಕುರಿತು ಇತೀಚೆಗೆ ಕಟ್ಟುನಿಟ್ಟಿನ ಕ್ರಮ ಅಳವಡಿಸಲಾಗಿದ್ದು, ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸದಂತೆ ಈ ಹಿಂದೆ ಅಧಿಕಾರಿಗಳು ಸೂಚಿಸಿದ್ದರು. ಆದರೂ ಎಚ್ಚೆತ್ತುಕೊಳ್ಳದ ನಗರದ ಅಂಗಡಿ ಮುಂಗಟ್ಟುಗಳಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಭಾರಿ ದಂಡ ವಿಧಿಸಿ ಅವರ ಬಳಿಯಲ್ಲಿದ್ದ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳ ತಂಡ ಸೆಂಟ್ರಲ್ ಮಾರುಕಟ್ಟೆ,ಕದ್ರಿ, ಸುರತ್ಕಲ್, ಬಂದರು ಮತ್ತು ಲಾಲ್ ಬಾಗ್ ಪ್ರದೇಶದಲ್ಲಿ ಕಾರ್ಯಚರಣೆ ಪ್ರಾರಂಭಿಸಿದ್ದು ಕದ್ರಿ ಭಾಗದಲ್ಲಿ ಸುಮಾರು 50 ಕೆ.ಜಿಯಷ್ಟು […]