ದುಬೈನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸುಹೈಬ್ ಅಲಿ

Wednesday, December 16th, 2020
SUHAIB-ALI

ವಿಟ್ಲ : ದುಬೈನಲ್ಲಿ ನಡೆದ 24ಗಂಟೆಗಳ ಕಾಂಟ್ರೋಮೆಂಟ್ 2020,ಕಾರ್ ರೇಸಲ್ಲಿ ಮೂಡಬಿದಿರೆಯ ಸುಹೈಬ್ ಅಲಿ ಟೀಮ್ ಮತ್ತೆ ಪ್ರಶಸ್ತಿಗಳನ್ನು ಪಡೆದು ಭಾರತದ ಗೌರವ ಹೆಚ್ಚಿಸಿದೆ. ದುಬೈನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್೨೦೨೦ ಕಾರ್ ರೇಸಿಗೆ ಆಯ್ಕೆಯಾಗಿದ್ದ ೭೨ದೇಶಗಳ ಪೈಕಿ ೪೨ದೇಶಗಳು ಭಾಗವಹಿಸಿವೆ. ೪೨ತಂಡವನ್ನೂ ಹಿಂದಿಕ್ಕಿದ ಮೂಡಬಿದಿರೆಯ ಸುಹೈಬ್ ಅಲಿ ಟೀಮ್ ಎರಡು ಪ್ರಶಸ್ತಿಗಳನ್ನು ಪಡೆದು ಮತ್ತೆ ದುಬೈನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ನಮ್ಮ ದೇಶದ ಕಂಪನಿಗಳು ಮತ್ತು ದಾನಿಗಳು ನಮಗೆ ಇನ್ನಷ್ಟು […]

ದುಬೈನಿಂದ ಬಂದ ವಿಮಾನದ ಸೀಟಿನ ಅಡಿಯಲ್ಲಿ ಸಾಗಿಸುತ್ತಿದ್ದ ಚಿನ್ನದ ಬಿಸ್ಕತ್ತು ವಶ

Sunday, September 27th, 2020
gold Biscut

ಮಂಗಳೂರು : ಕಸ್ಟಮ್ಸ್ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ರವಿವಾರ ದುಬೈನಿಂದ ಬಂದಿಳಿದ ಪ್ರಯಾಣಿಕನಿಂದ  33.88 ಲಕ್ಷ ರೂ. ಮೌಲ್ಯದ 671 ಗ್ರಾಂ ತೂಕದ 6 ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದುಬೈ- ಮಂಗಳೂರು- ಹೈದರಾಬಾದ್ ವಿಮಾನದಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಒಳಗೆ ಸೀಟಿನ ಅಡಿಯಲ್ಲಿ ಅಡಗಿಸಿಡಲಾಗಿತ್ತು. ದುಬೈನಿಂದ ಮಂಗಳೂರು ತನಕ ಅಂತಾರಾಷ್ಟ್ರೀಯ ಯಾನವಾಗಿ ಹಾಗೂ ಮಂಗಳೂರು- ಹೈದರಾಬಾದ್ ನಡುವೆ ದೇಶೀಯ ವಿಮಾನವಾಗಿ ಕಾರ್ಯಾಚರಿಸುತ್ತಿದ್ದು, ಮಂಗಳೂರಿನಿಂದ ಹೈದರಾಬಾದ್‌ಗೆ ಪ್ರಯಾಣಿಸುವ ಪ್ರಯಾಣಿಕ ಈ ಚಿನ್ನವನ್ನು ಸಂಗ್ರಹಿಸಿ ಕೊಂಡೊಯ್ಯುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ದೇಶೀಯ […]

ದುಬೈ : ಕಾರ್ ರೇಸಲ್ಲಿ ಪ್ರಶಸ್ತಿ ಗೆದ್ದ ಸುಹೈಬ್ ಅಲಿ ಮತ್ತು ಭಾರತದ ತಂಡ

Saturday, September 19th, 2020
suhaib

ವಿಟ್ಲ : ಗುರುವಾರದಂದು ದುಬೈನಲ್ಲಿ ನಡೆದ “ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020” ಕಾರ್ ರೇಸಲ್ಲಿ ಮೂಡಬಿದಿರೆಯ ಯುವಕನಿದ್ದ ಭಾರತದ ಟೀಮ್ ತೃತೀಯ ಸ್ಥಾನ ಪಡೆದು ದುಬೈನಲ್ಲಿ ಕೀರ್ತಿ ಪತಾಕೆ ಹಾರಿಸಿದೆ. ದುಬೈನಲ್ಲಿ ಗುರುವಾರದಂದು 6ಗಂಟೆಗಳ ಕಾಲ ನಡೆದ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020 ಕಾರ್ ರೇಸಲ್ಲಿ ಭಾರತ ದೇಶದ ಐವರು ಚಾಲಕರನ್ನೊಳಗೊಂಡ ಟೀಮ್ ಭಾಗವಹಿತ್ತು. ಕೊಲ್ಕಾತ್ತಾ ಮೂಲದ ಟೀಮ್ ಮ್ಯಾನೇಜರ್ ದೀಪಾಂಜನ್ ಬಿಸ್ವಾಸ್ ನೇತೃತ್ವದ ಐವರು ಚಾಲಕರ ತಂಡದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದ ಮೂಡಬಿದಿರೆಯ ಎಂ.ಕೆ.ಅಬೂಬಕ್ಕರ್ ಪುತ್ರ ಸುಹೈಬ್ ಅಲಿ(28)ಕೂಡ ಒಬ್ಬರಾಗಿದ್ದರು. […]

ದುಬೈ ಕಾರ್ ರೇಸಿನಲ್ಲಿ ಭಾಗವಹಿಸಲಿರುವ ಮೂಡಬಿದಿರೆಯ ಸುಹೈಬ್

Wednesday, September 16th, 2020
suhail

ಮಂಗಳೂರು  : ದುಬೈನಲ್ಲಿ ಸೆಪ್ಟೆಂಬರ್ 17 ರಂದು ನಡೆಯಲಿರುವ “ಎಂಡ್ಯುರೆನ್ಸ್ ಚಾಂಪಿಯನ್ ಶಿಪ್2020” ಕಾರ್ ರೇಸ್‌ನ ಭಾರತೀಯ ತಂಡದಲ್ಲಿ ಮೂಡಬಿದಿರೆಯ ಯುವಕ ಸುಹೈಬ್ ಅಲಿ ಭಾಗವಹಿಸುತ್ತಿದ್ದಾರೆ. ದುಬೈನಲ್ಲಿ  ಸೆಪ್ಟೆಂಬರ್ 17 ರಂದು ಗುರುವಾರ 6ಗಂಟೆಗಳ ಕಾಲ ನಡೆಯಲಿರುವ ಎಂಡ್ಯುರೆನ್ಸ್ ಚಾಂಪಿಯನ್ ಶಿಪ್ 2020  ಕಾರ್ ರೇಸ್‌ನಲ್ಲಿ ಐವರನ್ನೊಳಗೊಂಡ ಭಾರತದ ತಂಡ ಭಾಗವಹಿಸಲಿದೆ. ಐವರ ಪೈಕಿ ಮೂಡಬಿದಿರೆಯ ಸುಹೈಬ್ ಅಲಿ(28)ಕೂಡ ಒಬ್ಬರಾಗಿದ್ದು ನಿನ್ನೆ ಬಜಪೆ ಏರ್‌ಪೋರ್ಟಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ದ.ಕ.ಜಿಲ್ಲಾ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಎಂ.ಕೆ.ಅಬೂಬಕ್ಕರ್(ಮಡಿಕೇರಿ) ಪುತ್ರ ಸುಹೈಬ್ […]

ಕೋಯಿಕ್ಕೋಡ್‌ನಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಅವಘಡ 11 ಮಂದಿ ಮೃತ, 125 ಮಂದಿ ಆಸ್ಪತ್ರೆಗೆ ದಾಖಲು

Friday, August 7th, 2020
AirIndia crash

ಕೋಯಿಕ್ಕೋಡ್‌:  ಕೇರಳದ ಕೋಯಿಕ್ಕೋಡ್‌ನ ಕರಿಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವ ವೇಳೆ ದುಬೈ–ಕೋಯಿಕ್ಕೋಡ್‌ ನಡುವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಐಎಕ್ಸ್‌–1344 B737) ಅವಘಡಕ್ಕೀಡಾಗಿದೆ. ಘಟನೆಯಲ್ಲಿ 11 ಮಂದಿ ಮೃತಪಟ್ಟಿದ್ದು, 126 ಮಂದಿಗೆ ಗಾಯಗಳಾಗಿವೆ. 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಮಲಪುರಂ ಎಸ್‌ಪಿ ತಿಳಿಸಿ ದ್ದಾರೆ. ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಲುಪಿದ್ದು ರಕ್ಷಣಾ ಕಾರ್ಯಗಳು ನಡೆಯುತ್ತಿವೆ. 125 ಕ್ಕಿಂತಲೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 7.45ರಲ್ಲಿ ಅಪಘಾತ ಸಂಭವಿಸಿದೆ ಎಂದು ಕೊಂಡೋಟ್ಟಿ ಪೊಲೀಸರು ತಿಳಿಸಿದ್ದಾರೆ. ವಿಮಾನದಲ್ಲಿ ಒಟ್ಟು 190 ಪ್ರಯಾಣಿಕರು, […]

ಮಂಗಳೂರಿನಲ್ಲಿ ವೃದ್ಧರಿಬ್ಬರಿಗೆ ವಿಚಿತ್ರ ಲಕ್ಷಣಗಳಿರುವ ಕೋವಿಡ್ ಸೋಂಕು

Monday, June 15th, 2020
corona positive

ಮಂಗಳೂರು: ವಿಚಿತ್ರ ಲಕ್ಷಣದ ಕೋವಿಡ್ ದಕ್ಷಿಣ ಕನ್ನಡ ದಲ್ಲಿ ಕಾಣಿಸಿಕೊಂಡಿದೆ ಉಸಿರಾಟ ಸಮಸ್ಯೆ, ಜ್ವರ ಹೀಗೆ ಯಾವುದೇ ಸೋಂಕು ಲಕ್ಷಣ ಇಲ್ಲದೇ ಇದ್ದರೂ ರಾಜ್ಯದಲ್ಲಿ ಬಹಳಷ್ಟು ಮಂದಿಗೆ ಕೋವಿಡ್ -19 ಸೋಂಕು ಕಾಣಿಸಿಕೋಳ್ಳುತ್ತಿದೆ. ಮಂಗಳೂರಿನ ಈ ಇಬ್ಬರು ಕೋವಿಡ್ 19 ಸೋಂಕಿತರನ್ನು ಆರು ಬಾರಿ ಟೆಸ್ಟ್ ಮಾಡಿಸಿದಾಗಲೂ ಆರು ಬಾರಿಯೂ ಕೋವಿಡ್-19 ಪಾಸಿಟಿವ್ ಕಂಡು ಬಂದಿದೆ. ಕೋವಿಡ್-19 ಸೋಂಕಿತರ ಬಿಡುಗಡೆಯ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಈ ಸಮಯದಲ್ಲಿ ಈ ಇಬ್ಬರು ವೃದ್ದರ ಕೋವಿಡ್ ಪ್ರಕರಣ ವೈದ್ಯರಿಗೆ ಸವಾಲಿಗೆ […]

ದುಬೈ ನಿಂದ ಎರಡನೇ ವಿಮಾನ ಮಂಗಳೂರಿಗೆ ಆಗಮನ, ನಾಳೆ ಗಂಟಲು ದ್ರವ ಪರೀಕ್ಷೆ

Monday, May 18th, 2020
air india

ಮಂಗಳೂರು  :  ಲಾಕ್ ಡೌನ್ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬಾಯಿಯಿಂದ ಎರಡನೇ ವಿಮಾನ ಇಂದು ರಾತ್ರಿ ಬಂದಿಳಿಯಿತು. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು 178 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ಸಂಜೆ 7.55 ಕ್ಕೆ ಲ್ಯಾಂಡ್‌ ಆಯಿತು. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ, ಉಪಹಾರ ವ್ಯವಸ್ಥೆ ಮಾಡಲಾಯಿತು. ನಂತರ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. […]

ದುಬೈನಿಂದ ಮಂಗಳೂರಿಗೆ ಬಂದ 15 ಪ್ರಯಾಣಿಕರಲ್ಲಿ ಕೊರೊನಾ ಸೋಂಕು

Friday, May 15th, 2020
dubai15

ಮಂಗಳೂರು :  ಮಂಗಳವಾರ ದುಬೈನಿಂದ ಮಂಗಳೂರಿಗೆ ಆಗಮಿಸಿರುವ ಪ್ರಯಾಣಿಕರ ಪೈಕಿ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮೇ.12 ರಂದು ವಿಶೇಷ ವಿಮಾನದ ಮೂಲಕ ಬಂದಿಳಿದ 179 ಮಂದಿ ಪೈಕಿ, ದ.ಕ ದ ಮೂಲದ 69 ಜನರ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಪೈಕಿ 15 ಮಂದಿಗೆ ಕೊರೊನಾ ತಗುಲಿರುವುದು ಖಚಿತವಾಗಿದೆ. ಇವರಲ್ಲಿ 12 ಪುರುಷರಿಗೆ ಮತ್ತು 4 ಮಹಿಳೆಯರಿಗೆ ಸೋಂಕು ದೃಢವಾಗಿದೆ. ೧5 ಮಂದಿ ಪೈಕಿ ಓರ್ವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ದುಬೈನಿಂದ ಬಂದ ವಿಮಾನದಲ್ಲಿ […]

ಲಾಕ್ ಡೌನ್ : ದುಬೈ ನಿಂದ ಮಂಗಳೂರು ಏರ್ ಪೋಟ್೯ಗೆ ಆಗಮಿಸಿದ ಮೊದಲ ವಿಮಾನ

Tuesday, May 12th, 2020
dubai-flight

ಮಂಗಳೂರು :  ಲಾಕ್ ಡೌನ್ ಬಳಿಕ‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ  ಮೊದಲ ವಿಮಾನ ಮಂಗಳವಾರ  ರಾತ್ರಿ ಬಂದಿಳಿಯಿತು. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸುಮಾರು 176 ಪ್ರಯಾಣಿಕರನ್ನು ಹೊತ್ತು ತಂದ ವಿಮಾನ ರಾತ್ರಿ 10.10 ಕ್ಕೆ ಲ್ಯಾಂಡ್‌ ಆಯಿತು. 176 ಮಂದಿಯಲ್ಲಿ  95 ಪುರುಷರು, 81 ಮಹಿಳೆಯರು, 12 ಮೆಡಿಕಲ್ ಎಮರ್ಜನ್ಸಿ, 38 ಬಾಣಂತಿಯರು  ಪ್ರಯಾಣಿಸಿದ್ದರು. ಜೊತೆಗೆ ಕೆಲಸಕಳಕೊಂಡವರು, ವೀಸಾ ಮುಗಿದವರು, ಮನೆಯವರಿಗೆ ಎಮರ್ಜೆನ್ಸಿ ಚಿಕಿತ್ಸೆ, ಲಾಕ್ ಡೌನ್ ನಿಂದ ಸಿಕ್ಕಿ ಹಾಕಿ ಕೊಂಡವರು ಇದ್ದರು. ಪ್ರಯಾಣಿಕರಿಗೆ ಇಳಿದ ನಂತರ ವಿಮಾನ ನಿಲ್ದಾಣದಲ್ಲಿ […]

ಲಾಕ್ ಡೌನ್ : ದುಬೈಯಲ್ಲಿ ಉಳಿದಿರುವ ಕರಾವಳಿಗರ ಮೊದಲ ವಿಮಾನ ಮೇ 14 ಕ್ಕೆ ಮಂಗಳೂರಿಗೆ

Friday, May 8th, 2020
Air-India

ಮಂಗಳೂರು: ಲಾಕ್ ಡೌನ್ ನಿಂದ ದುಬೈಯಲ್ಲಿ ಉಳಿದಿರುವ ಕರಾವಳಿಗರನ್ನು ಹೊತ್ತ ಮೊದಲ ವಿಮಾನ ಮೇ 14 ಕ್ಕೆ ಮಂಗಳೂರಿಗೆ ಬರಲಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. ದುಬೈನಿಂದ ಮಂಗಳೂರಿಗೆ ಮೇ 12 ರಂದು ಮೊದಲ ವಿಮಾನ ತಲುಪಬೇಕಿತ್ತು, ಅದನ್ನು ಈಗ ಮೇ 14 ಕ್ಕೆ ಮರು ನಿಗದಿಪಡಿಸಲಾಗಿದೆ. ಯುಎಇ ಸಮಯ 16.10 ಕ್ಕೆ ಏರ್ ಇಂಡಿಯಾ ವಿಮಾನ ದುಬೈನಿಂದ ಮೇ 14 ರಂದು ಹೊರಟು ರಾತ್ರಿ 9.10 ಕ್ಕೆ ಮಂಗಳೂರು ತಲುಪಲಿದೆ. ವಿಮಾನದಲ್ಲಿ ಪ್ರಯಾಣಿಕರನ್ನು ಸಾಮಾಜಿಕ ಅಂತರವನ್ನು ಕಾಯ್ದು […]