ಮಂಗಳೂರು ಮೀನುಗಾರಿಕೆ ಸಂಪೂರ್ಣ ಸ್ಥಗಿತ, ಹಿಡಿದ ಮೀನನ್ನು ಸಮುದ್ರಕ್ಕೆ ಚೆಲ್ಲಿದ ಮೀನುಗಾರ

Friday, March 27th, 2020
Fish

ಮಂಗಳೂರು:  ನಗರದ ಪ್ರಮುಖ ದಕ್ಕೆಯ ಮೀನುಗಾರಿಕಾ ಪ್ರದೇಶ ಕೋವಿಡ್‌ 19 ಆತಂಕದ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿದೆ.   ಮೀನುಗಾರಿಕೆ ಗುರುವಾರ ದಿಂದ ಸಂಪೂರ್ಣ ಸ್ಥಗಿತಗೊಂಡಿದೆ. ದಕ್ಕೆಯಲ್ಲಿ ಜನ ಸೇರದಂತೆ ಪೊಲೀಸ್‌ ಇಲಾಖೆ ಎಚ್ಚರಿಕೆ ನೀಡಿದ್ದು, ದಕ್ಕೆಯಲ್ಲಿ ಬಂದ್‌ ವಾತಾವರಣವಿದೆ. ಬುಧವಾರ ತಂದ ಮೀನನ್ನು ಮಾರಾಟ ಮಾಡಲಾಗದೆ ಬಹುತೇಕರು ಕಡಲಿಗೆ ಚೆಲ್ಲಿದ ಘಟನೆ ನಡೆದಿದೆ. ಹಿಡಿದ ಬೆಲೆಬಾಳುವ ಮೀನ‌ನ್ನು ಕಡಲಿಗೆ ಚೆಲ್ಲುವ ಸನ್ನಿವೇಶ ಇದೇ ಮೊದಲು ಎಂದು ಮೀನುಗಾರರು ತಿಳಿಸಿದ್ದಾರೆ. ಈ ಮಧ್ಯೆ ಜಿಲ್ಲಾಧಿಕಾರಿಯವರ ವಿಶೇಷ ಅನುಮತಿ ಪಡೆದ ಕೆಲವು ಮೀನುಗಾರರು ಮೀನನ್ನು […]

ಬೋಟು ನಿಲುಗಡೆಗೆ ದಕ್ಕೆಯಲ್ಲಿ ಜಾಗವೇ ಇಲ್ಲ

Saturday, November 18th, 2017
Bander

ಮಂಗಳೂರು: ಮೀನುಗಳ ಬಗ್ಗೆಯೇ ಲೆಕ್ಕಾಚಾರ ಹಾಕುವ ನಗರದ ಮೀನುಗಾರಿಕೆ ದಕ್ಕೆಯಲ್ಲಿ ಬೋಟುಗಳು ಸಮರ್ಪಕವಾಗಿ ನಿಲ್ಲಲು ವ್ಯವಸ್ಥೆಗಳಿಲ್ಲ. ಸರಬರಾಜು ಮಾಡುವ ಉದ್ದೇಶದಿಂದ ಸಮುದ್ರದಲ್ಲಿ ಸಂಚರಿಸಿ, ಮೀನು ಹಿಡಿದು ಬೋಟು ಮೂಲಕ ಮಂಗಳೂರು ದಕ್ಕೆಗೆ ಬಂದರೆ ಇಲ್ಲಿ ಬೋಟು ನಿಲ್ಲಲು ಸ್ಥಳವಿಲ್ಲ. ನಗರದ ಮೀನುಗಾರಿಕೆ ದಕ್ಕೆಗೆ ಒಳ ಪಟ್ಟಂತೆ ಪರ್ಸಿನ್‌, ಟ್ರಾಲ್‌ಬೋಟು ಸಹಿತ ಸುಮಾರು 1,500ಕ್ಕೂ ಅಧಿಕ ಬೋಟುಗಳಿವೆ. ಈಗಿನ ದಕ್ಕೆ 600 ಮೀಟರ್‌ ಉದ್ದವಿದ್ದು, ಇದರಲ್ಲಿ ಒಂದು ಸಾಲಿನಲ್ಲಿ ಅಂದಾಜು 350 ಬೋಟುಗಳಿಗೆ ಸ್ಥಳಾವಕಾಶವಿದೆ. ಉಳಿದ 1250 ಬೋಟುಗಳು […]