ಸ್ವಾಮಿ ಕೊರಗಜ್ಜನ ನಿಂದನೆ, ಅಪಹಾಸ್ಯ -ಮಂಗಳವಾರ ಸಾಮೂಹಿಕ ಪ್ರಾರ್ಥನೆಗೆ ಕರೆ -ವಿಶ್ವ ಹಿಂದೂ ಪರಿಷತ್

Saturday, January 8th, 2022
VHP

ಮಂಗಳೂರು  : ವಿಟ್ಲದಲ್ಲಿ ಕೊರಗಜ್ಜನನ್ನು ಅವಮಾನಿಸಿದ ಘಟನೆಯನ್ನು ವಿರೋಧಿಸಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಎಲ್ಲಾ ದೈವಸ್ಥಾನ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಂಗಳವಾರ 11 ಜನವರಿ 2022 ರಂದು ನಡೆಸಲು ಸಮಸ್ತ ಹಿಂದೂ ಬಂಧುಗಳಲ್ಲಿ ವಿಶ್ವ ಹಿಂದೂ ಪರಿಷತ್ ವಿನಂತಿಸಿದೆ. ದೈವಸ್ಥಾನ, ದೇವಸ್ಥಾನದ ಆಡಳಿತ ಮಂಡಳಿ, ಧಾರ್ಮಿಕ ಮುಖಂಡರು, ಸಂಘಟನೆಗಳು, ಸಂಘ ಸಂಸ್ಥೆಗಳು, ಭಕ್ತರು, ಸಮಸ್ತ ಹಿಂದೂಗಳು ಒಟ್ಟು ಸೇರಿ ನಮ್ಮ ನಮ್ಮ ಊರುಗಳ ದೈವಸ್ಥಾನ ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ […]

ನಾಗ ದೇವರ ಕಲ್ಲನ್ನು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ

Friday, November 19th, 2021
vishwas kumar das

ಮಂಗಳೂರು  : ಮಂಗಳೂರಿನ ಕೋಡಿಕಲ್ ನಲ್ಲಿ ನಾಗ ಬನದ ನಾಗ ದೇವರ ಕಲ್ಲನ್ನು ದುಷ್ಕರ್ಮಿಗಳು ಎಸೆದು ತುಳುನಾಡಿನ ಸಂಸ್ಕೃತಿಗೆ ಘೋರ ಅನ್ಯಾಯ ಮಾಡುತ್ತಿದ್ದಾರೆ, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವಸ್ಥಾನ ಮತ್ತು ದೇವಸ್ಥಾನ ಕಾಣಿಕೆ ಡಬ್ಬಿಗಳಿಗೆ ಕಾಂಡೊಮ್ ಹಾಕುವುದು ಮತ್ತು ಇನ್ನಿತರ ದುಷ್ಕೃತ್ಯಗಳನ್ನು ಮಾಡುತ್ತಿದ್ದು ಇದನ್ನು ಕಾಂಗ್ರೆಸ್ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದೆ. ನಗರ ಪೊಲೀಸ್ ಉಪ ಆಯುಕ್ತ ರವರಿಗೆ ಕೆಪಿಸಿಸಿ ಸಂಯೋಜಕ ಇಂಟಕ್ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ ಮತ್ತು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ […]

ಕೊರಗಜ್ಜನ ದೈವಸ್ಥಾನ ಅಪವಿತ್ರ : ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ ಆರೋಪಿಗಳು – ಇಬ್ಬರ ಬಂಧನ

Thursday, April 1st, 2021
Koragajja

ಮಂಗಳೂರು : ಎರಡು ತಿಂಗಳ ಹಿಂದೆ ಮಂಗಳೂರಿನ ವಿವಿಧ ಕೊರಗಜ್ಜನ ದೈವಸ್ಥಾನವನ್ನು ಅಪವಿತ್ರಗೊಳಿಸಿ, ಅವಾಚ್ಯ ಪದಗಳ ಪತ್ರವನ್ನು ಕಾಣಿಕೆ ಡಬ್ಬಿಗೆ ಹಾಕಿ ಅಪಮಾನ ಮಾಡಲಾಗಿತ್ತು.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಏಪ್ರಿಲ್ 1 ರ ಗುರುವಾರ ಇಬ್ಬರು ಆರೋಪಿಗಳನ್ನು ಕೊರಗಜ್ಜನ ಕಾಣಿಕೆ ಡಬ್ಬಿಗೆ ತಪ್ಪು ಕಾಣಿಕೆ ಹಾಕಿ ಪೊಲೀಸರಿಗೆ ಶರಣಾಗಿದ್ದಾರೆ. ಬಂಧಿತರನ್ನು ರಹೀಮ್ ಮತ್ತು ತೌಫಿಕ್ ಎಂದು ಗುರುತಿಸಲಾಗಿದೆ. ಬುಧವಾರ  ರಾತ್ರಿ ಎಮ್ಮೆಕೆರೆಯಲ್ಲಿ ಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಜಾತ್ರೆ ನಡೆದಿದ್ದು, ಅಲ್ಲಿಂದ ಬಂದ ವ್ಯಕ್ತಿಯೋರ್ವ ಘಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ […]

ಸುರತ್ಕಲ್ : ಭಜನಾ ಮಂದಿರ, ದೈವಸ್ಥಾನ ಕಳವು ಆರೋಪಿ ಬಂಧನ

Monday, January 11th, 2021
rajesh naik

ಮಂಗಳೂರು: ಸುರತ್ಕಲ್ ಸಮೀಪ ಭಜನಾ ಮಂದಿರ, ದೈವಸ್ಥಾನಗಳಲ್ಲಿ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ನಂದನಜಲು ರವಿ ಶೆಟ್ಟಿ ಅವರ ದೈವಸ್ಥಾನ, ಇಡ್ಯಾ ಗ್ರಾಮದ ಗುಡ್ಡೆಕೊಪ್ಪಳ ಜಾರು ಮನೆ ದೈವಸ್ಥಾನ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂದಿರ, ಚಿತ್ರಾಪುರ ಗ್ರಾಮದ ಸತೀಶ್ ಸುವರ್ಣರ ಮನೆಯ ದೈವಸ್ಥಾನಗಳಲ್ಲಿ ಕಳವು  ಮಾಡಿದ್ದ. ಮೂಲತಃ ಧಾರವಾಡ ತಾಲೂಕಿನ ಪ್ರಸ್ತುತ ಉಡುಪಿ ಜಿಲ್ಲೆಯ ಇಂದ್ರಾಳಿ ಸಮೀಪದ ಮಂಚಿ ಗ್ರಾಮ ನಿವಾಸಿ ರಾಜೇಶ್ ನಾಯ್ಕ್ ಅಲಿಯಾಸ್ […]

ಅತ್ತಾವರ ದೈವಸ್ಥಾನದ ಹುಂಡಿಯಲ್ಲಿ“ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟು ಪತ್ತೆ

Sunday, January 3rd, 2021
note

ಮಂಗಳೂರು  : ಅತ್ತಾವರದಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ದುಷ್ಕರ್ಮಿಗಳು ಪ್ರವೇಶಿಸಿ ದೇವರ ಹುಂಡಿಯಲ್ಲಿ “ಪ್ರಭು ಏಸು ಕ್ರಿಸ್ತನು ಮಾತ್ರ ಆರಾಧನೆ ಹೊಂದಲು ಸೂಕ್ತ ವ್ಯಕ್ತಿ”, “ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟುಗಳನ್ನು ಹಾಕಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ನೋಯಿಸುವ ದುರುದ್ದೇಶದಿಂದಲೇ ಈ ರೀತಿ ದುಷ್ಕೃತ್ಯ ಮಾಡಲಾಗಿದೆ, ಯಾವುದೇ ಚರ್ಚ್ ಅಥವಾ ಮಸೀದಿಯಲ್ಲಿ ಇಂತಹ ಘಟನೆಗಳು ನಡೆದಿದ್ದಲ್ಲಿ ಸರ್ಕಾರವು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಮತ್ತು ಮಾಧ್ಯಮಗಳು ಧ್ವನಿ ಎತ್ತುತ್ತವೆ. ಈ ಸಂದರ್ಭದಲ್ಲಿಯೂ ಸರ್ಕಾರವು ದುಷ್ಕರ್ಮಿಗಳ […]

ದೈವಸ್ಥಾನದಲ್ಲಿ ಚಾಕರಿ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬಸವ ದಾಳಿ, ಸಾವು

Saturday, October 12th, 2019
Balakrishna shetty

ಬಜಪೆ:   ಪೆರಾರ ಕಿನ್ನಿಮಜಲು ನಾಗಬ್ರಹ್ಮ ಶಾಸ್ತ ಬಲವಂಡಿ ದೇವ ದೈವಸ್ಥಾನದಲ್ಲಿ ಚಾಕರಿ ಮಾಡುತ್ತಿದ್ದ ಬಾಲಕೃಷ್ಣ ಶೆಟ್ಟಿ ಎಂಬವರು ದೈವಸ್ಥಾನದ ಬಸವ ಹಾಯ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಪೆರಾರ ಪುಣ್ಕೆದಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (52) ಮೃತಪಟ್ಟವರು. ಬಾಲಕೃಷ್ಣ ಶೆಟ್ಟಿಯವರೆ ಕಳೆದ ಒಂದ ವರ್ಷದಿಂದ ಬಸವನ ಚಾಕರಿ ಮಾಡುತ್ತಿದ್ದರು. ಶುಕ್ರವಾರ ಸಂಜೆ ಅದಕ್ಕೆ ಹುಲ್ಲು ಹಾಕಲು ಹೋದ ಸಂದರ್ಭ ಬಸವ ಕೊಂಬಿನಿಂದ ತಿವಿದಿದ್ದ ಎಂದು ತಿಳಿದು ಬಂದಿದೆ. ತಲೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಜಪೆ […]

ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಮೀನು ಹಿಡಿಯುವ ಉತ್ಸವ

Wednesday, May 15th, 2019
Kandiga

ಮಂಗಳೂರು : ಪ್ರತಿವರ್ಷ ವೃಷಭ ಸಂಕ್ರಮಣದ ದಿನದಂದು ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಉತ್ಸವ  ನಡೆಯಿತು. ಸುರತ್ಕಲ್ ಸಮೀಪದ ಚೇಳಾಯಿರು ಖಂಡಿಗೆಯ  ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಮೀನು ಹಿಡಿಯುವ ಉತ್ಸವ ನಡೆಯುತ್ತದೆ. ಈ ಬಾರಿಯೂ ಚೇಳಾಯಿರು ಖಂಡಿಗೆಯ ನಂದಿನಿ ನದಿಯಲ್ಲಿ ಈ ಮೀನು ಹಿಡಿವ ಉತ್ಸವ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಚೇಳಾಯಿರು ಖಂಡಿಗೆ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ […]