ನಂತೂರು ವೃತ್ತ ಕಾಮಗಾರಿಗೆ ಸಿಎಂ 60 ಲಕ್ಷ ರೂಪಾಯಿ ಮಂಜೂರು: ಶಾಸಕ ಜೆ.ಆರ್.ಲೋಬೊ

Friday, December 15th, 2017
j-r-lobo

ಮಂಗಳೂರು: ನಂತೂರು ವೃತ್ತದ ಕಾಮಗಾರಿಗೆ ಮುಖ್ಯಮಂತ್ರಿಗಳು 60 ಲಕ್ಷ ರೂಪಾಯಿ ನೀಡಿದ್ದು ಈ ಕೆಲಸವನ್ನು ಮುಂದಿನ ಜನವರಿಯಲ್ಲಿ ಆರಂಭಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ ಈ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಡಿಸೆಂಬರ್ 24 ಕ್ಕೆ ಟೆಂಡರ್ ತೆಗೆದು ತಕ್ಷಣ ಕಾಮಗಾರಿಯನ್ನು ಒಪ್ಪಿಸಲಾಗುವುದು ಎಂದರು. ರಾಜ್ಯ ಸರ್ಕಾರದ ವತಿಯಿಂದ ಇಲ್ಲಿ ಬಸ್ ನಿಲ್ದಾಣ ತೆರವು ಮಾಡಿಸಿ ವ್ಯವಸ್ಥಿತವಾಗಿ ಬಸ್ ಗಳು ನಿಲ್ಲುವುದಕ್ಕೆ ಮತ್ತು ಪ್ರಯಾಣಿಕರು ಬಸ್ ಹತ್ತುವುದಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು. […]

ನಂತೂರು ವೃತ್ತ : ಬಸ್‌ ನಿಲ್ದಾಣ ಸ್ಥಳಾಂತರ

Thursday, December 14th, 2017
nanthoor-junction

ಮಂಗಳೂರು: ನಂತೂರಿನ ಅವೈಜ್ಞಾನಿಕ ಹಾಗೂ ಅಪಾಯಕಾರಿ ವೃತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಜೋರಾಗುತ್ತಿದ್ದಂತೆ, ನಗರ ಪಾಲಿಕೆಯೂ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಪ್ರಯಾಣಿಕರು ಮತ್ತು ಸವಾರರ ಅನುಕೂಲಕ್ಕಾಗಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಪಾಲಿಕೆಯು 50 ಲಕ್ಷ ರೂ. ವೆಚ್ಚದಲ್ಲಿ ವೃತ್ತದ ಬಳಿ ಹೊಸ ಬಸ್‌ ಬೇ, ಸುಗಮ ಸಂಚಾರ ವ್ಯವಸ್ಥೆ (ಫ್ರೀ ಲೆಫ್ಟ್‌) ಹಾಗೂ ಫುಟ್‌ಪಾತ್‌ ನಿರ್ಮಿಸಲು ತೀರ್ಮಾನಿಸಿದೆ. ವೃತ್ತದ ಟ್ರಾಫಿಕ್‌ ಸಮಸ್ಯೆ ಹಲವು ವರ್ಷಗಳಿಂದ ಸಾರ್ವಜನಿಕರ ಟೀಕೆ, ಅಸಮಾಧಾನಕ್ಕೆ ಕಾರಣವಾಗಿದೆ. ಇಲ್ಲಿ ಕಳೆದ ವಾರ ಖಾಸಗಿ […]

ನಂತೂರು ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಲು ಯುವ ಜನತಾದಳ ಪ್ರತಿಭಟನೆ

Saturday, December 9th, 2017
YOUTH-JDS

ಮಂಗಳೂರು : ಮಂಗಳೂರು ನಗರದ ನಂತೂರಿನಲ್ಲಿ, ನಂತೂರು ವೃತ್ತಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ದ.ಕ ಜಿಲ್ಲಾ ಯುವ ಜನತಾದಳ ಶನಿವಾರ ಪ್ರತಿಭಟನೆ ನಡೆಸಿತು . ಯುವ ಜನತಾದಳ ಜಿಲ್ಲಾಧ್ಯಕ್ಷ  ಅಕ್ಷಿತ್ ಸುವರ್ಣ ಮಾತನಾಡಿ ನಂತೂರು ವೃತ್ತದಲ್ಲಿ ಹಲುವು ಬಾರಿ ಅಫಘಾತಗಳು ನಡೆದು ಜನಸಾಮಾನ್ಯರು ಪ್ರಾಣ ಕಳಕೊಂಡರೂ ಜಿಲ್ಲಾಡಳಿತ ಎಚ್ಛೆತ್ತು ಕೊಂಡಿಲ್ಲ, ಈ ವೃತ್ತದಲ್ಲಿ ಕೂಡಲೇ ಮೇಲ್ಸೇತುವೆ ನಿರ್ಮಾಣ ಮಾಡ ಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ನಾಯಕರುಗಳಾದ ಪ್ರವೀಣ್ ಚಂದ್ರ ಜೈನ್. ರಾಮ್ ಗಣೇಶ್. ಗೋಪಾಲಕೃಷ್ಣ ಅತ್ತಾವರ .ನಾಸೀರ್.ರತ್ನಕರ್ ಸುವರ್ಣ. ಕ್ಷೇತ್ರ ಅಧ್ಯಕ್ಷ ವಸಂತ ಪೂಜಾರಿ. ಯುವ […]

ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರಿಂದ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ

Friday, October 4th, 2013
nantoor

ಮಂಗಳೂರು : ಗುರುವಾರ ನಗರದ ನಂತೂರು ವೃತ್ತದ ಬಳಿ ಪರಿಸರದ ನಾಗರಿಕರು ವರ್ಷಗಳು ಕಳೆದರೂ ತಾಂತ್ರಿಕ ದೋಷ ಪೂರಿತ ನಂತೂರು ವೃತ್ತದಲ್ಲಿನ ಪೂರ್ಣಗೊಳ್ಳದ ಕಾಮಗಾರಿಯನ್ನು ಖಂಡಿಸಿ  ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ನಡೆಸಿದರು . ಸ್ಥಳೀಯ ನಾಗರಿಕರಾದ ಎ.ಜಿ.ಶರ್ಮ ಅವರು, ಪ್ರತಿಭಟನೆಯನ್ನುದ್ದೇಶಿಸಿ ನಂತೂರು ವೃತ್ತದ ದುಸ್ಥಿತಿ ಕೇಳುವವರಿಲ್ಲ. ಇಲ್ಲಿಯ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳಿಗೆ, ರಾಷ್ಟ್ರೀಯ ಇಲಾಖೆಯ ಗಮನಕ್ಕೆ ತಂದರೂ ಈ ಬಗ್ಗೆ ಯಾರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಗಾಲದಲ್ಲಂತೂ ಕೆಸರು ನೀರುಗಳು ರಸ್ತೆಯ […]