ಖಡ್ಸಲೆಗೆ ಕಾಂಗ್ರೆಸ್ಸಿನಿಂದ ಅಪಮಾನ : ಸುನಿಲ್ ಕುಮಾರ್ ಖಂಡನೆ

Thursday, July 8th, 2021
SunilKumar

ಕಾರ್ಕಳ : ತುಳುನಾಡಿನ ದೈವಾರಾಧನೆಯು ಬಹು ಹಿಂದಿನ ಕಾಲದಿಂದಲೂ ಕಟ್ಟು ಕಟ್ಟಲೆಗಳನ್ನೊಳಗೊಂಡು ನಡೆದು ಬರುತ್ತಿರುವ ಧಾರ್ಮಿಕ ಆಚರಣೆ. ಇದರಲ್ಲಿ ದೈವಗಳು ನುಡಿ ಕೊಡುವ ಖಡ್ಸಲೆ (ದೈವದ ಖಡ್ಗ) ಇದಕ್ಕೆ ಅದರದೇ ಆದ ವಿಶಿಷ್ಟ ಪ್ರಾದಾನ್ಯತೆ ಇದೆ. ದೈವಾರಾಧನೆಗೆ ಒಂದು ಶಕ್ತಿ ಇದೆ. ಆ ಖಡ್ಸಲೆಯಲ್ಲಿ ಕೊಡುವ ನುಡಿಯನ್ನು ಇಡೀ ತುಳುನಾಡು ಪಾಲನೆ ಮಾಡಿಕೊಂಡು ಬರುತ್ತಿದೆ. ಇಂತಹ ಪ್ರಾಮುಖ್ಯತೆ ಹೊಂದಿರುವ ಖಡ್ಸಲೆಯನ್ನು ಒಂದು ರಾಜಕೀಯ ವೇದಿಕೆಯಲ್ಲಿ ರಾಜಕೀಯ ಮುಖಂಡರಿಗೆ ಸ್ಮರಣಿಕೆಯಾಗಿ ಕೊಟ್ಟಿರುವುದು ಕಾಂಗ್ರೆಸ್ ಪಕ್ಷದ ದಿವಾಳಿತನ, ಕಾಂಗ್ರೆಸ್ ಪಕ್ಷ […]

67ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಪಿಂಗಾರ ತುಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

Tuesday, March 23rd, 2021
pingara

ಮಂಗಳೂರು :  ಪಿಂಗಾರ ತುಳು ಚಿತ್ರ 2019ನೆ ಸಾಲಿನ 67ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯತ್ತಮ ತುಳು ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ನಿರ್ದೇಶಕ ಆರ್. ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ಸಿನಿಮಾಕ್ಕೆ ಇದೀಗ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ತುಳುನಾಡಿನ ದೈವಾರಾಧನೆ ಮತ್ತು ಅದರ ಸುತ್ತ ಒಳಗೊಂಡಿರುವ ನಂಬಿಕೆ,ದೈವದ ನುಡಿ ಯೊಂದಿಗೆ ಬೆಳೆದು ಬಂದ ಶ್ರದ್ಧೆ,ಭಕ್ತಿ ಯೊಂದಿಗೆ ಸೇರಿಕೊಂಡಿರುವ ತುಳುವರ ಬದುಕು ಸಂಸ್ಕೃತಿ, ದೈವದ ಪಾತ್ರಿಯ ದೈವಿಕ ನುಡಿಗಳನ್ನು ಅಲೌಕಿಕ ಶಕ್ತಿಯ ಆಜ್ಞೆಯೆಂದು ಪಾಲಿಸುತ್ತಾ ಬಂದಿರುವ ತುಳುವರ ಸಾಮಾಜಿಕ ಮತ್ತು ಧಾರ್ಮಿಕ ಬದುಕಿನ […]

ಜಿಲ್ಲೆಯ ವಿಶಿಷ್ಟ ಆಚರಣೆ ‘ಪೊಕರೆ ಕಂಬಲ ಕೋರಿ’ – ಭತ್ತದ ಕೃಷಿ ಉತ್ಸವಗಳಿಗೆ ಆರ್ಥಿಕ ನೆರವು ನೀಡಲು ಒತ್ತಾಯ.

Tuesday, March 14th, 2017
Tuluvere Koota

ಮಂಗಳೂರು : ‘ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಆಚರಣೆ ‘ಪೊಕರೆ ಕಂಬಲ ಕೋರಿ’ ಮತ್ತು ದೈವಾರಾಧನೆಗೆ ಸಂಬಂಧಪಟ್ಟು ವಿವಿಧ ಸ್ತರಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವವರಿಗೆ ಮಾಸಿಕ ವೇತನ ನೀಡಲು  ಮಂಗಳೂರಿನ ಕೆ.ಜಿ ಜಿಲ್ಲಾಧಿಕಾರಿ ಜಗದೀಶ್ ಮೂಲಕ ಮಂಗಳವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಪತ್ರವನ್ನು ತುಳುವೆರೆ ಜಾನಪದ ಕೂಟದ ಸದಸ್ಯರು ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ಎಂದರೆ ಕೇವಲ ಕೋಣದ ಓಟವಲ್ಲ, ಅದು ಊರಿನ ಕೃಷಿ ಉತ್ಸವ ಪೂಕರೆ ಆಚರಣೆಯ ಒಂದು ಭಾಗ. ಊರಿನ ಭತ್ತದ ಕೃಷಿಕರೆಲ್ಲರೂ ವರ್ಷಕ್ಕೊಂದು ಸಾರಿ […]

ಪ್ರಥಮ ಬಾರಿಗೆ ತುಳುನಾಡಿನ ದೈವಾರಾಧಕರ ಸಮಾವೇಶ

Monday, November 28th, 2016
Mahalingeshwara temple

ಪುತ್ತೂರು: ಪ್ರಥಮ ಬಾರಿಗೆ ತುಳುನಾಡಿನ ದೈವಾರಾಧಕರ ಸಮಾವೇಶ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ದೈವಾರಾಧನೆ ಅಂದ್ರೆ ಸತ್ಯದ ಆರಾಧನೆ. ಹಿಂದೆ ದೈವ ಎಂಬ ಹೆಸರು ಇರಲಿಲ್ಲ, ಸತ್ಯ ಎಂದೇ ಕರೆಯುತ್ತಿದ್ದರು. ಈ ಆರಾಧನೆಯಲ್ಲಿ ಎಲ್ಲಾ ಜಾತಿಯವರಿಗೆ ಜವಾಬ್ದಾರಿ ಹಂಚಿಕೆಯಾಗಿದೆ. ಯಾವ ಜಾತಿಯವವರು ಇಲ್ಲದಿದ್ದರೂ ನೇಮ ಆಗುವುದಿಲ್ಲ. ಇದು ಇಲ್ಲಿ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು ಎಂಬುದನ್ನು ಸೂಚಿಸುತ್ತದೆ ಎಂದರು. […]