ನೈಟ್ ಕರ್ಫ್ಯೂ ಮುಂದುವರಿಸುವ ಬಗ್ಗೆ ಭಾನುವಾರ ನಿರ್ಧಾರ, ಏಪ್ರಿಲ್ 20ರ ವರೆಗೆ ಯಥಾಸ್ಥಿತಿ

Friday, April 16th, 2021
yedyurappa

ಬೆಂಗಳೂರು :  ರಾಜ್ಯ ರಾಜಧಾನಿಯಲ್ಲಿ ಆತಂಕಕಾರಿ ಮಟ್ಟದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಪರಿಸ್ಥಿತಿ ಕೈಮೀರಿ ಹೋಗುವ ಸೂಚನೆ ಇದೆ.  ನಗರದಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ ಇನ್ನೂ ಹೆಚ್ಚಿನ ಬಿಗಿಕ್ರಮ ಕೈಗೊಳ್ಳಬೇಕೆಂಬ ಅಭಿಪ್ರಾಯಗಳು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ತುರ್ತು ಸಭೆ ನಡೆಸಿ ಚರ್ಚಿಸಿದ್ದಾರೆ. ಆದರೆ, ಏಪ್ರಿಲ್ 20, ಮಂಗಳವಾರದವರೆಗೂ ಈಗಿರುವ ಕ್ರಮಗಳನ್ನ ಮುಂದುವರಿಸಲು ಅವರು ನಿರ್ಧರಿಸಿದ್ದಾರೆ. ಜನತಾ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮೊದಲಾದ ಕ್ರಮಗಳ ಬಗ್ಗೆ ಭಾನುವಾರ ನೋಡೋಣ. […]

ನೈಟ್ ಕರ್ಫ್ಯೂ ಹಿಂಪಡೆದ ರಾಜ್ಯ ಸರ್ಕಾರ

Thursday, December 24th, 2020
yedyurappa

ಬೆಂಗಳೂರು: ಬ್ರಿಟನ್  ದೇಶದಲ್ಲಿ  ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಲು  ರಾಜ್ಯದಲ್ಲಿ ಇಂದಿನಿಂದ ಜಾರಿಯಾಗಬೇಕಿದ್ದ ನೈಟ್ ಕರ್ಫ್ಯೂವನ್ನು ಹಿಂಪಡೆಯಲಾಗಿದೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ನೈಟ್ ಕರ್ಫ್ಯೂ ಜಾರಿಗೆ ಮುನ್ನವೇ ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನೈಟ್ ಕರ್ಫ್ಯೂ ಜಾರಿ ಆದೇಶ ಹಿಂಪಡೆದಿರುವ ಬಗ್ಗೆ ಮುಖ್ಯಮಂತ್ರಿ ಬಿ..ಎಸ್. ಯಡಿಯೂರಪ್ಪ ಮಾದ್ಯಮ ಪ್ರಕಟಣೆ ಹೊರಡಿಸಿದ್ದಾರೆ. “ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಜ್ಞರ […]

ನೈಟ್ ಕರ್ಫ್ಯೂವನ್ನು ಹಿಂದಕ್ಕೆ ಪಡೆಯಲು ಮುಖ್ಯ ಮಂತ್ರಿಗಳಿಗೆ ಶ್ರೀ ಐವನ್ ಡಿ ಸೋಜ ವಿನಂತಿ

Wednesday, December 23rd, 2020
ivan D souza

ಮಂಗಳೂರು :  ಡಿಸೆಂಬರ್ 23ರಿಂದ ಜನವರಿ 7 ರವರೆಗೆ ಕರ್ನಾಟಕ ರಾಜ್ಯಾದ್ಯಂತ ನೈಟ್ ಕರ್ಫ್ಯೂವನ್ನು ರಾತ್ರಿ10 ರಿಂದ ಬೆಳಿಗ್ಗೆ 6ಗಂಟೆಯವರೆ ಏರಲಾಗಿದ್ದು, ಕ್ರಿಸ್‌ಮಸ್ ಮತ್ತು ಅನೇಕ ಮದುವೆ ಸಮಾರಂಭಗಳು ಸಂಜೆ ಹೊತ್ತಿನಲ್ಲಿ ನಡೆಯಲಿರುವುದರಿಂದ ಅದರಲ್ಲೂ, ಕ್ರಿಸ್‌ಮಸ್ ಡಿಸೆಂಬರ್ 24 ರಂದು ಸಂಜೆ ವೇಳೆ ಎಲ್ಲಾ ಚರ್ಚುಗಳಲ್ಲಿ ಕ್ರಿಸ್‌ಮಸ್ ಪೂಜೆ ಸಂಭ್ರಮ ನಡೆಯಲಿರುವುದರಿಂದ, ದಿನಾಂಕ 24ರಂದು ಸಂಪೂರ್ಣವಾಗಿ ಕರ್ಫ್ಯೂನಿಂದ ವಿನಾಯಿತಿ ನೀಡಬೇಕೆಂದು ಮತ್ತು ಇತರ ದಿನಗಳಲ್ಲಿ ಹಾಕಿರುವಂತೆ ರಾತ್ರಿ 11ರಿಂದ 5ಗಂಟೆಯವರೆಗೆ ಹಾಕಿರುವ ಕರ್ಫ್ಯೂನಲ್ಲಿ ಸಡಿಲಿಕೆ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ವಿನಂತಿಸಿದರು. […]