ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಅನೈತಿಕ ಗೂಂಡಾಗಿರಿ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ- ಡಿವೈಎಫ್ಐ

Wednesday, September 29th, 2021
Moral policing

ಮಂಗಳೂರು :  ಸುರತ್ಕಲ್ ಎನ್.ಐ.ಟಿ.ಕೆ ಸಮೀಪ ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ತಡೆದು ದಾಂಧಲೆ ನಡೆಸಿ ಹಲ್ಲೆಗೆ ಯತ್ನಿಸಿದ ಬಿಜೆಪಿಯ ಗೂಂಡಾ ಕಾರ್ಯಕರ್ತರ ಕೃತ್ಯವನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡಿಸಿದೆ. ಪೊಲೀಸ್ ಇಲಾಖೆ ಈ ಕೂಡಲೇ ಗೂಂಡಾಗಿರಿ ನಡೆಸಿದವರ ಮೇಲೆ ಕಠಿಣ ಕಾನೂನಿನಡಿ ಶಿಕ್ಷೆಗೊಳಪಡಿಸಿ ಬಂಧಿಸಲು ಒತ್ತಾಯಿಸುತ್ತದೆ. ದೇರಳಕಟ್ಟೆ ಕೆ.ಎಸ್‌ ಹೆಗ್ಡೆ ಮೆಡಿಕಲ್‌ ಕಾಲೇಜಿನಲ್ಲಿ ವ್ಯಾಸಂಗ ನಡೆಸುವ ವೈದ್ಯಕೀಯ ವಿದ್ಯಾರ್ಥಿಗಳು ಮಣಿಪಾಲಕ್ಕೆ ತೆರಳಿ ಬರುವಂತಹ ಹೊತ್ತಿನಲ್ಲಿ ಸುರತ್ಕಲ್ ಬಳಿ ತಡೆದು ಹಲ್ಲೆ ನಡೆಸಿದ ಬಿಜೆಪಿ, ಬಜರಂಗದಳದ […]

ಸಿಐಟಿಯು: ದ.ಕ. ಜಿಲ್ಲಾ ಸಮಿತಿ ವತಿಯಿಂದ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಧರಣಿ

Wednesday, October 25th, 2017
CITU

ಮಂಗಳೂರು: ದ.ಕ. ಜಿಲ್ಲಾ ಸಮಿತಿ ವತಿಯಿಂದ ಮಂಗಳೂರಿನ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿಯ ಮುಂಭಾಗ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಬುಧವಾರ ಧರಣಿ ನಡೆಯಿತು. ಕರ್ನಾಟಕ ಕಾರ್ಮಿಕರಿಗೆ ಕನಿಷ್ಠ ಕೂಲಿ 18 ಸವಾರ ರೂ. ನೀಡಲು ಒತ್ತಾಯಿಸಿ, ಗುತ್ತಿಗೆ ಪದ್ಧತಿ ನಿಷೇದಕ್ಕಾಗಿ, ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಲು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಒತ್ತಾಯಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಯಿತು. ಈ ಸಂದರ್ಭ ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ […]

ಜನಸ್ಪಂದನೆಯ ರೈಲ್ವೇ ಬಜೆಟ್ – ಜಿಲ್ಲಾ ಬಿಜೆಪಿ ಸ್ವಾಗತ

Tuesday, July 8th, 2014
Railway budget

ಮಂಗಳೂರು : ದೇಶದ ರೈಲ್ವೇ ಪ್ರಗತಿಗೆ ಪೂರಕವಾಗಿ ಪ್ರಯಾಣಿಕರ ಸೌಲಭ್ಯ- ಸುರಕ್ಷತೆಗಳಿಗೆ ವಿಶೇಷ ಒತ್ತು ನೀಡಿ, ಕರ್ನಾಟಕದ ಜನತೆಯ ಹಿತವನ್ನೂ ಕಾಪಾಡುವುದರ ಜೊತೆಗೆ, ಜಿಲ್ಲೆಯ ಜನತೆಯ ರೈಲ್ವೇ ಬೇಡಿಕೆಗಳಿಗೆ ಸ್ಪಂದನೆಯನ್ನು ನೀಡಿರುವ ಕೇಂದ್ರ ರೈಲ್ವೇ ಬಜೆಟ ನ್ನು ಬಿಜೆಪಿ ದ.ಕ ಜಿಲ್ಲಾ ಸಮಿತಿ ಸಂಭ್ರಮದಿಂದ ಸ್ವಾಗತಿಸಿದೆ. ಭಾರತೀಯ ರೈಲನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಪೂರಕವಾಗಿ ಮುಂಬೈ ಅಹಮದಬಾದ್ಗೆ ದೇಶದ ಪ್ರಪ್ರಥಮ ಬುಲೆಟ್ ಟ್ರೈನನ್ನು ಘೋಷಿಸುವುದರ ಜತೆಗೆ, ಕರ್ನಾಟಕವೂ ಸೇರಿದಂತೆ ದೇಶದಲ್ಲಿ 9 ಹೈಸ್ಪೀಡ್ ರೈಲು ಮತ್ತು 4 ಸೆಮಿ […]