ದಸರಾ ಸ್ವಾಗತಿಸಲು ಮೈಸೂರು ನಗರಕ್ಕೆ ದೀಪಾಲಂಕಾರ!

Sunday, October 18th, 2020
Mysuru Dasara

ಮೈಸೂರು: ಮೈಸೂರು ಅರಮನೆಯಲ್ಲಿ ಈ ಬಾರಿ ದಸರಾ ಸರಳವಾಗಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದು, ಇದುವರೆಗೆ ಕಾಣುತ್ತಿದ್ದ ಸಂಭ್ರಮವೂ ಇಲ್ಲದಾಗಿದೆ. ಆದರೆ ದಸರಾ ನಡೆಯುತ್ತಿದೆ ಎಂಬುದನ್ನು ನಗರಕ್ಕೆ ಮಾಡಿರುವ ದೀಪಾಲಂಕಾರಗಳು ಮಾತ್ರ ಹೇಳುತ್ತಿವೆ. ಮೈಸೂರಿಗೂ ದೀಪಾಲಂಕಾರಕ್ಕೂ ಬಿಡಿಸಲಾರದ ನಂಟಿದೆ. ಮೈಸೂರಿಗೆ ವಿದ್ಯುದ್ದೀಪಗಳು ಬರುವ ಮೊದಲು ನಗರದ ಪ್ರಮುಖ ಬೀದಿಗಳಲ್ಲಿ ಹಾಗೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸ್ಥಳಗಳಲ್ಲಿ ಹರಳೆಣ್ಣೆ ಮತ್ತು ಸೀಮೆ ಎಣ್ಣೆಯ ಬುಡ್ಡಿದೀಪಗಳನ್ನು ಹಚ್ಚಲಾಗುತ್ತಿತ್ತು. ಬೀದಿಯಲ್ಲಿರುವ ಮರ ಅಥವಾ ಕಲ್ಲಿನ ಕಂಬಗಳಲ್ಲಿ ಇಡಲಾಗುತಿದ್ದ ದೀಪಕ್ಕೆ ಅದರ ಉಸ್ತುವಾರಿಗೆ ನೇಮಿಸಿದ್ದ ನೌಕರ […]

ಮಂಗಳೂರು ದಸರಾ: ನಗರದ ಅಂದ ಹೆಚ್ಚಿಸಿದ ವರ್ಣಮಯ ದೀಪಾಲಂಕಾರ

Thursday, October 6th, 2016
mangaluru-dasara

ಮಂಗಳೂರು: ಜನರ ದಸರಾ ಎಂದೇ ಪ್ರಸಿದ್ಧಿಯಾದ ಮಂಗಳೂರು ದಸರಾ ಸಂಭ್ರಮದಲ್ಲಿ ಕರಾವಳಿ ನಗರಿ ಮಿನುಗುತ್ತಿದೆ. ನಗರದ 8 ಕಿ.ಮೀ. ಪ್ರದೇಶದಲ್ಲಿ ನವರಾತ್ರಿಯ ರಾತ್ರಿಗಳಂತೂ ನಕ್ಷತ್ರಗಳ ಲೋಕ. ಆಕಾಶದಲ್ಲಿ ಮಿನುಗುತ್ತಿರುವ ತಾರೆಗಳೇ ಧರೆಯನ್ನೇ ಸ್ಪರ್ಶಿಸಿವೆಯೇನೋ ಎಂಬಂತೆ 20 ಲಕ್ಷ ವಿದ್ಯುತ್‌ ಬಲ್ಬ್‌‌ಗಳು ಇಡೀ ನಗರದ ಅಂದವನ್ನು ಇಮ್ಮಡಿಗೊಳಿಸಿವೆ. ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಮಂಗಳೂರು ದಸರಾದ ಕೇಂದ್ರ ಬಿಂದು ಎಂದೇ ಖ್ಯಾತಿ ಗಳಿಸಿದೆ. ಪ್ರಾರಂಭದಲ್ಲಿ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಆರಂಭಗೊಂಡ ಈ ದಸರಾ ವರ್ಷದಿಂದ ವರ್ಷಕ್ಕೆ ಜನಾಕರ್ಷಣೆ ಪಡೆಯುತ್ತಲೇ […]