ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನ್ನದಾನ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ದೇವಸ್ಥಾನ ತಮಿಳು ನಿರ್ಮಾಪಕ

Saturday, July 24th, 2021
Arun Kumar

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳು ಚಿತ್ರರಂಗದ ನಿರ್ಮಾಪಕ, ನಿರ್ದೇಶಕ ಅರುಣ್ ಕುಮಾರ್(ಅಟ್ಲೀ) ದಂಪತಿ ಶುಕ್ರವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಅವರು ದೇವಳದ ಅನ್ನದಾನ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ದೇಣಿಗೆಯ ಚೆಕ್ ಅನ್ನು ಹಸ್ತಾಂತರಿಸಿದರು. ದೇವಳದ ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಗ್ರಾಪಂ ಸದಸ್ಯ ಹರೀಶ್ ಇಂಜಾಡಿ, ಮಾಜಿ ಸದಸ್ಯ ಸುರೇಶ್ ಭಟ್ ಉಪಸ್ಥಿತರಿದ್ದರು.

ಜು.31ರಂದು  ಕನ್ನಡ -ತಮಿಳು ದ್ವಿಭಾಷೆಯಲ್ಲಿ ವಿನೂತನ ಚಿತ್ರ `ಹವಾಲ’ ಒಟಿಟಿಯಲ್ಲಿ ಬಿಡುಗಡೆ

Sunday, July 19th, 2020
hawala

ಮಂಗಳೂರು: ಕೊರೋನಾ ಲಾಕ್‌ಡೌನ್ ಸಿನಿಮಾ ರಂಗಕ್ಕೂ ಬಲವಾದ ಪೆಟ್ಟು ನೀಡಿದೆ. ಆದರೆ ಚಿತ್ರತಂಡದ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಚಿತ್ರ ಪ್ರೇಮಿಗಳಿಗಾಗಿ ವಿನೂತನವಾದ ಕಥಾ ಹಂದರ ಹೊಂದಿದ `ಹವಾಲ’ ಚಿತ್ರ ನಿರ್ಮಾಣಗೊಂಡಿದ್ದು, ಇದೇ ಜು.31 ರಂದು ವರ್ಲ್ಡ್ ಪ್ರೀಮಿಯರ್ (ಒಟಿಟಿ)ನಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಶಶಿ ಕುಮಾರ್ ಪಂಡಿತ್ ಅರ್ಪಿಸುವ ಈ ಚಿತ್ರದ ನಿರ್ಮಾಣವನ್ನು ನಿರ್ಮಾಪಕ ಪುತ್ತೂರಿನ ಪ್ರವೀಣ್ ಶೆಟ್ಟಿ ಮಾಡಿದ್ದು, ಚಿತ್ರ ಭೂಗತ ಲೋಕದ ಅತ್ಯದ್ಭುತವಾದ ರೋಚಕ ಕಥೆಯನ್ನೊಳಗೊಂಡಿದೆ. ಸೋಚ್ ಸಿನಿಮಾಸ್ ಇವರ […]

ನಿರ್ಮಾಪಕ ಕಪಾಲಿ ಮೋಹನ್ ಆತ್ಮಹತ್ಯೆಗೂ ಮುನ್ನ ಬಿಚ್ಚಿಟ್ಟ ಸತ್ಯ – ವಿಡಿಯೋ

Monday, March 23rd, 2020
Kapali-mohan

ಉಡುಪಿ : ಉದ್ಯಮಿ, ಸಿನಿಮಾ ಫೈನಾನ್ಶಿಯರ್ ಕಪಾಲಿ ಮೋಹನ್ ಪೀಣ್ಯ ಬಸವೇಶ್ವರ ಬಸ್ ಸ್ಟ್ಯಾಂಡ್ ಗೆ ಅತಿ ಹೆಚ್ಚು ಬಿಡ್ ಮೂಲಕ ಟೆಂಡರ್ ಪಡೆದು ತನ್ನ ಮನೆ ಮಠ ಕಳೆದುಕೊಂಡು ಆತ್ಮ ಹತ್ಯೆಗೆ ಶರಣಾಗಿರುವ ಬಗ್ಗೆ ಇರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಉಡುಪಿ ಜಿಲ್ಲೆಯ ವಕ್ವಾಡಿ ಯವರಾಗಿದ್ದ ಮೋಹನ್  ಡಾ.ರಾಜ್ ಕುಟುಂಬದೊಂದಿಗೆ ಸಾಕಷ್ಟು ಒಡನಾಟ ಇಟ್ಟುಕೊಂಡಿದ್ದರು, ಪೀಣ್ಯ ಬಳಿಯ ಖಾಸಗಿ ಹೋಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವ್ಯಾಪಾರದಲ್ಲಿ ತೊಂದರೆ, ನಷ್ಟ ಅನುಭವಿಸಿ ಮಾನಸಿಕವಾಗಿ ನೊಂದಿದ್ದರು […]

‘ಪವಿತ್ರ’ ತುಳು ಚಿತ್ರಕ್ಕೆ ನಾಗುರಿ ಗರೋಡಿ(ಕೋಟಿ-ಚೆನ್ನಯ) ದೇವಸ್ಥಾನದಲ್ಲಿ ಮುಹೂರ್ತ

Monday, August 3rd, 2015
Pavithra Tulu Film

ಮಂಗಳೂರು : ಶ್ರೀ ಇಂದಿರಾ ಮೂವೀಸ್ ಲಾಂಛನದ ಎರಡನೇ ಚಿತ್ರ ‘ಪವಿತ್ರ’ (ತುಳು ಸಿನಿಮಾ)ದ ಮುಹೂರ್ತ ಇಂದು ಬೆಳಿಗ್ಗೆ ನಾಗುರಿ (ಕೋಟಿ-ಚೆನ್ನಯ) ಗರೋಡಿಯಲ್ಲಿ ನಡೆಯಿತು. ಜಯಕಿರಣ ಮೂವೀಸ್‌ನ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಕ್ಯಾಮರಾ ಆನ್ ಮಾಡುವ ಮೂಲಕ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಶ್ರೀ ಮುತ್ತು ಫಿಲಂಸ್ ನ ಪ್ರವೀಣ್ ಕೊಂಚಾಡಿ, ಸಾಹಿತಿ ಮಧು ಸುರತ್ಕಲ್, ತುಳು ರಂಗಭೂಮಿಯ ಕಲಾವಿದರಾದ […]

ದರ್ಶನ್ ಸಂಭಾವನೆ 8 ಕೋಟಿ

Tuesday, February 18th, 2014
Dharshan

ಇತ್ತೀಚೆಗೆ ಡಬ್ಬಿಂಗ್ ವಿವಾದದ ಚರ್ಚೆಯ ಸಂದರ್ಭ ಶತಾಯಗತಾಯ ಡಬ್ಬಿಂಗ್ ತಂದೇ ತೀರ್ತೆವೆ ಅಂತ ವಾದ ಮಾಡಿದ್ದ ನಿರ್ಮಾಪಕರೊಬ್ಬರು ಕನ್ನಡದಲ್ಲಿ ಒಬ್ಬ ದೊಡ್ಡ ಹೀರೋಗೆ ರು.8 ಕೋಟಿ ಸಂಭಾವನೆ ಕೊಡ್ಬೇಕು ಅಂದಿದ್ರು. ಇನ್ನು ಹೀರೋಯಿನ್ ಗೆ ಒಂದು ಕೋಟಿ. ಡೈರೆಕ್ಟರ್ ಗೆ ಒಂದು ಕೋಟಿ. ಸಿನಿಮಾ ಮಾಡೋಕೆ ಒಂದೈದು ಕೋಟಿ. ಹದಿನೈದು ಇಪ್ಪತ್ತು ಕೋಟಿ ಹಾಕಿ ಸಿನಿಮಾ ಮಾಡೋಕೆ ನಮ್ದೇನು ತೆಲುಗು ಸಿನಿಮಾನಾ, ತಮಿಳು ಸಿನಿಮಾನ ಅಂತ ಗುಟುರು ಹಾಕಿದ್ರು. ಆದರೆ ಕನ್ನಡದಲ್ಲಿ ಯಾವ ಹೀರೋಗೆ ಎಂಟು ಕೋಟಿ […]